Friday, November 7, 2025
Home Blog Page 1897

ವಿಶ್ವಸಂಸ್ಥೆಯಲ್ಲಿ ವಸುದೈವ ಕುಟುಂಬಕಂ ನಾಮಫಲಕ ಅನಾವರಣ

ನ್ಯೂಯಾರ್ಕ್, ಅ 12 (ಪಿಟಿಐ) ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್ ಆವರಣದಲ್ಲಿ ವಸುದೈವ ಕುಟುಂಬಕಂ ಎಂಬ ಬರಹವಿರುವ ಫಲಕವನ್ನು ಸ್ಥಾಪಿಸಲಾಗಿದ್ದು, ಏಕತೆ ಮತ್ತು ಜಾಗತಿಕ ಸಹಯೋಗಕ್ಕೆ ನವದೆಹಲಿಯ ಬದ್ಧತೆಯನ್ನು ಸಾಕಾರಗೊಳಿಸಲಾಗಿದೆ.

ವಿಶ್ವಸಂಸ್ಥೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತೀಯ ಸಾಂಸ್ಕøತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಅಧ್ಯಕ್ಷ ಡಾ ವಿನಯ್ ಸಹಸ್ರಬುದ್ಧೆ ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಫಲಕವನ್ನು ಅನಾವರಣಗೊಳಿಸಿದರು.

ವಸುದೈವ ಕುಟುಂಬಕಂ ಎಂಬ ಪದವನ್ನು ಹಿಂದಿಯಲ್ಲಿ ಮತ್ತು ದಿ ವಲ್ಡರ್ ಈಸ್ ಒನ್ ಫ್ಯಾಮಿಲಿ ಎಂದು ಇಂಗ್ಲಿಷ್‍ನಲ್ಲಿ ಬರೆದಿರುವ ಚಿನ್ನದ ವರ್ಣದ ಫಲಕವು ನಗರದ ಭಾರತದ ಖಾಯಂ ಮಿಷನ್‍ನ ಆವರಣದ ಪ್ರವೇಶದ್ವಾರದ ಗೋಡೆಯಲ್ಲಿ ಬರೆಯಲಾಗಿದೆ.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

2023 ರ ಭಾರತದ ಜಿ20 ಪ್ರೆಸಿಡೆನ್ಸಿ ವಸುಧೈವ ಕುಟುಂಬಕಂ ಅಥವಾ ಒಂದು ಭೂಮಿ – ಒಂದು ಕುಟುಂಬ – ಒಂದು ಭವಿಷ್ಯ ಎಂಬ ಥೀಮ್ ಅನ್ನು ಅಳವಡಿಸಿಕೊಂಡಿದೆ, ಇದು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಏಕತೆ ಮತ್ತು ಸಹಯೋಗವನ್ನು ಪರಿಣಾಮಕಾರಿಯಾಗಿ ಫೋಷಿಸುವ ಭಾರತದ ಬದ್ಧತೆಯನ್ನು ಸೂಚಿಸುತ್ತದೆ.

ಒಂದು ರೀತಿಯಲ್ಲಿ, ವಸುಧೈವ ಕುಟುಂಬಕಂ ಹಿಂದಿನ ತತ್ತ್ವಶಾಸವು ಆಧುನಿಕ ಭಾಷೆಯಲ್ಲಿ, ನಾವು ಬ್ರಾಂಡ್ ಇಂಡಿಯಾ ಎಂದು ಕರೆಯಬಹುದಾದುದನ್ನು ಸೃಷ್ಟಿಸಿದೆ. ಇದು ಭಾರತದ ಗುರುತು; ಇದು ಭಾರತದ ವಿಶ್ವ ದೃಷ್ಟಿಕೋನವಾಗಿದೆ, ಎಂದು ಸಹಸ್ರಬುದ್ಧೆ ಅನಾವರಣದಲ್ಲಿ ಹೇಳಿದರು.

1ಕೆ.ಜಿ ಆಭರಣ ಕಳ್ಳತನ ಮಾಡಿದ್ದ ಸೇಲ್ಸ್‍ಮ್ಯಾನ್ ಸೇರಿ ಇಬ್ಬರ ಬಂಧನ

ವಿಶ್ವಸಂಸ್ಥೆಯಲ್ಲಿನ ಹಲವಾರು ಭಾರತೀಯ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಐಸಿಸಿಆರ್ ಅಧಿಕಾರಿಗಳು, ಡೈರೆಕ್ಟರ್ ಜನರಲ್ ಕುಮಾರ್ ತುಹಿನ್ ಮತ್ತು ಡೆಪ್ಯುಟಿ ಡೈರೆಕ್ಟರ್ ಜನರಲ್ ಅಭಯ್ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

ವಾಷಿಂಗ್ಟನ್,ಅ.12, (ಪಿಟಿಐ) ಇಸ್ರೇಲ್‍ನಲ್ಲಿನ ಪರಿಸ್ಥಿತಿಯನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಹಮಾಸ್‍ನ ಭಯೋತ್ಪಾದಕ ದಾಳಿಯು ಯಹೂದಿ ಜನರ ವಿರುದ್ಧದ ಸಹಸ್ರಮಾನಗಳ ಯೆಹೂದ್ಯ ವಿರೋಧಿ ಮತ್ತು ನರಮೇಧದ ನೋವಿನ ನೆನಪುಗಳನ್ನು ತಂದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ನಾವು ಇಸ್ರೇಲ್‍ನಲ್ಲಿನ ಪರಿಸ್ಥಿತಿಯನ್ನು ಬಹಳ ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಉಪಾಧ್ಯಕ್ಷರು ಮತ್ತು ನಾನು ಮತ್ತು ನನ್ನ ಭದ್ರತಾ ತಂಡದ ಹೆಚ್ಚಿನವರು ಇಂದು ಬೆಳಿಗ್ಗೆ ಮತ್ತೆ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇವೆ ಎಂದು ಬಿಡೆನ್ ಹೇಳಿದರು.

