Wednesday, April 17, 2024
Homeರಾಜ್ಯಲೋಕಸಭಾ ಚುನಾವಣೆ : ಬೆಂಗಳೂರಿನಿಂದ ರಾಜೀವ್ ಚಂದ್ರಶೇಖರ್ ಸ್ಪರ್ಧೆ..?

ಲೋಕಸಭಾ ಚುನಾವಣೆ : ಬೆಂಗಳೂರಿನಿಂದ ರಾಜೀವ್ ಚಂದ್ರಶೇಖರ್ ಸ್ಪರ್ಧೆ..?

ನವದೆಹಲಿ,ಫೆ.15- ಕೇಂದ್ರ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬೆಂಗಳೂರು ಉತ್ತರ ಇಲ್ಲವೇ ದಕ್ಷಿಣ ಲೋಕಸಭಾ ಕ್ಷೇತ್ರದ ಒಂದು ಕ್ಷೇತ್ರದಲ್ಲಿ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜೀವ್ ಚಂದ್ರಶೇಖರ್ ಅವರ ರಾಜ್ಯಸಭೆ ಅವಧಿ ಬರುವ ಏಪ್ರಿಲ್‍ನಲ್ಲಿ ಪೂರ್ಣಗೊಳ್ಳುತ್ತಿದ್ದರೂ ಅವರನ್ನು ಮತ್ತೊಂದು ಅವಧಿಗೆ ರಾಜ್ಯಸಭೆ ಅಭ್ಯರ್ಥಿಯನ್ನಾಗಿಸದಿರಲು ತೀರ್ಮಾನಿಸಿರುವುದು ಇದೇ ಕಾರಣಕ್ಕೆ ಎಂದು ವರದಿಯಾಗಿದೆ. ಬರುವ ಏಪ್ರಿಲ್‍ನಲ್ಲಿ ತಮ್ಮ ರಾಜ್ಯಸಭೆಯ ಅವ ಪೂರ್ಣಗೊಳ್ಳಲಿರುವ ಏಳು ಕೇಂದ್ರ ಸಚಿವರನ್ನು ಮರು ನಾಮಕರಣ ಮಾಡದಿರಲು ನಿರ್ಧರಿಸಿರಿವ ಭಾರತೀಯ ಜನತಾ ಪಕ್ಷದ ತೀರ್ಮಾನದ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗಿದೆ.

ರಾಜ್ಯಸಭೆಯ ಅವಧಿ ಏಪ್ರಿಲ್‍ನಲ್ಲಿ ಕೊನೆಗೊಳ್ಳುವ ಏಳು ಕೇಂದ್ರ ಸಚಿವರನ್ನು ಆಡಳಿತಾರೂಢ ಬಿಜೆಪಿಯಿಂದ ಮರು ನಾಮನಿರ್ದೇಶನ ಮಾಡದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಲು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದ್ದಾರೆ ಎಂಬ ಊಹಾಪೋಹಗಳು ಹುಟ್ಟಿಕೊಂಡಿವೆ.

