Friday, November 7, 2025
Home Blog Page 1896

ಮೊಬೈಲ್‌ನಲ್ಲಿ ಸೈರನ್ ಶಬ್ದ ಕೇಳಿ ಜನ ಶಾಕ್, ಕೇಂದ್ರ ಸರ್ಕಾರದಿಂದ ‘Emergency Alert’ ಪರೀಕ್ಷೆ

ಬೆಂಗಳೂರು,ಅ.12- ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ಮೊಬೈಲ್ ಬಳಕೆದಾರರಿಗೆ ಪ್ರಾಯೋಜಿಕ ಸಂದೇಶವೊಂದನ್ನು ರವಾನಿಸಿದೆ. ಇಂದು ಬೆಳಿಗ್ಗೆ ದೇಶಾದ್ಯಂತ ಬಹುತೇಕರ ಮೊಬೈಲ್‍ಗಳಿಗೆ ಈ ರೀತಿಯ ಸಂದೇಶಗಳು ಬಂದಿವೆ. ಅದರಲ್ಲಿ ಇದು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ಸೇಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ.

ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆಯ ಸಂದೇಶವನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭದಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ನಮೂದಿಸಲಾಗಿದೆ.

ಬಿಹಾರ ರೈಲು ದುರಂತದಲ್ಲಿ, ನಾಲ್ವರ ಸಾವು, 70 ಕ್ಕೂ ಹೆಚ್ಚು ಮಂದಿಗೆ ಗಾಯ

ಈ ಸಂದೇಶ ರವಾನೆಯಾದ ಸಂದರ್ಭದಲ್ಲಿ ಸಹಜವಾಗಿಯೇ ಮೊಬೈಲ್‍ನಲ್ಲಿ ಯಾಂತ್ರೀಕೃತವಾಗಿ ವೈಬರೇಟ್ ಮೋಡ್ ಸಕ್ರಿಯವಾಗಿದೆ. ಜೊತೆಗೆ ಸಂದೇಶವನ್ನು ಇಂಗ್ಲಿಷ್‍ನಲ್ಲಿ ವಾಯ್ಸ್ ಮೂಲಕ ತಿಳಿಸಲಾಗಿದೆ. ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲೂ ಲಿಖಿತ ಸಂದೇಶ ರವಾನೆಯಾಗಿದೆ.

ಇದು ನೆರೆ, ಭೂಕಂಪದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಸಲುವಾಗಿ ಪರೀಕ್ಷಿಸಲಾಗಿದೆ. ಇತ್ತೀಚೆಗೆ ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ನಡೆದಿದೆ. ಅಂತಹ ಯಾವುದೇ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರನ್ನು ಸುರಕ್ಷಿತೆಯಿಂದಿಡಲು ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈ ಸಂದೇಶ ವೈರ್‍ಲೆಸ್ ತಂತ್ರಜ್ಞಾನವನ್ನು ಹೊಂದಿದೆ. ಸಾರ್ವಜನಿಕರಿಗೆ ಸಕಾಲಿಕ ಹಾಗೂ ತ್ವರಿತ ಮಾಹಿತಿ ರವಾನೆ ಮಾಡಲಿದೆ.

ಕಳೆದ ಎರಡು ತಿಂಗಳಿನಿಂದಲೂ ದೇಶದ ವಿವಿಧ ಭಾಗಗಳಿಂದ ಈ ರೀತಿಯ ಸಂದೇಶಗಳನ್ನು ನಿಯತಕಾಲಿಕವಾಗಿ ರವಾನಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 10 ರಿಂದ ಸಾರ್ವತ್ರಿಕವಾಗಿ ಸಂದೇಶಗಳು ರವಾನೆಯಾಗಿವೆ. ಎಲ್ಲೆಲ್ಲಿ ಸಂದೇಶಗಳು ತಲುಪಿಲ್ಲ ಎಂಬುದರ ಮಾಹಿತಿಯನ್ನು ಸರ್ಕಾರ ಗುರುತಿಸುತಿಸುವ ಪ್ರಯತ್ನ ನಡೆಸಿದೆ.

ಒಂದು ವೇಳೆ ಸಂದೇಶ ತಲುಪದೇ ಇದ್ದವರು ಸ್ಮಾರ್ಟ್ ಫೋನಿನ ಸೆಟ್ಟಿಂಗ್ ತೆರೆದು ನೋಟಿಫಿಕೇಶನ್ ಎಂದು ಟೈಪ್ ಮಾಡಿ ಅಡ್ವಾನ್ಸ್ ಸೆಟ್ಟಿಂಗ್‍ನಲ್ಲಿ ವೈರ್‍ಲೆಸ್ ಎಮರ್ಜೆನ್ಸಿ ಅಲರ್ಟ್ ಅನ್ನು ಎನ್‍ಏಬೆಲ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಆಸ್ಟ್ರೇಲಿಯಾದಲ್ಲಿ ಮೋದಿಗೆ ಸಿಕ್ಕ ಗೌರವ ಅಭೂತಪೂರ್ವ : ಮಿಲ್ಟನ್ ಡಿಕ್

ಇದು ಮುಂದಿನ ದಿನಗಳಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸರ್ಕಾರ ಅಥವಾ ಸುರಕ್ಷತಾ ಸಂಸ್ಥೆಗಳು ಒದಗಿಸುವ ಸಂದೇಶವನ್ನು ಸ್ವೀಕರಿಸಿ ಮುನ್ನೆಚ್ಚರಿಕೆ ವಹಿಸಲು ನೆರವಾಗಲಿದೆ. ಪುನರಾವರ್ತಿತ ಸಂದೇಶಗಳಿಂದಾಗಿ ಕಿರಿಕಿರಿ ಎನಿಸಿದರೂ ಇದನ್ನು ಜಾಗೃತವಾಗಿಟ್ಟುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.

ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಆಸ್ತಿ ಮುಟ್ಟುಗೋಲು

ಚಂಡೀಗಢ,ಅ.12-ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಭಯೋತ್ಪಾದನಾ ನಿಗ್ರಹದಳದ ದಾಳಿಯ ನಂತರ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್‍ನ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಎನ್‍ಐಎ ವಿಶೇಷ ನ್ಯಾಯಾಲಯದ ಆದೇಶದ ನಂತರ ಅಧಿಕಾರಿಗಳು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ನಿಷೇಧಿತ ಸಂಘಟನೆ ಇಂಟನ್ರ್ಯಾಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‍ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್‍ನನ್ನು ಕೇಂದ್ರ ಸರ್ಕಾರ ಭಯೋತ್ಪಾದಕರ ಪಟ್ಟಿಗೆ ಸೇರಿಸಿತ್ತು. ಆತನ ಪಂಜಾಬ್‍ನ ಮೊಗಾದಲ್ಲಿರುವ ಮನೆ ಹಾಗೂ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಆತನ ವಿರುದ್ಧ ಹಲವಾರು ಭಯೋತ್ಪಾದಕ ಕೃತ್ಯ ಎಸಗಿರುವ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ ರೈಲು ದುರಂತದಲ್ಲಿ, ನಾಲ್ವರ ಸಾವು, 70 ಕ್ಕೂ ಹೆಚ್ಚು ಮಂದಿಗೆ ಗಾಯ

ಆರ್ಡಿಎಕ್ಸ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಸ್ಪೋಟಕ ಕಳ್ಳಸಾಗಣಿಕೆಯಲ್ಲಿ ಆತನ ಪಾತ್ರವಿದೆ. ನವದೆಹಲಿಯ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ. ಅಲ್ಲದೇ ಪಂಜಾಬ್ನಲ್ಲಿ ದ್ವೇಷವನ್ನು ಹರಡುವುದರಲ್ಲಿ ಆತನ ಪ್ರಮುಖಪಾತ್ರವಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್‍ನಲ್ಲಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭ

ನವದೆಹಲಿ,ಅ.12- ಇಸ್ರೇಲ್ ಹಾಗೂ ಪಾಲೇಸ್ತೀನ್ ನಡುವೆ ನಡೆಯುತ್ತಿರುವ ಭೀಕರ ರಣ ಕಾಳಗದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಕಾರ್ಯಾಚರಣೆ ಆರಂಭಿಸಿದೆ. ಯುದ್ಧ ಪೀಡಿತ ಇಸ್ರೇಲ್‍ನಲ್ಲಿ ಸಾವಿರಾರು ಮಂದಿ ಭಾರತೀಯರು ಸಿಲುಕಿಕೊಂಡಿದ್ದು, ಅವರೆಲ್ಲರನ್ನೂ ಭಾರತಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಆಪರೇಷನ್ ಅಜಯ್ ಹೆಸರಿನಲ್ಲಿ ವಿಶೇಷ ವಿಮಾನಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್, ಇಸ್ರೇಲ್‍ನಲ್ಲಿ 18,000 ಭಾರತೀಯರಿದ್ದಾರೆ. ಅವರನ್ನು ಕರೆತರಲು ವಿಶೇಷ ಚಾರ್ಟರ್ ಫ್ಲೈಟ್ ಗಳನ್ನು ಕಳಿಸಲಾಗುವುದು. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದಿದ್ದಾರೆ.

ಭಾರತಕ್ಕೆ ಹಿಂದಿರುಗಲು ಅಲ್ಲಿರುವ ಭಾರತೀಯರು ಮೊದಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ನಾಳೆ ಭಾರತಕ್ಕೆ ಮೊದಲ ವಿಶೇಷ ವಿಮಾನದಲ್ಲಿ ಅವರನ್ನು ಕಳಿಸಲಾಗುವುದು. ಅಲ್ಲದೇ ನೋಂದಾಯಿತರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ ಎಂದು ಇಸ್ರೇಲ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.

ಇದುವರೆಗೂ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸುಮಾರು 3,000ಕ್ಕೂ ಅಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ನಾವು ಇಸ್ರೇಲ್‍ಗೆ ವಿಶೇಷ ವಿಶೇಷ ಚಾರ್ಟರ್ ವಿಮಾನ ಮತ್ತು ಇತರ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಪ್ರತಿಯೊಬ್ಬ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮೋದಿಗೆ ಸಿಕ್ಕ ಗೌರವ ಅಭೂತಪೂರ್ವ : ಮಿಲ್ಟನ್ ಡಿಕ್