ಈ ಕ್ಷಣದಲ್ಲಿ, ನಾವು ಸಟಿಕ ಸ್ಪಷ್ಟವಾಗಿರಬೇಕು. ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ. ಕ್ಷಮೆಯಿಲ್ಲ. ಇಸ್ರೇಲ್‍ನ ಭದ್ರತೆ ಮತ್ತು ಯಹೂದಿ ಜನರ ಸುರಕ್ಷತೆಗೆ ನನ್ನ ಬದ್ಧತೆ ಅಚಲವಾಗಿದೆ ಎಂದು ಬಿಡೆನ್ ತಿಳಿಸಿದ್ದಾರೆ.ಹಮಾಸ್‍ನಂತಹ ಭಯೋತ್ಪಾದಕ ಗುಂಪುಗಳು ಭಯೋತ್ಪಾದನೆಯನ್ನು ಮಾತ್ರವಲ್ಲದೆ ಸಂಪೂರ್ಣ ದುಷ್ಟತನವನ್ನು ಜಗತ್ತಿಗೆ ತಂದಾಗ, ಕೆಲವು ಸಂದರ್ಭಗಳಲ್ಲಿ ಕೆಟ್ಟದ್ದನ್ನು ಪ್ರತಿಧ್ವನಿಸುವ ಮತ್ತು ಹೊಂದಿಕೆಯಾಗುವ ದುಷ್ಟತನವನ್ನು ತಂದ ಈ ಕೆಲವು ದಿನಗಳ ಕತ್ತಲೆಯ ಸಮಯದಲ್ಲಿ ಆ ಬೆಳಕನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ, ಇಸ್ರೇಲ್‍ನಲ್ಲಿ 1,000 ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆಗೈದ ಹಮಾಸ್ ಉಗ್ರರ ದುಷ್ಕøತ್ಯಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಎಲ್ಲೆಂದರಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ

ಈ ದುಷ್ಟತನದಿಂದ ಬಲಿಯಾದವರಲ್ಲಿ ಮತ್ತು ಕೊಲ್ಲಲ್ಪಟ್ಟವರಲ್ಲಿ ಕನಿಷ್ಠ 22 ಅಮೆರಿಕನ್ ನಾಗರಿಕರು ಇದ್ದಾರೆ. ಈ ದಾಳಿಯು ಶುದ್ಧ ಕ್ರೌರ್ಯದ ಅಭಿಯಾನವಾಗಿತ್ತು, ಕೇವಲ ದ್ವೇಷವಲ್ಲ, ಆದರೆ ಯಹೂದಿ ಜನರ ವಿರುದ್ಧದ ಶುದ್ಧ ಕ್ರೌರ್ಯ ಎಂದು ಅವರು ಬಣ್ಣಿಸಿದರು.ಐರನ್ ಡೋಮ್ ಅನ್ನು ಮರುಪೂರಣಗೊಳಿಸಲು ಮದ್ದುಗುಂಡುಗಳು, ಇಂಟರ್‌ಸೆಪ್ಟರ್‌ಗಳು ಸೇರಿದಂತೆ ಇಸ್ರೇಲಿ ರಕ್ಷಣಾ ಪಡೆಗೆ ಯುಎಸ್ ಹೆಚ್ಚುವರಿ ಮಿಲಿಟರಿ ಸಹಾಯವನ್ನು ವಿಸ್ತರಿಸುತ್ತಿದೆ. ಇದು ಅಮೆರಿಕ ಕ್ಯಾರಿಯರ್ ಫ್ಲೀಟ್ ಅನ್ನು ಪೂರ್ವ ಮೆಡಿಟರೇನಿಯನ್‍ಗೆ ನಿರೋಧಕವಾಗಿ ಸ್ಥಳಾಂತರಿಸಿದೆ. ನಾವು ಆ ಪ್ರದೇಶದಲ್ಲಿ ಹೆಚ್ಚಿನ ಫೈಟರ್ ಜೆಟ್‍ಗಳನ್ನು ಕಳುಹಿಸುತ್ತಿದ್ದೇವೆ ಮತ್ತು ಅದನ್ನು ಸ್ಪಷ್ಟಪಡಿಸಿದ್ದೇವೆ ಎಂದು ಅವರು ಹೇಳಿದರು.

ನಾವು ಅದನ್ನು ನಿಜವಾಗಿ ಸ್ಪಷ್ಟಪಡಿಸಲು ಬಯಸುತ್ತೇವೆ. ನಾವು ಇಸ್ರೇಲ್‍ನಲ್ಲಿ ಒತ್ತೆಯಾಳು ಬಿಕ್ಕಟ್ಟಿನ ಪ್ರತಿಯೊಂದು ಅಂಶದ ಮೇಲೆ ಕೆಲಸ ಮಾಡುತ್ತಿದ್ದೇವೆ, ಚೇತರಿಕೆಯ ಪ್ರಯತ್ನಗಳಿಗೆ ಸಲಹೆ ನೀಡಲು ಮತ್ತು ಸಹಾಯ ಮಾಡಲು ತಜ್ಞರನ್ನು ನಿಯೋಜಿಸುವುದು ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ನಮ್ಮ ಯಹೂದಿ ಸಮುದಾಯದ ಪಾಲುದಾರರೊಂದಿಗೆ ತೀವ್ರವಾಗಿ ಕೆಲಸ ಮಾಡಲು ಹೋಮ್ ಲ್ಯಾಂಡ್ ಸೆಕ್ಯುರಿಟಿ ಸೆಕ್ರೆಟರಿ ಮೇಯರ್ಕಾಸ್ ಮತ್ತು ಅಟಾರ್ನಿ ಜನರಲ್ ಗಾಲ್ರ್ಯಾಂಡ್ ಸೇರಿದಂತೆ ನನ್ನ ತಂಡದ ಸದಸ್ಯರನ್ನು ನಾನು ಕೇಳಿದ್ದೇನೆ ಎಂದು ಬಿಡೆನ್ ತಿಳಿಸಿದರು.

ಅಮೆರಿಕ ಪ್ರತಿ ತಿರುವಿನಲ್ಲಿಯೂ ಯೆಹೂದ್ಯ-ವಿರೋ„ಯನ್ನು ಖಂಡಿಸಲು ಮತ್ತು ಎದುರಿಸಲು ಮುಂದುವರಿಯುತ್ತದೆ. ಕಳೆದ ಕೆಲವು ದಿನಗಳು ದ್ವೇಷವು ಎಂದಿಗೂ ಹೋಗುವುದಿಲ್ಲ ಎಂಬ ಗಂಭೀರ ಜ್ಞಾಪನೆಯಾಗಿದೆ ಎಂದು ಅವರು ಹೇಳಿದರು.ದೇಶವನ್ನು ಒಟ್ಟುಗೂಡಿಸಲು, ಒಂದೇ ಪುಟದಲ್ಲಿ ಉಳಿಯಲು ಇಸ್ರೇಲ್ ತನ್ನ ಶಕ್ತಿಯಿಂದ ಎಲ್ಲವನ್ನೂ ಮಾಡುತ್ತಿದೆ ಮತ್ತು ಅವರು ಯಶಸ್ವಿಯಾಗುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಯುಎಸ್ ತನ್ನ ಶಕ್ತಿಯಿಂದ ಎಲ್ಲವನ್ನೂ ಮಾಡಲಿದೆ, ಮತ್ತು ಹಾನಿಗೊಳಗಾದ ಅಮೆರಿಕನ್ನರನ್ನು ಮನೆಗೆ ಕರೆತರಲು ದೇವರು ಬಯಸುತ್ತಾನೆ ಎಂದು ಅವರು ಹೇಳಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-10-2023 )

ನಿತ್ಯ ನೀತಿ : ಭಕ್ತನ ಭಕ್ತಿಯ ಮಾರ್ಗ ಭಗವಂತನನ್ನು ತೋರಿಸುತ್ತದೆ. ಆದರೆ ಅಂತರಂಗ, ಬಹಿರಂಗದಲ್ಲಿ ಭಾವ ಶುದ್ಧಿಯಿಲ್ಲದಿದ್ದರೆ ಯಾವ ಮಾರ್ಗವೂ ಫಲಿಸದು.

