Thursday, April 16, 2026
Homeರಾಜಕೀಯಜಮೀರ್‌ ಗೌರವಯುತ ವಿದಾಯಕ್ಕೆ ಕಾಂಗ್ರೆಸ್‌‍ನಲ್ಲಿ ತೆರೆಮರೆಯ ಕಸರತ್ತು

ಜಮೀರ್‌ ಗೌರವಯುತ ವಿದಾಯಕ್ಕೆ ಕಾಂಗ್ರೆಸ್‌‍ನಲ್ಲಿ ತೆರೆಮರೆಯ ಕಸರತ್ತು

Congress

ಬೆಂಗಳೂರು,ಏ.16- ದಾವಣೆಗೆರೆ ವಿಧಾನಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಗೌರವಯುತ ವಿದಾಯಕ್ಕೆ ಕಾಂಗ್ರೆಸ್‌‍ನಲ್ಲಿ ತೆರೆಮರೆಯ ಕಸರತ್ತುಗಳು ನಡೆಯುತ್ತಿದೆ.

ಈಗಾಗಲೇ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್‌ ಜಮೀರ್‌ ಅಹಮದ್‌ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಜೀರ್‌ ಅಹಮದ್‌ ಅವರನ್ನು ವಜಾಗೊಳಿಸಲಾಗಿದೆ. ಈ ಇಬ್ಬರ ತಲೆದಂಡದಿಂದ ಗಲಿಬಿಲಿಗೆ ಒಳಗಾಗಿರುವ ಸಚಿವ ಜಮೀರ್‌ ಅಹಮದ್‌ ಖಾನ್‌ ತಮ ಕುರ್ಚಿಗೆ ಒದಗಲಿರುವ ಕಂಟಕವನ್ನು ತಪ್ಪಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ ರಹಸ್ಯ ಸ್ಥಳದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಅವರು ಜಮೀರ್‌ ಅಹಮದ್‌ ಖಾನ್‌ ಅವರೊಂದಿಗೆ ಗಂಭೀರ ಚರ್ಚೆ ನಡೆಸಿದ್ದು, ಹುದ್ದೆ ತ್ಯಾಗಕ್ಕೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಆದರೆ ಇದಕ್ಕೆ ಜಮೀರ್‌ ಅಹಮದ್‌ ಖಾನ್‌ ಸುತರಾಮ್‌ ಒಪ್ಪಿಲ್ಲ. ನಜೀರ್‌ ಅಹಮದ್‌ ಅವರಂತೆ ನನ್ನನ್ನು ಸಚಿವ ಸ್ಥಾನದಿಂದ ಉಚ್ಚಾಟನೆ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಕಾಂಗ್ರೆಸ್‌‍ ಪಕ್ಷ ಜಮೀರ್‌ ಅವರಿಗೆ ಗೌರವಯುತ ವಿದಾಯ ನೀಡಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಜಮೀರ್‌ ಅಹಮದ್‌ ಖಾನ್‌ ರಾಜೀನಾಮೆ ನೀಡದೇ ಇದ್ದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಪಸಂಖ್ಯಾತ ಸಮುದಾಯದಲ್ಲಿ ಜಮೀರ್‌ ಇತ್ತೀಚೆಗೆ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಅವರನ್ನು ಏಕಾಏಕಿ ಸಂಪುಟದಿಂದ ವಜಾಗೊಳಿಸುವ ಬದಲಾಗಿ, ಖುದ್ದು ಅವರಾಗಿಯೇ ರಾಜೀನಾಮೆ ನೀಡಿ, ಹೊರ ಹೋಗಲು ಅವಕಾಶ ಮಾಡಿಕೊಡುವ ಪ್ರಯತ್ನಗಳಾಗುತಿ ್ತವೆ. ಈ ನಿಟ್ಟಿನಲ್ಲಿ ಸಚಿವರ ಮನವಲಿಕೆ ಪ್ರಯತ್ನಗಳು ನಡೆದಿವೆ.