20 ಸಾವಿರಕ್ಕೂ ಅಧಿಕ ಭಾರತೀಯರು:
ಮುಂಬೈನಲ್ಲಿರುವ ಇಸ್ರೇಲ್‍ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಅವರು ಪಿಟಿಐ ಸುದ್ದಿ ಸಂಸ್ಥೆಗೆ 20,000ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ ಎಂದು ಹೇಳಿದರು, ಇದು ಪ್ರಸ್ತುತ ಪ್ಯಾಲೆಸ್ತೀನ್ ಗುಂಪು ಹಮಾಸ್‍ನೊಂದಿಗೆ ಯುದ್ಧದಲ್ಲಿದೆ. ಇಸ್ರೇಲ್‍ನಲ್ಲಿ ಸಿಲುಕಿರುವ ಭಾರತೀಯರ ನಿಖರವಾದ ಸಂಖ್ಯೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜೈಶಂಕರ್‍ಗೆ ಪತ್ರ ಬರೆದು, ರಾಜ್ಯದ ಸುಮಾರು 7,000 ಜನರು ಇಸ್ರೇಲ್‍ನಲ್ಲಿದ್ದಾರೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸಬೇಕೆಂದು ಕೋರಿದ್ದಾರೆ. ಇಸ್ರೇಲ್‍ನಲ್ಲಿ ಸಿಲುಕಿರುವ ರಾಜ್ಯದ 84 ಮಂದಿಯ ಬಗ್ಗೆ ಮಾಹಿತಿ ಪಡೆದಿರುವುದಾಗಿ ತಮಿಳುನಾಡು ಸರ್ಕಾರವೂ ಹೇಳಿಕೆ ನೀಡಿದ್ದು, ಸಿಕ್ಕಿಬಿದ್ದ ಭಾರತೀಯರು ಹೆಚ್ಚಿನ ಅಧ್ಯಯನ, ವ್ಯಾಪಾರ ಅಥವಾ ಪ್ರವಾಸಿಗರಾಗಿ ಇಸ್ರೇಲ್‍ಗೆ ತೆರಳಿದ್ದರು ಎಂದು ಅಕಾರಿಗಳು ತಿಳಿಸಿದ್ದಾರೆ.

ಭಾರತೀಯರಿಗೆ ಸಹಾಯವಾಣಿ:
ಏತನ್ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಮತ್ತು ಸಹಾಯದ ಅಗತ್ಯವಿರುವ ಭಾರತೀಯರಿಗೆ ಮಾಹಿತಿ ಮತ್ತು ನೆರವು ಒದಗಿಸಲು ಟೆಲ್ ಅವಿವ್ ಮತ್ತು ರಾಮಲ್ಲಾದಲ್ಲಿ ಪ್ರತ್ಯೇಕ ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ.

ಭಾರತೀಯರಿಗೆ ನೆರವು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ 24 ಗಂಟೆಗಳ ಸಹಾಯ ವಾಣಿ ಸ್ಥಾಪಿಸಿದ್ದು, 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988ಗೆ ಸಂಪರ್ಕ ಮಾಡಬಹುದು. .

ವಿಶ್ವಸಂಸ್ಥೆಯಲ್ಲಿ ವಸುದೈವ ಕುಟುಂಬಕಂ ನಾಮಫಲಕ ಅನಾವರಣ

ಟೆಲ್ ಅವಿವ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಿದೆ. ಅಗತ್ಯ ಇರುವವರು +972- 35226748, +972-543278392ಗೆ ಸಂರ್ಪಸಬಹುದೆಂದು ಅಕಾರಿಗಳು ತಿಳಿಸಿದ್ದಾರೆ.

ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರುವ ಸಾಧ್ಯತೆ

ಬೆಂಗಳೂರು,ಅ.12- ಮಳೆ ಅಭಾವದಿಂದಾಗಿ ರಾಜ್ಯ ಹಾಗೂ ದೇಶದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ. ದೇಶಾದ್ಯಂತ ಮಳೆಯ ಅನಿಶ್ಚಿತ ಕೃಷಿ ವಲಯದ ಮೇಲೆ ಭಾರೀ ಪರಿಣಾಮ ಬೀರಿದೆ. ಮಳೆ ಆಧಾರಿತ ಬೆಳೆಗಳ ಉತ್ಪಾದನೆ ತೀವ್ರವಾಗಿ ಕುಂಠಿತವಾಗಿದ್ದು, ಪೂರೈಕೆಯಲ್ಲಿ ವ್ಯತ್ಯಾಸ ಉಂಟು ಮಾಡಲಿದೆ.

ಅಕ್ಕಿ, ಬೇಳೆ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈರುಳ್ಳಿ ಕೂಡ ಇದೇ ಸಾಲಿನಲ್ಲಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ಅದರಲ್ಲೂ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶಗಳಾದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಗದಗ, ವಿಜಯಪುರ ಮತ್ತು ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ ಕಾಡುತ್ತಿರುವ ಕಾರಣ ಈರುಳ್ಳಿ ಇಳುವರಿ ಕಡಿಮೆಯಾಗಿರುವುದರಿಂದ ಈ ಪ್ರದೇಶಗಳಲ್ಲೂ ಈರುಳ್ಳಿ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಹೊಸ ಈರುಳ್ಳಿ ಬೆಳೆಯ ಒಟ್ಟು ಇಳುವರಿ ಕೇವಲ ಶೇ.40ರಷ್ಟಿದ್ದು, ಈಗಾಗಲೇ ಶೇ.25ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಬೆಳೆ ಹೊರತುಪಡಿಸಿ, ಇಡೀ ಈರುಳ್ಳಿ ಮಾರುಕಟ್ಟೆ ನಾಸಿಕ್ ಮತ್ತು ಮಹಾರಾಷ್ಟ್ರದ ಇತರ ಈರುಳ್ಳಿ ಬೆಳೆಯುವ ಪ್ರದೇಶಗಳನ್ನು ಅವಲಂಬಿಸಿದೆ.