ಪಂಚಾಂಗ ಗುರುವಾರ 12-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಶುಕ್ಲ / ಕರಣ: ಗರಜೆ

ಸೂರ್ಯೋದಯ : ಬೆ.06.10
ಸೂರ್ಯಾಸ್ತ : 06.03
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನೆರೆಹೊರೆಯವರು ನಿಮಗೆ ಸಹಾಯ ಮಾಡುವರು.
ವೃಷಭ: ಹೊಸ ಉದ್ಯೋಗಗಳು ಮತ್ತು ಉದ್ಯೋಗ ಬದಲಾವಣೆಗೆ ಉತ್ತಮ ಸಮಯ.
ಮಿಥುನ: ಸಂಸಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಂದ ಕಿರಿಕಿರಿ. ಉದ್ಯೋಗ ಸ್ಥಳದಲ್ಲಿ ಕೆಲಸದ ಒತ್ತಡ.

ಕಟಕ: ಸ್ಥಿರ ಮನಸ್ಸಿನಿಂದ ಯತ್ನಿಸಿದರೆ ಯಾವುದೇ ಕೆಲಸ-ಕಾರ್ಯಗಳಲ್ಲಿ ಜಯ ಸಾಧಿಸುವಿರಿ.
ಸಿಂಹ: ಇಲ್ಲಸಲ್ಲದ ವಿಚಾರ ಗಳಿಗೆ ಕಿವಿಗೊಟ್ಟು ಮನಸ್ಸಿನ ನೆಮ್ಮದಿ ಹಾಳುಕೊಳ್ಳಬೇಡಿ.
ಕನ್ಯಾ: ಸ್ವಲ್ಪ ಪ್ರಯತ್ನದಿಂದ ಅಥವಾ ಶ್ರಮವಿಲ್ಲದೆ ಹಣ ದೊರೆಯುವ ಸಾಧ್ಯತೆಗಳಿವೆ.

ತುಲಾ: ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ಅವಕಾಶಗಳು ಸಿಗಲಿವೆ.
ವೃಶ್ಚಿಕ: ಹೊಸ ಜವಾಬ್ದಾರಿ ಗಳನ್ನು ಒಪ್ಪಿಕೊಳ್ಳುವ ಸಂದರ್ಭಗಳು ಎದುರಾಗಬಹುದು.
ಧನುಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ದೊರೆಯಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.

ಮಕರ: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ
ಕುಂಭ: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಗಳು ದೂರವಾಗಿ ಉತ್ತಮ ಬದಲಾವಣೆಗಳಾಗಲಿವೆ.
ಮೀನ: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನು ಸಹ ತೀರಿಸುವಿರಿ.

ಎಲ್ಲೆಂದರಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ

ಬೆಂಗಳೂರು,ಅ.11- ಅತ್ತಿಬೆಲೆ ಪಟಾಕಿ ದುರಂತದ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಈ ಬಾರಿ ಎಲ್ಲೆಂ ದರಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲು ನಿರಾಕರಿಸಿದೆ. ನಗರದ ಪ್ರಮುಖ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕೆಲ ಪ್ರದೇಶಗಳಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡದಂತೆ ಬಿಬಿಎಂಪಿ ಜಂಟಿ ಆಯುಕ್ತರುಗಳಿಗೆ ಸೂಚನೆ ನೀಡಿದ್ದಾರೆ.

ಧಾರ್ಮಿಕ ಮೈದಾನಗಳು, ಶಾಲಾ ಕಾಲೇಜ್ ಮೈದಾನಗಳು, ರಕ್ಷಣಾ ಇಲಾಖೆ ಮೈದಾನಗಳು, ಕೇಂದ್ರ , ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆಗಳು ಹಾಗೂ ಖಾಸಗಿ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಅವಕಾಶ ಕೊಡಬಾರದು ಎಂದು ಸೂಚಿಸಲಾಗಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಿನ್ನಮತದ ಭೀತಿ

ಆದರೆ, ಬಿಬಿಎಂಪಿ ಮೈದಾನದಲ್ಲಿ ಮಾತ್ರ ತಾತ್ಕಾಲಿಕ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಅದು ಅಗ್ನಿಶಾಮಕ ದಳದ ಅನುಮತಿ ಇದ್ದರೆ ಮಾತ್ರ ಎಂದು ತಿಳಿಸಲಾಗಿದೆ.

