Friday, November 22, 2024
Homeರಾಜ್ಯರಾಜ್ಯದ ಹಲವು ಭಾಗಗಳಲ್ಲಿ ಇನ್ನೆರೆಡು ದಿನ ಮಳೆ

ರಾಜ್ಯದ ಹಲವು ಭಾಗಗಳಲ್ಲಿ ಇನ್ನೆರೆಡು ದಿನ ಮಳೆ

ಬೆಂಗಳೂರು,ಏ.21- ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚೇತರಿಸಿಕೊಂಡಿದ್ದು, ಹಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಚದುರಿದಂತೆ ಮಳೆಯಾಗುತ್ತಿದ್ದು, ಇನ್ನೆರೆಡು ದಿನಗಳ ಕಾಲ ಮುಂದುವರೆಯಲಿದೆ.

ವಾತಾವರಣದಲ್ಲಿ ಟ್ರಪ್ ಉಂಟಾಗಿರುವ ಪರಿಣಾಮ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಅಲ್ಲಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮತ್ತೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು. ಆದರೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ನಿನ್ನೆ ಕರಾವಳಿ ಭಾಗದಲ್ಲಿ ಮಳೆಯಾಗಿದ್ದು, ಕಾರವಾರ-8, ಗೋಕರ್ಣ-10.3, ಮುಂಡಗೋಡ-6.4, ಅಳಿಯಾಲ-3.2, ಹೊನ್ನಾವರ-2.8, ಸಿದ್ದಾಪುರ-1.8 ಮಿಲಿ ಮೀಟರ್‍ನಷ್ಟು ಸಾಧಾರಣ ಮಳೆಯಾದ ವರದಿಯಾಗಿದೆ.

ಗದಗ್-65.5, ಕಲಬುರಗಿ-86.4, ಹುಕ್ಕನೂರು-49, ಶಿಗ್ಗಾವಿ-45.2, ಸವಣೂರು-37.5, ಕಲಬುರಗಿ-31.7, ಶಿರಾಹಟ್ಟಿ-26.6, ಅಬ್ಜಲ್‍ಪುರ-19, ಅಳಂದ-13.5, ಕಲಗಟಗಿ-16.6, ಹುಬ್ಬಳ್ಳಿ-10.5, ಯಲಬುರ್ಗ-10, ಲಕ್ಷ್ಮೀಶ್ವರ-5, ಮುದಗಲ್-4.8, ಬೀಳಗಿ-3.5, ಹಾವೇರಿ-2.2, ಬಾದಾಮಿ-1.6, ಮಾಗಡಿ-1.8, ಆನವಟ್ಟಿ-1.2 ಮಿಲಿ ಮೀಟರ್‍ನಷ್ಟು ಸಾಧಾರಣ ಮಳೆಯಾಗಿದೆ. ಉಳಿದಂತೆ ಕೆಲವು ಭಾಗಗಳಲ್ಲಿ ಹಗುರ ಮಳೆಯಾದ ವರದಿಯಾಗಿದೆ.

RELATED ARTICLES

Latest News