Saturday, May 4, 2024
Homeರಾಜಕೀಯಕಾಂಗ್ರೆಸ್ ಸರ್ಕಾರಕ್ಕೆ ಆರ್.ಅಶೋಕ್ ಬಹಿರಂಗ ಸವಾಲು

ಕಾಂಗ್ರೆಸ್ ಸರ್ಕಾರಕ್ಕೆ ಆರ್.ಅಶೋಕ್ ಬಹಿರಂಗ ಸವಾಲು

ಬೆಂಗಳೂರು, ಏ.23- ರಾಜ್ಯದಲ್ಲಿ ಭೀಕರ ಬರಗಾಲ ಇದೆ ಎಂದು ಬೊಬ್ಬೆ ಹಾಕುತ್ತಿರುವ ಕಾಂಗ್ರೆಸ್ ನಾಯಕರು ಈವರೆಗೂ ಎಷ್ಟು ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 223 ತಾಲ್ಲೂಕುಗಲ್ಲಿ ಬರಗಾಲವಿದೆ ಎಂದು ಮುಖ್ಯಮಂತ್ರಿ ಸೇರಿದಂತೆ ಇಡೀ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಎಸ್‍ಡಿಆರ್‍ಎಫ್ ಅಡಿ ನೀವು ಎಷ್ಟು ಹಣವನ್ನು ಬಿಡುಗಡೆ ಮಾಡಿದ್ದೀರಿ? ಜನತೆಯ ಮುಂದಿಡಿ ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಎಸ್‍ಡಿಆರ್‍ಎಫ್‍ನಡಿ ಜನಕ್ಕೆ ಕೊಟ್ಟು ಇದನ್ನು ರಾಜ್ಯ ಸರ್ಕಾರವೇ ಕೊಟ್ಟಿದ್ದು ಎಂದು ಜನಗಳಿಗೆ ಸುಳ್ಳು ಹೇಳುತ್ತಿದ್ದಾರೆ.

ಸರ್ಕಾರದ ಬೊಕ್ಕಸದಿಂದ ಇದುವರೆಗೂ ನೀವು ಒಂದೇ ಒಂದೂ ನಯಾಪೈಸೆ ಯನ್ನೂ ಬಿಡುಗಡೆ ಮಾಡಿಲ್ಲ. ಯಾವ ಮುಖ ಇಟ್ಟುಕೊಂಡು ಕೇಂದ್ರದ ಬಗ್ಗೆ ಮಾತನಾಡುತ್ತೀರಿ ಎಂದು ಅಶೋಕ್ ಪ್ರಶ್ನಿಸಿದರು.

ಎಸ್‍ಡಿಆರ್‍ಎಫ್‍ನಡಿ ಕೇಂದ್ರ ಸರ್ಕಾರ 2 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ ಸರ್ಕಾರದ ಶೇ.25ರಷ್ಟು ಮಾತ್ರ. ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಾದರೂ ಏನು. ಪ್ರತಿದಿನ ಕೇಂದ್ರ ಸರ್ಕಾರ ಮತ್ತು ನರೇಂದ್ರಮೋದಿಯವರನ್ನು ಟೀಕಿಸಿ ಜಾಹೀರಾತು ನೀಡುವುದೇ ಇವರ ಉದ್ಯೋಗವಾಗಿದೆ ಎಂದು ಆರೋಪಿಸಿದರು.

ಕಡೆಪಕ್ಷ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಇಲ್ಲವೇ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕರ್ನಾಟಕದ ವಿಷಯದ ಬಗ್ಗೆ ಎಂದಾದರೂ ಮಾತನಾಡಿದ್ದಾರಾ? ಇಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಬಾಯಿ ಬಾಯಿ ಬಡಿದುಕೊಳುತ್ತಿದ್ದಾರೆ. ಯಾವ ಯೋಗ್ಯತೆ ಇಟ್ಟುಕೊಂಡು ನೀವು ಕರ್ನಾಟಕದಲ್ಲಿ ಮತ ಕೇಳುತ್ತೀರಿ ಎಂದು ಅಶೋಕ್ ಪ್ರಶ್ನಿಸಿದರು.

