Home Blog Page 1858

ಇಂತಹ ಅಂಪೈರ್ ಗಳಿದ್ದರೆ ಭಾರತ ವಿಶ್ವಕಪ್ ಗೆಲ್ಲಲ್ಲ : ಹರ್ಭಜನ್‍ ಸಿಂಗ್

ಚೆನ್ನೈ, ಅ. 28- ತವರಿನ ಅಂಗಳದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಅಂಪೈರ್‌ಗಳು ನೀಡುವ ನಿರ್ಣಯದಿಂದಲೇ ರೋಹಿತ್ ಶರ್ಮಾ ಸೋಲುವ ಭೀತಿ ಎದುರಾಗಿದೆ ಎಂದು ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಅಂಪೈರ್‌ಗಳ ವಿರುದ್ಧ ಕಿಡಿಕಾರಿದ್ದಾರೆ.

ಶುಕ್ರವಾರ (ಅಕ್ಟೋಬರ್ 27) ರಂದು ಚೆನ್ನೈನ ಎಂ.ಎ. ಚಿದಂಬರಂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ರಣರೋಚಕ ವಿಶ್ವಕಪ್ ಪಂದ್ಯದಲ್ಲಿ ಹರಿಣಗಳು 1 ವಿಕೆಟ್‍ನ ಗೆಲುವು ಪಡೆದು ಪಾಯಿಂಟ್ಸ್ ಟೇಬಲ್ ಅಗ್ರಸ್ಥಾನಕ್ಕೇರಿದರೆ, ಅಂಪೈರ್ ಮಾಡಿದ್ದ ಎಡವಟ್ಟಿನಿಂದ ಬಾಬರ್ ಆಝಮ್ ಪಡೆ ಸೆಮಿಫೈನಲ್ ರೇಸ್‍ನಿಂದ ಬಹುತೇಕ ಹೊರಬಿದ್ದಿದೆ. ಇದರಿಂದ ಬೇಸತ್ತ ಟರ್ಬನೇಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬೀಳಿಸಲು ಷಡ್ಯಂತ್ರ, ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ವಾರ್ನಿಂಗ್

ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಅವರು ಮಾಡಿದ್ದ ಎಸೆತವನ್ನು ದಕ್ಷಿಣ ಆಫ್ರಿಕಾದ ತರ್ಬೆಜ್ ಶಾಂಸಿ ಅವರು ಪ್ಯಾಡ್ ಮೇಲೆ ಎಳೆದುಕೊಂಡು ಎಲ್‍ಬಿಡ್ಲ್ಯು ಬಲೆಗೆ ಬಿದ್ದಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ಘೋಷಿಸಿದ್ದರು. ಪಾಕಿಸ್ತಾನ ತೆಗೆದುಕೊಂಡ ರಿವ್ಯೂನಲ್ಲಿ ಶಾಂಸಿ ಔಟಾಗಿರುವುದು ಸ್ಪಷ್ಟವಾಗಿದ್ದರೂ ಕೂಡ 3ನೇ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರಿಂದ ಶಾಂಸಿ ಔಟಾಗುವುದರಿಂದ ತಪ್ಪಿಸಿಕೊಂಡರು. ಅಂಪೈರ್ ತೆಗೆದುಕೊಂಡ ಈ ಕೆಟ್ಟ ತೀರ್ಪಿನಿಂದಾಗಿ ಪಾಕಿಸ್ತಾನ 1 ವಿಕೆಟ್‍ನಿಂದ ಸೋಲುವಂತಾಯಿತು.

ಅಂಪೈರ್ ತೀರ್ಪಿಗೆ ಭಜ್ಜಿ ಕಿಡಿ:
ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮುಗಿದ ಬೆನ್ನಲ್ಲೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ, `ಇಂದಿನ ಪಂದ್ಯದಲ್ಲಿ ಯಾರೂ ಗೆಲುವು ಸಾಧಿಸಿ, ಯಾವ ತಂಡ ಸೋಲು ಕಂಡಿತು ಎಂಬುದು ಮುಖ್ಯವಾಗುವುದಿಲ್ಲ, ಯಾವ ತಂಡಗಳು ಕಾದಾಟ ನಡೆಸುತ್ತಿವೆ ಎಂಬುದು ಕೂಡ ನಗಣ್ಯ. ಆದರೆ ಅಂಪೈರ್‍ಗಳು ತೆಗೆದುಕೊಂಡ ನಿಯಮ ಸರಿಯಾಗಿರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಈ ರೀತಿ ಅನ್ಯಾಯ ಟೀಮ್‍ಇಂಡಿಯಾ ಜೊತೆಗೂ ಆಗಬಹುದು. ಅಂಪೈರ್‍ಗಳ ತಪ್ಪು ತೀರ್ಮಾನದಿಂದಲೇ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಸೋಲು ಕಂಡರೆ ಆಗ ಏನು ಮಾಡುವುದು’ ಎಂದು ಹರ್ಭಜನ್‍ಸಿಂಗ್ ಆಕ್ರೋಶ ವ್ಯಕ್ತಪಡಿಸಿದದಾರೆ.

ಪಾಕ್ ವಿರುದ್ಧ ಗೆದ್ದು ‘ಜೈ ಹನುಮಾನ್’ ಎಂದ ದಕ್ಷಿಣ ಆಫ್ರಿಕಾ ಆಟಗಾರ

ಚೆನ್ನೈ, ಅ. 28- ಸುಂದರ ಬೌಂಡರಿ ಸಿಡಿಸುವ ಮೂಲಕ ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾದ 1 ವಿಕೆಟ್ ನ ರೋಚಕ ಗೆಲುವಿಗೆ ಕಾರಣವಾದ ಕೇಶವ ಮಹಾರಾಜ್ ಅವರುಜೈ ಶ್ರೀ ಹುಮಾನ್’ ಎಂಬ ಉದ್ಘೋಷ ಕೂಗುವ ಮೂಲಕ ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ.

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪಾಕಿಸ್ತಾನ ನೀಡಿದ 271 ರನ್‍ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ 45.3 ಓವರ್‍ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿ ಸೋಲಿನ ದವೆಡೆಗೆ ಸಿಲುಕಿತ್ತು.

ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್

ಈ ಸಂದರ್ಭದಲ್ಲಿ ಹರಿಣಗಳ ಗೆಲುವಿಗೆ ಬಲ ತುಂಬಿದ್ದ ಕೇಶವ ಮಹಾರಾಜ್, ಅಮೆಗತಿಯ ಆಟಕ್ಕೆ ಮುಂದಾಗಿ 21 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದರು. 47.2ನೇ ಓವರ್‍ನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಮೊಹಮ್ಮದ್ ನವಾಜ್ ಬೌಲಿಂಗ್‍ನಲ್ಲಿ ಬೌಂಡರಿ ಗಳಿಸುವ ಮೂಲಕ ತಂಡಕ್ಕೆ 1 ವಿಕೆಟ್ ಗಳ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಟಾಪ್ 1 ಅಲಂಕರಿಸಿತು.

