Home Blog Page 1924

ಗಾಂಧೀಜಿ, ಶಾಸ್ತ್ರಿರವರ ಮೌಲ್ಯಗಳು ನಮಗೆ ದಾರಿದೀಪ : ಸಿಎಂ

ಬೆಂಗಳೂರು,ಅ.2- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಬದುಕು ಹಾಗೂ ಮೌಲ್ಯಗಳು ನಮಗೆ ದಾರಿದೀಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಹಾತ್ಮ ಗಾಂಧೀಜಿ ಯವರ 154 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 119 ನೇ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿರುವ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ದೇಶಾದ್ಯಂತ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿ ಯವರಿಗೆ ನಾವು ನಮನ ಸಲ್ಲಿಸಿದ್ದೇವೆ. ಅವರ ಹೋರಾಟದ ಬದುಕು ನಮ್ಮೆಲ್ಲರಿಗೂ ಸ್ಪೋರ್ತಿಯಾಗಲಿ ಎಂದು ಹಾರೈಸಿದರು.

ಕೇವಲ 14 ನಿಮಿಷದಲ್ಲೇ ಸ್ವಚ್ಛವಾಗುತ್ತೆ ವಂದೇ ಭಾರತ್ ರೈಲು

ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ. ಜೀವನದ್ದುದ್ದಕ್ಕೂ ಪ್ರಾಮಾಣಿಕವಾಗಿ ಬದುಕಿದವರು. ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯ ನಮ್ಮೆಲ್ಲರಿಗೂ ದಾರಿದೀಪ. ಗಾಂಧೀಜಿ ಯವರು ಸರಳ ಜೀವನ ನಡೆಸಿದವರು. ಅಹಿಂಸಾ ಮಾರ್ಗ ಅನುಸರಿಸಿ, ಅಹಿಂಸಾತ್ಮಕ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಂತೆ ಸರಳವಾಗಿ ಬದುಕಲು ಪ್ರಯತ್ನಿಸಿದರು ಎಂದರು.

ಮೂರನೇ ದರ್ಜೆ ಬೋಗಿಯಲ್ಲಿ ಯಾವಾಗಲೂ ಪ್ರಯಾಣಿಸುತ್ತಿದ್ದರು. ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, 3 ನೇ ದರ್ಜೆಗಿಂತಲೂ ಕೆಳ ದರ್ಜೆಯ ಬೋಗಿ ಇಲ್ಲವಾದ್ದರಿಂದ ನಾನು 3 ನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಉತ್ತರಿಸಿದರು. ಅಷ್ಟರ ಮಟ್ಟಿಗೆ ಸರಳವಾಗಿ ಬದುಕಿದ ಅವರು ತಮ್ಮ ಜೀವನದುದ್ದಕ್ಕೂ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಂಡವರು ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಸೆರೆಮನೆ ವಾಸ ಅನುಭವಿಸಿದ್ದರು. ಭಾರತದಲ್ಲಿಯೂ ಸೆರೆಮನೆಯ ವಾಸ ಅನುಭವಿಸಿ ದೇಶಕ್ಕೆ ಮಾದರಿಯಾಗಿದ್ದರು. ಅವರ ನೇತೃತ್ವದಲ್ಲಿ ಅನೇಕ ಜನರು ತ್ಯಾಗ, ಬಲಿದಾನಗಳನ್ನು ಅರ್ಪಿಸಿದರು. ಅಂತಿಮವಾಗಿ ಮತಾಂಧ ನಾಥೂರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು ಎಂದು ಸ್ಮರಿಸಿದರು.

ವಿಶ್ವನಾಯಕ ಗಾಂಧಿ :
ಸಮಾಜದಲ್ಲಿ ಎಲ್ಲ ಜನರೂ ಶಾಂತಿ, ನೆಮ್ಮದಿಯಿಂದ ಇರಬೇಕು. ಜಾತಿ, ಧರ್ಮ ಎಂದು ಹೊಡೆದಾಡಬಾರದು. ದೇಶ ಇಬ್ಭಾಗವಾಗಬಾರದು ಎಂದು ಹೋರಾಡಿದರು. ಜವಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ನಂತರ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಕಲ್ಕತ್ತಾದಲ್ಲಿ ಸತ್ಯಾಗ್ರಹ ಮಾಡುತ್ತಿದ್ದರು. ಅಷ್ಟು ಹೊತ್ತಿಗೆ ದೇಶ ವಿಭಜನೆಯಾಗಿ ಜನರ ಸಂಘರ್ಷದಿಂದ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ಬಗೆಹರಿಸಲು ಸತ್ಯಾಗ್ರಹ ಮಾಡಿದರು. ಜಗತ್ತಿನ 148 ದೇಶಗಳಲ್ಲಿ ಅವರ ಪ್ರತಿಮೆಗಳಿವೆ.

ಮಿಸ್ಟರ್ ಡಿ.ಕೆ.ಶಿವಕುಮಾರ್, ನಿಮ್ಮ ಕಸನು ಈಡೇರುವುದಿಲ್ಲ : ಎಚ್‍ಡಿಡಿ ವಾಗ್ದಾಳಿ

ಅವರು ಕೇವಲ ಭಾರತದ ನಾಯಕರಾಗಿರಲಿಲ್ಲ. ಜಗತ್ತಿನಲ್ಲಿಯೇ ಗೌರವಕ್ಕೆ ಪ್ರಾತ್ರರಾದ ವಿಶ್ವನಾಯಕರು. ಅಂಥವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೇವೆ. ಅವರ ಹೋರಾಟ, ಸತ್ಯ, ಧರ್ಮನಿಷ್ಠೆ ಎಲ್ಲವೂ ನಮಗೆ ದಾರಿದೀಪವಾಗಲಿ ಹಾಗೂ ಸೂರ್ತಿ ನೀಡಲಿ ಎಂದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲ : ಬೊಮ್ಮಾಯಿ

ಬೆಂಗಳೂರು,ಅ.2- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಈಗ ಪ್ರಕ್ಷುಬ್ಧ ವಾತಾವರಣವಿರುವ ನಗರ. ಅಲ್ಲಿ ಹಿಂದೆ ಹಲವಾರು ಘಟನೆ ನಡೆದಿದೆ. ಇಂಥ ಧಾರ್ಮಿಕ ಘಟನೆ ನಡೆದಾಗ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಶಿವಮೊಗ್ಗದ ಮೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಂಥ ಘಟನೆಗಳು ನಡೆಯುತ್ತದೆ. ಇಂತಹ ಸ್ಟೇಷನ್‍ಗೆ ವರ್ಗಾವಣೆ ಮಾಡುವಾಗ ಸಮರ್ಥ ಅಧಿಕಾರಿಯನ್ನು ಹಾಕಬೇಕು. ಸ್ವಹಿತಾಸಕ್ತಿಗಳಿಗೆ ಬಲಿಯಾಗಿ ಅಧಿಕಾರಿಗಳ ವರ್ಗಾವಣೆ ಮಾಡಿದರೆ, ಅವರು ಕಾನೂನು ಕಾಪಾಡುವ ಬದಲು ಬೇರೆ ಕೆಲಸದಲ್ಲಿಯೇ ಮಗ್ನರಾಗುತ್ತಾರೆ. ಇದರಿಂದ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಗುತ್ತದೆ. ಇದರ ಮೂಲ ಪ್ರತಿ ಡಿಸ್ಟಿಕ್‍ನಲ್ಲಿ ಕ್ಲಬ್, ರಿಯಲ್ ಎಸ್ಟೇಟ್ ಮಾಫಿಯಾ ಶುರುವಾಗಿದೆ ಎಂದರು.