ಕಳೆದ 15 ದಿನಗಳಿಂದ ಶಿವಮೊಗ್ಗ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ಸುಮಾರು 25ರಿಂದ 30 ರೂ.ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 30ರಿಂದ 35 ರೂ.ಗೆ ಮಾರಾಟವಾಗುತ್ತಿತ್ತು. ಸದ್ಯಕ್ಕೆ ಶಿವಮೊಗ್ಗದ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 32ರಿಂದ 35 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ 40ರಷ್ಟು ತೆರಿಗೆ ವಿಸಿದೆ. ಈ ಕ್ರಮವು ಮಹಾರಾಷ್ಟ್ರದ ಪ್ರಮುಖ ಮಾರಾಟಗಾರರು ರಫ್ತು ಮಾಡಲು ಕಡಿವಾಣ ಹಾಕಿದ್ದಾರೆ ಎಂದು ವ್ಯಾಪಾರಿಗಳು ಆಳಲು ತೊಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್ಸಿಸಿಎಫ್) ಬೆಂಬಲದೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದಿಂದ ಈರುಳ್ಳಿಯನ್ನು ಖರೀದಿಸುವ ಮೂಲಕ ಬೆಲೆಯನ್ನು ನಿಯಂತ್ರಿಸುತ್ತಿದೆ. ನವೆಂಬರ್‌ನಿಂದ ಈರುಳ್ಳಿ ಬೆಲೆ ಸ್ಥಿರವಾದ ಏರಿಕೆಗೆ ಸಾಕ್ಷಿಯಾಗಬಹುದು ಮತ್ತು ಮಹಾರಾಷ್ಟ್ರದಿಂದ ಪೂರೈಕೆಯ ಆಧಾರದ ಮೇಲೆ ಬೆಲೆ ಏರಿಕೆ ನಿರ್ಧಾರವಾಗಲಿದೆ.

ವಿಶ್ವಸಂಸ್ಥೆಯಲ್ಲಿ ವಸುದೈವ ಕುಟುಂಬಕಂ ನಾಮಫಲಕ ಅನಾವರಣ

ಬೆಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ ಈರುಳ್ಳಿ ಬೆಲೆ ಹೆಚ್ಚಳವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಮಾಡಿದ್ದು, ಬೆಲೆ ಹೆಚ್ಚಳವಾಗುವಾಗ ಮಾರುಕಟ್ಟೆಗೆ ಈರುಳ್ಳಿ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿದೆ.

ಕುಸಿದ ಟೊಮೊಟೊ ಬೆಲೆ:
ತಿಂಗಳ ಹಿಂದೆ ಟೊಮೆಟೊ ಕಾಯಲು ಹಲವರು ಇರುತ್ತಿದ್ದರು ಆದರೆ ಈಗ ಟೊಮೆಟೊ ಕೇಳುವವರೆ ಇಲ್ಲ ಎನ್ನುವಂತಾಗಿದೆ. ಟೊಮೆಟೊ ಬೆಳೆದಿದ್ದ ರೈತರು ಈಗ ಕಂಗಾಲಾಗಿದ್ದು, ಮಾರುಕಟ್ಟೆಗೆ ತಂದ ಟೊಮೆಟೊಗೆ ಬೆಲೆ ಸಿಗದ ಕಾರಣ ರಸ್ತೆಬದಿಯಲ್ಲೇ ಸುರಿದು ಹೋಗುತ್ತಿದ್ದಾರೆ.

ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ಜೀವಭಯವಿದೆ : ನಾರಾ ಲೋಕೇಶ್

ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ.ಗೆ ತರಕಾರಿ ಮಾರಾಟವಾಗುತ್ತಿದೆ. ಚಳ್ಳಕೆರೆ ಮಾರುಕಟ್ಟೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಟೊಮೆಟೊ ಕೆಜಿಗೆ 2 ರೂ.ಗೆ ಕುಸಿದಿದೆ.

ತಿಂಗಳ ಹಿಂದೆ 2,000 ರಿಂದ 2,500 ರೂ.ಗೆ ಮಾರಾಟವಾಗುತ್ತಿದ್ದ 15 ಕೆಜಿ ಟೊಮೇಟೊ ಕ್ರೇಟ್ ಈಗ 20-30 ರೂ.ಗೆ ಸಿಗುತ್ತಿಲ್ಲ, ಇದು ರೈತರನ್ನು ತೀವ್ರವಾಗಿ ಬಾಸುತ್ತಿದೆ. ಈ ಬೆಲೆಯಲ್ಲಿ ಟೊಮೆಟೊ ಮಾರಿದರೆ ಮಾರುಕಟ್ಟೆಗೆ ತರುವ ಬಾಡಿಗೆ ಸಹ ಸಿಗುವುದಿಲ್ಲ.

ಎಲ್‍ಇಟಿ ಉಗ್ರ ಅರೆಸ್ಟ್

ಶ್ರೀನಗರ,ಅ.12- ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಉಷ್ಕರ ನಿವಾಸಿ ಮುದಾಸಿರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಪೊಲೀಸರು ಭದ್ರತಾ ಪಡೆಗಳೊಂದಿಗೆ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‍ಟಿ/ಟಿಆರ್‍ಎಫ್ ನೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಸಹಚರನನ್ನು ಬಂಧಿಸಲಾಗಿದೆ ಮತ್ತು ಬಾರಾಮುಲ್ಲಾದಲ್ಲಿ ಅವನ ವಶದಿಂದ ದೋಷಾರೋಪಣೆಯ ಸಾಮಗ್ರಿಗಳು, ಶಸಾಸಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

ಈ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಸಾಧ್ಯತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸ್ಥಾಪಿಸಿದ್ದ ಬಾರಾಮುಲ್ಲಾದ ಚೆಕ್‍ಪಾಯಿಂಟ್ ಉಷ್ಕಾರದಲ್ಲಿ ಬಂಧಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. ನಾಕಾ ಬಂಧಿ ತಪಾಸಣೆಯ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ನಾಕಾ ಪಾಯಿಂಟ್ ಕಡೆಗೆ ಒಬ್ಬ ವ್ಯಕ್ತಿಯ ಅನುಮಾನಾಸ್ಪದ ಚಲನವಲನವನ್ನು ಗಮನಿಸಲಾಯಿತು. ಪೊಲೀಸ್ ಪಕ್ಷ ಮತ್ತು ಭದ್ರತಾ ಪಡೆಗಳನ್ನು ನೋಡಿದಾಗ, ಶಂಕಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು ಆದರೆ ಎಚ್ಚೆತ್ತ ನಾಕಾ ಪಕ್ಷವು ಅವನನ್ನು ಜಾಣ್ಮೆಯಿಂದ ಹಿಡಿದಿದೆ ಎಂದು ಅವರು ಹೇಳಿದರು.

