Monday, November 25, 2024
Homeರಾಷ್ಟ್ರೀಯ | Nationalಬಾಂಗ್ಲಾದೇಶದಿಂದ ಅಕ್ರಮ ಪ್ರವೇಶವನ್ನು ತಡೆಯಲು ಒಡಿಶಾ ಸಮುದ್ರದಲ್ಲಿ ಕಟ್ಟೆಚ್ಚರ

ಬಾಂಗ್ಲಾದೇಶದಿಂದ ಅಕ್ರಮ ಪ್ರವೇಶವನ್ನು ತಡೆಯಲು ಒಡಿಶಾ ಸಮುದ್ರದಲ್ಲಿ ಕಟ್ಟೆಚ್ಚರ

ಭುವನೇಶ್ವರ, ಆ.8- ನೆರಯ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆಯಿಂದ ಅಲ್ಲಿನ ಜನರ ಭಾರತದೊಳಗೆ ನುಸುಳುವುದನ್ನು ತಡೆಯಲು ಒಡಿಶಾ ಸರ್ಕಾರ ತನ್ನ 480 ಕಿಲೋಮೀಟರ್ ಕರಾವಳಿಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ. ಒಡಿಸಾ ಕಡಲ ತೀರದಿಂದ ಬಾಂಗ್ಲಾದೇಶ ಕರಾವಳಿ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಜನರು ಸಣ್ಣ ದೋಣಿಗಳನ್ನು ಬಳಸಿ ಕಾನೂನುಬಾಹಿರವಾಗಿ ಒಡಿಶಾವನ್ನು ಪ್ರವೇಶಿಸುತ್ತಿರುವ ಮಾಹಿತಿ ಇದೆ .ಅಶಾಂತಿಯ ಸಮಯದಲ್ಲಿ ಅನೇಕ ಅಪರಾ„ಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಅವರು ಭಾರತದೊಳಗೆ ನುಸುಳಲು ಪ್ರಯತ್ನಿಸಬಹುದು ಎಂಬ ಅಪಾಯದ ಶಂಕೆಯಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಕುಮಾರ್ ಹೇಳಿದ್ದಾರೆ.

ನಾವು ನಮ್ಮ 18 ಸಾಗರ vಲೀಸ್ ಠಾಣೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಿದ್ದೇವೆ. ಎಡಿಜಿ ಕರಾವಳಿ ಭದ್ರತೆಯು ನಿಯಂತ್ರಣ ಕೊಠಡಿಯನ್ನು ತೆರೆದಿದೆ ಮತ್ತು ರಾಜ್ಯವು ಕಡೆ ದೋಣಿಗಳು ಮತ್ತು ಇತರ ಉಪಕರಣಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿದೆ ಎಂದು ಕುಮಾರ್ ಹೇಳಿದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯೊಂದಿಗೆ ಸಂಪರ್ಕದಲ್ಲಿದ್ದಾರೆ .ನಮ್ಮ ಗಡಿಗಳನ್ನು ಭಾರತ ವಿರೋಧಿ ಮತ್ತು ಬಾಂಗ್ಲಾದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು ಹೆಚ್ಚುವರಿ ಮಾಹಿತಿಯನ್ನು ಪಡೆಯಲು ನಾವು ಸಾಮಾಜಿಕ ಮಾಧ್ಯಮ ಮತ್ತು ಇತರ ಚಾನೆಲ್‍ಗಳಲ್ಲಿ ನಿಕಟ ನಿಗಾ ಇರಿಸಿದ್ದೇವೆ ಎಂದರು.

ಅಕ್ರಮ ವಲಸಿಗರ ಪ್ರವೇಶವನ್ನು ತಡೆಗಟ್ಟಲು, ವಿಶೇಷವಾಗಿ ರಾತ್ರಿ ಸಮಯದಲ್ಲಿ ಗಸ್ತನ್ನು ಬಲಪಡಿಸಲು ರಾಜ್ಯ ಸರ್ಕಾರವು ಎಲ್ಲಾ ಕರಾವಳಿ ಜಿಲ್ಲಾಗಳ ಪೊಲೀಸ್ ವರಿಷ್ಠಾ„ಕಾರಿಗಳನ್ನು ಕೇಳಿದೆ. ಒಡಿಶಾದ ಗಮನವು ಈಗ ಕೇಂದ್ರಪಾರಾ, ಜಗತ್‍ಸಿಂಗ್‍ಪುರ ಮತ್ತು ಭದ್ರಕ್‍ನಂತಹ ಜಿಲ್ಲೆÉಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಇನ್ನೊಬ್ಬ ಹಿರಿಯ ಅ„ಕಾರಿ ತಿಳಿಸಿದ್ದಾರೆ.

ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳು ಕರಾವಳಿಯಲ್ಲಿ ಕಟ್ಟೆಚ್ಚರವನ್ನು ಹೆಚ್ಚಿಸಿವೆ, ಆದರೆ ಜಿಲ್ಲೆಡಳಿತವು ಕಂದಾಯ ನಿರೀಕ್ಷಕರು ಮತ್ತು ಅರಣ್ಯ ಅ„ಕಾರಿಗಳಿಗೆ ಕರಾವಳಿಯ ಸಮೀಪವಿರುವ ಹಳ್ಳಿಗಳಲ್ಲಿ ಜನರ ಚಲನವಲನದ ಮೇಲೆ ನಿಗಾ ಇರಿಸಲು ನಿರ್ದೇಶಿಸಿದೆ ಎಂದು ಕೇಂದ್ರ ಪಾರಾ ಜಿಲ್ಲೆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಒಡಿಶಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಇಂದು ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.

RELATED ARTICLES

Latest News