ಮಿಸ್ಟರ್ ಡಿ.ಕೆ.ಶಿವಕುಮಾರ್, ನಿಮ್ಮ ಕಸನು ಈಡೇರುವುದಿಲ್ಲ : ಎಚ್‍ಡಿಡಿ ವಾಗ್ದಾಳಿ

ಇದನ್ನು ಸಮಗ್ರವಾಗಿ ನಿಭಾಯಿಸಬೇಕು, ಶಾಂತಿ ಕಾಪಾಡಬೇಕು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು, ಸರ್ಕಾರದಿಂದ ಪೊಲೀಸರಿಗೆ ಒಂದು ಸ್ಪಷ್ಟ ನಿರ್ದೇಶನ ಹೋಗಬೇಕು ಎಂದು ಹೇಳಿದರು.

ಮಾತಲ್ಲಿ ಮಾತ್ರ ಗಾಂಧಿ: ಗಾಂಧಿ ಕಂಡ ಕನಸು ಕರ್ನಾಟಕದಲ್ಲಿ ನನಸು ಅಂತ ಸರ್ಕಾರ ಜಾಹೀರಾತು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇವರು ಮಾಡುವುದೆಲ್ಲಾ ಗಾಂಧಿ ವಿರೋಧಿ ನೀತಿ. ಸುಳ್ಳು ಹೇಳುವುದರಿಂದ ಗಾಂಧಿ ವಿರೋಧಿ ನೀತಿ ಪ್ರಾರಂಭ ಆಗುತ್ತದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದು ಎಂದರು.

ಸಿಕ್ಕಲ್ಲೆಲ್ಲಾ ಮದ್ಯದಂಗಡಿ ಶುರು ಮಾಡಿದ್ದಾರೆ. ಪ್ರತೀ ಗ್ರಾಮ ಪಂಚಾಯತಿಯಲ್ಲಿ ಮದ್ಯದಂಗಡಿ ತೆರಯುತ್ತಿದ್ದಾರೆ. ಹೇಳಲು ಮಾತ್ರ ಗಾಂಧಿ ಶಾಂತಿ ಮಂತ್ರ ಮಾಡುವುದೆಲ್ಲಾ ಗಾಂಧಿ ವಿರೋಧಿ ಕೆಲಸಗಳೇ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಪೊಲೀಸರ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ : ಗೃಹಸಚಿವ ಪರಮೇಶ್ವರ್

ಬೆಂಗಳೂರು,ಅ.2- ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿದ್ದು ಅಲ್ಲಿ ಗಲಭೆ ನಡೆಯುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಬಿಗಿ ಬಂದೊಬಸ್ತ್ ಮಾಡಲಾಗಿತ್ತು. ಹೀಗಾಗಿ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿರುವ ಅಹಿತಕರ ಘಟನೆಯನ್ನು ಪೊಲೀಸರು ನಿಯಂತ್ರಿಸಿದ್ದಾರೆ. ಎರಡು ಗುಂಪುಗಳಿಂದಲೂ ತಲಾ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಘಟನೆಯ ಬಗ್ಗೆ ಹೆಚ್ಚಿನ ವಿವರಗಳಿವೆ. ಬಂಧನದ ಬಗ್ಗೆಯೂ ಮಾಹಿತಿ ಇದೆ. ಆದರೆ ಅದನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ರೀತಿ ಹಂಚಿಕೊಳ್ಳಲು ಕಾನೂನಾತ್ಮಕವಾಗಿ ಅವಕಾಶವಿಲ್ಲ ಎಂದರು.

ಮಿಸ್ಟರ್ ಡಿ.ಕೆ.ಶಿವಕುಮಾರ್, ನಿಮ್ಮ ಕಸನು ಈಡೇರುವುದಿಲ್ಲ : ಎಚ್‍ಡಿಡಿ ವಾಗ್ದಾಳಿ

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸಮರ್ಥರಿದ್ದಾರೆ. ಇದು ಹೊಸದೇನಲ್ಲ. ಶಿವಮೊಗ್ಗದಲ್ಲಿ ಮೊದಲಿನಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಈದ್‍ಮಿಲಾದ್ ಮೆರವಣಿಗೆ ನಡೆಯುವ ವೇಳೆ ಏನು ಬೇಕಾದರೂ ನಡೆಯಬಹುದು ಎಂಬ ಮುನ್ಸೂಚನೆ ಮೊದಲೇ ಇತ್ತು. ಹೀಗಾಗಿ ಅಗತ್ಯವಾದ ಪೊಲೀಸ್ ಬಂದೊಬಸ್ತ್ ಏರ್ಪಡಿಸಿದ್ದೆವು. ನಂತರ ಗಲಾಟೆಯನ್ನು ನಿಯಂತ್ರಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದರು.

ಶಿವಮೊಗ್ಗ ಗಲಾಟೆಗೆ ಸಂಬಂಧಿಸಿದಂತೆ 43 ಮಂದಿ ಬಂಧನ : ಸಿಎಂ

ಬೆಂಗಳೂರು,ಅ.2- ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿರುವ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 43 ಮಂದಿಯನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ತಹಬದಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್‍ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ. ಈ ಪ್ರದೇಶ ಶಿವಮೊಗ್ಗದ ಹೊರವಲಯದಲ್ಲಿದೆ.

ಪೊಲೀಸರ ಮೇಲೂ ಕಲ್ಲುತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ನಡೆಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ 43 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವುದು ಕಾನೂನು ಬಾಹಿರವಾದ ಕೃತ್ಯ. ಇಂತಹುದನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.

ಪೊಲೀಸ್ ಸಿಬ್ಬಂದಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ

ಸದ್ಯಕ್ಕೆ ಶಿವಮೊಗ್ಗದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೆಚ್ಚಿನ ಬಿಗಿ ಭದ್ರತೆ ಒದಗಿಸಿದ್ದಾರೆ ಎಂದು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ಬೂದಿ ಮುಚ್ಚಿದ ಕೆಂಡವಾದ ಶಿವಮೊಗ್ಗ

ಶಿವಮೊಗ್ಗ, ಅ.2- ನಗರದ ಹೊರವಲಯದ ರಾಗಿಗುಡ್ಡದಲ್ಲಿ ಈದ್‍ಮಿಲಾದ್ ಮೆರವಣಿಗೆಯ ವೇಳೆ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ನಿನ್ನೆ ಈದ್‍ಮಿಲಾದ್ ಪ್ರಯುಕ್ತವಾಗಿ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಅಳವಡಿಸಲಾಗಿದ್ದ ಕಟೌಟ್ ಕುರಿತಂತೆ ಅಸಮಾಧಾನಗೊಂಡಿದ್ದ ಕೆಲವರು ಆಯೋಜಕರ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.