ಎಲ್ಲಾ ಹನುಮನ ಮಹಿಮೆ:
ನಾನು ಪಂದ್ಯದಲ್ಲಿ ದೇವರಲ್ಲಿ ನಂಬಿದ್ದೆ. ದಕ್ಷಿಣ ಆಫ್ರಿಕಾದ ಹುಡುಗರಿಂದ ಎಂತಹ ಸುಂದರ ಇನಿಂಗ್ಸ್ ಮೂಡಿಬಂದಿದೆ. ತಬ್ರೈಜ್ ಶಾಂಸಿ (60ಕ್ಕೆ 4) ಹಾಗೂ ಐಡೆನ್ ಮ್ಯಾರ್ಕಮ್ (91 ರನ್) ಅವರ ಆಟವನ್ನು ನೋಡಲು ಅತ್ಯಮೋಘವಾಗಿತ್ತು.ಜೈ ಶ್ರೀ ಹನುಮಾನ್’ ಎಂದು ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಆಟಗಾರ ಕೇಶವ ಮಹಾರಾಜ್ ತಮ್ಮ ಅಕೃತ ಇನ್ಸಾಟಾಗ್ರಾಮ್‍ನಲ್ಲಿ ದಿನದ ಅತ್ಯಂತ ಸುಂದರ ಫೋಟೋದೊಂದಿಗೆ ಬರೆದಿದ್ದಾರೆ.

ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ

ಬೆಂಗಳೂರು, ಅ.28- ಟೊಮ್ಯಾಟೋ ಬಳಿಕ ಈಗ ಈರುಳ್ಳಿ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. 20-30ರೂ. ಆಸುಪಾಸಿನಲ್ಲಿದ್ದ ಈರುಳ್ಳಿ ಕೆಜಿಗೆ 60-70ರೂ.ಗೆ ತಲುಪಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳತೊಡಗಿದೆ. ಕಳೆದ ತಿಂಗಳಷ್ಟೇ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು ಕೆಜಿಗೆ 200ರೂ. ತಲುಪಿತ್ತು. ಗ್ರಾಂ ಲೆಕ್ಕದಲ್ಲಿ ಜನರು ಟೊಮ್ಯಾಟೋ ಕೊಳ್ಳುವ ಪರಿಸ್ಥಿತಿ ಬಂದಿತ್ತು. ಈಗ ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಲೆ ಏರಿಕೆಯಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ನವದೆಹಲಿ, ಬೆಂಗಳೂರು, ಕೋಲ್ಕತ್ತಾ, ಮುಂಬೈ, ಚೆನ್ನೈ ಸೇರಿದಂತೆ ಬಹುತೇಕ ಎಲ್ಲ ನಗರಗಳಲ್ಲೂ ಕೂಡ ಈರುಳ್ಳಿ ಬೆಲೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ದೇಶದೆಲ್ಲೆಡೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದ್ದು, ಬೆಲೆ ಏರಿಕೆಯಿಂದ ಜನ ತತ್ತರಿಸತೊಡಗಿದ್ದಾರೆ.

ಕಳೆದ ಸಾಲಿನಲ್ಲಿ ಇದೇ ಸಮಯದಲ್ಲಿ ಕೆಜಿಗೆ 25 ರಿಂದ 30ರೂ. ಇತ್ತು. ಆದರೆ, ಈಗ 50 ರಿಂದ 60ರೂ. ತಲುಪಿದೆ. ದೆಹಲಿಯಲ್ಲಿ 50ರೂ., ಬೆಂಗಳೂರಿನಲ್ಲಿ 55ರೂ., ತೆಲಂಗಾಣದಲ್ಲಿ 60ರೂ. ಆಗಿದೆ. ಕೆಲವೆಡೆ ಅತಿವೃಷ್ಟಿಯಿಂದ ಬೆಳೆ ಹಾನಿಯಾದರೆ ಮತ್ತೆ ಕೆಲವೆಡೆ ಅನಾವೃಷ್ಠಿಯಿಂದ ಬೆಳೆ ಇಲ್ಲದೆ ಈರುಳ್ಳಿ ಕೊರತೆ ಕಂಡುಬಂದಿದೆ.

ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್

ಹೀಗಾಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ದೇಶಾದ್ಯಂತ ಈರುಳ್ಳಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಹೊರೆಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಯಾವ ರಾಜ್ಯಗಳಲ್ಲಿ ಈರುಳ್ಳಿ ದರ ಭಾರೀ ಏರಿಕೆ ಕಂಡಿದೆಯೋ ಅಲ್ಲೆಲ್ಲ ಕೇಂದ್ರದ ಬಳಿ ಇರುವ ದಾಸ್ತಾನಿನಿಂದ ಈರುಳ್ಳಿ ಸರಬರಾಜು ಮಾಡಿ ರಿಯಾಯಿತಿ ದರದಲ್ಲಿ ಅಂದರೆ ಕೆಜಿಗೆ 25ರೂ.ನಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿದ್ದಾರೆ. ಒಂದೆಡೆ ಬರಗಾಲ, ಮತ್ತೊಂದೆಡೆ ಬೆಲೆ ಏರಿಕೆ, ಬಸ್ ದರ, ವಿದ್ಯುತ್ ದರ, ಆಹಾರ ಪದಾರ್ಥಗಳ ದರದ ಜತೆಗೆ ಹಣ್ಣು-ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಈಗ ಈರುಳ್ಳಿ ಬೆಲೆ ಕೂಡ ಗಗನಕ್ಕೇರುತ್ತಿದ್ದು, ಜನ ತತ್ತರಿಸಿಹೋಗಿದ್ದಾರೆ.

ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ

ಕಳೆದ ಬಾರಿ ರಾಜ್ಯದಲ್ಲಿ ಭಾರೀ ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿತ್ತಾದರೂ ಈರುಳ್ಳಿ ಬೆಲೆ ಏರಿಕೆಯಾಗಿರಲಿಲ್ಲ. ಆದರೆ, ಈ ಬಾರಿ ಮಳೆ ಇಲ್ಲದೆ ಬೆಳೆ ಇಲ್ಲದೆ ಜನಸಾಮಾನ್ಯರಿಗೆ ಈರುಳ್ಳಿ ಕೈಗೆಟಕುತ್ತಿಲ್ಲ. ಪ್ರತಿದಿನ ಜನಸಾಮಾನ್ಯರಿಗೆ ಅಗತ್ಯವಾಗಿರುವ ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ ಬೆಲೆ ಏರಿಕೆಯಾದರೆ ಜೀವನ ನಡೆಸುವುದು ಕಷ್ಟಸಾಧ್ಯ. ಸರ್ಕಾರ ಮಧ್ಯ ಪ್ರವೇಶಿಸಿ ದಿನವಹಿ ವಸ್ತುಗಳು ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ.

ಸರ್ಕಾರ ಬೀಳಿಸಲು ಷಡ್ಯಂತ್ರ, ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ವಾರ್ನಿಂಗ್

ಬೆಂಗಳೂರು, ಅ.28- ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಶಾಸಕರ ಆರೋಪಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧ್ವನಿಗೂಡಿಸಿದ್ದಾರೆ. ಹೈದೆರಾಬಾದ್‍ಗೆ ತೆರಳುವ ಮೊದಲು ಸದಾಶಿವನಗರ ನಿವಾಸದ ಬಳಿ, ಮಂಡ್ಯದ ಶಾಸಕ ರವಿ ಗಣಿಗಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯವರು ನಡೆಸುತ್ತಿರುವ ಪ್ರಯತ್ನಗಳು, ಒಡ್ಡುತ್ತಿರುವ ಆಮಿಷಗಳು ಹಾಗೂ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ ಎಂದರು.

