Friday, November 7, 2025
Home Blog Page 1853

ಕನ್ನಡಿಗರ ನೆಲದ ಪ್ರೀತಿಗೆ ಹೃದಯ ತುಂಬಿ ಬಂದಿದೆ : ಎಚ್‍ಡಿಕೆ

ದುಬೈ,ಅ.30- ಉತ್ತಮ ಬದುಕು ರೂಪಿಸಿಕೊಳ್ಳಲು ಹೊರನಾಡಿಗೆ ಬಂದಿರುವ ಕನ್ನಡಿಗರು ನಮ್ಮ ಸಂಸ್ಕøತಿ, ಭಾಷೆ, ನೆಲ ಜಲದ ಮೇಲೆ ಇರಿಸಿರುವ ಪ್ರೀತಿ, ಬದ್ಧತೆ ಕಂಡು ನನ್ನ ಹೃದಯ ಉಕ್ಕಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಯುಎಇ ಒಕ್ಕಲಿಗರ ಸಂಘ ಇಂದು ದುಬೈನಲ್ಲಿನ ಶೇಕ್ ರಶೀದ್ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೊರನಾಡಿನಲ್ಲಿ ನೆಲೆಸಿದ್ದರೂ ತಾಯ್ನಾಡಿನ ಪ್ರೇಮ ಉಳಿಸಿಕೊಂಡು, ಕನ್ನಡ ಸೊಗಡನ್ನು ಬದುಕಿನಲ್ಲಿ ಹಾಸುಹೊಕ್ಕಾಗಿಸಿಕೊಂಡು ಬಾಳ್ವೆ ನಡೆಸುತ್ತಿರುವ ಕನ್ನಡಿಗರಿಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. ಕೆಂಪೇಗೌಡರ ಉತ್ಸವದಲ್ಲಿ ಕನ್ನಡ ಸಂಸ್ಕøತಿಯ ಸೊಗಡು ಸಾಕ್ಷಾತ್ಕಾರವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡ ಅವರ ಆಡಳಿತ, ದೂರದೃಷ್ಟಿ ಎಲ್ಲೇ, ಸೀಮೆಗಳು ಇಲ್ಲ. ಅವರ ಆದರ್ಶ ಆಡಳಿತ ಎಲ್ಲರೂ ಅನುಕರಣೆ ಮಾಡಬೇಕು. ಸರ್ವರನ್ನು ಸಮನಾಗಿ ಕಂಡು ಆಳ್ವಿಕೆ ನಡೆಸಿದವರು. ಅಂತಹವರನ್ನು ಇಂದು ದುಬೈನಲ್ಲಿ ಸ್ಮರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಅದಾವ ಶುಭ ಮುಹೂರ್ತದಲ್ಲಿ ನಾಡಪ್ರಭುಗಳು ಬೆಂಗಳೂರು ಮಹಾನಗರಕ್ಕೆ ಅಡಿಪಾಯ ಹಾಕಿದರೋ ಇಂದು ಜಾಗತಿಕ ನಗರವಾಗಿ ಬೆಳೆದಿದ್ದು, ಕರ್ನಾಟಕ ಹಾಗೂ ಭಾರತದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ. ಜಾಗತಿಕ ಪೈಪೋಟಿ ನೀಡುತ್ತಾ ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಅವರು ನುಡಿದರು.

ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿಯುತ್ತಿದ್ದಾರೆ ಭಾರತೀಯ ನಾರಿಯರು

ಕೆಂಪೇಗೌಡರ ಅದರ್ಶದೊಂದಿಗೆ ಶ್ರಮಿಸಿದ ನಮ್ಮ ಪೂರ್ವಿಕ ರೈತ ಬಂಧುಗಳು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ. ಅದರ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಇವತ್ತಿನ ದಿನ ಆಗುತ್ತಿರುವ ಆರ್ಥಿಕ ಉತ್ಪಾದನೆ ನಾಡಿಗೆ, ದೇಶಕ್ಕೆ ಬೆನ್ನುಲುಬಾಗಿ ನಿಂತಿದೆ. ಇವತ್ತು ದೇಶದ ಜಿಡಿಪಿ ಸದಾ ಏರುಮುಖವಾಗಿ ಚಲಿಸುತ್ತಿದೆ ಎಂದರೆ ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ನಗರದ ಕಾಣಿಕೆ ಹಿರಿದು ಎಂದರು.

ಕೆಂಪೇಗೌಡರು ಕಟ್ಟಿದ ಕೆರೆಗಳು ಏನಾದವು: ಇವತ್ತು ನಾವು ಕೆಂಪೇಗೌಡರನ್ನು ಸ್ಮರಣೆ ಮಾಡುತ್ತಿದ್ದೇವೆ. ಆದರೆ, ಅವರು ಬೆಂಗಳೂರಿನಲ್ಲಿ ನಿರ್ಮಿಸಿದ ಕೆರೆಗಳು ಏನಾದವು? ನಮ್ಮ ಸ್ವಾರ್ಥ, ಸಂಕುಚಿತ ಮನಸ್ಥಿತಿಯ ಕಾರಣಕ್ಕೆ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಅನೇಕ ಕೆರೆಗಳನ್ನು ನಾಶ ಮಾಡಲಾಗಿದೆ. ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ನಾವೆಲ್ಲರೂ ಹೆಮ್ಮೆಯಿಂದ ಕರೆಯುತ್ತಿದ್ದೆವು. ಈಗ ಗಾರ್ಬೇಜ್ ಸಿಟಿ ಎಂದು ಕರೆಯಲಾಗುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇಂದು ತಾಂತ್ರಿಕವಾಗಿ ನಾವು ಬಹಳಷ್ಟು ಸಾಸಿದ್ದೇವೆ. ಚಂದ್ರಯಾನ, ಸೂರ್ಯಯಾನ ಎಂದು ಸಾಧನೆ ಮಾಡುತ್ತಿದ್ದೇವೆ. ಆದರೆ, ಬೆಂಗಳೂರಿನಂಥ ಐತಿಹಾಸಿಕ ನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಸೋತಿದ್ದೇವೆ, ಇದು ವಿಷಾದನೀಯ. ರಾಜಕಾರಣಿಗಳಾಗಿ ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ನಾವೆಲ್ಲೇ ಸೋತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರ ಉತ್ಸವದಲ್ಲಿ ಶ್ರೀ ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ದುಬೈ ಕನ್ನಡಿಗರು, ಅದರಲ್ಲಿಯೂ ಮಕ್ಕಳು ಪ್ರದರ್ಶಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್, ಕೆ.ಆರ್.ಪೇಟೆ ಮಂಜುನಾಥ್, ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ ನಂದಕಿಶೋರ್, ಉಪಾಧ್ಯಕ್ಷ ಹರೀಶ್ ಕೋಡಿ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಕನ್ನಡ ಬಂಧುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರ ಮಿಂಚಿನ ದಾಳಿ

