Friday, November 22, 2024
Homeಬೆಂಗಳೂರುಇಂದು ರಾತ್ರಿಯಿಂದ ಪೀಣ್ಯ ಫ್ಲೇಓವರ್ ಬಂದ್

ಇಂದು ರಾತ್ರಿಯಿಂದ ಪೀಣ್ಯ ಫ್ಲೇಓವರ್ ಬಂದ್

ಬೆಂಗಳೂರು, ಜ16 ರಾಜಧಾನಿಯಿಂದ ವಿವಿದ ಜಿಲ್ಲೆ ಹಾಗೂ ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಪೀಣ್ಯ ಮೇಲ್ಸೇತುವೆ ಇಂದು ರಾತ್ರಿಯಿಂದ 3 ದಿನಗಳ ಕಾಲ ಬಂದ್ ಆಗಲಿದೆ. ಇಂದು ರಾತ್ರಿ 11 ಗಂಟೆಯಿಂದ ಜ 19 ರ ಬೆಳಗ್ಗೆ 11 ಗಂಟೆವರೆಗೂ ಬಂದ್ ಆಗಲಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಎಲಿವೇಟೆಡ್ ಹೈವೆಗೆ ಅಳವಡಿಸಲಾಗಿದ್ದ ವಯಾಡಕ್ಟ್ ದುರಸ್ತಿ ಹಿನ್ನಲೆಯಲ್ಲಿ ಲೋಡ್ ಪರಿಕ್ಷಾರ್ಥ ಹಿನ್ನಲೆಯಲ್ಲಿ ಸಂಚಾರಕ್ಕೆ ನಿರ್ಬಂಧಿಸಲಾಗಿದ್ದು ಸರ್ವಿಸ್ ರಸ್ತೆ ಹಾಗೂ ಪರ್ಯಾಯ ಮಾರ್ಗಬಳಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಪರ್ಯಾಯ ಮಾರ್ಗಗಳು ಯಾವುವು: ತುಮಕೂರು ನೆಲಮಂಗಲ ಕಡೆಯಿಂದ ಪ್ಲೆಓವರ್ ಮೇಲೆ ಬರುವ ವಾಹನಗಳು ಕನ್ನಮೆಟಲ್ ಬಳಿ ಎಡ ಭಾಗದ ಪ್ಲೆಓವರ ಪಕ್ಕದ ಸರ್ವಿಸ್ ರಸ್ತೆಯ ಮುಖಾಂತರ 8 ನೇ ಮೈಲಿ, ದಾಸರಹಳ್ಳಿ. ಜಾಲಹಳ್ಳಿಕ್ರಾಸ್, ಪೀಣ್ಯ, ಗೋರಗುಂಟೆಪಾಳ್ಯ ತಲಪಬಹುದು ಇನ್ನೂ ಬೆಂಗಳೂರು ಕಡೆಯಿಂದ ಹೋಗುವ ವಾಹನಗಳು ಗೋರಗುಂಟೆ ಪಾಳ್ಯದಲ್ಲೆ ಸರ್ವಿಸ್ ರಸ್ತೆಯ ಮೂಲಕ ಎಸ್‍ಆರ್‍ಎಸ್ ಜಂಕ್ಷನ್, ದಾಸರಹಳ್ಳಿ, ಜಾಲಹಳ್ಳಿಕ್ರಾಸ್, ಎಂಟನೆಮೈಲಿ. ಮೂಲಕ ಪಾರ್ಲೆಜಿ ಟೋಲ್‍ಗೆ ತಲುಪಬಹುದು.

ಅಯೋಧ್ಯೆ ಉಗ್ರರ ಟಾರ್ಗೆಟ್ , ಕರ್ನಾಟಕದಲ್ಲೂ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ವಿಜಯನಗರ , ಸುಮ್ಮನಹಳ್ಳಿ, ಮಾಗಡಿರಸ್ತೆ ಕಡೆಗೆ ತೆರಲುವವರು ಮಾದಾವಾರ ಸಮೀಪ ನೈಸ್ ರಸ್ತೆ ಪ್ರವೇಶಿಸಿ ನಗರಕ್ಕೆ ಬರಬಹುದಾಗಿದೆ ಮಾಲೂಲಿಯಾಗಿ ಈ ರಸ್ತೆಯಲ್ಲೆ ಹೆಚ್ಚಿನ ವಾಹನಗಳು ಸಂಚಾರವಿದ್ದು ಸಂಚಾರ ದಟ್ಟಣೆ ಸಾಮಾನ್ಯವಾಗಿರುತ್ತದೆ ಇನ್ನು ಈಗ ಪ್ಲೆ ಒವರ್ ಬಂದ್ ಆಗುವುದರಿಂದ ಇನ್ನೂ ಹೆಚ್ಚಿನ ಸಂಚಾರ ದಟ್ಟಣೆ ಯಾಗಲಿದೆ ಈ ಹಿನ್ನಲೆಯಲ್ಲಿ ವಾಹನ ಸವಾರರು 3 ದಿನ ಈ ಮಾರ್ಗ ವನ್ನು ಆದಷ್ಟು ಬಳಸದಿರುವುದು ಒಳ್ಳೆಯದು.

ತಾಂತ್ರಿಕ ದೋಷದಿಂದ ಪೀಣ್ಯ ಪ್ಲೇಒವರ್ ಮೇಲೆ ಲಾರಿ ಬಸ್ಸು, ಸೇರಿದಂತೆ ಬಾರಿ ವಾಹನಗಳ ಸಂಚಾರವನ್ನು ನಿರ್ಬಂದಿಸಿ ಎರಡು ವರ್ಷಗಳೆ ಕಳೆದಿವೆ ಅಂದಿನಿಂದಲೂ ಬಸ್ ಲಾರಿಗಳು ಸರ್ವಿಸ್ ರಸ್ತೆಯ ಮೂಲಕವೆ ಸಂಚರಿಸುತ್ತಿವೆ.

RELATED ARTICLES

Latest News