ರವಿ ಗಣಿಗಾ ಯಾರೋ ಒಬ್ಬ ಹುಡುಗನ ಹೆಸರು ಹೇಳಿದ್ದಾರೆ. ಆತನಿಗಿಂತಲೂ ದೊಡ್ಡ, ದೊಡ್ಡ ನಾಯಕರು ಸರ್ಕಾರ ಪತನಗೊಳಿಸುವ ಷಡ್ಯಂತ್ರದ ಹಿಂದೆ ಇದ್ದಾರೆ. ಆದರೆ ಅವರ ಪ್ರಯತ್ನ ಫಲಿಸುವುದಿಲ್ಲ. ಸರ್ಕಾರ ಪತನಗೊಳಿಲಸುವುದು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಅನಗತ್ಯ ಹೇಳಿಕೆ ಕೊಟ್ಟರೆ ನೊಟೀಸ್:
ಪಕ್ಷದ ಆಂತರಿಕ ವಿಚಾರ, ಸರ್ಕಾರ ಹಾಗೂ ಅಕಾರದ ಬಗ್ಗೆ ಮಾಧ್ಯಮಗಳ ಮುಂದೆ ಶಾಸಕರಿರಲಿ, ನಾಯಕರಿರಲಿ ಯಾರೇ ಆದರೂ ಅನಗತ್ಯ ಹೇಳಿಕೆ ನೀಡಬಾರದು ಮನವಿ ಹಾಗೂ ಎಚ್ಚರಿಕೆ ಎರಡು ಮಾದರಿಯಲ್ಲೂ ಕೇಳಿಕೊಳ್ಳುತ್ತೇನೆ. ಇಷ್ಟರ ನಂತರವೂ ಹೇಳಿಕೆ ನೀಡಿದರೆ ವಿಧಿ ಇಲ್ಲದೆ ಅವರಿಗೆ ನೊಟೀಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಬಿರುಸಿನ ಚಟುವಟಿಕೆ ನಡೆಸುತ್ತಿದೆ. ಈಗಾಗಲೇ ಕಾಂಗ್ರೆಸ್‍ನ ಶಾಸಕರನ್ನು ಭೇಟಿ ಮಾಡಿ ತಲಾ 50 ಕೋಟಿ ರೂಪಾಯಿ ನೀಡುವ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಲಾಗಿದೆ. ಕಾಂಗ್ರೆಸ್ ತೊರೆಯುವುದಾದರೆ ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿಸುವುದಾಗಿ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ಹೇಳಿದರು.

ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್

ಕಳೆದ ಎರಡು ತಿಂಗಳಿನಿಂದಲೂ ಈ ರೀತಿಯ ಚಟುವಟಿಕೆಗಳು ನಡೆಯುತ್ತಲೇ ಇವೆ ಎಂದು ಆರೋಪಿಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಹಲವು ಬಾರಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಜೆಡಿಎಸ್-ಬಿಜೆಪಿ ನಡುವೆ ಮೈತ್ರಿಯಾದ ಬಳಿಕವಂತೂ ಕಾಂಗ್ರೆಸ್ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಲಾಗುತ್ತಿದೆ ಎಂಬ ಟೀಕೆಗಳಿವೆ.

ಅದರ ಬೆನ್ನಲ್ಲೆ ಜೆಡಿಎಸ್ ನಾಯಕರು ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಒಂದರ ಮೇಲೊಂದು ಆರೋಪ ಮಾಡಲಾರಂಭಿಸಿದ್ದಾರೆ. ಬಿಜೆಪಿ ಪಾಳೆಯದಲ್ಲಿ ವಿರೋಧ ಪಕ್ಷದ ನಾಯಕರಿಲ್ಲದಿದ್ದರೂ ಪ್ರಮುಖ ನಾಯಕರು ಕಾಲಕಾಲಕ್ಕೆ ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ಆರೋಪ ಮಾಡಲಾರಂಭಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಪಂಚಖಾತ್ರಿಗಳ ಪೈಕಿ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿರುವ ಯಶಸ್ಸಿನಲ್ಲೇ ತೇಲುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಎದಿರಾಗಿ ಬಿಜೆಪಿ ಜೆಡಿಎಸ್ ಪಕ್ಷಗಳು ಖಾತ್ರಿ ಜಾರಿಯಲ್ಲಿ ಜನಪರ ನಿಲುವಿಲ್ಲ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದೆ. ಹಾಗೆಯೇ ಹಲವು ಭ್ರಷ್ಟಚಾರದ ಆರೋಪಗಳನ್ನು ಮಾಡಿದ್ದು ಈ ಸರ್ಕಾರ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಹೇಳಿಕೆ ನೀಡಿದ್ದಾರೆ.

136 ಶಾಸಕರ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಪತನ ಗೊಳಿಸಲು ಬಿಜೆಪಿಗೆ ಪಕ್ಷೇತರರನ್ನು ಹೊರತು ಪಡಿಸಿದರೆ 28 ಶಾಸಕರ ಸಂಖ್ಯಾಬಲದ ಅಗತ್ಯವಿದೆ. 66 ಶಾಸಕರ ಸಂಖ್ಯೆಯನ್ನು ಹೊಂದಿರುವ ಬಿಜೆಪಿ 19 ಶಾಸಕರನ್ನು ಹೊಂದಿರುವ ಜೆಡಿಎಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಎರಡು ಪಕ್ಷಗಳ ಬಲಾಬಲದ ಬಳಿಕ ಸರ್ಕಾರ ರಚನೆ ಮಾಡಲು 28 ಮಂದಿ ಶಾಸಕರು ಬೇಕಿದೆ. ಇನ್ನೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ. ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಮಾನ್ಯತೆ ಇಲ್ಲ. ಹೊಸ ಸರ್ಕಾರ ರಚನೆಯ ಸಂದರ್ಭ ಎದುರಾದರೆ ಅವರು ಬಿಜೆಪಿಯ ಜೊತೆ ಕೈ ಜೊಡಿಸುವುದರಲ್ಲಿ ಯಾವುದೇ ಅನುಮಾನಗಳಲ್ಲ.

ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದವನ್ನು ಪತನಗೊಳಿಸುವಾಗ 17 ಮಂದಿ ಶಾಸಕರನ್ನು ಆಪರೆಷನ್ ಕಮಲದ ಮೂಲಕ ಸೆಳೆದುಕೊಳ್ಳಲಾಗಿತ್ತು. ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಸರ್ಕಾರದಲ್ಲಿ 47ಕ್ಕೂ ಹೆಚ್ಚು ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರ ಪತನಗೊಳಿಸಲಾಗಿದೆ.

ಮಧ್ಯ ಪ್ರದೇಶದಲ್ಲಿ 32 ಶಾಸಕರನ್ನು ಸೆಳೆದು ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಕ್ಕೆ ಅಗತ್ಯ ಇರುವುದು ಎಲ್ಲಾ ಲೆಕ್ಕಾಚಾರಗಳ ಬಳಿಕ 24 ಶಾಸಕರು ಮಾತ್ರ. ಹೀಗಾಯೇ ತೆರೆಮರೆಯ ಚಟುವಟಿಕೆಗಳು ಬಿರಿಸುಗೊಂಡಿವೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೇಪಥ್ಯಕ್ಕೆ ಸರಿದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಹೆಚ್ಚು ಸಕ್ರಿಯವಾಗಿದ್ದಾರೆ.

