Saturday, September 14, 2024
Homeಬೆಂಗಳೂರುಪೊಲೀಸ್ ಸಿಬ್ಬಂದಿಗಳು ಕಡ್ಡಾಯವಾಗಿ ಪರೇಡ್‍ನಲ್ಲಿ ಭಾಗವಹಿಸಿ : ದಯಾನಂದ

ಪೊಲೀಸ್ ಸಿಬ್ಬಂದಿಗಳು ಕಡ್ಡಾಯವಾಗಿ ಪರೇಡ್‍ನಲ್ಲಿ ಭಾಗವಹಿಸಿ : ದಯಾನಂದ

ಬೆಂಗಳೂರು, ನ.3- ಎಲ್ಲಾ ಪೊಲೀಸ್ ಸಿಬ್ಬಂದಿಗಳು ಕಡ್ಡಾಯವಾಗಿ ಪರೇಡ್‍ನಲ್ಲಿ ಭಾಗವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಆದೇಶಿಸಿದ್ದಾರೆ. ಆಡುಗೋಡಿಯ ಸಿಎಆರ್ ಕವಾಯತ್ ಮೈದಾನದಲ್ಲಿ ಇಂದು ನಡೆದ ಮಾಸಿಕ ಕವಾಯಿತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪರೇಡ್‍ಗಳು ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗ, ಡ್ರಿಲ್, ಡಿಸ್ಪ್ಲೇನ್, ಕಮಾಂಡ್, ಕಂಟ್ರೋಲ್ ಎಲ್ಲ ಅಂಶಗಳನ್ನು ಪರೇಡ್‍ನಲ್ಲಿ ಭಾಗವಹಿಸುವುದರಿಂದ ರೂಢಿಗತವಾಗುತ್ತದೆ ಎಂದರು.

ಪೊಲೀಸರು ಎಷ್ಟೇ ಕತರ್ ವ್ಯದ ಒತ್ತಡವಿದ್ದರೂ ಕಡ್ಡಾಯವಾಗಿ ಪರೇಡ್‍ನಲ್ಲಿ ಭಾಗವಹಿಸಬೇಕು. ಈ ಬಗ್ಗೆ ಎಲ್ಲ ಪೊಲೀಸ್ ಠಾಣೆಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಆಯುಕ್ತರು ತಿಳಿಸಿದರು. ಪರೇಡ್ ಕೆಲವೇ ಸಿಬ್ಬಂದಿಗೆ ಮಾತ್ರ ಅಲ್ಲ, ಕೋರ್ಟ್, ವಾರೆಂಟ್, ಸಮನ್ಸ್ , ಕ್ರೈಂ, ಗನ್ ಮ್ಯಾನ್, ಗಾರ್ಡ್ ಹಾಗೂ ಇನ್ನಿತರ ವಿಶೇಷ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಪರೇಡ್‍ನಲ್ಲಿ ಪಾಲ್ಗೊಳ್ಳಬೇಕು. ಪರೇಡ್ ಹಾಜರಾತಿಯನ್ನು ಸರಿಯಾಗಿ ಪಾಲಿಸಬೇಕು ಮತ್ತು ಅದನ್ನು ಡಿಸಿಪಿಯವರುಗಳು ಪರಿಶೀಲಿಸಬೇಕು ಎಂದು ಹೇಳಿದರು.

ಕಾಂತರಾಜು ವರದಿ ತಿರಸ್ಕಾರಕ್ಕೆ ಒತ್ತಾಯ

ಏಕೆಂದರೆ ಇತೀಚಿಗೆ ನಾನು ಗಮನಿಸಿದಂತೆ ಕೆಲ ಪೊಲೀಸರಿಗೆ ಸರಿಯಾಗಿ ಡ್ರಿಲ್ ಮತ್ತು ಸೆಲ್ಯೂಟ್ ಮಾಡಲು ಬರುತ್ತಿಲ್ಲ, ಇದು ಪೊಲೀಸ್ ಇಲಾಖೆಗೆ ಒಳ್ಳೆಯ ವರ್ತನೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಅಪರಾಧ ಪ್ರಕರಣಗಳು ಇಳಿಕೆ:
ಪೊಲೀಸರ ವೃತ್ತಿಪರತೆ ಈಗ ಹೆಚ್ಚಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಮನೆ ಕಳ್ಳತನ, ದ್ವಿಚಕ್ರ ವಾಹನ ಕಳ್ಳತನ, ಸರಗಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ನಿಯಂತ್ರಣದಲ್ಲಿವೆ. ಕೆಲವು ಪ್ರಕರಣಗಳನ್ನು ಭೇದಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಆಯುಕ್ತರು ಪ್ರಶಂಸಿಸಿದರು.

ಬಹುಮಾನ :
ಎಲ್‍ಪಿಆರ್ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಅತಿ ಹೆಚ್ಚು ಶ್ರಮವಹಿಸಬೇಕು. ಕಳೆದ 20 ವರ್ಷದ ಹಿಂದೆ ಪ್ರಕರಣಗಳಲ್ಲಿ ಭಾಗಿಯಾಗಿ ಕೋರ್ಟ್ ಮತ್ತು ಪೊಲೀಸ್ ಠಾಣೆಗೆ ಹಾಜರಾಗದೆ ತಲೆ ತಪ್ಪಿಸಿಕೊಂಡಿದ್ದ ಕೆಲವು ಆರೋಪಿಗಳನ್ನು ನಮ್ಮ ನಗರ ಪೊಲೀಸರು ಬಂಸಿದ್ದಾರೆ. ಅಂತಹ ಪ್ರಕರಣಗಳನ್ನು ಭೇದಿಸಿದವರಿಗೆ 10 ಸಾವಿರ ಬಹುಮಾನ ನೀಡಲಾಗುವುದು ಎಂದರು.

ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಪೊಲೀಸ್ ವಾದ್ಯ ತಂಡಕ್ಕೆ 25 ಸಾವಿರ ಮತ್ತು ಇಂದಿನ ಕವಾಯತಿನಲ್ಲಿ ಭಾಗವಹಿಸಿದ್ದ ವಾದ್ಯ ತಂಡಕ್ಕೆ ಆಯುಕ್ತರು 10 ಸಾವಿರ ಬಹುಮಾನ ಘೋಷಿಸಿದ್ದಾರೆ.

RELATED ARTICLES

Latest News