ಆತನ ಬಳಿಯಿದ್ದ ಎರಡು ಮಾರಕಾಸಗಳು ಮತ್ತು RS 40,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಾರಾಮುಲ್ಲಾದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅರಬ್ ರಾಷ್ಟ್ರದೊಂದಿಗೆ ಜೈಶಂಕರ್ ಮಾತುಕತೆ

ನವದೆಹಲಿ,ಅ.12- ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿಗಳ ನಡುವಿನ ಸಂಘರ್ಷದ ನಂತರ ಅರಬ್ ರಾಷ್ಟ್ರದೊಂದಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಮ್ಮ ಮೊದಲ ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಕುರಿತು ಯುಎಇಯ ತಮ್ಮ ಸಹವರ್ತಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಜೈಶಂಕರ್ ಚರ್ಚಿಸಿದ್ದಾರೆ.

ಇಬ್ಬರು ವಿದೇಶಾಂಗ ಮಂತ್ರಿಗಳು ದೂರವಾಣಿ ಸಂಭಾಷಣೆಯ ಸಮಯದಲ್ಲಿ ವಿಕಸನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಜೈಶಂಕರ್ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಯುಎಇಯ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದೇನೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದಾರೆ. ಸಂಪರ್ಕದಲ್ಲಿರಲು ಒಪ್ಪಿಕೊಂಡರು ಎಂದು ಜೈಶಂಕರ್ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

ಅಕ್ಟೋಬರ್ 7 ರಂದು ಹೇಳಿಕೆಯಲ್ಲಿ, ಯುಎಇ ವಿದೇಶಾಂಗ ಸಚಿವಾಲಯವು ಅತ್ಯಂತ ಸಂಯಮವನ್ನು ಮತ್ತು ತಕ್ಷಣದ ಕದನ ವಿರಾಮವನ್ನು ವ್ಯಾಯಾಮ ಮಾಡಲು ಕರೆ ನೀಡಿತು. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಹಠಾತ್ ಉಲ್ಬಣವು ಜಾಗತಿಕ ಕಳವಳವನ್ನು ಉಂಟುಮಾಡಿದೆ. ಜರ್ಮನಿ, ಯುಎಸ್,ಫ್ರಾನ್ಸ್ ಮತ್ತು ಯುಕೆ ಮುಂತಾದ ಪ್ರಮುಖ ಶಕ್ತಿಗಳು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವುದನ್ನು ತಡೆಯುವ ಮಹತ್ವವನ್ನು ಒತ್ತಿಹೇಳಿದವು.

ಬಿಹಾರ ರೈಲು ದುರಂತದಲ್ಲಿ, ನಾಲ್ವರ ಸಾವು, 70 ಕ್ಕೂ ಹೆಚ್ಚು ಮಂದಿಗೆ ಗಾಯ

ಪಾಟ್ನಾ,ಅ.12- ರೈಲಿನ 21 ಭೋಗಿಗಳು ಹಳಿತಪ್ಪಿ ನಾಲ್ಕು ಮಂದಿ ಸಾವನ್ನಪ್ಪಿದ್ದು, 70 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ರಾತ್ರಿ ಬಿಹಾರದಲ್ಲಿ ಘಟನೆ ನಡೆದಿದೆ. ದೆಹಲಿಯ ಆನಂದ್ ವಿಹಾರ್ ನಿಲ್ದಾಣದಿಂದ ರೈಲು ಅಸ್ಸಾಂನ ಗುವಾಹಟಿಯ ಕಾಮಾಖ್ಯ ಜಂಕ್ಷನ್‍ಗೆ ಹೋಗುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಆರು ಎಸಿ ಬೋಗಿಗಳು ಪಲ್ಟಿಯಾಗಿ ರೈಲ್ವೇ ಹಳಿ ಮೇಲೆ ಬಿದ್ದಿದೆ. ನಾರ್ತ್ ಈಸ್ಟ್ ಎಕ್ಸ್‍ಪ್ರೆಸ್ ರೈಲು 12506 ನಂಬರಿನ ರೈಲು ಹಳಿ ತಪ್ಪಿದೆ. ಸ್ಥಳೀಯರು ಮತ್ತು ಜಿಲ್ಲಾಡಳಿತ ಪ್ರಯಾಣಿಕರನ್ನು ರಕ್ಷಿಸಿದ್ದು, ತೀವ್ರವಾಗಿ ಗಾಯಗೊಂಡವರನ್ನು ಪಾಟ್ನಾದ ಏಮ್ಸ್ ಅಸ್ಪತ್ರೆಗೆ ದಾಖಲಿಸಲಾಗಿದೆ. ರೈಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಅಸ್ತವ್ಯಸ್ತಗೊಂಡಿದ್ದಕ್ಕೆ ಪ್ರಯಾಣಿಕರು ಗಾಬರಿಗೊಂಡು ವೀಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸ್ಥಳೀಯ ಬಕ್ಸರ್ ಸಂಸದರೂ ಆಗಿರುವ ಕೇಂದ್ರ ಸಚಿಚ ಅಶ್ವಿನಿ ಕುಮಾರ್ ಚೌಬೆ ಅವರು ರೈಲು ಹಳಿತಪ್ಪಿದ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣ ತೆರವು ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಎಲ್ಲಾ ಕೋಚ್ಗಳನ್ನು ಪರಿಶೀಲಿಸಲಾಗಿದೆ. ಪ್ರಯಾಣಿಕರನ್ನು ಅವರ ಮುಂದಿನ ಪ್ರಯಾಣಕ್ಕಾಗಿ ಶೀಘ್ರದಲ್ಲೇ ವಿಶೇಷ ರೈಲಿಗೆ ಸ್ಥಳಾಂತರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.

ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ಜೀವಭಯವಿದೆ : ನಾರಾ ಲೋಕೇಶ್

ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ವೇಗಗೊಳಿಸಲು ವಿಪತ್ತು ನಿರ್ವಹಣಾ ಇಲಾಖೆ, ಆರೋಗ್ಯ ಇಲಾಖೆ ಅಲರ್ಟ್ ಆಗಿರುವಂತೆ ಸೂಚಿಸಿದ್ದು, ಸಹಾಯವಾಣಿ ಸಹ ನೀಡಲಾಗಿದೆ. ಬಕ್ಸರ್ ಮತ್ತು ಭೋಜ್ಪುರದ ಜಿಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಈ ಘಟನೆಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. ರಘುನಾಥಪುರದಲ್ಲಿ ರೈಲು ಸಂಖ್ಯೆ 12506ರ ದುರದೃಷ್ಟಕರ ಹಳಿತಪ್ಪುವಿಕೆಯನ್ನು ಮುಖ್ಯಮಂತ್ರಿಗಳ ಕಾರ್ಯಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಬಕ್ಸರ್ ಮತ್ತು ಇತರ ಏಜೆನ್ಸಿಗಳ ಜಿಲ್ಲಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿಗಳ ಕಚೇರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ರೈಲ್ವೇ ಮಾರ್ಗ ಬದಲಾವಣೆ: ರೈಲು ಅಪಘಾತದಿಂದಾಗಿ ಇದೇ ಮಾರ್ಗದಲ್ಲಿ ಚಲಿಸಬೇಕಿದ್ದ 2 ರೈಲು ಕ್ಯಾನ್ಸಲ್ ಆಗಿವೆ, ಜೊತಗೆ 21 ಕ್ಕೂ ಹೆಚ್ಚು ರೈಲುಗಳ ಮಾರ್ಗಗಳನ್ನು ಬೇರೆ ಮಾರ್ಗಕ್ಕೆ ಬದಲಿಸಲಾಗಿದೆ. ಇನ್ನು ಬಿಹಾರ ರೈಲ್ವೆ ಅಪಘಾತಕ್ಕೆ ಸಂಬಂಧಿಸಿದಂತೆ, ಜನರಿಗೆ ಮಾಹಿತಿ ನೀಡಲು ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನೂ ನೀಡಿದೆ.

ಮೋದಿ ಸರ್ಕಾರದಿಂದ ಆರ್‌ಟಿಐ ಕಾಯಿದೆ ದುರ್ಬಲ ; ಜೈರಾಮ್ ರಮೇಶ್

ಪಾಟ್ನಾ ಸಹಾಯವಾಣಿ- 9771449971, ಡಣಾಪುರ ಸಹಾಯವಾಣಿ- 8905697493, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್- 9794849461, 8081206628, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಾಣಿಜ್ಯ ನಿಯಂತ್ರಣ- 8081212134 ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಮೋದಿಗೆ ಸಿಕ್ಕ ಗೌರವ ಅಭೂತಪೂರ್ವ : ಮಿಲ್ಟನ್ ಡಿಕ್

ನವದೆಹಲಿ,ಅ.12- ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತ ರಾಕ್‌ಸ್ಟಾರ್‌ನಂತೆ ಇತ್ತು ಎಂದು ಆಸ್ಟ್ರೇಲಿಯನ್ ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್‍ನ 32ನೇ ಸ್ಪೀಕರ್ ಮಿಲ್ಟನ್ ಡಿಕ್ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಸಿಡ್ನಿಯಲ್ಲಿ ಮೋದಿ ಅವರನ್ನು ಸ್ವಾಗತಿಸಿದ ರೀತಿ ಅಭೂತಪೂರ್ವವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ನಮ್ಮ ಪ್ರಧಾನಿ ಆಂಟನಿ ಅಲ್ಬನೀಸ್ ಇಲ್ಲಿಗೆ ಭೇಟಿ ನೀಡಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

ಆ ಭೇಟಿಗಳು ಎಷ್ಟು ಮುಖ್ಯ ಎಂಬುದನ್ನು ಒತ್ತಿಹೇಳುವುದಿಲ್ಲ. ನಮ್ಮ ಪ್ರಧಾನಿ ಎರಡು ಬಾರಿ ಭೇಟಿ ನೀಡಿದ್ದನ್ನು ಮತ್ತು ಪ್ರಧಾನಿ ಮೋದಿಯವರ ಆಸ್ಟ್ರೇಲಿಯಾಕ್ಕೆ ಅತ್ಯಂತ ಯಶಸ್ವಿ ಭೇಟಿಯನ್ನು ನಾವು ನೋಡಿದ್ದೇವೆ. ನನ್ನ ಜೀವಿತಾವಧಿಯಲ್ಲಿ, ಅಂತಹ ಪ್ರತಿಕ್ರಿಯೆ ಅಥವಾ ವಿಶ್ವ ನಾಯಕನಿಗೆ ಅಂತಹ ಉತ್ಸಾಹದಿಂದ ಬೆಂಬಲವನ್ನು ನಾನು ಇದುವರೆಗೂ ನೋಡಿಲ್ಲ. ಪ್ರಧಾನಿಯವರಿಗೆ ಆತಿಥ್ಯ ವಹಿಸುವುದು ನಮ್ಮ ದೇಶಕ್ಕೆ ಅಂತಹ ವಿಶೇಷತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿಡ್ನಿಯಲ್ಲಿ ಮೋದಿ ಅವರು ಸ್ವೀಕರಿಸಿದ ಸ್ವಾಗತವು ನಿಜವಾಗಿಯೂ ರಾಕ್‌ಸ್ಟಾರ್‌ನಲ್ಲಿ ಒಂದಾಗಿದೆ. ಸಾವಿರಾರು ಜನರು ಬಂದರು. ಮತ್ತು, ನೀವು ಆಸ್ಟ್ರೇಲಿಯಾಕ್ಕೆ ಹೋದರೆ, 1 ಮಿಲಿಯನ್ ಭಾರತೀಯ ಪರಂಪರೆಯ ಜನರಿದ್ದಾರೆ … ಅದು ನಮ್ಮ ದೇಶವನ್ನು ಬಲಿಷ್ಠಗೊಳಿಸುತ್ತದೆ ಮಾತ್ರವಲ್ಲ ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಮ್ಮ ಸಂಪರ್ಕ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಿದರು.