ಅದು ಕೂಡ ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಿದೆ. ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರದ ಅಸ್ತಿತ್ವಕ್ಕೆ ಎಳ್ಳು ನೀರು ಬಿಡಬಹುದು ಎಂಬ ಲೆಕ್ಕಾಚಾರಗಳು ಉಲ್ಟಾ ಆಗುತ್ತಿದ್ದು, ಚುನಾವಣೆಗೂ ಮುನ್ನವೇ ಕಾರ್ಯಚರಣೆಗಳು ಬಿರಿಸು ಪಡೆದಿರುವುದು ಕಾಂಗ್ರೆಸಿಗರಿಗೆ ಆತಂಕ ಮೂಡಿಸಿವೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೆ ನಿನ್ನೆ ರಾತ್ರಿ ಗೃಹ ಸಚಿವ ಪರಮೇಶ್ವರ್ ಅವರ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಬೋಜನಕೂಟ ನಡೆಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಕೊಹ್ಲಿ ಟೀಂ ಇಂಡಿಯಾದ 6ನೇ ಬೌಲರ್..?

ಬೆಂಗಳೂರು, ಅ.27- ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾ 6ನೇ ಬೌಲರ್ ಕೊರತೆ ಎದುರಿಸುತ್ತಿದ್ದು, ಇದಕ್ಕೆ ಬಿಸಿಸಿಐ ಮ್ಯಾನೇಜ್ಮೆಂಟ್ ಹೊಸ ರಣತಂತ್ರ ರೂಪಿಸಿದೆ. ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಚೆಂಡು ತಡೆಯುವ ವೇಳೆ ಪಾದದ ಗಾಯದ ಸಮಸ್ಯೆಗೆ ಪಾಂಡ್ಯ ಒಳಗಾದ ನಂತರ ಹಾರ್ದಿಕ್‍ರ ಉಳಿದ ಓವರ್ ಅನ್ನು ಕೊಹ್ಲಿ ಪೂರ್ಣಗೊಳಿಸಿದ್ದರು.

ಅಕ್ಟೋಬರ್ 29ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ, ಜೋಸ್ ಬಟ್ಲರ್ ಸಾರಥ್ಯದ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ 6ನೇ ಬೌಲರ್ ಕೊರತೆ ಕಾಡದಿರಲಿ ಎಂಬ ದೃಷ್ಟಿಯಿಂದ ಕೊಹ್ಲಿ , ಗಿಲ್, ಸೂರ್ಯಕುಮಾರ್ ನೆಟ್ ಪ್ರಾಕ್ಟೀಸ್‍ನಲ್ಲಿ ಬೌಲಿಂಗ್ ಮಾಡುವಲ್ಲಿ ತಲ್ಲೀನರಾಗಿ ದ್ದಾರೆ. ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 3 ಎಸೆತ ಬೌಲಿಂಗ್ ಮಾಡಿ 2 ರನ್‍ಗಳನ್ನು ಬಿಟ್ಟುಕೊಟ್ಟಿದ್ದರು.

2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್, ಸೋಟಕ ಬ್ಯಾಟಿಂಗ್ ಪ್ರದರ್ಶಿಸಿ 5 ಪಂದ್ಯಗಳಿಂದ 1 ಶತಕ ಹಾಗೂ 3 ಅರ್ಧಶತಕಗಳ ನೆರವಿನಿಂದ 354 ರನ್ ಬಾರಿಸಿ, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‍ಗಳಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮೋಡಿ ಪ್ರದರ್ಶಿ ಸಲು ಮುಂದಾಗಿರುವ ವಿರಾಟ್ ಕೊಹ್ಲಿ , ನೆಟ್ಸ್ ಪ್ರಾಕ್ಟೀಸ್‍ನಲ್ಲಿ ನಾಯಕ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ಮಾಡುತ್ತಾರೆಯೇ ಎಂಬ ಪ್ರಶ್ನೆಯು ಅಭಿಮಾನಿಗಳಲ್ಲಿ ಮೂಡಿದೆ.

“ದರೋಡೆ, ಡಕಾಯಿತಿ, ಅತ್ಯಾಚಾರ, ಅಪರಾಧಗಳಲ್ಲಿ ಮುಸ್ಲಿಮರೇ ನಂ.1”

ಮತ್ತೊಂದೆಡೆ ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಹಾಗೂ ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ನೆಟ್ಸ್‍ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದು , ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬಿಸಿಸಿಐ ಮ್ಯಾನೇಜ್‍ಮೆಂಟ್ ಕೊಹ್ಲಿ , ಗಿಲ್ ಅಥವಾ ಸೂರ್ಯಕುಮಾರ್ ಯಾದವ್‍ರನ್ನು ಅರೆಕಾಲಿಕ ಬೌಲರ್‍ಗಳಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಗೋಚರಿಸುತ್ತಿದೆ.

ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್

ತೂತುಕುಡಿ(ತಮಿಳುನಾಡು). ಅ.28- ಮೀನುಗಾರಿಕೆಗೆ ತೆರಳಿದ್ದ ವೇಳೆ ಮಾಲ್ಡೀವ್ಸ್ ನ ಜಲಪ್ರದೇಶಕ್ಕೆ ತೆರಳಿದ ತಮಿಳುನಾಡಿನ ಮೀನುಗಾರರನ್ನು ಮಾಲ್ಡೀವ್ಸ್ ನ ಕರಾವಳಿ ಕಾವಲು ಪಡೆ ಅಧಿಕಾರಿಗಳು ಬಂಧಿಸಿದ್ದಾರೆ. ಒಟ್ಟು 12 ಮೀನುಗಾರರನ್ನು ಬಂಸಿದ್ದು, 1.5 ಕೋಟಿ ಮೌಲ್ಯದ ಬಾರ್ಜ್ (ದೋಣಿ)ನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಒಂದು ವಾರದ ಹಿಂದೆ ಮೀನುಗಾರರನ್ನು ಬಂಧಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಲ್ಡೀವ್ಸ್ ಸರ್ಕಾರವ ಇದೇ ಮೊದಲ ಬಾರಿಗೆ ತಮಿಳುನಾಡು ಮೀನುಗಾರರನ್ನು ಬಂಧಿಸಿದೆ. ಬಂಧನಕ್ಕೊಳಗಾಗಿರುವವರನ್ನು ರಾಮೇಶ್ವರಂನ ಉದಯಕುಮಾರ್ (31), ತೂತುಕುಡಿಯ ವೆಂಬಾನರ್ ಮೈಕೆಲ್ ರಾಜ್ (21), ಆಂಟನಿ ಅನ್ಸೆಲ್ ಕ್ರಿಸ್ಟೋಫರ್ (22), ಆದಿಶಯ ಪರಲೋಕಧಿ ೀರವಿಯಂ (25 ), ಮಧುರೈನ ಮಾಧೇಶ್ ಕುಮಾರ್ (15), ಆಂಟೋನಿ ಸೆಲ್ವಶೇಖರನ್ (23), ಆದಿ ನಾರಾಯಣನ್ (20), ಮಹೇಶ್ ಕುಮಾರ್ (24) , ಅನ್ಬು ಸೂಸೈ ಮೈಕಲ್ (48), ವಿಘ್ನೇಶ್ (31) ಮತ್ತು ಮಣಿ ಶಕ್ತಿ ಎಂದು ಗುರುತಿಸಲಾಗಿದೆ.