ಬೆಂಗಳೂರು, ಅ.30-ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿ ಸರ್ಕಾರಿ ಭ್ರಷ್ಠ ಅಧಿಕಾರಿಗಳ ಬಂಡವಾಳ ಬಯಲಿಗೆಳೆದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಮನೆಗಳು , ಕಚೇರಿ, ತೋಟದ ಮನೆ ಹಾಗೂ ವಿವಿದೆಡೆ ಇಂದು ಏಕಾಕಾಲಕ್ಕೆ ರಾಜ್ಯಾದ್ಯಂತ ಚಿತ್ರದುರ್ಗ, ತುಮಕೂರು,ಹಾಸನ, ಕಲಬುರಗಿ, ದಾವಣಗೆರೆ ,ಬೆಂಗಳೂರು ,ಬೆಳಗಾವಿ ,ಬೀದರ್, ಕಲಬುರಗಿ ಸೇರಿದಂತೆ ಸುಮಾರು 15 ಜಿಲ್ಲೆಗಳಲ್ಲಿ 95ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಹಾಸನ: ಹಾಸನದಲ್ಲಿ ಕೆಪಿಟಿಸಿಎಲ್ ಕಿರಿಯ ಇಂಜಿನಿಯರ್ ನಾರಾಯಣ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿದ್ದೆಯಿಂದ ಏಳುವ ಮುಂಚೆಯೇ ಲೋಕಾಯುಕ್ತ ಎಸ್‍ಪಿ ಮಲ್ಲಿಕ್ ನೇತೃತ್ವದ ಅಕಾರಿಗಳ ತಂಡ ಮನೆಯ ಬಾಗಿಲು ತಟ್ಟಿದೆ. ಡಿವೈಎಸ್‍ಪಿ ತಿರುಮಲೇಶ್, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ಹಾಸನ ಹೊರವಲಯದ ಬೊಮ್ಮನಾಯಕನಹಳ್ಳಿರುವ ನಾರಾಯಣ ಅವರ ನಿವಾಸದಲ್ಲಿ ಚಿನ್ನಾಭರಣ, ಆಸ್ತಿ ದಾಖಲೆ ಹಾಗೂ ಗೊರೂರಿನಲ್ಲಿರುವ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಚಿತ್ರದುರ್ಗದ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಅವರ ಹಿರಿಯೂರು ಪಟ್ಟಣದ ಚಂದ್ರಾ ಲೇಔಟ್ ನಲ್ಲಿರುವ ಮನೆ ಮತ್ತು ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್‍ನಲ್ಲಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ಹಿರಿಯೂರು ಪಟ್ಟಣದ ಕುವೆಂಪು ನಗರದ ಮನೆ ಹಾಗು ಕಛೇರಿ, ಸಂಬಂಧಿಕರ ಮನೆಯಲ್ಲೂ ಶೋಧಕಾರ್ಯ ನಡೆದಿದೆ. ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು ಹಣ ,ಚಿನ್ನಾಭರಣ ಆಸ್ತಿ ಪತ್ರದ ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ಪರಿಶೀಲಿಸುತ್ತಿದ್ದಾರೆ.

ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿಯುತ್ತಿದ್ದಾರೆ ಭಾರತೀಯ ನಾರಿಯರು

ಹಾವೇರಿ : ಹಾವೇರಿ ಜಿಲ್ಲೆಯಲ್ಲಿ 9 ಕಡೆ ದಾಳಿ ನಡೆದಿದ್ದು ಹಾವೇರಿ ಪ್ರಾದೇಶಿಕ ಅರಣ್ಯಾಕಾರಿ (ಆರ್‍ಎಫ್‍ಓ) ಅಪರ ಮೇಶಪ್ಪ ಪೇರಲನವರ್ ಹಾಗು ನ್ಯಾಮತಿ ಪ್ರಾದೇಶಿಕ ಅರಣ್ಯಾಧಿಕಾರಿ (ಆರ್‍ಎಫ್‍ಓ) ಮಾಲತೇಶ್‍ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅವರ ಮನೆ ,ಕಚೇರಿ ಮೇಲೆ 20ಕ್ಕೂ ಹೆಚ್ಚು ಸಿಬ್ಭಂದಿ ದಾಳಿ ಮಾಡಿದ್ದಾರೆ.

ಭಾನುವಾರದ ರಜೆಯ ಮಜಾ ಮಾಡಿ ಮಲಗಿದ್ದವರು ಬೆಳಿಗ್ಗೆ ದಿಢೀರ್ ಎಂಟ್ರೀ ಕೊಟ್ಟ ಲೋಕಾಯುಕ್ತ ಪೊಲೀಸರನ್ನು ಕಂಡು ಅಧಿಕಾರಿ ಮನೆಯವರು ದಂಗಾಗಿದ್ದಾರೆ. ಮನೆಯಲ್ಲಿದ್ದ ನಗದು, ವಿವಿದೆಡೆ ಅಕ್ರಮವಾಗಿ ಸಂಪಾದಿಸಿದ ಆಸ್ತಿ ಪತ್ತೆ ಮಾಡಲಾಗಿದೆ.