ಬೆಂಗಳೂರು ಕಂಬಳಕ್ಕೆ ಗುದ್ದಲಿ ಪೂಜೆ

ಬೆಂಗಳೂರು,ಅ.11- ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಂದಿನ ತಿಂಗಳು ನಡೆಯುವ ಬೆಂಗಳೂರು ಕಂಬಳ, ನಮ್ಮ ಕಂಬಳ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ರಾಜಕೀಯವಾಗಿ ಆರೋಪ, ಪ್ರತ್ಯಾರೋಪಗಳಿಂದ ಹೆಚ್ಚು ಚರ್ಚೆಗೆ ಒಳ ಗಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಮಾಜಿ ಮುಖ್ಯಮಂತ್ರಿ ಹಾಗೂ ಸಚಿವರೂ ಆಗಿರುವ ಡಿ.ವಿ.ಸದಾನಂದಗೌಡ, ಶಾಸಕರಾದ ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್, ಸಂಗೀತ ನಿರ್ದೇಶಕ ಗುರುಕಿರಣ್, ಕರಾವಳಿ ಸಂಘಟನೆಗಳ ಮುಖ್ಯಸ್ಥರಾದ ಅಶೋಕ್ ರೈ, ಪ್ರಕಾಶ್, ಗುರುರಂಜನ್ ಶೆಟ್ಟಿ, ರಾಜೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕರಾವಳಿ ಸಂಸ್ಕøತಿ, ವೈವಿಧ್ಯತೆ ನಾಡಿಗೆ ಹೆಮ್ಮೆ. ಇಂದು ಬೆಂಗಳೂರಿನ ಕಂಬಳಕ್ಕೆ ಚಾಲನೆ ನೀಡಲಾಗಿದೆ. ತುಳು ನಾಡಿನ ಆಚರಣೆಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇದಕ್ಕಾಗಿ ಚಿಕ್ಕ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು. ಕರಾವಳಿಯವರು ತಮ್ಮ ಆಚರಣೆ, ಸಂಸ್ಕøತಿಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದಕ್ಕೆ ನಮ್ಮ ಬೆಂಬಲ ಇದೆ. ಬೆಂಗಳೂರಿನಲ್ಲಿ ಕರಾವಳಿ ಭಾಗದ ಸಂಘಟನೆ ಕಚೇರಿಗೆ ಅಗತ್ಯವಾದ ಸ್ಥಳಾವಕಾಶ ಮಾಡಿಕೊಡಲು ಬಿಬಿಎಂಪಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಈ ಹಿಂದೆ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಕಂಬಳಕ್ಕೆ 10 ಲಕ್ಷ ನೀಡಿದ್ದರು. ತಮ್ಮ ಸರ್ಕಾರ ಪ್ರತಿ ಕಂಬಳಕ್ಕೆ ಐದು ಲಕ್ಷದಂತೆ 20 ಕಂಬಳಕ್ಕೆ ಹಣ ನೀಡುತ್ತೇವೆ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಕಂಬಳಕ್ಕೆ ಗರಿಷ್ಠ ಪ್ರಮಾಣದ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಯ ಯುವಕರು ಬೆಂಗಳೂರಿನಲ್ಲಿ ಕಂಬಳ ಮಾಡಲು ಮುಂದಾಗಿದ್ದಾರೆ. ಇದು ಶ್ಲಾಘನೀಯ. ಯಾವುದೇ ತೊಂದರೆ ಬಂದರೂ ತಲೆಕೆಡಿಸಿಕೊಳ್ಳಬೇಡಿ. ಸರ್ಕಾರ ನಿಮ್ಮ ಜೊತೆಯಲ್ಲಿದೆ ಎಂದು ಭರವಸೆ ನೀಡಿದರು.

ಡಿ.ವಿ.ಸದಾನಂದಗೌಡ ಮಾತನಾಡಿ, ಕಂಬಳ ನಡೆಸುವುದು ಕಷ್ಟ. ಅದನ್ನು ನಿಲ್ಲಿಸಬೇಕು ಎನ್ನುವ ಹಂತದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. ಒಂದು ಕಂಬಳಕ್ಕೆ 10 ಲಕ್ಷ ರೂ.ಗಳಂತೆ 10 ಕಂಬಳಗಳಿಗೆ 1 ಕೋಟಿ ರೂ. ಅನುದಾನ ನಿಗದಿ ಮಾಡಿ ತಮಿಳುನಾಡಿನಲ್ಲಿ ಜಲ್ಲಿಕಟ್ಟಿನಂತೆ ಕಂಬಳವನ್ನು ರಾಜ್ಯ ಕ್ರೀಡೆ ಯಾಗಿ ಪರಿವರ್ತನೆ ಮಾಡಿದ ತೃಪ್ತಿ ತಮಗಿದೆ ಎಂದರು. ಕಂಬಳದ ಬಗ್ಗೆ ನ್ಯಾಯಾಲಯದಲ್ಲಿ ಸಾಕಷ್ಟು ವಾದ-ವಿವಾದ ನಡೆದವು. ಹೈಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸಿ ನಾವು ಕಂಬಳ ಉಳಿಸಿಕೊಂಡಿದ್ದೇವೆ ಎಂದರು.

ನಾವು ನಿನ್ನೆ ಕಂಬಳದ ಬಗ್ಗೆ ಚರ್ಚೆ ನಡೆಯುವಾಗ ಮಳೆ ಬಂದಿತು. ಇದರಿಂದಾಗಿ ಉಪಮುಖ್ಯಮಂತ್ರಿಯವರಿಗೆ ತಲೆಬಿಸಿ ಕಡಿಮೆಯಾಗಿದೆ. ಇಲ್ಲವಾದರೆ ಕಂಬಳ ನಡೆಸಲು ಬಳಸುವ ನೀರಿನ ಬಗ್ಗೆ ಕೆಲ ಬುದ್ಧಿಜೀವಿಗಳು ತಗಾದೆ ತೆಗೆಯುತ್ತಾರೆ. ಅದಕ್ಕೂ ಪೂರ್ವಸಿದ್ಧರಾಗಿರಬೇಕು. ಕೆಲವರಿಗೆ ತಲೆಯಲ್ಲಿ ಮೆದುಳಿಲ್ಲ, ಮೆದುಳನ್ನು ಬ್ಯಾಗಿನಲ್ಲೇ ಇಟ್ಟುಕೊಂಡಿದ್ದಾರೆ ಎಂದು ಸದಾನಂದಗೌಡ ಕಿಡಿಕಾರಿದರು.

ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, 44 ಎಕರೆಯಲ್ಲಿ ಕಂಬಳಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಕಂಬಳ ಮತ್ತು ಅದರ ಮೈದಾನ ಒಂದು ಭಾಗವಾದರೆ, ಮತ್ತೊಂದು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಹಳೆ ಮಿನಿ ಮಂಗಳೂರಿನ ಮಾದರಿಯನ್ನು ನಿರ್ಮಿಸಲಾಗುವುದು. ತುಳುನಾಡಿನ ಜನಪದ ಆಚರಣೆಗಳಾದ ಯಕ್ಷಗಾನ, ಹುಲಿವೇಷ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು, ಕರಾವಳಿ ಭಾಗದ ತಿಂಡಿ ಭಕ್ಷ್ಯಗಳನ್ನು ಬೆಂಗಳೂರಿನವರಿಗೆ ಪರಿಚಯಿಸುವ ಉದ್ದೇಶವಿದೆ ಎಂದು ವಿವರಿಸಿದರು.