ವಿಶ್ವ ನಾಯಕರಾಗಿ ಪಿಎಂ ಮೋದಿಯವರ ಜನಪ್ರಿಯತೆಯ ಕುರಿತು ಮತ್ತಷ್ಟು ಮಾತನಾಡಿದ ಅವರು, ಪ್ರಧಾನಿ ಆ ಸಂಬಂಧಗಳನ್ನು ನಿರ್ಮಿಸಲು ಶ್ರಮಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಮ್ಮ ಪ್ರಧಾನಿ ಕೂಡ ಅವರ ಸ್ನೇಹವನ್ನು ಗೌರವಿಸುತ್ತಾರೆ. ಇದು ಕಳೆದ ವರ್ಷದಿಂದ ಖಾತರಿಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದೂವರೆ ವರ್ಷಗಳವರೆಗೆ ಇಲ್ಲಿಂದ ಭಾರತಕ್ಕೆ ಮಂತ್ರಿಗಳು ಭೇಟಿ ನೀಡುವುದನ್ನು ನಾವು ನೋಡಿದ್ದೇವೆ.

ಇದು ಭಾರತಕ್ಕೆ ನನ್ನ ಮೊದಲ ಭೇಟಿಯಲ್ಲ ಮತ್ತು ನಾನು 2018 ರಲ್ಲಿ ಸಂಸತ್ತಿನ ಹೊಸದಾಗಿ ಚುನಾಯಿತ ಸದಸ್ಯನಾಗಿ ಭಾರತಕ್ಕೆ ಬಂದಿದ್ದೇನೆ. ಸಂಸದನಾಗಿ ನನಗೆ ಇದು ತುಂಬಾ ಭೇಟಿಯಾಗಿದೆ ಮತ್ತು ಇದು ಭಾರತೀಯ ಆರ್ಥಿಕತೆ ಮತ್ತು ಭಾರತೀಯ ಸಮುದಾಯದ ಬಗ್ಗೆ ನನ್ನ ದೃಷ್ಟಿಕೋನಗಳು ಮತ್ತು ಮೌಲ್ಯಗಳನ್ನು ರೂಪಿಸಿತು ಮತ್ತು ಈಗ ಪ್ರತಿನಿಧಿಗಳ ಹೌಸ್‍ನ 32 ನೇ ಸ್ಪೀಕರ್ ಆಗಿ ಭಾರತಕ್ಕೆ ನಿಯೋಗವನ್ನು ಮುನ್ನಡೆಸಲು ಜೀವಮಾನದ ಗೌರವವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ಜೀವಭಯವಿದೆ : ನಾರಾ ಲೋಕೇಶ್

ನವದೆಹಲಿ,ಅ.12- ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಜೀವ ಭಯವಿದೆ ಎಂದು ಅವರ ಪುತ್ರ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಆರೋಪಿಸಿದ್ದಾರೆ.

ಹೀಗಾಗಿ ಅವರು ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತನ್ನ ತಂದೆಯ ಜೀವನದ ಸುರಕ್ಷತೆಯ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರದಿಂದ ಆಡಳಿತ ಯಂತ್ರದ ದುರುಪಯೋಗವಾಗಿದೆ ಎಂದು ಅವರು ಆರೋಪಿಸಿದರು.

ಗೌರವಾನ್ವಿತ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ, ಆಂಧ್ರಪ್ರದೇಶದ ಸರ್ಕಾರದಿಂದ ರಾಜ್ಯ ಯಂತ್ರದ ಅಸ್ಪಷ್ಟ ದುರ್ಬಳಕೆ, ಅವರ ಆಡಳಿತದ ಸೇಡು ಮತ್ತು ಅವರು ಅನುಭವಿಸಿದ ಭಯಾನಕ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿದ್ದೇನೆ ಹಾಗೂ ಅವರ ಜೀವಕ್ಕೆ ಬೆದರಿಕೆಯಿರುವ ಜೈಲಿನಲ್ಲಿ ಇರಿಸಲಾಗಿದೆ ಎಂದು ನಾರಾ ಲೋಕೇಶ್ ಅವರು ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

ಕೌಶಲಾಭಿವೃದ್ಧಿ ಹಗರಣದ ಪ್ರಕರಣವಲ್ಲದೆ, ಅಮರಾವತಿ ಒಳರಸ್ತೆ ಜೋಡಣೆ ಮತ್ತು ಫೈಬರ್ ನೆಟ್ ಹಗರಣ ಸಂಬಂಧಿತ ಪ್ರಕರಣಗಳಲ್ಲಿ ಚಂದ್ರಬಾಬು ನಾಯ್ಡು ಅವರ ವಿರುದ್ಧವೂ ದೂರು ದಾಖಲಾಗಿದೆ.
ಕೌಶಲಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ನಾಯ್ಡು ಅವರು ಸೆಪ್ಟೆಂಬರ್ 11 ರಿಂದ ಆಂಧ್ರಪ್ರದೇಶದ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ವಿಜಯವಾಡದ ಎಸಿಬಿ ವಿಶೇಷ ನ್ಯಾಯಾಲಯವು ನಾಯ್ಡು ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 19 ರವರೆಗೆ ವಿಸ್ತರಿಸಿದೆ.