ಬೀದರ್ : ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಮತ್ತು ದೇವದುರ್ಗದ ಕೃಷ್ಣ ಜಲಾನಯನ ಇಲಾಖೆಯ ಕಾರ್ಯಪಾಲಕ ಅಭಿಯಂತರ ತಿಪ್ಪಣ್ಣ ಅನ್ನದಾನಿ ಮನೆಗಳ ಮೇಲೆ ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕಲಬುರಗಿ ಪಾಲಿಕೆಯ ಟೌನ್ ಪ್ಲ್ಯಾನರ್ ಅಧಿಕಾರಿ ಅಪ್ಪಾಸಾಹೇಬ್ ಕಾಂಬಳೆ ಅವರ ರಾಮತೀರ್ಥ ನಗರದ ನಿವಾಸ, ಆಟೋ ನಗರದಲ್ಲಿ ಹೊಂದಿರುವ ಕಾರ್ಖಾನೆ ಮೇಲೆ ದಾಳಿ ಮಾಡಿರುವ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು : ಬೆಂಗಳೂರಿನ ಪಾಲಿಕೆ ಅಧಿಕಾರಿ ವಲಯಕ್ಕೂ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಹೆಗ್ಗನಹಳ್ಳಿ ವಾರ್ಡ್ ಎಆರ್‍ಓ ಚಂದ್ರಪ್ಪ ಬಿರಜ್ಜನವರ್ ಅವರ ಮನೆ, ಕಚೇರಿ ಸೇರಿ ಮೂರು ಕಡೆ ದಾಳಿ ನಡೆಸಲಾಗಿದೆ. ಈ ಹಿಂದೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದ ಎಆರ್ ಓ ಚಂದ್ರಪ್ಪ ಲೋಕಾಯುಕ್ತ ಟ್ರ್ಯಾಪ್ ಗೆ ಒಳಗಾಗಿದ್ದರು. ಅದರ ಮುಂದುವರಿದ ಭಾಗವಾಗಿ ದಾಳಿ ಮುಂದುವರಿಸಿರೋ ಲೋಕಾಯುಕ್ತ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ : ದಾವಣಗೆರೆಯಲ್ಲಿ ಕೈಗಾರಿಕೆ ಮತ್ತು ಸುರಕ್ಷತಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಮನೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಬೆಂಗಳೂರು ಹಾಗೂ ಅವರ ಸ್ವಂತ ಊರಾದ ಕೊಳ್ಳೆಗಾಲ ಸೇರಿದಂತೆ ಒಟ್ಟು ಮೂರು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು. ಬೆಂಗಳೂರಿನ ಉಪಕಾರ್ ಲೇಔಟ್, ಆಂಧ್ರಹಳ್ಳಿ , ಕೊಳ್ಳೆಗಾಲ ಮನೆಯಲ್ಲಿ ಶೋಧ ನಡೆಸಲಾಗಿದೆ.

ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಬ್ಯಾಡರಹಳ್ಳಿ ತಂದೆಯ ಮನೆ, ಬಿಇಎಲ್, ವಿನಾಯಕ ನಗರ ಸೇರಿದಂತೆ ವಿವಿದೆಢೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಮನೆಯಲ್ಲಿ 8 ಲಕ್ಷ ನಗದು ಹಣ, ಹತ್ತು ದುಬಾರಿ ಬೆಲೆಯ ವಾಚ್‍ಗಳು, ಎಂಟು ಕೂಲಿಂಗ್ ಸನ್ ಗ್ಲಾಸ್ ಗಳು, ಚಿನ್ನ ಬೆಳ್ಳಿ ವಸ್ತುಗಳು, ಎರಡು ಕಾರು, ಆಸ್ತಿ ಪತ್ರಗಳು ಪತ್ತೆಯಾಗಿದೆ.

ಬೆಳಗಾವಿ : ಬೆಳಗಾವಿಯ ಪಂಚಾಯತ್ ರಾಜ್ ಇಲಾಖೆ ಎಇಇ ಎಂ.ಎಸ್.ಬಿರಾದಾರ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಡಿಎಸ್ಪಿ ಜೆ.ರಘು ತಂಡದಿಂದ ದಾಳಿ ನಡೆಸಿದ್ದಾರೆ.
ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟ್‍ಮೆಂಟ್‍ನಲ್ಲಿರುವ ಅವರ ನಿವಾಸ, ಬೆಳಗಾವಿ ನಿವಾಸ, ಕಿತ್ತೂರು, ಖಾನಾಪುರದಲ್ಲಿ ಇರೋ ನಿವಾಸದ ಮೇಲೂ ಏಕಕಾಲಕ್ಕೆ ದಾಳಿ ನಡೆಸಿರುವ ಪೊಲೀಸರು ಅಕ್ರಮ ಸಂಪತ್ತು ಬಯಲಿಗೆಳೆದಿದ್ದಾರೆ.

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನೀಯರ್ ನಾಗೇಂದ್ರಪ್ಪ ಅವರ ಮನೆ, ಕಚೇರಿ ಸೇರಿ ವಿವಿದೆಡೆ ಲೋಕಾಯುಕ್ತ ಡಿಎಸ್ಪಿ ಮಂಜುನಾಥ್. ಡಿಎಸ್ಪಿ.ಹರೀಶ್. ನೇತೃತ್ವದಲ್ಲಿ ದಾಳಿ ನಡೆದಿದೆ.

ಇನ್ಪೆಕ್ಟರ್ ಶಿವರುದ್ರಪ್ಪ ಮೇಟಿ,ಸತ್ಯನಾರಾಯಣ, ಸಲೀಂ ನೇತೃತ್ವದ ತಂಡ ತುಮಕೂರು ನಗರದ ಬಟವಾಡಿಯಲ್ಲಿರುವ ಮನೆ ಹಾಗೂ ಶಿರಾ ತಾಲ್ಲೂಕಿನ ಮದ್ದೇರಹಳ್ಳಿ, ರಾಗಲಹಳ್ಳಿಯಲ್ಲಿರುವ ನಿವಾಸ , ಫಾರಂ ಹೌಸ್ ಮೇಲೂ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಮುಂದುವರೆದಿದೆ.

ಹೈಕಮಾಂಡ್‍ ಷರತ್ತಿಗೆ ಶಾಕ್ ಅದ ನಿಗಮ ಮಂಡಳಿ ಆಕಾಂಕ್ಷಿಗಳು

ಬೆಂಗಳೂರು, ಅ.30- ನಿಗಮ ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚಾಗಿದ್ದು, ಹೈಕಮಾಂಡ್‍ನ ಷರತ್ತುಗಳು ಬಿಸಿ ತುಪ್ಪವಾಗಿ ಪರಿಣಮಿಸಿವೆ. ಮೊದಲ ಹಂತದಲ್ಲಿ 30 ಮಂದಿ ಶಾಸಕರಿಗೆ, ಅದರಲ್ಲೂ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿರುವವರಿಗೆ ಸಂವೃದ್ಧಿಯಾಗಿರುವ ನಿಗಮಗಳ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಈ ನಿಟ್ಟಿನಲ್ಲಿ ನಿನ್ನೆ ತಡರಾತ್ರಿವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ. ಪರಸ್ಪರ ಇಬ್ಬರು ತಮ್ಮಲ್ಲಿರುವ ಆಕಾಂಕ್ಷಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದು, ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಾತಿ, ಧರ್ಮ, ಪ್ರಾದೇಶಿಕತೆ, ಪಕ್ಷ ನಿಷ್ಠೆ ಹಾಗೂ ಸಕ್ರಿಯ ಪಾಲ್ಗೋಳ್ಳುವಿಕೆಯನ್ನು ಪರಿಗಣಿಸಲಾಗಿದೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ನಿಗಮ ಮಂಡಳಿಗಳಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದವರಿಗೆ ರಾಜ್ಯ ನಾಯಕರು ಕೆಲ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಮೊದಲು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆದುಕೊಂಡು, ಮುಂದಿನ ಸಚಿವ ಸಂಪುಟ ವಿಸ್ತರಣೆಯ ವೇಳೆ ಲಾಬಿ ನಡೆಸಿ, ಸಂಪುಟಕ್ಕೆ ಸೇರಿಕೊಳ್ಳುವ ಸನ್ನಾಹ ನಡೆಸಿದ್ದವರಿಗೆ ತಳಮಳ ಸೃಷ್ಟಿಸಿವೆ.