1ಕೆ.ಜಿ ಆಭರಣ ಕಳ್ಳತನ ಮಾಡಿದ್ದ ಸೇಲ್ಸ್‍ಮ್ಯಾನ್ ಸೇರಿ ಇಬ್ಬರ ಬಂಧನ

ಬೆಂಗಳೂರು,ಅ.11- ಜ್ಯುವೆಲರಿ ಅಂಗಡಿಯೊಂದರಲ್ಲಿ ಸೇಲ್ಸ್‍ಮ್ಯಾನ್ ಕೆಲಸಕ್ಕೆ ಸೇರಿಕೊಂಡು ಮಾಲೀಕರ ನಂಬಿಕೆಗಳಿಸಿ ನಂತರ ಸಹಚರರೊಂದಿಗೆ ಸೇರಿಕೊಂಡು ಚಿನ್ನಾಭರಣ ದರೋಡೆಯಾಗಿದೆ ಎಂದು ನಾಟಕವಾಡಿ 1ಕೆ.ಜಿ 262 ಗ್ರಾಂ ಆಭರಣಗಳನ್ನು ಕಳ್ಳತನ ಮಾಡಿದ್ದ ಸೇಲ್ಸ್‍ಮ್ಯಾನ್ ಹಾಗೂ ಮತ್ತೊಬ್ಬ ಅಂತರ್‍ರಾಜ್ಯ ಕಳ್ಳನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲಸೂರು ಗೇಟ್ ವ್ಯಾಪ್ತಿಯ ಜ್ಯುವೆಲರಿ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಯುವಕ ಕೆಲಸ ಮಾಡಿಕೊಂಡಿದ್ದು, ನಂತರದ ದಿನಗಳಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದಾನೆ. ಸೆ.28ರಂದು ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ ಮುಖೇಶ್ ಮತ್ತು ಶುಭಂ ಗೋಲ್ಡ್ ಜ್ಯುವೆಲರಿ ಅಂಗಡಿಯ ಮಾಲೀಕರಿಗೆ 1.ಕೆಜಿ 262 ಗ್ರಾಂ ಚಿನ್ನಾಭರಣಗಳನ್ನು ಕೊಟ್ಟು ಬರುವಂತೆ ಆತನಿಗೆ ಮಾಲೀಕರು ತಿಳಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಿನ್ನಮತದ ಭೀತಿ

ಸೇಲ್ಸ್ ಮ್ಯಾನ್ ನಲ್ಲೂರಿಗೆ ಹೋಗಿ, ತನ್ನ ಸಹಚರರೊಂದಿಗೆ ಸೇರಿಕೊಂಡು ಆಭರಣಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ನಂತರ ಮೊಬೈಲ್ ಮುಖಾಂತರ ಮಾಲೀಕರಿಗೆ ಕರೆ ಮಾಡಿ ನಲ್ಲೂರಿನಲ್ಲಿ ದರೋಡೆ ಕೋರರು ಗನ್‍ಪಾಯಿಂಟ್ ಮಾಡಿ ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನಾಭರಣ ಇದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ತಿಳಿಸಿದ್ದಾನೆ.

ಈತನ ಮಾತನ್ನು ನಂಬಿದ ಮಾಲೀಕ ಸೇಲ್ಸ್‍ಮ್ಯಾನ್‍ನನ್ನು ನಲ್ಲೂರಿನಿಂದ ವಾಪಸ್ಸು ಕರೆದುಕೊಂಡು ಬಂದು ಅ.2ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅಂಗಡಿಯ ಸೇಲ್ಸ್ ಮ್ಯಾನ್ ಮೇಲೆಯೇ ಅನುಮಾನಗೊಂಡು ಈತನನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಘಟನೆಯ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ನಂತರ ಸೇಲ್ಸ್‍ಮ್ಯಾನ್‍ನನ್ನು 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದು, ಆತ ನೀಡಿದ ಮಾಹಿತಿ ಮೇರೆಗೆ ರಾಜಸ್ತಾನಕ್ಕೆ ಹೋಗಿ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು, ಆತನಿಂದ 1 ಕೆ.ಜಿ, 262 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 75ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಚೆನ್ನೈನಿಂದ ಅಹಮದಾಬಾದ್‍ಗೆ ಶುಭ್‍ಮನ್ ಗಿಲ್ ಶಿಫ್ಟ್

ಈ ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮತ್ತಿಬ್ಬರ ಆರೋಪಿಗಳ ಬಗ್ಗೆ ತನಿಖೆ ಮುಂದುವರೆದಿದೆ. ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶೇಖರ್, ಹಲಸೂರು ಗೇಟ್ ಎಸಿಪಿ ಶಿವನಂದ ಚಲವಾದಿ ಅವರ ಮಾರ್ಗದರ್ಶನದಲ್ಲಿ, ಇನ್ಸ್‍ಪೆಕ್ಟರ್, ಹನುಮಂತ ಭಜಂತ್ರಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿ ತಳವು ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.

ಇಂಧನ ಇಲಾಖೆಯಿಂದ ಅಭಾವ ನಿವಾರಣೆಗೆ ವಿದ್ಯುತ್ ಪಡಿತರ ವ್ಯವಸ್ಥೆ ಜಾರಿ

ಬೆಂಗಳೂರು,ಅ.11- ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆಗೆ ಅಸಾಧಾರಣ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನಲೆ ವಿದ್ಯುತ್ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಲು ಇಂಧನ ಇಲಾಖೆ ಮುಂದಾಗಿದೆ.ಈ ಉದ್ದೇಶಕ್ಕಾಗಿ ಇಂಧನ ಇಲಾಖೆಯು ಶೀಘ್ರದಲ್ಲೇ ಆದ್ಯತೆ ಮತ್ತು ಆದ್ಯತೆಯೇತರ ಗ್ರಾಹಕರ ಪಟ್ಟಿಯನ್ನು ಸಿದ್ದಪಡಿಸಲಿದೆ. ಜೊತೆಗೆ ವಿದ್ಯುತ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಬೇರೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಮುಂದಾಗಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳ ಅವಧಿಯಲ್ಲಿ 12,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಇದೇ ತಿಂಗಳ ಅವಧಿಯಲ್ಲಿ 15000 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ಇರುವುದರಿಂದ ಈ ಕೊರತೆಯನ್ನು ನೀಗಿಸಲು ಇಂಧನ ಇಲಾಖೆ ಪರ್ಯಾಯ ಮಾರ್ಗವನ್ನು ಹುಡುಕುತ್ತಿದೆ.

ಒಂದು ಮೂಲದ ಪ್ರಕಾರ ಪ್ರತಿದಿನ 1500-2000 ಮೆಗಾವ್ಯಾಟ್ ಉತ್ಪಾದನೆಯಲ್ಲಿ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಪರ್ಯಾಯ ಇಂಧನ ಮೂಲಗಳಿಂದ ಬೇಡಿಕೆಯನ್ನು ಸರಿದೂಗಿಸಲು ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಹಾಗೂ ಪಡಿತರ ವ್ಯವಸ್ಥೆ ಜಾರಿ ಮಾಡುವ ಸಂಭವವಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಿನ್ನಮತದ ಭೀತಿ

