Thursday, December 12, 2024
Homeಬೆಂಗಳೂರುಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಬೆಂಗಳೂರಿಗರ ಮೇಲೆ 'ದಂಡಾಸ್ತ್ರ' ಪ್ರಯೋಗ

ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಬೆಂಗಳೂರಿಗರ ಮೇಲೆ ‘ದಂಡಾಸ್ತ್ರ’ ಪ್ರಯೋಗ

ಬೆಂಗಳೂರು,ಮಾ.14- ನಗರದಲ್ಲಿ ನೀರಿನ ಅಭಾವವನ್ನು ಮನಗಂಡಿರುವ ಜಲ ಮಂಡಳಿ ಇದೀಗ ಮಳೆ ನೀರು ಕೋಯ್ಲು ಅಳವಡಿಕೆಗೆ ಒತ್ತು ನೀಡಿದೆ. ಮಾತ್ರವಲ್ಲ, ಮಳೆ ನೀರು ಕೋಯ್ಲು ಅಳವಡಿಸಿಕೊಳ್ಳದ ಮನೆ ಮಾಲೀಕರ ಮೇಲೆ ದಂಡಾಸ್ತ್ರ ಬಳಸುತ್ತಿದೆ. ಕಳೆದ 6 ತಿಂಗಳಿನಲ್ಲಿ ಮಳೆ ನೀರು ಕೋಯ್ಲು ಅಳವಡಿಸಿಕೊಳ್ಳದ ಮನೆ ಮಾಲೀಕರಿಂದ ಹನ್ನೊಂದು ಕೋಟಿ ರೂ.ಗಳಿಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.

ಸಿಲಿಕಾನ್ ಸಿಟಿ ಜನರ ಕಾವೇರಿ ನೀರು ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಜಲ ಸಂರಕ್ಷಣೆ ಉದ್ದೇಶದಿಂದ ಮಳೆ ನೀರು ಕೋಯ್ಲಿಗೆ ಜಲ ಮಂಡಳಿ ಒತ್ತು ನೀಡಿದೆ. ಆದರೂ ಜನ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಜನರಲ್ಲಿ ಮಳೆ ನೀರು ಕೋಯ್ಲು ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಜಲಮಂಡಳಿಯ ಕಾಯಿದೆ-2009 ಸೆಕ್ಷನ್ 72ಎ ಪ್ರಕಾರ ದಂಡ ಹಾಕಲಾಗುತ್ತಿದೆ.’

2,400 ಚದರ ಅಡಿ ಮತ್ತು ಮೇಲ್ಪಟ್ಟ ವಿಸ್ತಿರ್ಣದ ಎಲ್ಲಾ ಕಟ್ಟಡಗಳು ಹಾಗೂ 1,200 ಚದರಡಿ ವಿಸ್ತಿರ್ಣಕ್ಕೂ ಮೇಲ್ಪಟ್ಟ ನಿವೇಶನಗಳಲ್ಲಿ ಹೊಸದಾಗಿ ನಿರ್ಮಿಸುವ ಕಟ್ಟಡ ಅಥವಾ ಮನೆಗಳಿಗೆ ಮಳೆ ನೀರು ಕೋಯ್ಲು ಅಳವಡಿಕೆ ಕಡ್ಡಾಯವಾಗಿದೆ.ಆದರೆ ನಗರದಲ್ಲಿರುವ ಬಹುತೇಕ ಮನೆ ಮಾಲೀಕರು ಮಳೆ ನೀರು ಕೋಯ್ಲು ಅಳವಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ದಂಡಾಸ್ತ್ರ ಬಳಸಿ ಅರಿವು ಮೂಡಿಸಲು ಮುಂದಾಗಿದೆ ಜಲ ಮಂಡಳಿ.

ನಗರದಲ್ಲಿ ಮಳೆ ನೀರು ಕೊಯ್ಲುಪದ್ಧತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡರೆ ಸುಮಾರು 15 ಟಿಎಂಸಿಯಷ್ಟು ನೀರು ನಗರದಲ್ಲಿಯೇ ಸಿಗಲಿದೆ ಎನ್ನುವುದು ಜಲ ಮಂಡಳಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಮೊದಲ ಮೂರು ತಿಂಗಳ ನೀರಿನ ಬಿಲ್ ಎಷ್ಟು ಇರುತ್ತದೆಯೋ ಅದರ ಶೇ. 50ರಷ್ಟು ದಂಡ ವಿಧಿಸಿರುವ ಜಲಮಂಡಳಿ ನಂತರದ ಮೂರು ತಿಂಗಳಲ್ಲಿ ಶೇ. 100ರಷ್ಟು ದಂಡ ಹಾಕುತ್ತಿದೆ.

ತಿಂಗಳು-ದಂಡ (ರೂಗಳಲ್ಲಿ )
ಸೆಪ್ಟೆಂಬರ್ -1,98,43,330
ಅಕ್ಟೋಬರ್ -1,94,47,592
ನವೆಂಬರ್-1,91,05,159
ಡಿಸೆಂಬರ್ -1,96,09,330
ಜನವರಿ -1,95,06,740
ಫೆಬ್ರವರಿ-2,00,79,662
ದಂಡ -11,75,91,813

RELATED ARTICLES

Latest News