ಬಂಧಿತರು ಅ.1ರಂದು ತೂತುಕುಡಿ ಸಮೀಪದ ತರುವೈಕುಲಂ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದರು. ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಬಂಧನಕ್ಕೊಳಗಾಗಿರುವ ಮೀನುಗಾರ ಆದಿ ನಾರಾಯಣ್ ತಾಯಿ ವಿಜಯಲಕ್ಷ್ಮಿ, ಅ.1ರಂದು ಅವರು ಮೀನು ಹಿಡಿಯಲು ಆಳ ಸಮುದ್ರಕ್ಕೆ ತೆರಳಿದ್ದರು. ಮೀನು ಹಿಡಿಯುವ ಸಂದರ್ಭ ಮಾಲ್ಡೀವ್ಸ್ ನ ಜಲಪ್ರದೇಶಕ್ಕೆ ತೆರಳಿದ್ದ ಅವರನ್ನು ಅಲ್ಲಿನ ಕೋಸ್ಟ ಗಾರ್ಡ್ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಬಗ್ಗೆ ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ಮಗ ಸುರಕ್ಷಿತವಾಗಿದ್ದಾನೆ. ನಮ್ಮ ಪರಿಶೀಲನೆ ನಡೆದ ಕೂಡಲೇ ಅವರನ್ನು ಮರಳಿ ತಾಯ್ನಾಡಿಗೆ ಕಳುಹಿಸಲಾಗುವುದು. ಆದರೆ, ಯಾವಾಗ ಕಳುಹಿಸಲಾಗುವುದು ಎಂದು ಮಹಿಳೆ ಹೇಳಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಈ ಕೂಡಲೇ ಬಂಧಿತರಾಗಿರುವ ಮೀನುಗಾರರನ್ನು ಭಾರತಕ್ಕೆ ತರಬೇಕು ಎಂದು ವಿಜಯಲಕ್ಷ್ಮಿ ಒತ್ತಾಯಿಸಿದರು.

2 ತಿಂಗಳಲ್ಲಿ 300 ಕೋಟಿ ಮೌಲ್ಯದ ಮಾದಕವಸ್ತು ವಶ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀನುಗಾರಿಕಾ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಪುಗಳ್ ಸೆಲ್ವಮಣಿ, ಕಳೆದ ಅ.1ರಂದು 12 ಮಂದಿ ಮೀನುಗಾರರು ಇಲ್ಲಿನ ತರುವೈಕುಲಂ ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಅ.20ರಂದು ಮಾಲ್ಡೀವ್ಸ್ ನ ಕರಾವಳಿ ಕಾವಲು ಪಡೆ ಮೀನುಗಾರರನ್ನು ಬಂಸಿದೆ. ಕೇಂದ್ರ ಸರ್ಕಾರಕ್ಕೆ ಈ ವಿಷಯ ಅ.27ಕ್ಕೆ ಗೊತ್ತಾಗಿದೆ. ಅಲ್ಲಿ ಮೀನುಗಾರರಿಗೆ ಹಿಂಸೆ ನೀಡಲಾಗುತ್ತಿದೆ. ಆದರೆ ಹಿಂಸೆ ನೀಡಿಲ್ಲ ಎಂದು ಅಲ್ಲಿನ ಅಕಾರಿಗಳು ಹೇಳುತ್ತಿದ್ದಾರೆ ಎಂದರು.

ಬಂಧನದ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಮಿಳುನಾಡು ಮೀನುಗಾರಿಕಾ ಸಚಿವೆ ಅನಿತಾ ಆರ್. ರಾಧಾಕೃಷ್ಣನ್, ಮೀನುಗಾರಿಕಾ ಇಲಾಖೆ ಅಕಾರಿಗಳು, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ಮೀನುಗಾರರನ್ನು ಕರೆತರುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡು ಮೀನುಗಾರನ್ನು ಬಂಧಿಸಿದ್ದ ಮಾಲ್ಡೀವ್ಸ್ ಸರ್ಕಾರ ಅವರ ಪರವಾನಗಿಯನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿತ್ತು. ಆದರೆ ಇದೀಗ ಭಾರತ ಸರ್ಕಾರ ಮತ್ತು ಮಾಲ್ಡೀವ್ಸ್ ಸರ್ಕಾರ ನಡುವಿನ ಅಂತಾರಾಷ್ಟ್ರೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಮೊದಲ ಬಾರಿಗೆ ಮೀನುಗಾರನ್ನು ಬಂಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮೀನುಗಾರರ ಒಕ್ಕೂಟದ ಅಂಥೋನಿ ಜಯಬಾಲನ್ ಸೇರಿದಂತೆ ಒಕ್ಕೂಟದ ಸದಸ್ಯರು ಮಾಲ್ಡೀವ್ಸ ಗೆ ತೆರಳಿದ್ದಾರೆ.

ಇಂದು ರಾತ್ರಿ ಭಾರತದಲ್ಲಿ ಭಾಗಶಃ ಚಂದ್ರಗ್ರಹಣ

ಕೋಲ್ಕತ್ತಾ, ಅ 28 (ಪಿಟಿಐ) ಪಶ್ಚಿಮ ಬಂಗಾಳ ಮತ್ತು ಭಾರತದ ಇತರ ಭಾಗಗಳು ಸೇರಿದಂತೆ ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ರಷ್ಯಾ ದೇಶಗಳಲ್ಲಿ ಇಂದು ರಾತ್ರಿ ಭಾಗಶಃ ಚಂದ್ರಗ್ರಹಣ ಗೊಚರವಾಗಲಿದೆ. ಆಕಾಶದ ಈ ವಿದ್ಯಮಾನವು ನಾಳೆ ಮುಂಜಾನೆಯವರೆಗೆ ಮುಂದುವರಿಯುತ್ತದೆ ಎಂದು ಖಗೋಳ ಭೌತಶಾಸ್ತ್ರಜ್ಞ ದೇಬಿ ಪ್ರಸಾದ್ ದುವಾರಿ ಹೇಳಿದ್ದಾರೆ.ಚಂದ್ರಗ್ರಹಣ ಗೋಚರಿಸುವ ಇಂದು ರಾತ್ರಿ ಪಶ್ಚಿಮ ಬಂಗಾಳದ ಜನರು ರಾತ್ರಿ ಲಕ್ಷ್ಮಿ ಪೂಜೆಯನ್ನು ಆಚರಿಸುತ್ತಾರೆ.

ಇಂದು ರಾತ್ರಿ ಭಾಗಶಃ ಚಂದ್ರಗ್ರಹಣವಿರುತ್ತದೆ, ಇದನ್ನು ಇಡೀ ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ರಷ್ಯಾ ಸೇರಿದಂತೆ ಭಾರತದ ಜನರು ವೀಕ್ಷಿಸಬಹುದು. ಗ್ರಹಣವು 28 ರ ತಡರಾತ್ರಿಯಲ್ಲಿ ಸಂಭವಿಸುತ್ತದೆ ಮತ್ತು ನಾಳೆವರೆಗೂಮುಂದುವರಿಯುತ್ತದೆ.

ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ ದೇವಾಲಯ ವಾಸ್ತುಶಿಲ್ಪ ವಸ್ತು ಸಂಗ್ರಹಾಲಯ

ಭೂಮಿಯ ನೆರಳಿನಿಂದ ಚಂದ್ರನಿಗೆ ಭಾಗಶಃ ಗ್ರಹಣವಾಗಲಿದ್ದು, ಭಾರತದ ಜನರಿಗೆ ಭಾಗಶಃ ಚಂದ್ರಗ್ರಹಣವನ್ನು ಅನುಭವಿಸುವ ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದರು. ಚಂದ್ರಗ್ರಹಣವು ಭೂಮಿಯ ನೆರಳಿನ ಅಡಿಯಲ್ಲಿ ಬರುವ ಚಂದ್ರನ ಎರಡು ಹಂತಗಳಿಂದ ಗುರುತಿಸಲ್ಪಡುತ್ತದೆ. ಅದು ಭೂಮಿಯ ಭಾಗಶಃ ನೆರಳಿನ ಪ್ರದೇಶಕ್ಕೆ ಪ್ರವೇಶಿಸಿದಾಗ ಚಂದ್ರನು ಭಾಗಶಃ ಬೆಳಗಿದಾಗ ಅದನ್ನು ಪೆನಂಬ್ರಾಲ್ ಎಕ್ಲಿಪ್ಸ್ ಎಂದು ಕರೆಯಲಾಗುತ್ತದೆ.

ಪ್ರಕಾಶಮಾನದಲ್ಲಿನ ಬದಲಾವಣೆಯು ಹೆಚ್ಚು ಗಮನಿಸುವುದಿಲ್ಲ. ಈ ಹಂತದ ನಂತರ ಚಂದ್ರನು ಭೂಮಿಯ ನೆರಳಿನ ನಿಜವಾದ ಡಾರ್ಕ್ ಭಾಗವನ್ನು ಭಾಗಶಃ ಪ್ರವೇಶಿಸುತ್ತಾನೆ, ಇದನ್ನು ಛತ್ರಿ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ ಮತ್ತು ಹೆಚ್ಚಿನ ಜನರು ಇದನ್ನು ನಿಜವಾದ ಗ್ರಹಣವೆಂದು ಪರಿಗಣಿಸುತ್ತಾರೆ ಎಂದು ಅವರು ಹೇಳಿದರು.

ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ

ಢಾಕಾ, ಅ 28- ನೆರೆಯ ಬಾಂಗ್ಲಾ ದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿವೆ. ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ಅಲ್ಲಿನ ವಿರೋಧ ಪಕ್ಷಗಳು ಬೃಹತ್ ರ್ಯಾಲಿ ನಡೆಸುತ್ತಿರುವುದರಿಂದ ಅಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗಳ ಮೇಲ್ವಿಚಾರಣೆಗಾಗಿ ಪಕ್ಷೇತರ ಉಸ್ತುವಾರಿ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ರಾಜಧಾನಿ ಢಾಕಾದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿವೆ.

ಆದರೆ ಆಡಳಿತಾರೂಢ ಅವಾಮಿ ಲೀಗ್ ಪಕ್ಷವು ಹಿಂಸಾಚಾರವನ್ನು ಪ್ರಚೋದಿಸುವ ಯಾವುದೇ ಪ್ರಯತ್ನವನ್ನು ಬಲದಿಂದ ಎದುರಿಸಲಾಗುವುದು ಎಂದು ಎಚ್ಚರಿಸಿದೆ ಮತ್ತು ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ಪ್ರಧಾನ ಕಚೇರಿಯ ಬಳಿ ಶಾಂತಿ ರ್ಯಾಲಿ ನಡೆಸುವುದಾಗಿ ಹೇಳಿದೆ. ಅಲ್ಲಿ ಪಕ್ಷದ ನಾಯಕಿ ಮಾಜಿ ಪ್ರಧಾನಿ ಖಲೀದಾ ಜಿಯಾ ಬೆಂಬಲಿಗರು ಜಮಾಯಿಸುತ್ತಿರುವುದರಿಂದ ಗಲಭೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ ದೇವಾಲಯ ವಾಸ್ತುಶಿಲ್ಪ ವಸ್ತು ಸಂಗ್ರಹಾಲಯ

ಜನವರಿಯಲ್ಲಿ ನಡೆಯಲಿರುವ ದೇಶದ 12 ನೇ ರಾಷ್ಟ್ರೀಯ ಚುನಾವಣೆಯನ್ನು ಘೋಷಿಸಲು ಚುನಾವಣಾ ಆಯೋಗವು ತಯಾರಿ ನಡೆಸುತ್ತಿರುವಾಗ ಹಸೀನಾ ಅವರನ್ನು ತೆಗೆದುಹಾಕಲು ಅಂತಿಮ ಪ್ರಯತ್ನದ ಅಂಗವಾಗಿ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ.

ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ, ರಾಜಕೀಯ ಪ್ರತಿಭಟನೆಗಳ ಸಮಯದಲ್ಲಿ, ವಿಶೇಷವಾಗಿ ಚುನಾವಣೆಗಳ ಮೊದಲು ಹಿಂಸಾಚಾರದ ಇತಿಹಾಸ ಹೊಂದಿರುವ ಸಂಸದೀಯ ಪ್ರಜಾಪ್ರಭುತ್ವ. ಹಸೀನಾ ಮತ್ತು ಜಿಯಾ ನಡುವಿನ ಪೈಪೋಟಿ ದಶಕಗಳಿಂದ ನಡೆಯುತ್ತಿದೆ ಮತ್ತು ಪ್ರತಿಪಕ್ಷಗಳು ಹೆಚ್ಚಾಗಿ ಶಾಂತಿಯುತವಾಗಿ ಸರ್ಕಾರದ ವಿರೋಧಿ ಪ್ರದರ್ಶನಗಳನ್ನು ನಡೆಸಿದ್ದರಿಂದ ಹಸೀನಾ ಅವರ ಸರ್ಕಾರವು ತಿಂಗಳುಗಳಿಂದ ಒತ್ತಡದಲ್ಲಿದೆ. ಆದರೆ ಹಿಂಸಾಚಾರ ಯಾವಾಗ ಬೇಕಾದರೂ ಭುಗಿಲೇಳಬಹುದು ಎನ್ನುತ್ತಾರೆ ತಜ್ಞರು.

“ದರೋಡೆ, ಡಕಾಯಿತಿ, ಅತ್ಯಾಚಾರ, ಅಪರಾಧಗಳಲ್ಲಿ ಮುಸ್ಲಿಮರೇ ನಂ.1”

ನವದೆಹಲಿ, ಅ.28- ನಾವು (ಮುಸ್ಲಿಮರು) ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂತಹ ಎಲ್ಲಾ ಅಪರಾಧಗಳಲ್ಲಿ ನಂ.1 ಆಗಿದ್ದೇವೆ. ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂ.1 ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವ ಅವರು, ಮುಸ್ಲಿಮರಲ್ಲಿ ಅಪರಾಧ ಪ್ರಮಾಣಗಳು ಹೆಚ್ಚಿವೆ. ಅಪರಾಧದಲ್ಲಿ ತೊಡಗಿಸಿಕೊಳ್ಳುವ ಹೆಚ್ಚಿನ ಪ್ರವೃತ್ತಿಯು ಶಿಕ್ಷಣದ ಕೊರತೆಗೆ ನೇರವಾಗಿ ಅನುಪಾತದಲ್ಲಿರುತ್ತದೆ ಎಂದು ಹೇಳಿದರು.