ನಿಗಮ ಮಂಡಳಿಯಲ್ಲಿ ಸ್ಥಾನ ಪಡೆದವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ಹೈಕಮಾಂಡ್ ಸಂದೇಶವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಕಾಂಕ್ಷಿಗಳಿಗೆ ತಲುಪಿಸಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಅವಕಾಶ ನೀಡಲಾಗುವುದೇ ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಆ ಕಾಲಕ್ಕನುಗುಣವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂಬ ಸಂದೇಶಗಳು ರವಾನೆಯಾಗುತ್ತಿವೆ. ಹೀಗಾಗಿ ಬಹಳಷ್ಟು ಹಿರಿಯ ಹಾಗೂ ಪ್ರಭಾವಿ ಶಾಸಕರು ನಿಗಮ ಮಂಡಳಿಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿತ್ತು. ಆದರೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು ಪಕ್ಷದ ಸಲಹೆಯನ್ನು ತಿರಸ್ಕರಿಸಿದ್ದರು. ಬಳಿಕ ವಿಧಾನಸಭೆ ಉಪಾಧ್ಯಕ್ಷ ಸ್ಥಾನವನ್ನು ಸಚಿವ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ರುದ್ರಪ್ಪ ಲಮಾಣಿ ಅವರಿಗೆ ನೀಡಲಾಗಿದೆ. ಅವಕಾಶ ತಳ್ಳಿ ಹಾಕಿದ ಪುಟ್ಟರಂಗಶೆಟ್ಟಿ ಈಗ ಸಚಿವ ಸ್ಥಾನವೂ ಇಲ್ಲ, ಉಪಾಧ್ಯಕ್ಷ ಸ್ಥಾನವೂ ಇಲ್ಲದಂತಾಗಿ ದಿನ ಬೇಳಗಾದರೆ ಮುಖ್ಯಮಂತ್ರಿಯವರ ವಿರುದ್ಧ ಅಸಮಧಾನ ವ್ಯಕ್ತಪಡಿಸಿಕೊಂಡು ತಿರುಗಾಡುತ್ತಿದ್ದಾರೆ.

ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದ ಶೂಟರ್ ಅನೀಶ್

ಇದೇ ಪರಿಸ್ಥಿತಿ ತಮಗೆ ಬರಬಹುದು ಎಂಬ ಅಳುಕು ಬಹಳಷ್ಟು ಶಾಸಕರನ್ನು ಕಾಡುತ್ತಿದೆ. ಪ್ರಾದೇಶಿಕ, ಸಾಮಾಜಿಕ ನ್ಯಾಯ ಲೆಕ್ಕಾಚಾರದಲ್ಲಿ ಬಹಳಷ್ಟು ಮಂದಿ ತಮಗೆ ಸಚಿವ ಸ್ಥಾನ ಸಿಗಲೇಬೇಕು ಎಂಬ ನಿರೀಕ್ಷೆಯಲ್ಲಿ ಇರುವವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನಿರಾಕರಿಸುತ್ತಿದ್ದಾರೆ. ಉಳಿದವರು ಇರುವುದರಲ್ಲೇ ಸಂವೃದ್ಧಿಯಾದ ನಿಗಮ ಮಂಡಳಿಯಲ್ಲಿ ಅಧಿಕಾರ ಹಿಡಿಯಲು ಲಾಬಿ ನಡೆಸುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದ್ದು, ಶಾಸಕರು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಶಾಸಕರಂತೆ ಪ್ರಮುಖ ನಾಯಕರಿಗೂ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದಲ್ಲಿ ಅರ್ಧಚಂದ್ರ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ 15ರಿಂದ 20 ವಿಧಾನ ಪರಿಷತ್ ಸ್ಥಾನಗಳು ತೆರವಾಗುತ್ತಿವೆ. ಬಹಳಷ್ಟು ಮಂದಿ ಅವುಗಳ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೂ ಕೆಲವರು ಲೋಕಸಭೆ ಚುನಾವಣೆ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದಾರೆ. ಅವರುಗಳಿಗೆ ಯಾವುದಾರು ಒಂದು ಆಯ್ಕೆ ಮಾಡಿಕೊಳ್ಳುವಂತೆ ಷರತ್ತು ಮುಂದಿಡಲಾಗಿದೆ.

ಹೀಗಾಗಿ ಬಹಳಷ್ಟು ನಾಯಕರು ಕೂಡ ಗೊಂದಲದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಲಾಗುವುದೇ ಎಂಬುದು ಖಚಿತವಿಲ್ಲ. ಪಕ್ಷದಿಂದ ನಡೆಸಲಾಗುವ ಸಮೀಕ್ಷೆ, ಹೈಕಮಾಂಡ್‍ನ ಅಂದಾಜು, ಸಾಮಾಜಿಕ ನ್ಯಾಯ ಆಧಾರದ ಮೇಲೆ ಲೋಕಸಭೆ ಚುನಾವಣೆ ಟಿಕೆಟ್‍ಗಳು ಹಂಚಿಕೆಯಾಗಲಿವೆ, ಯಾರಿಗೆ ಅವಕಾಶ ಸಿಗಲಿದೆ ಎಂಬ ಖಚಿತತೆ ಇಲ್ಲ.

ಚುನಾವಣೆಯನ್ನು ನಂಬಿಕೊಂಡು ಈಗ ಸಿಗುವ ನಿಗಮ ಮಂಡಳಿಯ ಅಧಿಕಾರವನ್ನು ಕಳೆದುಕೊಳ್ಳಲು ಸಾಧ್ಯವೇ ಎಂಬ ಗೊಂದಲದಲ್ಲಿ ಪ್ರಮುಖ ನಾಯಕರಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಬಹಳಷ್ಟು ಮಂದಿ ಟವಲ್ ಹಾಕಿದ್ದಾರೆ. ಅಂತಹವರು ನಿಗಮಮಂಡಳಿಯನ್ನು ಒಪ್ಪಿಕೊಂಡರೆ ರಾಜಕೀಯ ಭವಿಷ್ಯವೇ ಸೀಮಿತಗೊಳ್ಳುತ್ತದೆ ಎಂಬ ದುಗುಡದಲ್ಲಿದ್ದಾರೆ.

