Wednesday, May 8, 2024
Homeರಾಷ್ಟ್ರೀಯದೇಶದ ಆರ್ಥಿಕತೆ ವೃದ್ದಿಯಿಂದ ಉತ್ತಮ ಭವಿಷ್ಯ : ಮೋದಿ

ದೇಶದ ಆರ್ಥಿಕತೆ ವೃದ್ದಿಯಿಂದ ಉತ್ತಮ ಭವಿಷ್ಯ : ಮೋದಿ

ನವದೆಹಲಿ,ಡಿ.9- ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವಾಗ, ಪ್ರತಿಯೊಬ್ಬರೂ ಅದರಲ್ಲಿ ಉತ್ತಮ ಭವಿಷ್ಯವನ್ನು ನೋಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ಕೆಂಪುಕೋಟೆಯಲ್ಲಿ ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಬೈನಾಲೆ 2023 ಅನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಭಾರತದ ಆರ್ಥಿಕ ಬೆಳವಣಿಗೆಯು ಇಡೀ ಪ್ರಪಂಚದ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ ಮತ್ತು ಅದರ ಆತ್ಮನಿರ್ಭರ ಭಾರತದ ದೃಷ್ಟಿಕೋನವು ಹೊಸ ಅವಕಾಶಗಳನ್ನು ತರುತ್ತದೆ, ಎಂದು ಪ್ರಧಾನಿ ತಿಳಿಸಿದರು. ಭಾರತದ ಆರ್ಥಿಕ ಸಮೃದ್ಧಿಯ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಯಾದಾಗ ಅದರ ವೈಭವಯುತ ಗತಕಾಲವನ್ನು ನೆನಪಿಸಿಕೊಂಡ ಪ್ರಧಾನಿ, ಅದರ ಸಂಸ್ಕøತಿ ಮತ್ತು ಪರಂಪರೆ ಇಂದಿಗೂ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಕೆಂಪುಕೋಟೆಯಲ್ಲಿ ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್ ಮತ್ತು ವಿದ್ಯಾರ್ಥಿ ಬಿಯೆನ್ನಾಲೆ-ಸಮುನ್ನತಿಯನ್ನು ಉದ್ಘಾಟಿಸಿದರು. ಸ್ಮರಣಾರ್ಥ ಅಂಚೆಚೀಟಿಯನ್ನೂ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದ ದರ್ಶನವನ್ನೂ ಪ್ರಧಾನಿ ಮೋದಿ ವೀಕ್ಷಿಸಿದರು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಬಿನಾಲೆ ದೆಹಲಿಯ ಸಾಂಸ್ಕøತಿಕ ಜಾಗಕ್ಕೆ ಪರಿಚಯವಾಗಿ ಕಾರ್ಯನಿರ್ವಹಿಸುತ್ತದೆ.

ದೆಹಲಿ, ಕೋಲ್ಕತ್ತಾ, ಮುಂಬೈ, ಅಹಮದಾಬಾದ್ ಮತ್ತು ವಾರಣಾಸಿಯಂತಹ ಐದು ನಗರಗಳಲ್ಲಿ ಸಾಂಸ್ಕøತಿಕ ಸ್ಥಳಗಳನ್ನು ರಚಿಸುವುದನ್ನು ಐತಿಹಾಸಿಕ ಹೆಜ್ಜೆ ಎಂದು ಒತ್ತಿ ಹೇಳಿದ ಪ್ರಧಾನಿ, ಇದು ಈ ನಗರಗಳನ್ನು ಸಾಂಸ್ಕøತಿಕವಾಗಿ ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಎಂದು ಹೇಳಿದರು. ಸ್ಥಳೀಯ ಕಲೆಯನ್ನು ಶ್ರೀಮಂತಗೊಳಿಸಲು ಈ ಕೇಂದ್ರಗಳು ವಿನೂತನ ಚಿಂತನೆಗಳನ್ನು ಸಹ ಮುಂದಿಡಲಿವೆ ಎಂದು ಮಾಹಿತಿ ನೀಡಿದರು.

ಅಸ್ಸಾಂ ಎಂದಿಗೂ ಮ್ಯಾನ್ಮಾರ್ ಭಾಗವಾಗಿರಲಿಲ್ಲ : ಹಿಮಂತ ಬಿಸ್ವಾ ಶರ್ಮಾ

ಮುಂದಿನ 7 ದಿನಗಳ ಕಾಲ 7 ಪ್ರಮುಖ ವಿಷಯಗಳನ್ನು ಗಮನಿಸಿದ ಪ್ರಧಾನಮಂತ್ರಿಯವರು, ದೇಶಜ್ ಭಾರತ್ ವಿನ್ಯಾಸ: ಸ್ವದೇಶಿ ವಿನ್ಯಾಸಗಳು ಮತ್ತು ಸಮತ್ವ: ನಿರ್ಮಿತಿಯನ್ನು ರೂಪಿಸುವತಹ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸಿದರು.ಯುವಕರು ಅದನ್ನು ಮತ್ತಷ್ಟು ಪುಷ್ಟೀಕರಿಸಲು ದೇಶೀಯ ವಿನ್ಯಾಸವನ್ನು ಅಧ್ಯಯನ ಮತ್ತು ಸಂಶೋಧನೆಯ ಭಾಗವಾಗಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಸಮಾನತೆಯ ವಿಷಯವು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಆಚರಿಸುತ್ತದೆ ಎಂದು ಗಮನಿಸಿದ ಅವರು, ಈ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮಹಿಳೆಯರ ಕಲ್ಪನೆ ಮತ್ತು ಸೃಜನಶೀಲತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಲೀಲಮ್ಮ ಇನ್ನು ನೆನಪು ಮಾತ್ರ

ಆತ್ಮನಿರ್ಭರ್ ಭಾರತ್ ವಿನ್ಯಾಸ ಕೇಂದ್ರದ ಉದ್ಘಾಟನೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇದು ಭಾರತದ ವಿಶಿಷ್ಟ ಮತ್ತು ಅಪರೂಪದ ಕರಕುಶಲಗಳನ್ನು ಉತ್ತೇಜಿಸಲು ವೇದಿಕೆಯನ್ನು ಒದಗಿಸುತ್ತದೆ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಹೊಸತನವನ್ನು ಮಾಡಲು ಕುಶಲಕರ್ಮಿಗಳು ಮತ್ತು ವಿನ್ಯಾಸಕರನ್ನು ಒಟ್ಟುಗೂಡಿಸುತ್ತದೆ ಎಂದು ಹೇಳಿದರು

RELATED ARTICLES

Latest News