ನಿರಂತರ ಜ್ಯೋತಿ ಯೋಜನೆಯಡಿ ಗ್ರಾಹಕರ ವಿದ್ಯುತ್ ಪೂರೈಕೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಕೈಗಾರಿಕೆಗಳು, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕಡಿತ ಇರುವುದಿಲ್ಲ. ಆದಾಗ್ಯೂ ಪರಿಸ್ಥಿತಿ ಈ ಬಾರಿ ಭಿನ್ನವಾಗಿರುವುದರಿಂದ ವಿದ್ಯುತ್ ಕಡಿತ ಮಾಡದೆ ಅನ್ಯ ಮಾರ್ಗವಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬಿಕ್ಕಟ್ಟನ್ನು ತಗ್ಗಿಸಲು ನಾವು ಈಗಾಗಲೇ ಹಲವಾರು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಅದರಲ್ಲಿ ಮುಖ್ಯವಾಗಿ ಹೊರರಾಜ್ಯದಿಂದ ವಿದ್ಯುತ್ ಖರೀದಿ, ಪರ್ಯಾಯ ಇಂಧನ ಮೂಲಗಳು ಇದರಲ್ಲಿ ಸೇರಿವೆ. ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೇಡಿಕೆಯನ್ನು ಪೂರೈಸಲು ರಾಜ್ಯವು ಅನ್ಯ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಆಲೋಚಿಸಿದೆ. ಪ್ರಸ್ತುತ ಅಕ್ಟೋಬರ್‌ನಿಂದ ಮೇ 2024ರವರೆಗೆ ಪೂರ್ವ ಸೌರ ಮತ್ತು ನಂತರದ ಸಮಯದಲ್ಲಿ ಉತ್ತರ ಪ್ರದೇಶದೊಂದಿಗೆ 300ರಿಂದ 600 ಮೆಗಾವಾಟ್ ವಿದ್ಯುತ್ ಖರೀದಿಗೆ ಮಾತುಕತೆ ನಡೆಸಲಾಗಿದೆ.

ನವೆಂಬರ್‌ನಿಂದ ಮೇ 2024ರವರೆಗೆ 500 ಮೆ.ವ್ಯಾ ಪೂರೈಕೆಗಾಗಿ ಪಂಜಾಬ್ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿದೆ. ರಾಜ್ಯಕ್ಕೆ ವಿದ್ಯುತ್ ಪೂರೈಸಲು ಅಲ್ಲಿನ ಸರ್ಕಾರಗಳು ಮೌಖಿಕ ಸಮ್ಮತಿ ನೀಡಿವೆ. ಕಳೆದ ಆಗಸ್ಟ್‍ನಲ್ಲಿ ರಾಜ್ಯವು 17,000 ಮೆಗಾವ್ಯಾಟ್ ಬೇಡಿಕೆಯನ್ನು ದಾಖಲಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬೇಡಿಕೆ ಪ್ರಮಾಣ ತುಸು ಕಡಿಮೆಯಾಗಿತ್ತು.

ಈಗ ಪುನಃ ಮಳೆ ಬಾರದ ಕಾರಣ ರೈತರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಉಷ್ಣ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಗಮನವನ್ನು ಇಲಾಖೆ ಹರಿಸಿದೆ. ಮಳೆ ಕಡಿಮೆಯಾಗಿರುವುದರಿಂದ ಪಾವಗಡ ಸೋಲಾರ್ ಪಾರ್ಕ್‍ನಲ್ಲಿ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುಸಿದಿದೆ. ಪವನ ಯೋಜನೆಗಳಿಂದ ವಿದ್ಯುತ್ ಉತ್ಪಾದನೆಯು ಸಾಮಾನ್ಯ 2000 ಮೆಗಾವ್ಯಾಟ್‍ನಿಂದ 400 ಮೆಗಾವ್ಯಾಟ್‍ಗೆ ಇಳಿದಿದೆ. 2000 ಮೆಗಾವ್ಯಾಟ್ ನವೀಕರಿಸಬಹುದಾದ ಮೂಲಗಳ ಕೊರತೆಯಿದೆ.

ಹೀಗಾಗಿ ಉಷ್ಣ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪ್ರಸ್ತುತ, ರಾಜ್ಯವು ಉಷ್ಣ ಯೋಜನೆಗಳಿಂದ ಮತ್ತು ವಿದ್ಯುತ್ ಖರೀದಿಯ ಮೂಲಕ 7000 ಮೆಗಾವ್ಯಾಟ್ ಪಡೆಯುತ್ತದೆ. ರಾಜ್ಯವು ತನ್ನ ಮೂರು ಶಾಖೋತ್ಪನ್ನ ಯೋಜನೆಗಳಿಂದ 1953w ಉತ್ಪಾದಿಸುತ್ತದೆ.

ಜುಲೈ 2022ರಲ್ಲಿ ಕೃಷಿ ಕ್ಷೇತ್ರಕ್ಕೆ 1,425 ಮೆ.ವ್ಯಾಟ್ ಬಳಕೆಯಾಗಿದ್ದರೆ, ಜುಲೈ 2023 ರಲ್ಲಿ ಇದು 2,209 ಮೆಗಾ ವ್ಯಾಟ್ಗೆ ಏರಿಕೆಯಾಗಿದೆ. ಲಿಂಗನಮಕ್ಕಿ, ಸೂಫಾ ಮತ್ತು ವಾರಾಹಿ ಜಲಾಶಯದ ಜಲ ವಿದ್ಯುತ್ ಉತ್ಪಾದನೆ ಶೇ 50ರಷ್ಟು ಕಡಿಮೆಯಾಗಿದೆ. ಇನ್ನು ಅಕ್ಟೋಬರ್ 1 ರಂದು ಗಾಳಿಯಿಂದ ವಿದ್ಯುತ್ ಉತ್ಪಾದನೆ 53.63 ಮೆ.ವಾ. ಆಗಿದ್ದರೆ, ಅಕ್ಟೋಬರ್ 9 ರಂದು 4.76 ಮೆಗಾವ್ಯಾಟ್‍ಗೆ ಇಳಿದಿದೆ. ಇನ್ನೊಂದೆಡೆ ವಿದ್ಯುತ್ ಸ್ಥಾವರಗಳು ಆಗಾಗ್ಗೆ ಸ್ಥಗಿತಗೊಳ್ಳುತ್ತಿವೆ.