ಕೆಲವು ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ. ನಂತರ ಉಭಯ ಗುಂಪುಗಳ ನಡುವೆ ಕಲ್ಲು ತೂರಾಟ ಹೆಚ್ಚಾಗಿದ್ದು, 7 ಕ್ಕೂ ಹೆಚ್ಚು ಕಾರುಗಳು, ಹಲವು ಮನೆಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ದುಷ್ಕರ್ಮಿಗಳು ಕೆಲವರ ಮನೆಗಳಿಗೆ ನುಗ್ಗಿ ದಾಳಿ ಮಾಡುವ ಪ್ರಯತ್ನ ನಡೆಸಿದ್ದಾರೆ.

ಪೊಲೀಸರು ಮಧ್ಯಪ್ರವೇಶ ಮಾಡಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ಮೆರವಣಿಗೆಯ ಸಂದರ್ಭದಲ್ಲಿ ಜಿಲ್ಲಾ ಎಸ್ಪಿ ಮಿಥುನ್‍ಕುಮಾರ್‍ರವರು ಇದ್ದರು. ರಾಗಿಗುಡ್ಡದಲ್ಲಿ ಗಲಭೆ ನಡೆಯುತ್ತಿದ್ದ ಮಾಹಿತಿ ತಿಳಿದು ಸ್ಥಳಕ್ಕೆ ನಾಲ್ಕು ಮಂದಿ ಸಿಬ್ಬಂದಿಗಳೊಂದಿಗೆ ಖುದ್ದು ಭೇಟಿ ನೀಡಿದ ಎಸ್‍ಪಿ ಅವರ ಮೇಲೂ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ವೇಳೆ ನಡೆದ ಗುಂಪು ಸಂಘರ್ಷದಲ್ಲಿ ಎಸ್‍ಪಿಯವರ ಗನ್‍ಮ್ಯಾನ್ ಸಿಲುಕಿಕೊಂಡಿದ್ದರು.

ಪೊಲೀಸ್ ಸಿಬ್ಬಂದಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ

ಪೊಲೀಸರ ಮೇಲೂ ಭಾರೀ ಗಾತ್ರದ ಕಲ್ಲುತೂರಾಟ ನಡೆಸಲಾಗಿದೆ. ಮನೆಗಳ ಮೇಲೂ ಬೃಹತ್ ಗಾತ್ರದ ಕಲ್ಲುಗಳು ಬಿದ್ದಿವೆ. ಸ್ಥಳದಿಂದ ತಪ್ಪಿಸಿಕೊಂಡ ಇಬ್ಬರು ಹುಡುಗರು 200 ಮೀಟರ್ ದೂರದಲ್ಲಿ ಮನೆಯೊಂದರ ಮುಂದೆ ಕುಳಿತಿದ್ದರು. ಅವರನ್ನು ಬೆನ್ನಟ್ಟಿ ಬಂದ ಗುಂಪೊಂದು ಎಳೆದುಕೊಂಡು ಹೋಗುವಾಗ ತಳ್ಳಾಟ, ನೂಕಾಟ ನಡೆದಿದೆ. ಸಂಘರ್ಷದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಅದರಲ್ಲಿ 5 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ 50 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದೆ. ಹೆಚ್ಚಿನ ಪೊಲೀಸ್ ಬಂದೊಬಸ್ತ್ ಆಯೋಜಿಸಲಾಗಿದೆ.

ಆರ್‍ಎಎಫ್, ಕೆಎಸ್‍ಆರ್‍ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಲಾಗಿದೆ. ಅದರಲ್ಲೂ ರಾಗಿಗುಡ್ಡ ಪ್ರದೇಶವನ್ನೊಳಗೊಂಡ ಶಾಂತಿನಗರಕ್ಕೆ ಸಂಚರಿಸುವ ಪ್ರತಿ ವಾಹನವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಮತ್ತು ಹೊರಗಿನವರು ಎಂದು ಭಾವಿಸಲಾದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಪ್ರದೇಶದಲ್ಲಿ ಅಘೋಷಿತ ಬಂದ್‍ನ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಗಲಾಟೆಯ ಬಳಿಕ ಸ್ಥಳೀಯ ಮಹಿಳೆಯರು ಆತಂಕ ವ್ಯಕ್ತಪಡಿಸಿ ತೋಡಿಕೊಂಡ ಅಳಲಿನ ಧ್ವನಿಗಳು ವ್ಯಾಪಕ ವೈರಲ್ ಆಗಿವೆ. ಆಕ್ಷೇಪಾರ್ಹ ಕಟೌಟ್‍ನ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಕೋಲಾರದಲ್ಲಿ ಇದೇ ರೀತಿಯ ಕಟೌಟ್ ಕಂಡುಬಂದಿತ್ತು.

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ಆಚರಣೆಯಾಗಬೇಕಾಗಿದ್ದ ಈದ್‍ಮಿಲಾದ್ ಹಬ್ಬದ ವೇಳೆ ಅಹಿತಕರ ಘಟನೆಗಳು ನಡೆಯುವ ಮೂಲಕ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಎಸ್ಪಿ ಮಿಥುನ್‍ಕುಮಾರ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮೆರವಣಿಗೆ ವೇಳೆ ದಾಂಧಲೆ ಮಾಡಲು ಕೆಲವರು ತಯಾರಿ ಮಾಡಿಕೊಂಡಿದ್ದರು. ಅದನ್ನು ನಿಯಂತ್ರಿಸಲು ನಾವು ಬಲಪ್ರಯೋಗ ಮಾಡಬೇಕಾಯಿತು. ತಕ್ಷಣವೇ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರು ಮತ್ತು ಆಸ್ತಿ ನಷ್ಟಕ್ಕೊಳಗಾದವರು ದೂರು ನೀಡಲು ಸೂಚಿಸಿದ್ದೇವೆ.