ಅಲ್ಲಿ-ಇಲ್ಲಿ-ಎಲ್ಲಾ ಕಡೆ ಅವಕಾಶ ಗಿಟ್ಟಿಸಿ, ಅಧಿಕಾರ ಅನುಭವಿಸುವ ಕನಸು ಕಾಣುತ್ತಿದ್ದವರಿಗೆ ಹೈಕಮಾಂಡ್‍ನ ಷರತ್ತು ನುಂಗಲಾರದ ಬಿಸಿ ತುಪ್ಪವಾಗಿದೆ. ಪ್ರಭಾವಿ ನಾಯಕರ ಕೃಪಾಕಟಾಕ್ಷದಿಂದ ಹೇಗೋ ಬೇಳೆ ಬೇಯಿಸಿಕೊಳ್ಳಬಹುದು ಎಂದುಕೊಂಡವರಿಗೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

ಮತ್ತೆ ಬಾಲ ಬಿಚ್ಚಿದ ಎಂಇಎಸ್, ಕನ್ನಡಿಗರ ಆಕ್ರೋಶ

ಬೆಂಗಳೂರು, ಅ.30- ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತೆ ಬಾಲಬಿಚ್ಚಲಾರಂಭಿಸಿದೆ. ಅತ್ತ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕರಾಳ ದಿನಾಚರಣೆಗೆ ನಮ್ಮ ಪ್ರತಿನಿಧಿ ಬರುತ್ತಾರೆ ಎಂದು ಹೇಳುವ ಮೂಲಕ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಿದೆ.

ನಾಡದ್ರೋಹಿ ಎಂಇಎಸ್ ಪದೇ ಪದೇ ಮುಖಭಂಗ ಅನುಭವಿಸಿದರೂ ಮತ್ತದೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನಾಚರಣೆಗೆ ಮುಂದಾಗಿದೆ. ಕರಾಳ ದಿನಾಚಣೆಗೆ ಅನುಮತಿ ಕೇಳಿದ್ದ ನಾಡದ್ರೋಹಿಗಳಿಗೆ ಮುಖಭಂಗವಾಗಿದೆ.

ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕರಾಳ ದಿನಾಚಣೆಗೆ ಅನುಮತಿ ನಿರಾಕರಿಸಿದ್ದು, ನಾಡದ್ರೋಹಿಗಳ ನಿದ್ದೆಗೆಡಿಸಿದೆ. ಆದರೂ ಶತಾಯ ಗತಾಯ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡಲು ನಾಡದ್ರೋಹಿಗಳು ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದು, ಈ ಹಿನ್ನೆಲೆ ಸಭೆ ಕರೆದು ಕರಾಳ ದಿನಾಚರಣೆ ಕುರಿತು ಚರ್ಚೆ ನಡೆಸಿದ ಎಂಇಎಸ್ ಮುಖಂಡರು, ಸಭೆಯಲ್ಲಿ ಮಹಾರಾಷ್ಟ್ರದ ನಾಯಕರನ್ನು ಕರೆತರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಭೌಗೋಳಿಕ ರಾಜಕೀಯ ಉದ್ವಿಗ್ನತೆಗೆ ಅಮೆರಿಕ ಕಾರಣ ; ರಷ್ಯಾ

ಇನ್ನು ಕರ್ನಾಟಕ ರಾಜ್ಯೋತ್ಸವ ಹೊಸ್ತಿಲ್ಲಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಗಡಿ ಖ್ಯಾತೆ ತೆಗೆದಿದ್ದಾರೆ. ಗಡಿ ವಿವಾದ ಕೆದಕಿದ ಮಹಾ ಸಿಎಂ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇದರಿಂದ ಬೆಳಗಾವಿಯ ಎಂಇಎಸ್ ಪುಂಡರಿಗೆ ಆನೆ ಬಲ ಬಂದಂತಾಗಿದೆ.

ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲವಿದೆ. ನ.1ರಂದು ಎಂಇಎಸ್‍ನಿಂದ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡಲಾಗ್ತಿದೆ. ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಪ್ರತಿನಿ ಕಳುಹಿಸುವೆ ಎಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಸಿಎಂ ಏಕನಾಥ ಸಿಂಧೆ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಛೀಮಾರಿ ಹಾಕಿದ ಕೇಂದ್ರ ಸಚಿವ ಶೇಖಾವತ್

ನವದೆಹಲಿ, ಅ.30- ಸತ್ಯದ ಗೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ. ಇಲ್ಲವಾದರೆ ಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯಕರ್ಮವೆಂದು ಕರ್ನಾಟಕದ ಜನ ನಿಮ್ಮ ಬಗ್ಗೆ ಕನಿಕರ ಹಾಗೂ ತಿರಸ್ಕಾರವನ್ನು ತೋರಬಹುದು ಎಂದು ಮೂಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟೀಕಾ ಪ್ರಹಾರ ನಡೆಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗಜೇಂದ್ರ ಸಿಂಗ್ ಶೇಖಾವತ್, ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ ಎಂದು ವಿಷಾದಿಸಿದ್ದಾರೆ.

ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ಧ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ. ಹೀಗಾಗಿ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ. ಮೊದಲನೆಯದಾಗಿ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ ಎಂದು ಗಜೇಂದ್ರ ಸಿಂಗ್ ಶೇಖಾವತ್ ಸಮರ್ಥಿಸಿಕೊಂಡಿದ್ದಾರೆ.

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾದ ಭಾರತೀಯರ ರಕ್ಷಣೆಗೆ ಕ್ರಮ : ಜೈಶಂಕರ್

ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್‍ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ಎಂದು ಪ್ರಶ್ನೆಸಿದ್ದಾರೆ.

2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ – ತ್ವರಿತ ನೀರಾವರಿ ಕಾರ್ಯಕ್ರಮದಡಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ ಮೂರು ಪೂರ್ಣಗೊಂಡಿದೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ.ಗಳ ಪೈಕಿ 1190.05 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ.

ಇದು ರಾಜ್ಯದ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಾರದಿರುವುದು ಚೋದ್ಯವಲ್ಲವೇ ಎಂದು ಅಂಕಿ-ಅಂಶಗಳ ಸಮೇತ ತಿರುಗೇಟು ಕೊಟ್ಟಿದ್ದಾರೆ. ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ 629.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ 28.10.2023ರ ವರೆಗೆ ಕೇವಲ 274.05 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಂಡಿದ್ದೀರಿ ಎಂದು ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾದ ನಷ್ಟ ತುಂಬಿಕೊಡಲು 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ರೂ.5,495 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ನಮ್ಮದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ, ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಶಿಫಾರಸನ್ನು ತಿರಸ್ಕರಿಸಿ, ನಾಡದ್ರೋಹ ಎಸಗಿದರು ಎಂದು ಪೋಸ್ಟ್ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೇ ಮೋದಿ ಮುಖ ನೋಡಿ ಮತ ನೀಡಿ ಎನ್ನುವ ನಿಮ್ಮವರ ಅನ್ಯಾಯಕ್ಕೆ ಕನ್ನಡಿಗರು ಯಾರ ಬಳಿ ನ್ಯಾಯ ಕೇಳಬೇಕು?.