ವಿದ್ಯುತ್ ಸಮಸ್ಯೆಗೆ ಮಳೆ ಕೊರತೆ ಮಾತ್ರವಲ್ಲ, ಹಿಂದಿನ ಹಾಗೂ ಈಗಿನ ಸರ್ಕಾರದ ನಿರ್ಲಕ್ಷ್ಯವೂ ವಿದ್ಯುತ್ ಅಭಾವ ಸೃಷ್ಟಿಗೆ ಕಾರಣ ಎನ್ನಲಾಗಿದೆ. ಸಾರ್ವಜನಿಕ ಸ್ವಾಮ್ಯದ ಕೆಪಿಸಿಎಲ್ ನಿರ್ಲಕ್ಷ್ಯಕ್ಕೊಳಗಾಗಿದ್ದು, ವಿದ್ಯುತ್ ಜಾಲಕ್ಕೆ ಹೊಸದಾಗಿ ಒಂದೇ ಒಂದು ಯುನಿಟ್ ಸೇರಿಸಲು ಸಾಧ್ಯವಾಗಿಲ್ಲ. ಕಲ್ಲಿದ್ದಲು ಖರೀದಿ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗದ ಕಾರಣ ಒಂದು ವಾರಕ್ಕೆ ಬೇಕಾಗುವಷ್ಟು ದಾಸ್ತಾನಿಡಲು ಸಾಧ್ಯವಾಗಿಲ್ಲ. ಇದು ಶಾಖೋತ್ಪನ್ನ ಸ್ಥಾವರದ ಪೂರ್ಣ ಸಾಮಥ್ರ್ಯದ ವಿದ್ಯುತ್ ಉತ್ಪಾದನೆಗೆ ಅಡ್ಡಗಾಲು ಹಾಕಿದೆ ಎಂದು ಮೂಲಗಳು ಸ್ಪಷ್ಟಪಡಿಸುತ್ತಿವೆ.

ಚೆನ್ನೈನಿಂದ ಅಹಮದಾಬಾದ್‍ಗೆ ಶುಭ್‍ಮನ್ ಗಿಲ್ ಶಿಫ್ಟ್

ವಿದ್ಯುತ್ ಸಮಸ್ಯೆ ಈಗ ಸೃಷ್ಟಿಯಾಗಿರುವುದಲ್ಲ. ಮಳೆ ವೈಫಲ್ಯವೂ ಒಂದು ಕಾರಣವಾಗಿರಬಹುದು. ಇದರೊಂದಿಗೆ ಇನ್ನೂ ಹಲವು ಕಾರಣಗಳು ಸೇರಿರಬಹುದು. ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಸಿದಿರುವ ಪರಿಣಾಮ ವಿದ್ಯುತ್ ಸಮಸ್ಯೆ ತಲೆದೋರಿದೆ. ರೈತರಿಗೆ 7 ಗಂಟೆ ವಿದ್ಯುತ್ ಬದಲಿಗೆ 2 ಗಂಟೆ ಕಡಿತ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ ಎಂದು ಅಕೃತ ಮೂಲಗಳು ಹೇಳುತ್ತವೆ.

ಇಂಧನ ಸಚಿವ ಕೆಜೆ ಜಾರ್ಜ್ ಅವರು ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಹೇಳುತ್ತಲ್ಲೇ ಇದ್ದಾರೆ. ಆದರೆ ರಾಜ್ಯಾದ್ಯಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುತ್ ವ್ಯತ್ಯಯ, ಕೃಷಿ ಪಂಪ್ಸೆಟ್‍ಗಳಿಗೆ ವಿದ್ಯುತ್ ಕಡಿತ ಮುಂದುವರೆದಿದೆ. ಇದರಿಂದ ರೈತರು ಕಂಗಾಲಾಗಿದ್ದು, ಇಂಧನ ಇಲಾಖೆ ವಿರುದ್ಧ ಸಿಡಿದೆದ್ದಿದ್ದಾರೆ.

ಒಂದೆಡೆ ಉಚಿತ ವಿದ್ಯುತ್(ಗೃಹ ಜ್ಯೋತಿ) ಭಾಗ್ಯದ ಮಧ್ಯೆ ಬೇಡಿಕೆ ಹೆಚ್ಚಳವಾಗಿದೆ. ಮತ್ತೊಂದೆಡೆ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ. ಇದರಿಂದ ರಾಜ್ಯ ಸರ್ಕಾರ ಸಂಕಷ್ಟ ಎದುರಾಗಿದ್ದು, ಇದನ್ನು ಹೇಗೆ ನಿಭಾಯಿಸಲಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿ ಅಮಿಷ ಹಣ ಪಡೆದು ವಂಚಿಸಿದ್ದ ಆರೋಪಿ ಬಂಧನ

ಬೆಂಗಳೂರು,ಅ.11- ಬಿಬಿಎಂಪಿಯಲ್ಲಿ ನೌಕರಿ ಕೊಡಿಸುವುದಾಗಿ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಬಿಬಿಎಂಪಿ ಹೆಸರಿನಲ್ಲಿರುವ ನೇಮಕಾತಿ ಆದೇಶದ ಪ್ರತಿ, ಗುರುತಿನ ಚೀಟಿ, ಪೋನ್‍ಪೇ ಮೂಲಕ ಹಣ ಪಡೆದಿರುವ ಬಗ್ಗೆ ಸ್ಕ್ರೀನ್‍ಶಾಟ್ ಪ್ರತಿಗಳು, ಪ್ಯಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಬಿಎಂಪಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಉದ್ಯೋಗಾಕಾಂಕ್ಷಿಗಳನ್ನು ಆರೋಪಿ ನಂಬಿಸಿದ್ದಾನೆ. ಬಿಬಿಎಂಪಿಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್ ನೌಕರಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಮೂರು ಸಾವಿರ ಹಣ ನೀಡಿದರೆ ನೇಮಕಾತಿ ಮಾಡಿಸಿಕೊಡುವುದಾಗಿ ನಂಬಿಸಿದ್ದಾನೆ. ಈತನ ಮಾತನ್ನು ನಂಬಿ ಸುಮಾರು 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ತಲಾ ಮೂರು ಸಾವಿರ ಹಣವನ್ನು ಪೋನ್‍ಪೇ ಮೂಲಕ ಪಡೆದುಕೊಂಡಿದ್ದಾನೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಿನ್ನಮತದ ಭೀತಿ

ನಕಲಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ ಅವುಗಳನ್ನೇ ನೈಜವಾದವುಗಳೆಂದು ನಂಬಿಸಿ, ವಾಟ್ಸಾಪ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಳುಹಿಸಿಕೊಟ್ಟಿದ್ದನು. ಈ ಬಗ್ಗೆ ಅನುಮಾನಗೊಂಡು ಸಂದೀಪ್ ಎನ್ನುವವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು ಒಬ್ಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ವಿವಿಧ ಆದೇಶದ ಪ್ರತಿ, ಗುರುತಿನ ಚೀಟಿ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಔಟ್, ಶಾರ್ದೂಲ್ ಠಾಕೂರ್‌ಗೆ ಛಾನ್ಸ್

ನವದೆಹಲಿ, ಅ.11- ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‍ಗಳ ಅಭೂತಪೂರ್ವ ಗೆಲುವು ಸಾಧಿಸಿ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ ಇಂದು ಆಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲೂ ಟಾಸ್ ಸೋತು ಫೀಲ್ಡಿಂಗ್ ಮಾಡುತ್ತಿದೆ.