ಜಾಗತಿಕ ಅಧಿಕಾರ ಹಂಚಿಕೆ ರಚನೆಯಲ್ಲಿ ಹಿಂದೂಗಳು ಪ್ರಮುಖ ಪಾತ್ರ ನಿರ್ವಹಿಸಲು ಕರೆ

ಘಟನೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಡ್ರೋನ್ ಮೂಲಕವೂ ಚಿತ್ರೀಕರಿಸಿರುವುದರಿಂದ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗುತ್ತಿದೆ. ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ನಂತರ ವಿವರಣೆ ನೀಡಲಾಗುವುದಾಗಿ ಎಸ್ಪಿಯವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಥಳೀಯ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂತಹ ಘಟನೆಗಳಲ್ಲಿ ಶಾಂತಿ ಬಯಸುವವರು ಮುಕ್ತ ಮನಸ್ಸಿನಿಂದ ಯೋಚಿಸಬೇಕು. ಯಾವುದೇ ವಿಕೃತಗಳಿಗೆ ಅವಕಾಶ ನೀಡಬಾರದು. ಹೊರಗಿನಿಂದ ಬಂದವರು ಈ ರೀತಿಯ ಕೃತ್ಯಗಳನ್ನು ಮಾಡುತ್ತಾರೆಂದು ಹೇಳಲಾಗುತ್ತಿದೆ.

ಅವರಿಗೆ ಸ್ಥಳೀಯರು ಸಹಕಾರ ನೀಡುತ್ತಿರುವುದು ರಹಸ್ಯವೇನಲ್ಲ, ಹೊರಗಿನಿಂದ ಬಂದವರು ಎಂಥವರು, ಯಾವ ಉದ್ದೇಶಕ್ಕೆ ಬರುತ್ತಿದ್ದಾರೆಂದು ಅರಿತುಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಶಾಂತಿಪಾಲನೆ ಕಷ್ಟಸಾಧ್ಯವಾಗುತ್ತದೆ. ಈ ಬಗ್ಗೆ ಸಮುದಾಯ ಸ್ವಯಂ ಕಾಳಜಿ ವಹಿಸಬೇಕೆಂದು ಕರೆ ನೀಡಿದ್ದಾರೆ.

ಕೇವಲ 14 ನಿಮಿಷದಲ್ಲೇ ಸ್ವಚ್ಛವಾಗುತ್ತೆ ವಂದೇ ಭಾರತ್ ರೈಲು

ಮೈಸೂರು,ಅ.2- ರೈಲ್ವೆ ಸಚಿವಾಲಯದ ನಿರ್ದೇಶನದಂತೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಚೆನ್ನೈ-ಮೈಸೂರು – ಚೆನ್ನೈ ವಂದೇ ಭಾರತ್ ರೈಲಿಗೆ 14 ನಿಮಿಷಗಳ ಶುಚಿಗೊಳಿಸುವ ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದೆ. ಅಂದರೆ ಇದುವರೆಗೆ ವಂದೇ ಭಾರತ್ ರೈಲಿನ 16 ಕೋಚ್ ಗಳನ್ನು ಸ್ವಚ್ಛಗೊಳಿಸಲು ಸುಮಾರು 45 ನಿಮಿಷಗಳು ಬೇಕಾಗುತ್ತಿತ್ತು.ಈಗ ಈ 14 ನಿಮಿಷಗಳ ಪ್ರಕ್ರಿಯೆಯಿಂದ ಅತಿ ವೇಗವಾಗಿ ರೈಲನ್ನು ಸಚ್ಛಗೊಳಿಸಿ ಹೊರಡಲು ಅಣಿಗೊಳಿಸಬಹುದಾಗಿದೆ.

14 ನಿಮಿಷಗಳ ಪವಾಡ ಕಾರ್ಯಕ್ರಮವನ್ನು ವಂದೇ ಭಾರತ್ ರೈಲುಗಳು ವಿವಿಧ ಗಮ್ಯ ಸ್ಥಾನಗಳಿಗೆ ಆಗಮಿಸಿದ ನಂತರ ಅವುಗಳನ್ನು ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿರುವ ಈ ವಿಧಾನದಿಂದ ಕೇವಲ 14 ನಿಮಿಷಗಳಲ್ಲಿ ಸಂಪೂರ್ಣವಾಗಿ ಸಮಗ್ರವಾಗಿ ಶುಚಿಗೊಳಿಸುವಿಕೆಯನ್ನು ಪೂರ್ಣ ಗೊಳಿಸಲು ದಾಧ್ಯವಾಗಿದೆ.

ಪೊಲೀಸ್ ಸಿಬ್ಬಂದಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ

ಒಟ್ಟು 48 ಸಿಬ್ಬಂದಿ ಮತ್ತು 3 ಮೇಲ್ವಿಚಾರಕರು, ಪ್ರತಿಯೊಂದು ಬೋಗಿಗೂ ತರಬೇತಿ ಪಡೆದ 3 ಸಿಬ್ಬಂದಿ ಸದಸ್ಯರನ್ನು ನಿಯೋಜಿಸಲಾಗುತ್ತದೆ. ಮೊದಲನೆ ಸಿಬ್ಬಂದಿ ಕಸವನ್ನು ಸಂಗ್ರಹಿಸುತ್ತಾರೆ, ಒಣ ಒರಸುವಿಕೆಯನ್ನು ನಿರ್ವಹಿಸುತ್ತಾರೆ ಮತ್ತು ಹೊರಗಿನ ಕಿಟಕಿ ಗಾಜನ್ನು ಸ್ವಚ್ಛಗೊಳಿಸುತ್ತಾರೆ.

ಎರಡನೆಯ ಸಿಬ್ಬಂದಿ ಉಪಹಾರ ಮೇಜು ಮತ್ತು ಆಸನಗಳನ್ನು ಶುಚಿಗೊಳಿಸುತ್ತಾರೆ ಮತ್ತು ನೀರಿನಿಂದ ಒರೆಸುತ್ತಾರೆ. ಮೂರನೆಯ ಸಿಬ್ಬಂದಿ ಕಸದಬುಟ್ಟಿಗಳನ್ನು ಶೌಚಾಲಯಗಳನ್ನು ಕನ್ನಡಿಗಳನ್ನು ದ್ವಾರದ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಈ ಪ್ರದೇಶಗಳನ್ನು ಸೂಕ್ಷ್ಮವಾಗಿ ಒರೆಸುತ್ತಾರೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ಈ ಕೆಲಸದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳ ಕಾರ್ಯವನನ್ನು ಮೆಚ್ಚಿದರು.

14 ನಿಮಿಷಗಳ ಪವಾಡ ಕಾರ್ಯಕ್ರಮವು ವಂದೇ ಭಾರತ್ ರೈಲುಗಳಲ್ಲಿ ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ನಿಖರವಾಗಿ ಹೊಂದಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗಿದ್ದೂ ನಿಖರವಾದ ಸಮಯದ ಚೌಕಟ್ಟಿನೊಳಗೆ ರೈಲು ಹಿಂದಿರುಗಿ ಹೊರಡಲು ಸಿದ್ಧಮಾಡುತ್ತದೆ ಎಂದು ತಿಳಿಸಿದರು.