ಸಾಲು ಸಾಲು ರೈಲು ದುರಂತ : ಮೋದಿ ಸರ್ಕಾರಕ್ಕೆ ಖರ್ಗೆ ತರಾಟೆ

ಕೇಂದ್ರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಆನ್ಸರ ಮಾಡಿ ಮೋದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.

ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿಯುತ್ತಿದ್ದಾರೆ ಭಾರತೀಯ ನಾರಿಯರು

ನವದೆಹಲಿ,ಅ.30- ಭಾರತೀಯ ನಾರಿಯರು ದಶಕಗಳಿಂದ ವಾರಕ್ಕೆ 70 ಗಂಟೆಗಳಿಗೂ ಹೆಚ್ಚು ಕಾಲ ದುಡಿಯುತ್ತಿದ್ದಾರೆ. ಆದರೆ, ಅದರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂದು ಎಡೆಲ್‍ವೀಸ್ ಮ್ಯೂಚಯಲ್ ಫಂಡ್‍ನ ಸಿಇಒ ರಾಧಿಕಾ ಗುಪ್ತ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಒಟ್ಟಾರೆ ಕೆಲಸದ ಉತ್ಪಾದಕತೆ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಭಾರತದ ಯುವಕರು ಪ್ರತಿ ವಾರ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ನೀಡಿದ್ದ ಸಲಹೆ ಕುರಿತಂತೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನಾರಾಯಣ ಮೂರ್ತಿ ಅವರ ಹೇಳಿಕೆ ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಕೆಲವು ಜನರು ಇದು ಅಸಮಂಜಸ ಮತ್ತು ಅತ್ಯಂತ ದೀರ್ಘವಾದ ಕೆಲಸದ ಸಮಯವನ್ನು ಒಳಗೊಂಡಿರುವ ಕೆಲಸದ ವೇಳಾಪಟ್ಟಿಯನ್ನು ಹೊಂದಿರುವ ದೀರ್ಘಾವಧಿಯ ಆರೋಗ್ಯದ ಪರಿಣಾಮಗಳ ಬಗ್ಗೆ ಪ್ರಶ್ನಿಸಿದ್ದರು.

ಇದೀಗ ಎಡೆಲ್‍ವೀಸ್ ಮ್ಯೂಚುವಲ್ ಫಂಡ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರಾಕಾ ಗುಪ್ತಾ ಈ ವಿಷಯವನ್ನು ಮತ್ತೆ ಕೆಣಕಿದ್ದು, ಭಾರತೀಯ ಮಹಿಳೆಯರು ದಶಕಗಳಿಂದ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೂ, ಯಾರೂ ಅದರ ಬಗ್ಗೆ ಗಮನ ಹರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾದ ಭಾರತೀಯರ ರಕ್ಷಣೆಗೆ ಕ್ರಮ : ಜೈಶಂಕರ್

ಕಚೇರಿಗಳು ಮತ್ತು ಮನೆಗಳ ನಡುವೆ, ಅನೇಕ ಭಾರತೀಯ ಮಹಿಳೆಯರು ಭಾರತವನ್ನು (ನಮ್ಮ ಕೆಲಸದ ಮೂಲಕ) ಮತ್ತು ಮುಂದಿನ ಪೀಳಿಗೆಯ ಭಾರತೀಯರನ್ನು (ನಮ್ಮ ಮಕ್ಕಳು) ನಿರ್ಮಿಸಲು ಎಪ್ಪತ್ತು ಗಂಟೆಗಳಿಗಿಂತ ಹೆಚ್ಚು ವಾರಗಳವರೆಗೆ ಕೆಲಸ ಮಾಡುತ್ತಿದ್ದಾರೆ. ಮತ್ತು ದಶಕಗಳು, ನಗುವಿನೊಂದಿಗೆ, ಮತ್ತು ಅಕಾವಗೆ ಬೇಡಿಕೆಯಿಲ್ಲದೆ ದುಡಿಯುತ್ತಿದ್ದರೂ ಅದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಎಕ್ಸ್ ಮಾಡಿ ಗಮನ ಸೆಳೆದಿದ್ದಾರೆ.

ಅವರ ಈ ಪೋಸ್ಟ್ 74,000 ವೀಕ್ಷಣೆಗಳನ್ನು ಸಂಗ್ರಹಿಸಿದೆ. ಆಕೆಯ ಪೋಸ್ಟ್‍ಗೆ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಮಹಿಳೆಯರ ದಣಿವರಿಯದ ಸಮರ್ಪಣೆ ಮನ್ನಣೆಗೆ ಅರ್ಹವಾಗಿದೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಬಸವನಗುಡಿ ವಾರ್ಡ್ ಹೆಸರು ಬದಲಾವಣೆಗೆ ಮುಂದುವರೆದ ವಿರೋಧ

ಬೆಂಗಳೂರು,ಅ.30-ಬಿಬಿಎಂಪಿ ವ್ಯಾಪ್ತಿಯ ವಾರ್ಡ್‍ಗಳ ಹೆಸರು ಬದಲಾವಣೆಗೆ ವ್ಯಕ್ತವಾಗುತ್ತಿರುವ ವಿರೋಧ ಮುಂದುವರೆದಿದೆ. ಬಸವನಗುಡಿ ವಾರ್ಡ್ ಹೆಸರನ್ನು ದೊಡ್ಡ ಗಣಪತಿ ವಾರ್ಡ್ ಎಂದು ಮರುನಾಮಕರಣಗೊಳಿಸುವ ಪ್ರಯತ್ನಕ್ಕೆ ಬಸವನಗುಡಿಯ ನಾಗರಿಕರು, ಸಂಘ-ಸಂಸ್ಥೆಗಳು ಸೇರಿ ಶಾಂತಿಯುತ ಬಸವಣ್ಣ ನಡಿಗೆ ಆಯೋಜಿಸಿ, ಗೂಳಿಯೊಡನೆ ಹೆಜ್ಜೆ ಹಾಕುವ ಮೂಲಕ ಪ್ರತಿಭಟಿಸಿದ್ದಾರೆ.