ಮತ್ತೊಂದೆಡೆ ಡಿ.ಕೆ.ಶಿವಕುಮಾರ್‌ ವಿರುದ್ಧ ಒಳಗೊಳಗೆ ಮಸಲತ್ತುಗಳು ನಡೆಯುತ್ತಿದ್ದು, ಶಿಸ್ತು, ಪಕ್ಷ ವಿರೋಧಿ ಚಟುವಟಿಕೆ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್‌ ಅವರು ಪ್ರಮುಖ ನಾಯಕರನ್ನು ಪದಚ್ಯುತಗೊಳಿಸುತ್ತಿದ್ದಾರೆ. ಆದರೆ ಅವರು ಮಾಡಿದ್ದು, ಅಶಿಸ್ತಲ್ಲವೇ ಎಂದು ಕೆ.ಎನ್‌.ರಾಜಣ್ಣ ಗುಡುಗಿದ್ದಾರೆ.

ರಾಹುಲ್‌ಗಾಂಧಿ ಯಾರೆಂದು ತಮಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ ಸದ್ಗುರು ಜೊತೆ ಡಿ.ಕೆ.ಶಿವಕುಮಾರ್‌ ವೇದಿಕೆ ಹಂಚಿಕೊಂಡಿದ್ದು ಅಶಿಸ್ತಲ್ಲವೇ? ಎಂದು ಕೆ.ಎನ್‌.ರಾಜಣ್ಣ ಪ್ರಶ್ನಿಸಿದ್ದಾರೆ.

ಸಚಿವ ಜಮೀರ್‌ ಅಹಮದ್‌ ಖಾನ್‌ ಕೂಡ ತಮನ್ನು ಗುರಿಯಾಗಿಸಿ ಸಂಚು ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಜಮೀರ್‌ ಅವರನ್ನು ಏಕಾಏಕಿ ಸಂಪುಟದಿಂದ ಉಚ್ಚಾಟನೆ ಮಾಡಿದರೆ, ಅದರ ಪರಿಣಾಮ ಕೆಟ್ಟದ್ದಾಗಿರಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌‍ನಲ್ಲಿ ಅಸಹನೆಯ ಮಂತ್ರ ಜಪಿಸಲಾಗುತ್ತಿದೆ.

ವಿಧಾನಸಭೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಒಂದು ವೇಳೆ ಕಾಂಗ್ರೆಸ್‌‍ ಪಕ್ಷಕ್ಕೆ ಹಿನ್ನಡೆಯಾದರೆ, ಅದಕ್ಕೆ ಜಮೀರ್‌ ಅಹಮದ್‌ ಖಾನ್‌ ಅವರನ್ನೇ ಹೊಣೆ ಮಾಡಲು ವೇದಿಕೆ ಸಿದ್ಧಗೊಂಡಿದೆ. ಆದರೆ ಜಮೀರ್‌ ಜಿದ್ದಿಗೆ ಬಿದ್ದಿದ್ದು, ತಾವು ರಾಜೀನಾಮೆ ನೀಡುವುದಿಲ್ಲ, ಬೇಕಾದರೆ ವಜಾಗೊಳಿಸಲಿ ಎಂದು ಸವಾಲು ಒಡ್ಡುವ ರೀತಿ ನಿಂತಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರ ನಿರ್ದೇಶನದ ಮೇರೆಗೆ ತಾವು ಕೇರಳದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದು, ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಹೀಗಿರುವಾಗ ತಮ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಜಮೀರ್‌ ವಾದಿಸಿದ್ದಾರೆ.ನಜೀರ್‌ ಅಹಮದ್‌ ಮತ್ತು ಅಬ್ದುಲ್‌ ಜಬ್ಬಾರ್‌ ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳು ಕೂಡ ಅವೈಜ್ಞಾನಿಕ ಎಂದು ಜಮೀರ್‌ ವಾದಿಸಿದ್ದಾರೆ.

RELATED ARTICLES

Latest News