ಸರ್ಕಾರದ ಆದೇಶ ಪಾಲನೆ ಮಾಡಬೇಕಾದ ಅಕಾರಿಗಳು ಸರ್ಕಾರದ ಕೈಗೊಂಬೆ ಆಗಿದ್ದಾರೆ. ಡಿ.ಕೆ ಶಿವಕುಮಾರ್‍ಗೆ ಹೇಳೋರಿಲ್ಲ ಕೇಳೋರಿಲ್ಲ. ವಿಧಾನಸೌಧದ ಪಾರ್ಟಿ ಸೇರ್ಪಡೆ ಕಾರ್ಯಕ್ರಮ ಮಾಡಿದರು. ಇದು ಅಪರಾಧ, ಕ್ರಮಕೈಗೊಳ್ತೀನಿ ಎಂದರು ಇದುವರೆಗೂ ಕ್ರಮಕೈಗೊಂಡಿಲ್ಲ. ಚುನಾವಣೆ ವೇಳೆ ವಿಧಾನಸೌಧದ ದುರ್ಬಳಕೆಯಾಗಿದೆ. ಮುಖ್ಯ ಕಾರ್ಯದರ್ಶಿಯವರು ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದು ಏಕೆ ಎಂದು ಆಕ್ಷೇಪಿಸಿದರು.

ಇವರಮೇಲೆ ಕ್ರಮಕೈಗೊಳ್ಳುವಂತೆ ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ. ಇಂದು ಮುಖ್ಯ ಕಾರ್ಯದರ್ಶಿಗಳು ಶಿಷ್ಟಾಚಾರ ಪಾಲನೆ ಮಾಡಿಲ್ಲ. ಡಿಕೆಶಿ ಯಾರನ್ನೂ ಹೇಳಲ್ಲ ಕೇಳಲ್ಲ, ಅವರದ್ದೇ ಒಂದು ಗೂಂಡಾ ರಾಜ್ಯ ಮಾಡಿಕೊಂಡಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಬರದ ಪರಿಹಾರ ಅನುದಾನ ನೀಡುವುದಕ್ಕೆ ಚುನಾವಣೆ ನೀತಿಸಂಹಿತೆ ಇದೆ. ನ್ಯಾಯಾಲಯ ಕೂಡ ಹೇಳಿದೆ. ನಿರ್ಮಲಾ ಸೀತಾರಾಮನ್ ಕೂಡ ಹೇಳಿದ್ದಾರೆ. ಚುನಾವಣಾ ಆಯೋಗ ಸೂಚಿಸಿದ ಕೂಡಲೇ ಬಿಡುಗಡೆ ಮಾಡುತ್ತೇವೆ ಎಂದು ಅಟಾರ್ನಿ ಜನರಲ್ ಕೂಡ ಹೇಳಿದ್ದಾರೆ. ಕೋರ್ಟ್ ಗಮನಕ್ಕೆ ತಂದಿದ್ದಾರೆ. ನಮ್ಮ ಸಾಲಿಸಿಟರಲ್ ಜನರಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದು, ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ಸೋಮವಾರಕ್ಕೆ ಕೇಸ್ ಮುಂದೂಡಿದ್ದಾರೆ. ಅದಕ್ಕೆ ಅವರ ವಕೀಲ ಕಪಿಲ್ ಸಿಬಲ್ ಒಪ್ಪಿದ್ದಾರೆ. ಇದನ್ನ ಕಾಂಗ್ರೆಸ್ ಜಯ ಆಗಿದೆ ಎಂದು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಣ ಬಿಡುಗಡೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಅಪೀಲು ಮಾಡಿರುವುದು ನಾವು. ಏನು ಜಯ ಆಯ್ತು ನಿಮಗೆ? ನೀವಿಟ್ಟಿರುವ ಲಾಯರ್ ಏನು ವಾದ ಮಾಡಿದ್ದಾರೆ? ಕೇಂದ್ರದ ಮನವಿಗೆ ಸರ್ವ ಸಮ್ಮತಿ ಇದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

RELATED ARTICLES

Latest News