ನೆಟ್ಟಕಲ್ಲಪ್ಪ ಸರ್ಕಲ್‍ನ ಗಣೇಶ ದೇವಸ್ಥಾನಕ್ಕೆ ಕಾಯಿ ಒಡೆದು ನಡಿಗೆಗೆ ಚಾಲನೆ ನೀಡಲಾಯಿತು. ಬಸವನೊಂದಿಗೆ ಸ್ಥಳೀಯರು ಹಲವು ರಸ್ತೆಗಳಲ್ಲಿ ಸಂಚರಿಸಿ, ದೊಡ್ಡ ಬಸವನಗುಡಿಗೆ ನಡಿಗೆ ಸಾಗಿ, ಬಸವನಗುಡಿ ಉಳಿಸುವ ಘೋಷಣೆಗಳನ್ನು ಕೂಗಿದರು.

ನಡಿಗೆಯ ಅರ್ಧ ದಾರಿಗೆ ಶಾಸಕ ರವಿಸುಬ್ರಹ್ಮಣ್ಯ ಜೊತೆಯಾದರು. ಈವರೆಗೂ ಅವರು ಕಾಣಿಸಿರಲಿಲ್ಲ, ಈಗ ದಿಢೀರ್ ಎಂದು ಪ್ರತ್ಯಕ್ಷರಾಗಿರುವುದು ಪ್ರಚಾರಕ್ಕಾಗಿ ಮಾತ್ರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಸಲಿಗೆ, ವಾರ್ಡ್ ಡಿಲಿಮಿಟೇಷನ್ ಪ್ರಕ್ರಿಯೆಯ ಹಂತದಲ್ಲಿ ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಕೂಡ ಸಹಿ ಹಾಕುವ ಮೂಲಕ ಒಪ್ಪಿಗೆ ಕೊಟ್ಟಿದ್ದಾರೆ, ಈಗ ಅದರ ವಿರೋಧದ ಪ್ರತಿಭಟನೆಯಲ್ಲೂ ಭಾಗಿಯಾಗಿರುವುದು ಏನನ್ನು ಸೂಚಿಸುತ್ತದೆ ಎಂಬುದು ಹಿರಿಯ ನಾಗರಿಕರ ಪ್ರಶ್ನೆಯಾಗಿದೆ.

ಸಾಲು ಸಾಲು ರೈಲು ದುರಂತ : ಮೋದಿ ಸರ್ಕಾರಕ್ಕೆ ಖರ್ಗೆ ತರಾಟೆ

ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರಗೊಳ್ಳುತ್ತದೆ, ಕೋರ್ಟ್ ಮೆಟ್ಟಿಲು ಹತ್ತಿ ನ್ಯಾಯಕ್ಕಾಗಿ ಬೇಡಿಕೆಯನ್ನೂ ಸಲ್ಲಿಸಲಾಗುತ್ತದೆ ಎಂದು ಸತ್ಯಲಕ್ಷ್ಮಿರಾವ್, ನಿವಾಸಿಗಳ ಸಂಘಟಕರಾದ ಮಣಿ, ಶ್ರೀನಿವಾಸ್, ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಕೆಎನ್‍ಸಿ ಸುರೇಶ್, ರಾಘವೇಂದ್ರ ರಾಜು, ಪತ್ರಕರ್ತ ಗುರುಪ್ರಸಾದ್ ತಿಳಿಸಿದ್ದಾರೆ.

ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಅ 30 (ಪಿಟಿಐ) ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸಿಕ್ಕಿಬಿದ್ದಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಈ ಪ್ರಕರಣಗಳ ವಿಚಾರಣೆ ಆರರಿಂದ ಎಂಟು ತಿಂಗಳಲ್ಲಿ ಮುಕ್ತಾಯವಾಗಲಿದೆ ಎಂದು ತನಿಖಾ ಸಂಸ್ಥೆಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಎಸ್‍ವಿಎನ್ ಭಟ್ಟಿ ಅವರ ಪೀಠ ಹೇಳಿದೆ. ಆದರೆ ವಿಚಾರಣೆಯು ಅವ್ಯವಸ್ಥೆಯ ರೀತಿಯಲ್ಲಿ ಮುಂದುವರಿದರೆ, ಮೂರು ತಿಂಗಳಲ್ಲಿ ಈ ಪ್ರಕರಣಗಳಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿಸೋಡಿಯಾಗೆ ಸ್ವಾತಂತ್ರ್ಯವಿದೆ ಎಂದು ಪೀಠ ಹೇಳಿದೆ.

ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಸೋಡಿಯಾ ಅವರ ಎರಡು ಪ್ರತ್ಯೇಕ ನಿಯಮಿತ ಜಾಮೀನು ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. ಕಳೆದ 17 ರಂದು ಎರಡೂ ಅರ್ಜಿಗಳ ತೀರ್ಪನ್ನು ಅದು ಕಾಯ್ದಿರಿಸಿತ್ತು. ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಫೆಬ್ರವರಿ 26 ರಂದು ಹಂಚಿಕೆಯಲ್ಲಿನ ಪಾತ್ರಕ್ಕಾಗಿ ಬಂಧಿಸಿತ್ತು. ಅಂದಿನಿಂದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಬಂಧನದಲ್ಲಿದ್ದಾರೆ.

ಸಾಲು ಸಾಲು ರೈಲು ದುರಂತ : ಮೋದಿ ಸರ್ಕಾರಕ್ಕೆ ಖರ್ಗೆ ತರಾಟೆ

ಮಾರ್ಚ್ 9 ರಂದು ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸಿದ ನಂತರ ಸಿಬಿಐ ಎಫ್‍ಐಆರ್‍ನಿಂದ ಉಂಟಾದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಸಿಸೋಡಿಯಾ ಅವರನ್ನು ಬಂಧಿಸಿತು. ಫೆಬ್ರವರಿ 28 ರಂದು ಸಿಸೋಡಿಯಾ ದೆಹಲಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರಾಗಿದ್ದ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಮಥ್ರ್ಯ ಹೊಂದಿರುವ ಉನ್ನತ ವ್ಯಕ್ತಿ ಎಂದು ಹೇಳುವ ಮೂಲಕ ಹೈಕೋರ್ಟ್ ಮೇ 30 ರಂದು ಸಿಬಿಐ ಪ್ರಕರಣದಲ್ಲಿ ಅವರಿಗೆ ಜಾಮೀನು ನಿರಾಕರಿಸಿತು.

ಜುಲೈ 3 ರಂದು, ನಗರ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ-ಲಾಂಡರಿಂಗ್ ಪ್ರಕರಣದಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ನಿರಾಕರಿಸಿತು, ಅವರ ವಿರುದ್ಧದ ಆರೋಪಗಳು ಸ್ವಭಾವದಲ್ಲಿ ಬಹಳ ಗಂಭೀರವಾಗಿದೆ ಎಂದು ಹೇಳಿತು.