ಅಂತರ್ಧರ್ಮೀಯ ಸಾಮರಸ್ಯಕ್ಕೆ ಸಾಕ್ಷಿಯಾದ ಸ್ವಾಮಿ ನಾರಾಯಣ ದೇಗುಲ

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (ಗುಜರಾತ್), ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (ಮಧ್ಯಪ್ರದೇಶ), ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ (ಕರ್ನಾಟಕ) ಸೇರಿದ್ದಾರೆ. ಪರಿಸರ ಸಚಿವ ಭೂಪೇಂದರ್ ಯಾದವ್ (ರಾಜಸ್ಥಾನ), ಮತ್ತು ಮೀನುಗಾರಿಕಾ ಸಚಿವ ಪರ್ಷೋತ್ತಮ್ ರೂಪಾಲಾ (ಗುಜರಾತ್), ಹಾಗೆಯೇ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆ ಮತ್ತು ಕಿರಿಯ ವಿದೇಶಾಂಗ ಸಚಿವರೂ ಮಹಾರಾಷ್ಟ್ರವನ್ನು ಪ್ರತಿನಿಸುತ್ತಿದ್ದಾರೆ.ಎಲ್ಲಾ ಏಳು ಮಂದಿಯನ್ನು ಈಗ ವಿವಿಧ ರಾಜ್ಯಗಳ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿಸಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಧಾನ್ ಅವರನ್ನು ಅವರ ತವರು ರಾಜ್ಯವಾದ ಒಡಿಶಾದ ಸಂಬಲ್‍ಪುರ ಅಥವಾ ಧೆಕ್ನಾಲ್‍ನಿಂದ ಕಣಕ್ಕಿಳಿಸಬಹುದು ಎಂದು ಮೂಲಗಳು ಸೂಚಿಸುತ್ತವೆ, ಆದರೆ ಯಾದವ್ ರಾಜಸ್ಥಾನದ ಅಲ್ವಾರ್ ಅಥವಾ ಮಹೇಂದ್ರಗಢದಿಂದ ಸ್ರ್ಪಸಬಹುದು ಮತ್ತು ಚಂದ್ರಶೇಖರ್ ಬೆಂಗಳೂರಿನ ಉತ್ತರ, ದಕ್ಷಿಣ, ಕೇಂದ್ರ ಇಲ್ಲಿವೇ ಗ್ರಾಮಾಂತರ ಕ್ಷೇತ್ರದ ನಾಲ್ಕು ಸ್ಥಾನಗಳಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧಿಸುಬಹುದು ಎಂದು ತಿಳಿದುಬಂದಿದೆ.

ಅದೇ ರೀತಿ, ಮಾಂಡವಿಯಾ ಗುಜರಾತ್‍ನ ಭಾವನಗರ ಅಥವಾ ಸೂರತ್‍ನಿಂದ ಸ್ರ್ಪಸಬಹದು ಆದರೆ ರೂಪಾಲಾ ರಾಜ್‍ಕೋಟ್ ಅನ್ನು ಪಡೆಯಬಹುದು. ಮುರಳೀಧರನ್ ಅವರು ತವರು ರಾಜ್ಯವಾದ ಕೇರಳದಿಂದ ಕಣಕ್ಕಿಳಿಯಬಹುದು; ಬಿಜೆಪಿಗೆ ಅಲ್ಲಿ ಯಾವುದೇ ಅಸ್ತಿತ್ವವಿಲ್ಲ ಮತ್ತು ಅದರ ಅದೃಷ್ಟವನ್ನು ಪುನರುಜ್ಜೀವನಗೊಳಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಹಿ ಹಾಕಲು 3 ಲಕ್ಷ ಲಂಚ ಕೇಳಿದ್ದ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆ

ಬಿಜೆಪಿ ಕೆಲವು ದೊಡ್ಡ ಹೆಸರುಗಳನ್ನು ಮಾತ್ರ ಉಳಿಸಿಕೊಂಡಿದೆ, ವಾಸ್ತವವಾಗಿ, ರಾಜ್ಯಸಭೆಯಿಂದ ಕೇವಲ ಇಬ್ಬರು ಕೇಂದ್ರ ಸಚಿವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (ಒಡಿಶಾ) ಮತ್ತು ಕಿರಿಯ ಮೀನುಗಾರಿಕಾ ಸಚಿವ ಎಲ್ ಮುರುಗನ್ (ಮಧ್ಯಪ್ರದೇಶ). ಎರಡು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ನಿರ್ಗಮಿತ ಸಂಸದರು ಪುನರಾವರ್ತನೆಯಾಗಿಲ್ಲ.ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಆದರೆ, ಅವರನ್ನು 2022ರಲ್ಲಿ ಕಾಂಗ್ರೆಸ್ ಗೆದ್ದ ಹಿಮಾಚಲ ಪ್ರದೇಶದಿಂದ ಗುಜರಾತ್‍ಗೆ ಸ್ಥಳಾಂತರಿಸಲಾಗಿದೆ. ಈ ವಾರ ಕಾಂಗ್ರೆಸ್ ತೊರೆದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಸೇರಿದಂತೆ ಹೊಸ ಸೇರ್ಪಡೆಗಳಿಗೆ ಆದ್ಯತೆ ನೀಡಲಾಗಿದೆ.

RELATED ARTICLES

Latest News