ಸುಗಂಧ ದ್ರವ್ಯದ ಬ್ಯಾರನ್ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಎಐಯುಡಿಎಫ್ 15 ಶಾಸಕರನ್ನು ಹೊಂದಿದೆ. ಬಂಗಾಳಿ ಮಾತನಾಡುವ ಮುಸ್ಲಿಮರ ನಡುವೆ ಅಧಿಕಾರವನ್ನು ಹೊಂದಿದೆ.

ವಿಶ್ವಾದ್ಯಂತ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಕೊರತೆಯನ್ನು ನಾನು ನೋಡಿದ್ದೇನೆ. ನಮ್ಮ ಮಕ್ಕಳು ಓದುತ್ತಿಲ್ಲ, ಉನ್ನತ ಶಿಕ್ಷಣಕ್ಕೆ ಹೋಗುತ್ತಿಲ್ಲ, ಮೆಟ್ರಿಕ್ಯುಲೇಷನ್ ಕೂಡ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರದಿಂದ ವ್ಯಕ್ತಪಡಿಸಿದ್ದೇನೆ. ಯುವಕರಿಗೆ ಶಿಕ್ಷಣದ ಅಗತ್ಯವನ್ನು ವಿವರಿಸಲು, ನಾನು ಅದನ್ನು ಹೇಳಿದ್ದೇನೆ ಎಂದು ಹೇಳಿದರು.

ಪುರುಷರು ಹುಡುಗಿಯರನ್ನು ನೋಡುವಾಗ ಅಥವಾ ಅವರೊಂದಿಗೆ ಸಂವಹನ ನಡೆಸುವಾಗ ದುರುದ್ದೇಶಪೂರಿತ ಉದ್ದೇಶಗಳನ್ನು ಹೊಂದಿರಬಾರದು. ಮಹಿಳೆಯರನ್ನು ನೋಡಿದ ನಂತರ ಲೈಂಗಿಕವಾಗಿ ಉತ್ಸುಕರಾಗುತ್ತೇವೆ ಎಂದು ಹೇಳುವ ಹುಡುಗರಿಗೆ, ನಾನು ಅವರಿಗೆ ಹೇಳಲು ಬಯಸುತ್ತೇನೆ, ಇಸ್ಲಾಂ ಧರ್ಮವು ಸರಿಯಾದ ನಡವಳಿಕೆಯನ್ನು ಹೊಂದಿದೆ.

ನಾವು ಮಾರುಕಟ್ಟೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಕ್ಕೆ ಹೋದಾಗ ಮತ್ತು ಮಹಿಳೆಯರನ್ನು ನೋಡಿದಾಗ, ನಾವು ದೂರ ನೋಡಬೇಕು. ತಮ್ಮ ಕುಟುಂಬದಲ್ಲಿಯೂ ಮಹಿಳೆಯರಿದ್ದಾರೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ತಮ್ಮ ತಾಯಿ ಮತ್ತು ಸಹೋದರಿಯರ ಬಗ್ಗೆ ಯೋಚಿಸಿದರೆ ಅವರಿಗೆ ಎಂದಿಗೂ ಅನುಚಿತ ಆಲೋಚನೆಗಳು ಬರುವುದಿಲ್ಲ ಎಂದಿದ್ದಾರೆ.

ಕೇರ್ ಟೇಕರ್ ಕತ್ತು ಸೀಳಿ ಕೊಂದ ಹುಲಿ

ಕಡಿಮೆ ಸಾಕ್ಷರತೆ ಪ್ರಮಾಣವು ಮುಸ್ಲಿಂ ಸಮುದಾಯದ ಅಭಿವೃದ್ಧಿಯ ಕೊರತೆಗೆ ದೊಡ್ಡ ಹಿನ್ನಡೆಯಾಗಿದೆ. ಸಾಕ್ಷರತೆಯ ದೊಡ್ಡ ಸಮಸ್ಯೆ ಇದೆ, ಅವರು ವಿದ್ಯಾವಂತರಲ್ಲ, ಶಿಕ್ಷಣದ ವಿಷಯದಲ್ಲಿ ನಾವು ಸರ್ಕಾರವನ್ನು ದೂಷಿಸುತ್ತೇವೆ, ಆದರೆ ಅವರು ನಮ್ಮ ಅಲ್ಪಸಂಖ್ಯಾತ ಪ್ರದೇಶದ ವೈದ್ಯರು ಮತ್ತು ಎಂಜಿನಿಯರ್ಗಳನ್ನು ಕೇಳಿದರೆ ನಾವು ಅವರಿಗೆ ನೀಡದಿರುವುದು ಅತ್ಯಂತ ವಿಷಾದನೀಯ, ನಾವು ಹೆಚ್ಚಾಗಬೇಕು. ನಮ್ಮ ಸಾಕ್ಷರತೆ ಪ್ರಮಾಣ. ನಮ್ಮ ಯುವಕರು ಶಿಕ್ಷಣ ಪಡೆಯಲು ಪ್ರೋತ್ಸಾಹಿಸದೆ ಬೇರೆ ದಾರಿಯಿಲ್ಲ. ಶಿಕ್ಷಣದ ಕೊರತೆಯಿಂದ ಮಾತ್ರ ಎಲ್ಲಾ ಅನಿಷ್ಟಗಳು ಮೇಲುಗೈ ಸಾಸುತ್ತವೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದರು.

ಏನಿದು ವಿವಾದ: ಅಕ್ಟೋಬರ್ 20ರಂದು ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅಜ್ಮಲï, ಸಮುದಾಯದ ಶೈಕ್ಷಣಿಕ ನ್ಯೂನತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಎಐಯುಡಿಎಫ್ ಮುಖ್ಯಸ್ಥರು, ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂತಹ ಅಪರಾಧಗಳು – ಎಲ್ಲದರಲ್ಲೂ ನಾವು ನಂ.1. ಜೈಲಿಗೆ ಹೋಗುವಲ್ಲಿಯೂ ನಾವು ನಂಬರ್ 1 ಆಗಿದ್ದೇವೆ. ನಮ್ಮ ಮಕ್ಕಳು ಶಾಲೆ ಮತ್ತು ಕಾಲೇಜುಗಳಿಗೆ ಹೋಗಲು ಸಮಯವಿಲ್ಲ, ಆದರೆ ಸಾಕಷ್ಟು ಸಮಯವನ್ನು ಕಂಡುಕೊಳ್ಳುತ್ತಾರೆ.

ಜೂಜಾಡಲು, ಇತರರನ್ನು ವಂಚಿಸಲು ಸಮಯ. ಅಂತಹ ಎಲ್ಲಾ ತಪ್ಪು ವಿಷಯಗಳಿಗೆ – ಯಾರು ಭಾಗಿಯಾಗಿದ್ದಾರೆಂದು ಕೇಳಿ. ಇದು ಮುಸ್ಲಿಮರು. ಮತ್ತು ಅದು ದುಃಖಕರವಾಗಿದೆ.

