ಬೆಳಗಾವಿ, ಸೆ.16- ವಿರೋಧ ಪಕ್ಷದ ನಾಯಕರು ವಂದೇ ಮಾತರಂನ ಪೂರ್ಣ ಪ್ರಮಾಣದ ಗೀತೆಯನ್ನು ಹಾಡಿದರೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಿಸುವುದಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಂದೇ ಮಾತರಂ ವಿಚಾರವಾಗಿ ಎರಡು ಚರಣಗಳನ್ನು ಎಲ್ಲರೂ ಹಾಡುತ್ತಾರೆ. ಬಿಜೆಪಿಯ ವಿಜಯೇಂದ್ರ, ಆರ್.ಅಶೋಕ್ ವಂದೇ ಮಾತರಂನ ಪೂರ್ಣ ಭಾಗವನ್ನು ಟೆಲಿ ಪ್ರಾಮ್ಟರ್ ಮತ್ತು ಕಾಗದ ಇಲ್ಲದೇ ಹಾಡಿ ತೋರಿಸಲಿ. ಅವರಿಗೆ ಕನ್ನಡ ರಾಜ್ಯೋತ್ಸವ, ಕರ್ನಾಟಕ ರತ್ನಾದಂತಹ ಪ್ರಶಸ್ತಿಗಳನ್ನು ಕೊಡಿಸುತ್ತೇನೆ ಎಂದರು.
ಮೂರನೇ ಚರಣ ಬೆಂಗಾಳಿ ಭಾಷೆಯಲ್ಲಿದೆ. ನಮಗೆ ಅದನ್ನು ಹಾಡಲು ಬರುವುದಿಲ್ಲ. ನಾವು ಅದನ್ನು ಅಭ್ಯಾಸ ಮಾಡಿಲ್ಲ. ವಾಸ್ತವವಾಗಿ ನನಗೂ ಕೂಡ ಮೂರನೇ ಚರಣ ಗೊತ್ತಿಲ್ಲ. ನನಗಿರುವ ಮಾಹಿತಿ ಪ್ರಕಾರ ಪ್ರಧಾನಿಯವರಿಗೂ ಗೊತ್ತಿಲ್ಲ ಎಂದರು.ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಬರ ಇಂತಹ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಾಗಿ ವಂದೇ ಮಾತರಂ ಹೇಗೆ ಹಾಡಬೇಕು ಎಂದು ಚರ್ಚೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಅಮೆರಿಕಾ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಕೃಷಿ ಉತ್ಪನ್ನಗಳ ಮೇಲೆ ಶೇ. 100 ರಷ್ಟು ಶುಲ್ಕ ವಿಧಿಸಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದರ ಬಗ್ಗೆ ಚರ್ಚೆ ಮಾಡಲು ಸಿದ್ಧರಿಲ್ಲ ಎಂದರು.ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುತ್ತಿದ್ದಾರೆ ಎಂದು ವಿವರಿಸಿದರು.
ವಿಧಾನ ಮಂಡಲ ಅಧಿವೇಶನ ನಡೆಸಲು ನಾವು ತಯಾರಿದ್ದರೂ ವಿರೋಧ ಪಕ್ಷಗಳು ಸಹಕರಿಸಲಿಲ್ಲ. ಜನಪರ ಚರ್ಚೆಗಳಾಗಲಿಲ್ಲ ಎಂಬ ಕಾರಣಕ್ಕೆ ಅಧಿವೇಶನವನ್ನು ಮುಂದೂಡಬೇಕಾಯಿತು.ವಿರೋಧ ಪಕ್ಷಗಳಿಗೆ ಸದಸನದ ಕಲಾಪಗಳು ನಡೆಸಲು ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ಈಗ ಬರ ಹಾಗೂ ರೈತರ ಸಮಸ್ಯೆ ಚರ್ಚೆಗೆ ಮೂರು ದಿನಗಳ ಕಲಾಪ ನಿರ್ಧರಿಸಲಾಗಿದೆ.
ಈ ಅಧಿವೇಶನದಲ್ಲಿ ಕೆಪಿಎಸ್‌ಸಿ ವಿಚಾರ ಚರ್ಚೆ ಮಾಡುವುದಾದರೆ, ನಾವು ಸಿದ್ಧರಿದ್ದೇವೆ. ರಾಜ್ಯದ ಪ್ರಮುಖ ನಾಯಕರು ಕೆಪಿಎಸ್‌ಸಿ ನೇಮಕಾತಿ ವಿಚಾರವಾಗಿ ಪದೇ ಪದೇ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಅದು ವರದಿ ಬರುವವರೆಗೂ ತಾವು ಪ್ರತಿಕ್ರಿಯಿಸುವುದಿಲ್ಲ. ನನ್ನ ವಿಕೆಟ್ ಬೀಳುತ್ತದೆ ಎಂದು ಕಾಯುತ್ತಿದ್ದವರೇ ಹಿಟ್ ವಿಕೆಟ್ ಆಗುವ ಸಾಧ್ಯತೆ ಇದೆ.
ಕೆಪಿಎಸ್‌ಸಿ ಹಗರಣದಲ್ಲಿ ನನ್ನ ಹೆಸರನ್ನು ಪದೇ ಪದೇ ಹೇಳುತ್ತಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರ ಹೆಸರನ್ನು ಎಷ್ಟು ಬಾರಿ ಹೇಳಿದ್ದಾರೆ ಎಂದು ನೋಡಿದರೆ ವಾಸ್ತವಾಂಶ ತಿಳಿಯುತ್ತದೆ ಎಂದರು.ಕೆಎಎಸ್ ನೇಮಾಕಾತಿಯ ಹಗರಣದ ಬಗ್ಗೆ ಸಿಐಡಿ ಮುಂದೆ ಯಾವುದೇ ದೂರುಗಳು ಈವರೆಗೂ ದಾಖಲಾಗಿಲ್ಲ. ಆದರೆ ತನಿಖೆ ನಡೆಯಬೇಕು ಎಂಬ ಚರ್ಚೆಗಳಂತೂ ಇವೆ ಎಂದರು.
