Monday, October 7, 2024
Homeರಾಜ್ಯರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

ನವದೆಹಲಿ,ಜ.25- ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ರಕ್ಷಣಾ ದಳಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 21 ಮಂದಿ ಪೊಲೀಸರು ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕಕ್ಕೆ ಇಬ್ಬರು ಹಾಗೂ ಶ್ಲಾಘನೀಯ ಸೇವಾ ಪದಕ 19 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಲಭಿಸಿದೆ. ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ ಹಾಗೂ ಡಿವೈಎಸ್ಪಿ ಸುದೀರ್ ಮಹಾದೇವ್ ಹೆಗ್ಡೆ ಭಾಜನರಾಗಿದ್ದಾರೆ.

ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಬೆಂಗಳೂರು ನಗರ ಪೂರ್ವವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣ್ ಗುಪ್ತ, ಎಎಸ್‍ಪಿ ಅನಿಲ್‍ಕುಮಾರ್ ಎಸ್.ಭೂಮಾರಡಿ, ಎಸಿಪಿ ಶಿವಗಂಗೆ ಪುಟ್ಟಗಣಪ ಧರಣೇಶ, ಡಿವೈಎಸ್ಪಿ ರಘುಕುಮಾರ್ ವೆಂಕಟೇಶಲು, ಎಸಿಪಿ ನಾರಾಯಣಸ್ವಾಮಿ ವೆಂಕಟಶ್ಯಾಮಪ್ಪ, ಎಎಸ್‍ಪಿ ಶ್ರೀನಿವಾಸರಾಜು ಬೆಟ್ಟೋಳಿ ಸಣ್ಣಯ್ಯ, ಇನ್ಸ್‍ಪೆಕ್ಟರ್‍ಗಳಾದ ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಸಣ್ಣರಂಗಪ್ಪ ವೀರೇಂದ್ರ ಪ್ರಸಾದ್, ಸಶಸ್ತ್ರ ಪಡೆಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ ದಾದಾಪೀರ್ ಹೊನ್ನೂರ್‍ಸಾಬ್,

ಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಬಿಜೆಪಿಯಿಂದ ಗ್ರಾಮ ಚಲೋ

ವೈರ್‍ಲೆಸ್ ವಿಭಾಗದ ಎಎಸ್‍ಐ ಸುರೇಶ್ ರಾಮಪ್ಪ ಪುದಕಲಟ್ಟಿ, ಎಎಸ್‍ಐ ರಾಮ, ಕೆಎಸ್‍ಆರ್‍ಪಿಯ ಎಸ್ಪಿ ಮತ್ತು ಕಮಾಂಡೆಡ್ ನಾಗರಾಜ ಅಂಜಪ್ಪ, ಹೆಡ್ ಕಾನ್ಸ್‍ಟೇಬಲ್ ಸಿ.ವಿ.ಗೋವಿಂದರಾಜು, ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಮಣಿಕಂಠ ಮಂದರಬಾಲಿ, ಎಎಸ್‍ಐ ಶಮಂತ ಯಶ್ ಜಿ., ಸಿವಿಲ್ ಹೆಡ್ ಕಾನ್ಸ್‍ಟೇಬಲ್ ಎಸ್.ಎನ್.ನರಸಿಂಹರಾಜು, ಗುಪ್ತಚರ ಇಲಾಖೆಯ ಸಹಾಯಕ ಅಧಿಕಾರಿ ಸಿ.ವೆಂಕಟೇಶ್, ವಿಶೇಷ ಸಶಸ್ತ್ರ ಪಡೆಯ ಸಬ್ ಇನ್ಸ್‍ಪೆಕ್ಟರ್ ಪುಂಡಲೀಕ ಜೆ.ವಿ.ರಾಮರಾವ್ ಅವರುಗಳು ಭಾಜನರಾಗಿದ್ದಾರೆ.

ಈ ಬಾರಿಯ ರಾಷ್ಟ್ರಪತಿಯ ಶೌರ್ಯ ಪದಕ ಯಾವ ರಾಜ್ಯದ ಅಧಿಕಾರಿಗೂ ದೊರೆತಿಲ್ಲ. ಬಿಎಸ್‍ಎಫ್‍ನ ಇಬ್ಬರಿಗೆ ಮಾತ್ರ ನೀಡಲಾಗಿದೆ. ಶೌರ್ಯ ಪದಕದಲ್ಲಿ ಬಿಹಾರದ 6, ಛತ್ತೀಸ್‍ಗಢದ 26, ದೆಹಲಿಯ 9, ಹರಿಯಾಣದ 1, ಜಾರ್ಖಂಡ್‍ನ 23, ಮಧ್ಯಪ್ರದೇಶದ 3, ಮಹಾರಾಷ್ಟ್ರದ 10, ಒಡಿಸ್ಸಾದ 15, ಪಂಜಾಬ್‍ನ 18, ತೆಲಂಗಾಣದ 6, ಉತ್ತರ ಪ್ರದೇಶದ 2, ಜಮ್ಮು-ಕಾಶ್ಮೀರದ 72, ಸಿಆರ್‍ಪಿಎಫ್‍ನ 65 ಸೇರಿ 275 ಮಂದಿಗೆ ಶೌರ್ಯ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

RELATED ARTICLES

Latest News