ಕೌಶಲಾಭಿವೃದ್ಧಿ ಪ್ರಕರಣದಲ್ಲಿ ಎಸಿಬಿ ನ್ಯಾಯಾಲಯವು ಸೋಮವಾರ ಕೌಶಲಾಭಿವೃದ್ಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ಡು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಅಮರಾವತಿ ಇನ್ನರ್ ರಿಂಗ್ ರೋಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಿಐಡಿಯು ನಾಯ್ಡು ಅವರನ್ನು ವಿಚಾರಣೆಗೆ ಒಳಪಡಿಸಿದ ಒಂದು ದಿನದ ನಂತರ ಷಾ ಅವರನ್ನು ಲೋಕೇಶ್ ಭೇಟಿಯಾಗಿದ್ದರು.

ಬೆಂಗಳೂರು ಕಂಬಳಕ್ಕೆ ಗುದ್ದಲಿ ಪೂಜೆ

ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿ ನಾರಾ ಲೋಕೇಶ್ ಅವರನ್ನು ಎರಡನೇ ದಿನವಾದ ಬುಧವಾರವೂ ಸಿಐಡಿ ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧವಿಲ್ಲದ ಪ್ರಶ್ನೆಗಳನ್ನೇ ಸಿಐಡಿ ಅಧಿಕಾರಿಗಳು ಕೇಳಿದ್ದಾರೆ ಎಂದು ವಿಚಾರಣೆ ಬಳಿಕ ಲೋಕೇಶ್ ಮಾಧ್ಯಮಗಳಿಗೆ ತಿಳಿಸಿದರು.

ಮೋದಿ ಸರ್ಕಾರದಿಂದ ಆರ್‌ಟಿಐ ಕಾಯಿದೆ ದುರ್ಬಲ ; ಜೈರಾಮ್ ರಮೇಶ್

ನವದೆಹಲಿ, ಅ 12 (ಪಿಟಿಐ) ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಜಾರಿಯಾಗಿ 18ನೇ ವರ್ಷಾಚರಣೆ ಸಂದರ್ಭದಲ್ಲಿ ಮೋದಿ ಸರಕಾರವು ಆರ್‌ಟಿಐ ಕಾನೂನನ್ನು ಹಾಗೂ ಅದರ ನಿಬಂಧನೆಗಳನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ ಪಕ್ಷ ಆರೋಪಿಸಿದೆ.

ಇಂದು ಐತಿಹಾಸಿಕ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ ) ಜಾರಿಗೆ ಬಂದ 18 ನೇ ವಾರ್ಷಿಕೋತ್ಸವ. ಇದು ಕನಿಷ್ಠ 2014 ರವರೆಗೆ ಪರಿವರ್ತಿತವಾಗಿತ್ತು. ಅದರ ನಂತರ ಮೋದಿ ಸರ್ಕಾರವು ಕಾನೂನನ್ನು ದುರ್ಬಲಗೊಳಿಸಲು, ಅದರ ನಿಬಂಧನೆಗಳನ್ನು ದುರ್ಬಲಗೊಳಿಸಲು, ಪ್ರಧಾನಿಯ ಡ್ರಮ್‍ಬೀಟರ್‍ಗಳನ್ನು ನೇಮಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ಮಾಡಿದ್ದಾರೆ.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

ತಿದ್ದುಪಡಿಗಳಿಗೆ ಆರಂಭಿಕ ಪ್ರಚೋದಕವೆಂದರೆ ಆರ್‌ಟಿಐ ಬಹಿರಂಗಪಡಿಸುವಿಕೆಯು ಸ್ವತಃ ಪ್ರಧಾನಿಯವರಿಗೆ ಅತ್ಯಂತ ಮುಜುಗರವನ್ನುಂಟುಮಾಡಿದೆ. ನಾನು ಈ ಕೆಲವು ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದೆ ಮತ್ತು ಆರ್‍ಟಿಐ ವೇಗವಾಗಿ ಆರ್‍ಐಪಿಗೆ ಚಲಿಸುತ್ತಿರುವ ಕಾರಣ ಅರ್ಜಿಯನ್ನು ಶೀಘ್ರದಲ್ಲೇ ಆಲಿಸಲಾಗುವುದು ಎಂದು ನಾನು ಇನ್ನೂ ಆಶಿಸುತ್ತೇನೆ. ಓಂ ಶಾಂತಿ ಸ್ಥಿತಿ ಎಂದು ಅವರು ಬರೆದುಕೊಂಡಿದ್ದಾರೆ.

ಜುಲೈ 25, 2019 ರಂದು ರಾಜ್ಯಸಭೆಯಲ್ಲಿ ಆರ್‍ಟಿಐ ಕಾಯಿದೆಗೆ ಪರಿಚಯಿಸಲಾದ ಕೆಲವು ಪ್ರಮುಖ ತಿದ್ದುಪಡಿಗಳ ಕುರಿತು ರಮೇಶ್ ಅವರು ತಮ್ಮ ಹಸ್ತಕ್ಷೇಪವನ್ನು ಹಂಚಿಕೊಂಡಿದ್ದಾರೆ.