ಅಕ್ಟೋಬರ್ 8 ರಂದು ಚೆನ್ನೈನ ಚಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿ 10 ಓವರ್ ಗಳಲ್ಲಿ 34 ರನ್ ನೀಡಿ ಕ್ಯಾಮರೂನ್ ಗ್ರೀನ್ ಅವರ ವಿಕೆಟ್ ಪಡೆದಿದ್ದ ರವಿಚಂದ್ರನ್ ಅಶ್ವಿನ್ ಅವರಿಗೆ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಿಂದ ಹೊರಗಿಟ್ಟಿದ್ದಾರೆ.

ನವದೆಹಲಿಯ ಅರುಣ್‍ಜೇಟ್ಲಿ ಕ್ರೀಡಾಂಗಣವು ವೇಗಿಗಳಿಗೆ ಹೆಚ್ಚು ಸಹಕರಿಸುವುದರಿಂದ ರವಿಚಂದ್ರನ್ ಅಶ್ವಿನ್ ಅವರು ಪ್ಲೇಯಿಂಗ್ 11ನಿಂದ ಹೊರಗಿಟ್ಟು ವೇಗದ ಆಲ್ ರೌಂಡರ್ ಶಾರ್ದೂಲ್ ಠಾಕೂರ್‌ಗೆ ಸ್ಥಾನ ಕಲ್ಪಿಸುವ ಮೂಲಕ ಆಫ್ಘಾನಿಸ್ತಾನದ ಬ್ಯಾಟರ್‍ಗಳ ಮೇಲೆ ಒತ್ತಡ ಹೇರುವ ರಣತಂತ್ರವನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಸರ್ಮಾ ಹೆಣೆದಿದ್ದಾರೆ.ಆದರೆ ಆಫ್ಘಾನಿಸ್ತಾನ ತಂಡವು ಪಾಕಿಸ್ತಾನ ವಿರುದ್ಧ ಆಡಿದ್ದ ತಂಡವನ್ನೇ ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುಂದುವರೆಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಿನ್ನಮತದ ಭೀತಿ

ಇಶಾನ್ ಕಿಶನ್‍ಗೆ ಕೊನೆ ಛಾನ್ಸ್?
ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ವೀರ, ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‍ಗೆ ಅವಕಾಶ ಕಲ್ಪಿಸಲಾಗಿತ್ತು. ನಾಯಕ ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್, ದೊಡ್ಡ ಮೊತ್ತಕ್ಕೆ ಕೈ ಹಾಕುವ ಮೂಲಕ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.

ಡಕೌಟ್ ಆಗಿರುವ ಇಶಾನ್ ಕಿಶನ್‍ಗೆ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಅವಕಾಶ ನೀಡಲಾಗಿದ್ದು , ಈ ಪಂದ್ಯದಲ್ಲಿ ಅವರು ತಮ್ಮ ಬ್ಯಾಟ್‍ನಿಂದ ಸಾಕಷ್ಟು ರನ್ ಕಾಣಿಕೆ ನೀಡಬೇಕು. ಇಲ್ಲದಿಂದ ಮುಂದಿನ ಪಂದ್ಯಗಳಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಟೀಮ್ ಇಂಡಿಯಾ ವಿರುದ್ಧ ಬಾಬರ್ ಆಝಮ್ ಅಬ್ಬರಿಸುತ್ತಾರೆ : ವಾಟ್ಸನ್

ಬೆಂಗಳೂರು, ಅ.11- 2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ಅವರು ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ರನ್ ಹೊಳೆ ಹರಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಶೇನ್ ವಾಟ್ಸನ್ ಭವಿಷ್ಯನುಡಿದಿದ್ದಾರೆ.

ಆಫ್ಘಾನಿಸ್ತಾನ ವಿರುದ್ಧ 5 ರನ್ ಗಳಿಗೆ ತಮ್ಮ ಆಟವನ್ನು ಮುಗಿಸಿದ್ದ ಬಾಬರ್ ಆಝಮ್, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ತಮ್ಮ ಈ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಅವರು ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬ್ಯಾಟಿಂಗ್‍ನಲ್ಲಿ ಸಂಪೂರ್ಣವಾಗಿ ವೈಫಲ್ಯತೆ ಕಂಡಿದ್ದರೂ, ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗಿಸಿರುವ ಪಾಕ್ ನಾಯಕ ಬಾಬರ್ ಆಝಮ್ ಅಕ್ಟೋಬರ್ 14 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಪ್ರದಾಯಿಕ ವೈರಿ ಟೀಮ್ ಇಂಡಿಯಾ ವಿರುದ್ಧ ತಮ್ಮ ಮುಂದಿನ ಪಂದ್ಯ ಆಡಲಿದ್ದು, ತಮ್ಮ ಎಂದಿನ ಸೋಟಕ ಫಾರ್ಮ್‍ಗೆ ಮರಳಲು ಎದುರು ನೋಡುತ್ತಿದ್ದಾರೆ.

ಮನವೊಲಿಸಿದ ಬಿಎಸ್‌ವೈ, ಧರಣಿ ಕೈಬಿಟ್ಟ ಶಾಸಕ ಮುನಿರತ್ನ

`ಬಾಬರ್ ಆಝಮ್ ಕ್ಲಾಸ್ ಆಟಗಾರನಾಗಿದ್ದು, ಕೆಲವು ಪಂದ್ಯಗಳಿಂದ ಅವರು ರನ್ ವೈಫಲ್ತೆ ಎದುರಿಸಿದ್ದಾರೆ, ಕಳೆದ ಐದು ಇನ್ನಿಂಗ್ಸ್‍ಗಳಲ್ಲಿ 30ಕ್ಕೂ ಕಡಿಮೆ ಮೊತ್ತವನ್ನು ಗಳಿಸಿದ್ದಾರೆ. ಬಾಬರ್ ಆಝಮ್ ಅವರು ತಾವು ಎದುರಿಸುವ ಮೊದಲ ಕೆಲವು ಎಸೆತಗಳಲ್ಲಿ ಅಪಾಯಕಾರಿ ಕಂಡುಬಂದರೂ, ನಂತರ ಆರಂಭದಲ್ಲಿ ಸಿಕ್ಕ ಅವಕಾಶವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಎಡವಿದ್ದು, ಟೀಮ್ ಇಂಡಿಯಾದ ವಿರುದ್ಧದ ಪಂದ್ಯದಲ್ಲಿ ತಮ್ಮ ಕಳಪೆ ಪ್ರದರ್ಶನದಿಂದ ಹೊರಬಂದು ಬೃಹತ್ ಮೊತ್ತ ಗಳಿಸುತ್ತಾರೆ’ ಎಂದು ವಾಟ್ಸನ್ ಹೇಳಿದ್ದಾರೆ.