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ISIS ಉಗ್ರ ಅರೆಸ್ಟ್

ಭಾನುವಾರ ಮುಂಜಾನೆ, ಮೈಸೂರು ರೈಲು ನಿಲ್ದಾಣದಲ್ಲಿ ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್ ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು, ಇತರ ಹಿರಿಯ ಅಧಿಕಾರಿಗಳು, ವಿಭಾಗದ ಸಿಬ್ಬಂದಿ ಮತ್ತು ಬ್ರಹ್ಮಕುಮಾರಿ ಮತ್ತು ಇತರ ಸಂಸ್ಥೆಗಳ ಸ್ವಯಂಸೇವಕರ ಜೊತೆ ಈ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿದೆ.

ಮಿಸ್ಟರ್ ಡಿ.ಕೆ.ಶಿವಕುಮಾರ್, ನಿಮ್ಮ ಕಸನು ಈಡೇರುವುದಿಲ್ಲ : ಎಚ್‍ಡಿಡಿ ವಾಗ್ದಾಳಿ

ರಾಮನಗರ, ಅ.2-ಜೆಡಿಎಸ್ ಪಕ್ಷವನ್ನು ಶೂನ್ಯ ಮಾಡಿಬಿಡುತ್ತೇನೆ. ಅಲ್ಲಿ ಒಬ್ಬ ಸಮರ್ಥ ನಾಯಕನನ್ನು ಇರಲು ಬಿಡಲ್ಲ ಎಂದು ಹೇಳಿದ್ದೀರಿ ಮಿಸ್ಟರ್ ಡಿ.ಕೆ.ಶಿವಕುಮಾರ್. ನಿಮ್ಮ ಕಸನು ಈಡೇರುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಗುಡುಗಿದ್ದಾರೆ.

ಡಿಕೆ ಅವರೇ, ನಿಮ್ಮ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯಲ್ಲ. ಅದು ನಿಮಗೆ ಗೊತ್ತಿರಲಿ, ನಮ್ಮ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡದಿಯ ಕೇತಿಗಾನಹಳ್ಳಿಯ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದಲ್ಲಿ ನಿನ್ನೆ ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇವತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗಟ್ಟಿಯಾದ ಸಂದೇಶ ಕೊಟ್ಟಿದ್ದಾರೆ ಎಂದಿದ್ದಾರೆ.

ಜಾಗತಿಕ ಅಧಿಕಾರ ಹಂಚಿಕೆ ರಚನೆಯಲ್ಲಿ ಹಿಂದೂಗಳು ಪ್ರಮುಖ ಪಾತ್ರ ನಿರ್ವಹಿಸಲು ಕರೆ

ತಮ್ಮ ಮಾತಿನುದ್ಧಕ್ಕೂ ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಕುತಂತ್ರ ರೂಪಿಸಿರುವ ಡಿಕೆಶಿ ವಿರುದ್ಧ ಹರಿಹಾಯ್ದ ಗೌಡರು, ಆ ವ್ಯಕ್ತಿಗೆ ಉತ್ತರ ಕೊಡಬೇಕು, ಕೊಡುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಹಾಗೆ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ ಎಂದು ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.

ಈ ಸಭೆ ಬಹಳ ಚೆನ್ನಾಗಿ ನಡೆದಿದೆ. ಕುಮಾರಸ್ವಾಮಿ ಅವರಿಗೆ ಇವತ್ತು ಒಳ್ಳೆಯ ಸಂದೇಶ ನೀಡಿದ್ದಾರೆ. ಪಕ್ಷದ ಶಕ್ತಿ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ಸಭೆಗೆ ಬಂದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಭಾವುಕರಾಗಿ ನುಡಿದಿದ್ದಾರೆ. ಬಹಳ ಆಕ್ರೋಶಭರಿತರಾಗಿ ಭಾಷಣ ಮಾಡಿದ ಅವರು, ಕಾರ್ಯಕರ್ತರನ್ನು ನಂಬಿದ್ದೇನೆ. ಪಕ್ಷದ ಬೆಳೆವಣಿಗೆಗೆ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ರಾಜಕೀಯ ಬೆಳವಣಿಗೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹಮಂತ್ರಿ ಅವರನ್ನು ಭೇಟಿ ಮಾಡಿದ್ದೆ. ಸುದೀರ್ಘ ಚರ್ಚೆ ನಡೆಸಿದ್ದೇನೆ. ಅವರ ಜತೆ ಮೈತ್ರಿ ಬಗ್ಗೆ ಚರ್ಚೆ ಮಾಡಿದೆ ಎಂದು ಹೇಳಿದ್ದಾರೆ.

ಈ ರಾಜಕಾರಣ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಆದರೆ, ನಾನೆಂದೂ ಅದನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ. ಆದರೆ ಕಾಂಗ್ರೆಸ್‍ನವರು ರಾಜಕೀಯವನ್ನು ಅದೆಷ್ಟು ಕನಿಷ್ಠ ಮಟ್ಟಕ್ಕೆ ಇಳಿಸಬೇಕೋ ಅಷ್ಟು ಮಾಡಿದ್ದಾರೆ. ಸಿದ್ದಾಂತ ಎನ್ನುವುದು ಆ ಪಕ್ಷದಲ್ಲಿ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಮುಗಿದು ಹೋಯಿತು ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಗಾಂಧಿ ವಿರೋಧಿಗಳ ಬಣ್ಣ ಬಯಲು ಮಾಡಲು ಕಾಂಗ್ರೆಸ್ ಪ್ರತಿಜ್ಞೆ

ರಾಜಕೀಯವಾಗಿ ನನ್ನ ಜತೆ ಇದ್ದ ಅನೇಕರು ಐಶ್ವರ್ಯ ಹುಡುಕಿಕೊಂಡು ಎಲ್ಲೆಲ್ಲೋ ಹೋದರು. ಬೇರೆ ಬೇರೆ ಪಕ್ಷಗಳಿಗೆ ಹೊರಟು ಹೋದರು. ನಾನು ಇಲ್ಲಿಯೇ ಇದ್ದೇನೆ. ನನಗೇನೂ ಬೇಸರ ಇಲ್ಲ. ಈ ಇಳಿ ವಯಸ್ಸಿನಲ್ಲಿಯೂ ಪಕ್ಷವನ್ನು ಕಟ್ಟುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ದೇಶ ಮುಂದೆ ಏನಾಗುತ್ತೋ ಊಹೆ ಮಾಡಲಾಗಲ್ಲ. ಪಕ್ಕದಲ್ಲಿ ಪಾಕಿಸ್ತಾನ, ಚೀನಾ ಇವೆ. ದೂರದಲ್ಲಿ ಅಮೆರಿಕ, ರಷ್ಯಾ ಇದೆ. ಈ ದೇಶವನ್ನು ಉಳಿಸುವ ನಾಯಕತ್ವ ಬೇಕು ಎಂದು ಹೇಳಿದ್ದಾರೆ.

ಜೀವ ಲೆಕ್ಕಿಸದೆ ಕಾಶ್ಮೀರಕ್ಕೆ ಹೋದೆ:
ದೆಹಲಿಯಲ್ಲಿ ಕಾಂಗ್ರೆಸ್‍ನವರು ಅನೇಕ ವರ್ಷ ಆಡಳಿತ ನಡೆಸಿದರು. ಒಮ್ಮೆಯೂ ಯಾವ ಪ್ರಧಾನಿಯೂ ಕಾಶ್ಮೀರದ ಕಡೆ ತಲೆ ಹಾಕಿ ಮಲಗಲಿಲ್ಲ. ಕೊನೆಗೆ ನಾನು ಹೋದೆ. ಅಧಿಕಾರಿಗಳು ಬೇಡವೇ ಬೇಡ ಎಂದಿದ್ದರು. ಭಯೋತ್ಪಾದಕರು ಹೊಡೆದು ಹಾಕುತ್ತಾರೆ ಎಂದರೂ ನಾನು ಜೀವ ಲೆಕ್ಕಿಸದೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದೆ. ದೇಶದ ಹಿತಾಸಕ್ತಿ ನನಗೆ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

ಕಾರು ಹರಿದು ಇಬ್ಬರು ರೈತರ ದುರ್ಮರಣ

ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಎಷ್ಟು ಮಾಡಿದೆ. ನಾನು ಏನು ಮಾಡಿದೀನಿ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಸಿಗುತ್ತದೆ ಎಂದು ಅವರು ಸವಾಲು ಹಾಕಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಗ್ಗೆ ನಾನು ಲಘುವಾಗಿ ಮಾತನಾಡಲಿಲ್ಲ ಎನ್ನುತ್ತಲೇ, ಭದ್ರಾವತಿ ದಿನಗಳನ್ನು ನೆನಪು ಮಾಡಿಕೊಂಡ ಗೌಡರು, ಒಂದು ಸನ್ಮಾನಕ್ಕೆಂದು ಅಲ್ಲಿಗೆ ಹೋದೆ, ಅಲ್ಲಿ ನನಗೆ ಸನ್ಮಾನದ ಜತೆ ಇಬ್ರಾಹಿಂ ಸಿಕ್ಕಿದರು ಕರೆದುಕೊಂಡು ಬಂದು ಯುವ ಜನತಾದಳ ಅಧ್ಯಕ್ಷರನ್ನಾಗಿ ಮಾಡಿದೆ ಎಂದು ತಿಳಿಸಿದರು.

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ISIS ಉಗ್ರ ಅರೆಸ್ಟ್

ನವದೆಹಲಿ,ಅ.2- ರಾಷ್ಟ್ರೀಯ ತನಿಖಾದಳ(ಎನ್‍ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಐಎಸ್‍ಐಎಸ್ ಉಗ್ರ ಹಾಗೂ ಇತರೆ ಇಬ್ಬರು ಭಯೋತ್ಪಾದಕರನ್ನು ನವದೆಹಲಿಯ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಷಹನ್‍ವಾಜ್ ಅಲಿಯಾಸ್ ಶಫಿ ಉಜ್ಜಮ ಬಂಧಿತ ಐಎಸ್‍ಐಎಸ್ ಉಗ್ರನಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ಮೂರು ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಘೋಷಣೆ ಮಾಡಿತು.

ಉತ್ತರ ಭಾರತ, ದೆಹಲಿ ಸೇರಿದಂತೆ ಮತ್ತಿತರ ಕಡೆ ಆತ್ಮಾಹುತಿ ದಾಳಿ ನಡೆಸಲು ಈತ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಎನ್‍ಐಎ ಅಧಿಕಾರಿಗಳು ಗುಪ್ತಚರ ವಿಭಾಗ ನೀಡಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಸಿದೆ.

ವೃತ್ತಿಯಲ್ಲಿ ಇಂಜಿನಿಯರಿಂಗ್ ಪದವಿಧರನಾಗಿರುವ ಷಹನ್‍ವಾಜ್ ಪುಣೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಈ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಜೈಲಿನಿಂದ ಪರಾರಿಯಾಗಿ ನವದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ. ಸಧ್ಯದಲ್ಲೇ ದೇಶದ ವಿವಿಧೆಡೆ ಬಾಂಬ್ ಸ್ಪೋಟ ಹಾಗೂ ರಕ್ತದೋಕುಳಿ ನಡೆಸಲು ಸಂಚು ರೂಪಿಸಲು ಷಹನ್‍ವಾಜ್ ಜೊತೆ ಇತರೆ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ವಿಶೇಷ ಘಟಕದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಜಾಗತಿಕ ಅಧಿಕಾರ ಹಂಚಿಕೆ ರಚನೆಯಲ್ಲಿ ಹಿಂದೂಗಳು ಪ್ರಮುಖ ಪಾತ್ರ ನಿರ್ವಹಿಸಲು ಕರೆ

ಬಂಧಿತರಿಂದ ಸುಧಾರಿತ ಸ್ಪೋಟಕಗಳನ್ನು ತಯಾರಿಸಲು ಬಳಸುವ ಆ್ಯಸಿಡ್ ಮತ್ತು ರಾಸಾಯನಿಕಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ಸಮಯದಲ್ಲಿ ವಿದೇಶಿ ಮೂಲದ ಹ್ಯಾಂಡ್ಲರ್ ಫೆಬ್ರವರಿಯಲ್ಲಿ ಇಮ್ರಾನ್ ಮತ್ತು ಯೂನಸ್‍ನೊಂದಿಗೆ ಶಾಹನವಾಜ್ ಸಂಪರ್ಕದಲ್ಲಿದ್ದು, ಭಯೋತ್ಪಾದಕ ದಾಳಿಯನ್ನು ಕಾರ್ಯಗತಗೊಳಿಸಲು ಸೂಚನೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.

ಎಟಿಎಸ್ ಹಲವಾರು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಮತ್ತು ಆರೋಪಿಯ ಲ್ಯಾಪ್‍ಟಾಪ್‍ಗಳು ಮತ್ತು ಮೊಬೈಲ್ ಫೋನ್‍ಗಳಲ್ಲಿ 500 ಜಿಬಿ ಡೇಟಾ ಪತ್ತೆಯಾಗಿದೆ, ಇದರಲ್ಲಿ ಬಾಂಬ್‍ಗಳನ್ನು ತಯಾರಿಸುವ ಯೂಟ್ಯೂಬ್ ವೀಡಿಯೊಗಳು ಮತ್ತು ವಿವಿಧ ಸ್ಥಳಗಳ ಗೂಗಲ್ ಚಿತ್ರಗಳ ಲಿಂಕ್‍ಗಳಿವೆ ಎಂದು ಗೊತ್ತಾಗಿದೆ.