2 ತಿಂಗಳಲ್ಲಿ 300 ಕೋಟಿ ಮೌಲ್ಯದ ಮಾದಕವಸ್ತು ವಶ

ಜನರು ಚಂದ್ರ ಮತ್ತು ಸೂರ್ಯನಿಗೆ ಹೋಗುತ್ತಿದ್ದಾರೆ, ಮತ್ತು ನಾವು ಜೈಲಿಗೆ ಹೋಗುವುದು ಹೇಗೆ ಎಂಬುದರ ಕುರಿತು ಪಿಎಚ್ಡಿ ಮಾಡುತ್ತಿದ್ದೇವೆ. ಪೊಲೀಸ್ ಠಾಣೆಗೆ ಹೋಗಿ ಮತ್ತು ಸಂಪೂರ್ಣ ಬಹುಮತ ಯಾರೆಂದು ನಿಮಗೆ ತಿಳಿಯುತ್ತದೆ – ಅಬ್ದುಲ್ ರೆಹಮಾನ್, ಅಬ್ದುಲ್ ರಹೀಮï, ಅಬ್ದುಲ್ ಮಜೀದ್, ಬದ್ರುದ್ದೀನ್, ಸಿರಾಜುದ್ದೀನ್, ಫಕ್ರುದ್ದೀನ್, ಇದು ದುಃಖದ ವಿಷಯವಲ್ಲವೇ? ಮುಸ್ಲಿಂ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದ ಮಹತ್ವವನ್ನು ತಿಳಿಸಲು ಅಜ್ಮಲ್ ಹೇಳಿದ್ದರು.

ಭಯೋತ್ಪಾದಕ ಕೃತ್ಯಗಳ ಸಮರ್ಥನೆಯನ್ನು ಜಗತ್ತು ಒಪ್ಪಿಕೊಳ್ಳಬಾರದು : ಭಾರತ

ವಿಶ್ವಸಂಸ್ಥೆ, ಅ 28 (ಪಿಟಿಐ)- ಭಯೋತ್ಪಾದನೆಯು ಒಂದು ದುಷ್ಕøತ್ಯ ಮತ್ತು ಅದಕ್ಕೆ ಯಾವುದೇ ಗಡಿ, ರಾಷ್ಟ್ರೀಯತೆ ಅಥವಾ ಜನಾಂಗವನ್ನು ತಿಳಿದಿಲ್ಲ ಮತ್ತು ಭಯೋತ್ಪಾದಕ ಕೃತ್ಯಗಳ ಯಾವುದೇ ಸಮರ್ಥನೆಯನ್ನು ಜಗತ್ತು ಒಪ್ಪಿಕೊಳ್ಳಬಾರದು ಎಂದು ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ತಿಳಿಸಿದೆ.

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಒಪ್ಪಂದ ಮತ್ತು ಗಾಜಾ ಪಟ್ಟಿಯಲ್ಲಿ ಮಾನವೀಯ ಪ್ರವೇಶಕ್ಕೆ ಅಡೆತಡೆಯಿಲ್ಲದ ಮಾನವೀಯ ಕದನಕ್ಕೆ ಕರೆ ನೀಡಿದ ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಗಳನ್ನು ಎತ್ತಿಹಿಡಿಯುವುದು ಎಂಬ ಶೀರ್ಷಿಕೆಯ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಜೋರ್ಡಾನ್ ಕರಡು ನಿರ್ಣಯದಿಂದ ಭಾರತ ದೂರ ಉಳಿದಿತ್ತು.

193-ಸದಸ್ಯ ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯದ ಪರವಾಗಿ 121 ಮತಗಳು ಬಂದರೆ, 44 ರಾಷ್ಟ್ರಗಳ ಗೈರುಹಾಜರಿಗಳು ಮತ್ತು 14 ಸದಸ್ಯ ರಾಷ್ಟ್ರಗಳು ಅದರ ವಿರುದ್ಧ ಮತ ಚಲಾಯಿಸಿದವು. ಗಾಜಾ ಪಟ್ಟಿಯಾದ್ಯಂತ ನಾಗರಿಕರಿಗೆ ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ತಕ್ಷಣದ, ನಿರಂತರ, ಸಾಕಷ್ಟು ಮತ್ತು ಅಡೆತಡೆಯಿಲ್ಲದೆ ಒದಗಿಸುವಂತೆ ಒತ್ತಾಯಿಸಲಾಯಿತು.

2 ತಿಂಗಳಲ್ಲಿ 300 ಕೋಟಿ ಮೌಲ್ಯದ ಮಾದಕವಸ್ತು ವಶ

ವಿಶ್ವಸಂಸ್ಥೆಯ ರಾಯಭಾರಿ ಯೋಜನಾ ಪಟೇಲ್‍ಗೆ ಭಾರತದ ಉಪ ಖಾಯಂ ಪ್ರತಿನಿಧಿ ಇಲ್ಲಿ ಮತದಾನದ ವಿವರಣೆಯಲ್ಲಿ, ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕಾದ ಜಗತ್ತಿನಲ್ಲಿ, ಈ ಮಹಾನ್ ಸಂಸ್ಥೆಯು ಹಿಂಸಾಚಾರದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿಯಾಗಿರುವ ಯೋಜನಾ ಪಟೇಲ್ ಅಭಿಪ್ರಾಯಪಟ್ಟರು.

ಅಕ್ಟೋಬರ್ 7 ರಂದು ಇಸ್ರೇಲ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಆಘಾತಕಾರಿ ಎಂದು ಬಣ್ಣಿಸಿದ ಪಟೇಲ್, ಅವರು ಖಂಡನೆಗೆ ಅರ್ಹರು ಎಂದು ಹೇಳಿದರು. ಭಾರತದ ಮತದ ವಿವರಣೆಯಲ್ಲಿ ಹಮಾಸ್ ಅನ್ನು ಉಲ್ಲೇಖಿಸಲಿಲ್ಲ.

ಭಯೋತ್ಪಾದನೆ ಒಂದು ಮಾರಣಾಂತಿಕವಾಗಿದೆ ಮತ್ತು ಯಾವುದೇ ಗಡಿ, ರಾಷ್ಟ್ರೀಯತೆ ಅಥವಾ ಜನಾಂಗವನ್ನು ತಿಳಿದಿಲ್ಲ. ಭಯೋತ್ಪಾದಕ ಕೃತ್ಯಗಳ ಯಾವುದೇ ಸಮರ್ಥನೆಯನ್ನು ಜಗತ್ತು ಖರೀದಿಸಬಾರದು. ನಾವು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಂದಾಗೋಣ ಮತ್ತು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳೋಣ ಎಂದು ಅವರು ಕರೆ ನೀಡಿದರು.

ಸಾಮಾನ್ಯ ಸಭೆಯ ಚರ್ಚೆಗಳು ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತದೆ ಮತ್ತು ನಮ್ಮನ್ನು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವಾಗ ರಾಜತಾಂತ್ರಿಕತೆ ಮತ್ತು ಮಾತುಕತೆಯ ನಿರೀಕ್ಷೆಗಳನ್ನು ವಿಸ್ತರಿಸುತ್ತದೆ ಎಂದು ಭಾರತ ಭರವಸೆ ವ್ಯಕ್ತಪಡಿಸಿದೆ.

ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕ ಜೀವಗಳನ್ನು ಬೆರಗುಗೊಳಿಸುವ ನಷ್ಟದ ಬಗ್ಗೆ ಭಾರತವು ಆಳವಾಗಿ ಕಳವಳಗೊಂಡಿದೆ ಎಂದು ಪಟೇಲ್ ಹೇಳಿದರು.