Wednesday, April 2, 2025
Homeರಾಷ್ಟ್ರೀಯ | Nationalಏಕಾಏಕಿ ಏರ್ ಇಂಡಿಯಾ ವಿಮಾನ ರದ್ದು, ಪ್ರಯಾಣಿಕರ ಆಕ್ರೋಶ

ಏಕಾಏಕಿ ಏರ್ ಇಂಡಿಯಾ ವಿಮಾನ ರದ್ದು, ಪ್ರಯಾಣಿಕರ ಆಕ್ರೋಶ

ಮಂಗಳೂರು, ಡಿ.24- ಬೆಂಗಳೂರಿಗೆ ಹೊರಡಬೇಕಾಗಿದ್ದ ವಿಮಾನ ಏಕಾಏಕಿ ರದ್ದಾದ ಹಿನ್ನೆಲೆಯಲ್ಲಿ ಏರ್‍ಇಂಡಿಯಾ ಸಿಬ್ಬಂದಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರ ಹಾಕಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕಳೆದ ರಾತ್ರಿ 8.30ಕ್ಕೆ ಇಲ್ಲಿಂದ ಬೆಂಗಳೂರಿಗೆ ಹೊರಡಬೇಕಾಗಿದ್ದ ವಿಮಾನವನ್ನು ತಾಂತ್ರಿಕ ಕಾರಣವೊಡ್ಡಿ ರದ್ದು ಮಾಡಲಾಗಿತ್ತು. ಇದರಿಂದ ಪ್ರಯಾಣಿಕರು ಏರ್ ಇಂಡಿಯಾ ಸಿಬ್ಬಂದಿಗಳನ್ನು ಕೇಳಿದಾಗ ಪರಿಶೀಲಿಸುವುದಾಗಿ ತಿಳಿಸಿದರು. ಆದರೆ ಸ್ಪಂದಿಸದ ಕಾರಣ ಸ್ವಲ್ಪ ಹೊತ್ತು ಕಾದು ನಂತರ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ಕುಮಾರಸ್ವಾಮಿಯವರನ್ನು ನಿಂದಿಸುವುದು ಕಾಂಗ್ರೆಸ್‍ಗೆ ಅಂಟಿದ ಬೇನೆ : ಜೆಡಿಎಸ್

ಈ ವೇಳೆ ವಾಗ್ವಾದಗಳು ನಡೆದು ಮುಂಜಾನೆ 2.15ಕ್ಕೆ ಬೇರೊಂದು ವಿಮಾನದ ಮೂಲಕ ಪ್ರಯಾಣಿಕರನ್ನು ಬೆಂಗಳೂರಿಗೆ ಕಳಿಸಿಕೊಡಲಾಯಿತು. ದಟ್ಟ ಮಂಜು ಹಾಗೂ ವಿಪರೀತ ಚಳಿಯಿಂದಾಗಿ ವಿಮಾನ ಹಾರಾಟಕ್ಕೆ ಸ್ವಲ್ಪ ಅಡಚಣೆಯಾಗಿದೆಯೆಂದು ವಿಮಾನಯಾನದ ಮೂಲಗಳು ತಿಳಿಸಿವೆ.

RELATED ARTICLES

Latest News