ಶಹನವಾಜ್ ಯಾರು?:
ಶಹನವಾಜ್ ಗಣಿ ಎಂಜಿನಿಯರ್ ಆಗಿದ್ದು, ಪುಣೆಯಿಂದ ಪಲಾಯನ ಮಾಡಿದ ನಂತರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಪುಣೆಯಲ್ಲಿ ಐಸಿಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಷಹನ್‍ವಾಜ್ ಸೇರಿದಂತೆ ನಾಲ್ವರು ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ಎನ್‍ಐಎ ಬಿಡುಗಡೆ ಮಾಡಿತ್ತು. ಈತನ ಸುಳಿವು ನೀಡಿದವರಿಗೆ 3 ಲಕ್ಷ ಬಹುಮಾನ ಘೋಷಿಸಿ ಬಂಧನ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಸಂಸ್ಥೆ ತಿಳಿಸಿತ್ತು.

ಉಳಿದ ಮೂವರನ್ನು ಪುಣೆಯ ತಲ್ಹಾ ಲಿಯಾಕತ್ ಖಾನ್ ಎಂದು ಗುರುತಿಸಲಾಗಿದ್ದು, ದೆಹಲಿ ಮೂಲದ ರಿಜ್ವಾನ್ ಅಬ್ದುಲ್ ಹಾಜಿ ಅಲಿ ಮತ್ತು ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡೈಪರ್ವಾಲಾ ಎಂದು ಗುರುತಿಸಲಾಗಿದೆ. ಶಹನವಾಜ್ ಮತ್ತು ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್(23) ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿ( 24) ಜುಲೈ 18 ರಂದು ಪುಣೆಯಲ್ಲಿ ದ್ವಿಚಕ್ರ ವಾಹನವನ್ನು ಕದಿಯಲು ಯತ್ನಿಸುತ್ತಿರುವುದನ್ನು ಪತ್ತೆ ಮಾಡಿದ ನಂತರ ಕೊತ್ರುಡ್ ಪೊಲೀಸರು ಬಂಧಿಸಿದ್ದರು.

ಗಾಂಧಿ ವಿರೋಧಿಗಳ ಬಣ್ಣ ಬಯಲು ಮಾಡಲು ಕಾಂಗ್ರೆಸ್ ಪ್ರತಿಜ್ಞೆ

ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಅವರು ಮಧ್ಯಪ್ರದೇಶದ ರತ್ಲಾಮ್‍ನವರಾಗಿದ್ದು, ರಾಜಸ್ಥಾನದಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಬಹಿರಂಗಗೊಂಡಿತ್ತು. ಜುಲೈ 22ರಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ತನಿಖೆಯನ್ನು ವಹಿಸಿಕೊಂಡಿತು. ತನಿಖೆಯ ಸಮಯದಲ್ಲಿ ಷಹನ್‍ವಾಜ್ ಕೊಂಧ್ವಾ ಬಳಿಯ ಬೋಪಟ್‍ಘಾಟ್‍ನಲ್ಲಿ ಸ್ವಲ್ಪ ಆಸಿಡ್ ಇಟ್ಟುಕೊಂಡಿದ್ದಾನೆಂದು ಖಾನ್ ಮತ್ತು ಸಾಕಿ ಹೇಳಿಕೆ ನೀಡಿದ್ದರು.

ಹೀಗಾಗಿ ಶಂಕಿತ ಉಗ್ರರು ಯಾವ ಸಂಚು ರೂಪಿಸಿದ್ದರು ಎಂಬುದನ್ನು ಪತ್ತೆ ಮಾಡಲು ತನಿಖಾ ತಂಡ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಮತ್ತು ಸತಾರಾ ಸ್ಥಳಗಳಿಗೆ ಭೇಟಿ ಕೊಟ್ಟಿತ್ತು. ಆಗಸ್ಟ್ 8ರಂದು ಥಾಣೆ ಜಿಲ್ಲೆಯಲ್ಲಿ ಆಕಿಫ್ ಅತೀಕ್ ನಾಚನ್ ಮತ್ತು ಜುಲಿಕರ್ ಅಲಿ ಬರೋಡಾವಾಲಾ ಎಂಬ ಇಬ್ಬರು ಆರೋಪಿಗಳನ್ನು ಎಟಿಎಸ್ ಬಂಧಿಸಿದ ನಂತರ, ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಲಾಯಿತು.

ಆಂಧ್ರ, ತೆಲಂಗಾಣದ 60 ಸ್ಥಳಗಳಲ್ಲಿ ಎನ್‍ಐಎ ದಾಳಿ

ನವದೆಹಲಿ,ಅ.2-ಎಡಪಂಥೀಯ ಉಗ್ರವಾದ ಅಥವಾ ನಕ್ಸಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣದ 60ಕ್ಕೂ ಹೆಚ್ಚು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮುಗಿಬಿದ್ದಿದೆ. ಎರಡೂ ರಾಜ್ಯಗಳಲ್ಲಿ ಶಂಕಿತ ಉಗ್ರರ ಅಡಗುತಾಣಗಳು ಮತ್ತು ಆವರಣಗಳಲ್ಲಿ ಇನ್ನೂ ದಾಳಿ ನಡೆಯುತ್ತಿದೆ. ಇಂದು ಬೆಳಿಗ್ಗೆಯಿಂದಲೇ ಪ್ರತ್ಯೇಕ ಎನ್‍ಐಎ ತಂಡಗಳು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದಲ್ಲಿ ದಾಳಿ ನಡೆಸುತ್ತಿವೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದ ಒಟ್ಟು 60 ಸ್ಥಳಗಳಲ್ಲಿ ಎಡಪಂಥೀಯ ಉಗ್ರವಾದ (ಎಲ್‍ಡಬ್ಲ್ಯುಇ) ಅಥವಾ ನಕ್ಸಲ್ ಪ್ರಕರಣದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಎನ್‍ಐಎ ಉನ್ನತ ಮೂಲಗಳು ತಿಳಿಸಿವೆ.ತೆಲಂಗಾಣದ ಹೈದರಾಬಾದ್‍ನಲ್ಲಿ ಮತ್ತು ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು ಮತ್ತು ತಿರುಪತಿ ಜಿಲ್ಲಾಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ನಕ್ಸಲ್ ಸಹಾನುಭೂತಿ ಹೊಂದಿರುವವರ ಜೊತೆ ಸಂಪರ್ಕ ಹೊಂದಿರುವ ಶಂಕಿತ ನಾಗರಿಕ ಹಕ್ಕುಗಳ ಸಹಾನುಭೂತಿ ಹೊಂದಿರುವ ಹಲವಾರು ನಾಯಕರ ಮನೆಗಳನ್ನು ಶೋಧಿಸಲಾಗುತ್ತಿದೆ.