ಪರಸ್ತ್ರೀ ವ್ಯಾಮೋಹಕ್ಕೆ ಹೆತ್ತಮಗನನ್ನು ಕೊಂದ ಪಾಪಿ ತಂದೆ

ದೆಹಲಿ ಸರ್ಕಾರವು ನವೆಂಬರ್ 17, 2021 ರಂದು ನೀತಿಯನ್ನು ಜಾರಿಗೆ ತಂದಿತು, ಆದರೆ ಭ್ರಷ್ಟಾಚಾರದ ಆರೋಪಗಳ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತು. ತನಿಖಾ ಸಂಸ್ಥೆಗಳ ಪ್ರಕಾರ, ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇಕಡಾ 5 ರಿಂದ 12 ಕ್ಕೆ ಹೆಚ್ಚಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದ ಶೂಟರ್ ಅನೀಶ್

ನವದೆಹಲಿ, ಅ 30 (ಪಿಟಿಐ) – ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಶೂಟರ್ ಅನೀಶ್ ಭಾನ್ವಾಲಾ ಅವರು ಇಂದು ಕೊರಿಯಾದ ಚಾಂಗ್ವಾನ್‍ನಲ್ಲಿ ನಡೆದ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ 25 ಮೀಟರ್ ರ್ಯಾಪಿಡ್ ಪಿಸ್ತೂಲ್ ಫೈರ್ ಈವೆಂಟ್‍ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಬೆಳ್ಳಿ ಪದಕ ಗೆದ್ದ ಜಪಾನ್‍ನ ಡೈ ಯೋಶಿಯೋಕಾ ವಿರುದ್ಧ ಶೂಟ್‍ಔಟ್‍ನಲ್ಲಿ ಸೋತ ಭಾನ್ವಾಲಾ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಸ್ಥಳೀಯ ಫೇವರಿಟ್ ಲೀ ಗುನ್ಯೋಕ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಚೀನಾ, ಜಪಾನ್ ಮತ್ತು ಕೊರಿಯಾ ಈಗಾಗಲೇ ಈವೆಂಟ್‍ನಲ್ಲಿ ತಲಾ ಎರಡು ಒಲಿಂಪಿಕ್ ಕೋಟಾಗಳನ್ನು ಮುಗಿಸಿರುವುದರಿಂದ ಭನ್ವಾಲಾ ಅವರು ಫೈನಲ್‍ಗೆ ಅರ್ಹತೆ ಪಡೆಯುವ ಮೂಲಕ ಪ್ಯಾರಿಸ್ ಕ್ರೀಡಾಕೂಟಕ್ಕೆ ಕೋಟಾವನ್ನು ಪಡೆದರು.

ಪರಸ್ತ್ರೀ ವ್ಯಾಮೋಹಕ್ಕೆ ಹೆತ್ತಮಗನನ್ನು ಕೊಂದ ಪಾಪಿ ತಂದೆ

ಭಾನ್ವಾಲಾ ಹೊರತುಪಡಿಸಿ, ಫೈನಲ್‍ಗೆ ಪ್ರವೇಶಿಸಿದ ಎಲ್ಲಾ ಶೂಟರ್‍ಗಳು ಚೀನಾ, ಜಪಾನ್ ಮತ್ತು ಕೊರಿಯಾದಿಂದ ಬಂದವರು. ಭನ್ವಾಲಾ 588 ರನ್ ಗಳಿಸಿ ಅರ್ಹತಾ ಹಂತದಲ್ಲಿ ಮೂರನೇ ಸ್ಥಾನ ಪಡೆದು ಫೈನಲ್‍ಗೆ ತೆರಳಿದರು.

ಈವೆಂಟ್‍ನಲ್ಲಿ ಸ್ರ್ಪಧಿಸುತ್ತಿರುವ ಮತ್ತೊಬ್ಬ ಭಾರತೀಯ, ಭವೇಶ್ ಶೆಖಾವತ್ ಅರ್ಹತೆಯಲ್ಲಿ ಅಗ್ರ-ಎಂಟರಲ್ಲಿ ಸೇರಲು 584 ರನ್ ಗಳಿಸಿದರು ಆದರೆ ಅವರು ಶ್ರೇಯಾಂಕದ ಅಂಕಗಳಿಗಾಗಿ ಮಾತ್ರ ಸ್ರ್ಪಧಿಸುತ್ತಿದ್ದರಿಂದ ಫೈನಲ್‍ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅವರು ಫೈನಲ್‍ಗೆ ಅರ್ಹರಾಗಿರಲಿಲ್ಲ.

ಕೇರಳ ಸೆಕ್ರೆಟರಿಯೇಟ್‍ಗೆ ಬಿಜೆಪಿ ಮುತ್ತಿಗೆ

ತಿರುವನಂತಪುರಂ, ಅ 30 (ಪಿಟಿಐ) -ಎಡ ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಬಿಜೆಪಿ ನೇತೃತ್ವದ ಎನ್‍ಡಿಎ ಪಕ್ಷಗಳ ಸದಸ್ಯರು ಇಂದು ಕೇರಳ ಸೆಕ್ರೆಟರಿಯೇಟ್‍ನ ನಾಲ್ಕು ಗೇಟ್‍ಗಳ ಪೈಕಿ ಮೂರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ಬೆಳಗ್ಗೆ 6 ಗಂಟೆಯಿಂದಲೇ ನೂರಾರು ಬಿಜೆಪಿ ಅನುಯಾಯಿಗಳು ಸೆಕ್ರೆಟರಿಯೇಟ್‍ನ ಮೂರು ಗೇಟ್‍ಗಳ ಹೊರಗೆ ಜಮಾಯಿಸಿದ್ದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಕಚೇರಿಗೆ ತೆರಳುವವರು ಮತ್ತು ಶಾಲಾ ಮಕ್ಕಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಆ ಪ್ರದೇಶದಿಂದ ಸಂಚಾರವನ್ನು ಬದಲಾಯಿಸಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೆಕ್ರೆಟರಿಯೇಟ್‍ನಲ್ಲಿ ಕರೆದಿರುವ ಸರ್ವಪಕ್ಷ ಸಭೆ ನಡೆಯುವ ದಿನದಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪರಸ್ತ್ರೀ ವ್ಯಾಮೋಹಕ್ಕೆ ಹೆತ್ತಮಗನನ್ನು ಕೊಂದ ಪಾಪಿ ತಂದೆ

ರಾಜ್ಯದಲ್ಲಿ ಭಾನುವಾರ ಧಾರ್ಮಿಕ ಸಭೆಯೊಂದರಲ್ಲಿ ನಡೆದ ಅನೇಕ ಸ್ಪೋಟಗಳು ಮೂರು ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಸುಮಾರು 50 ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ.