Tuesday, May 21, 2024
Homeರಾಷ್ಟ್ರೀಯಬಸವಣ್ಣನವರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಬಸವಣ್ಣನವರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ, ಮೇ 10 (ಪಿಟಿಐ) – ಹನ್ನೆರಡನೇ ಶತಮಾನದ ದಾರ್ಶನಿಕ ಬಸವೇಶ್ವರ ಜನ ದಿನಾಚರಣೆಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಸವಣ್ಣನವರಿಗೆ ನಮನ ಸಲ್ಲಿಸಿದ್ದಾರೆ.

ಬಸವ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾನು ಜಗದ್ಗುರು ಬಸವೇಶ್ವರರಿಗೆ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಲಕ್ಷಾಂತರ ಜೀವನವನ್ನು ಬೆಳಗಿಸುತ್ತವೆ. ಅವರ ನ್ಯಾಯಯುತ ಮತ್ತು ಸಮದ್ಧ ಸಮಾಜದ ಕನಸುಗಳನ್ನು ನನಸಾಗಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಎಕ್‌್ಸನಲ್ಲಿ ಹೇಳಿಕೊಂಡಿದ್ದಾರೆ.

ಬಸವ ಎಂದೂ ಕರೆಯಲ್ಪಡುವ ಅವರು ಮಾನವರಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು ಮತ್ತು ಯಾವುದೇ ರೀತಿಯ ತಾರತಮ್ಯದ ವಿರುದ್ಧ ಮಾತನಾಡಿದರು. ಅವರು ಪೂಜ್ಯ ವ್ಯಕ್ತಿಯಾಗಿದ್ದಾರೆ, ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಾಗಿ ಕೇಂದ್ರೀಕತವಾಗಿರುವ ಲಿಂಗಾಯತರಲ್ಲಿ ಅವರ ಬಗ್ಗೆ ಭಕ್ತಿಭಾವವಿದೆ ಎಂದು ಅವರು ಹೇಳಿದ್ದಾರೆ.

ಪ್ರತ್ಯೇಕ ಪೋಸ್ಟ್‌ಗಳಲ್ಲಿ, ಪ್ರಧಾನ ಮಂತ್ರಿಗಳು ಅಕ್ಷಯ ತತೀಯ ಮತ್ತು ಸಂತ ಪರಶುರಾಮರ ಜನದಿನದ ಶುಭ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ.

RELATED ARTICLES

Latest News