ಜಾಗತಿಕ ಅಧಿಕಾರ ಹಂಚಿಕೆ ರಚನೆಯಲ್ಲಿ ಹಿಂದೂಗಳು ಪ್ರಮುಖ ಪಾತ್ರ ನಿರ್ವಹಿಸಲು ಕರೆ

ಕಳೆದ ಸೆಪ್ಟೆಂಬರ್ 9 ರಂದು, ಎನ್‍ಐಎ ತೆಲಂಗಾಣ ಮತ್ತು ಛತ್ತೀಸ್‍ಗಢದಲ್ಲಿ ಆಗಸ್ಟ 2023 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ವಸ್ತುಗಳು, ಡ್ರೋನ್‍ಗಳು ಮತ್ತು ನಿಷೇಧಿತ ಕಮ್ಯುನಿಸ್ಟ ಪಾರ್ಟಿ of ಇಂಡಿಯಾ (ಮಾವೋವಾದಿ) ಒಳಗೊಂಡ ಲ್ಯಾಥ್ ಯಂತ್ರವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ದಾಳಿ ಮತ್ತು ಹುಡುಕಾಟಗಳನ್ನು ನಡೆಸಿತ್ತು.

ಕೋತಗುಡೆಂನ ಚೆರ್ಲಾ ಮಂಡಲದಲ್ಲಿ ಜೂನ್‍ನಲ್ಲಿ ಮೂವರಿಂದ ಸೋಟಕ ಸಾಮಗ್ರಿಗಳು, ಡ್ರೋನ್‍ಗಳು ಮತ್ತು ಲ್ಯಾಥ್ ಯಂತ್ರವನ್ನು ವಶಪಡಿಸಿಕೊಂಡ ನಂತರ ಎನ್‍ಐಎ 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಪೊಲೀಸ್ ಸಿಬ್ಬಂದಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ

ಗಾಜಿಯಾಬಾದ್,ಅ.2- ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ 22 ವರ್ಷದ ಯುವತಿಯೊಬ್ಬರು ಕಳೆದ ಸೆಪ್ಟೆಂಬರ್ 16 ರಂದು ಗಾಜಿಯಾಬಾದ್‍ನಲ್ಲಿ ಪೊಲೀಸ್ ಸಿಬ್ಬಂದಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬುಲಂದ್‍ಶಹರ್‍ನ ನಿವಾಸಿಯಾಗಿರುವ ಸಂತ್ರಸ್ತೆ ಮತ್ತು ಆಕೆಯ ನಿಶ್ಚಿತ ವರ ಘಾಜಿಯಾಬಾದ್‍ನ ಸಾಯಿ ಉಪ್ವಾನ್ ಅರಣ್ಯದಲ್ಲಿದ್ದಾಗ ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ರಾಕೇಶ್ ಕುಮಾರ್ ಮತ್ತು ದಿಗಂಬರ್ ಕುಮಾರ್ ಅವರು ಸಮವಸ್ತ್ರದಲ್ಲಿದ್ದ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಈ ಆರೋಪ ಮಾಡಿದ್ದಾರೆ.

ಬಿಟ್‍ಕಾಯಿನ್ ವ್ಯವಹಾರ ನಡೆಸಲು ಹೋಗಿ 77 ಲಕ್ಷ ಕಳೆದುಕೊಂಡ

ಪತಿಯನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ ಪೊಲೀಸರು ದಂಪತಿಗೆ 10,000 ನೀಡುವಂತೆ ಒತ್ತಾಯಿಸಿದ್ದಾರೆ. ದಂಪತಿಗಳು ಪೊಲೀಸರೊಂದಿಗೆ ಮನವಿ ಮಾಡಿದರು ಮತ್ತು ಅವರ ಪಾದಗಳಿಗೆ ಬಿದ್ದರು, ಆದರೆ ಅವರು ಪಶ್ಚಾತ್ತಾಪ ಪಡಲು ನಿರಾಕರಿಸಿದರು. ನಂತರ ನಿಶ್ಚಿತ ವರನಿಗೆ ಪೇಟಿಎಂ ಮೂಲಕ 1,000 ಪಾವತಿಸುವಂತೆ ಒತ್ತಾಯಿಸಲಾಯಿತು.

ಅಪರಿಚಿತ ವ್ಯಕ್ತಿ 5.5 ಲಕ್ಷ ನೀಡದಿದ್ದರೆ ಗಂಭೀರ ಪರಿಣಾಮ ಬೀರುವುದಾಗಿ ದಂಪತಿಗೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ತನ್ನ ಅ„ಕೃತ ದೂರಿನಲ್ಲಿ, ಪೊಲೀಸರು ತನಗೆ ಕಪಾಳಮೋಕ್ಷ ಮಾಡಿದ್ದಾರೆ ಮತ್ತು ರಾಕೇಶ್ ಕುಮಾರ್ ತನ್ನ ಮೇಲೆ ಬಲವಂತಪಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ದಂಪತಿಯನ್ನು ಬಿಡುವ ಮೊದಲು ಸುಮಾರು ಮೂರು ಗಂಟೆಗಳ ಕಾಲ ಸೆರೆಯಲ್ಲಿ ಇರಿಸಲಾಗಿತ್ತು.ಆದರೆ ಅವರ ಸಂಕಷ್ಟ ಇಷ್ಟಕ್ಕೇ ಮುಗಿಯಲಿಲ್ಲ.

ಆರೋಪಿಗಳು ಪದೇ ಪದೇ ದೂರವಾಣಿ ಕರೆಗಳ ಮೂಲಕ ಮಹಿಳೆಗೆ ಕಿರುಕುಳ ನೀಡುತ್ತಿದ್ದರು ಮತ್ತು ಆಕೆಯ ಮನೆಗೆ ಭೇಟಿ ನೀಡಿದ್ದರು. ರಾಕೇಶ್ ಕುಮಾರ್ ಸೆಪ್ಟೆಂಬರ್ 19 ರಂದು ಮಹಿಳೆಗೆ ಕಿರುಕುಳ ನೀಡಲು ಕರೆದರು ಆದರೆ ಮಹಿಳೆ ಸಾಕ್ಷಿಯಾಗಿ ಪ್ರಸ್ತುತಪಡಿಸಲು ಅವರ ಸಂಭಾಷಣೆಯನ್ನು ದಾಖಲಿಸಿದ್ದಾರೆ. ಮೂವರು ಪುರುಷರ ವಿರುದ್ಧ ಎ-ïಐಆರ್ ದಾಖಲಿಸಲು ದಂಪತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸುತ್ತಿದ್ದ ಮಹಿಳೆಗೆ ದಾರಿಯಲ್ಲೇ ಹೆರಿಗೆ

ತರುವಾಯ, ಹತ್ತು ದಿನಗಳ ಕಿರುಕುಳ ಮತ್ತು ಆಘಾತದ ನಂತರ, ದಂಪತಿಗಳು ಸೆಪ್ಟೆಂಬರ್ 28 ರಂದು FIR ದಾಖಲಿಸಿದರು. ಎಲ್ಲಾ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹಿರಿಯ ಘಾಜಿಯಾಬಾದ್ ಪೊಲೀಸ್ ಅಧಿಕಾರಿ ನಿಮಿಷ್ ಪಾಟೀಲ್ ಹೇಳಿದ್ದಾರೆ, ಅವರನ್ನು ಪತ್ತೆಹಚ್ಚಲು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.