ಚೆನ್ನೈ, ಫೆ 28 : ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಹೃದಯಾಘಾತದಿಂದ ಇಲ್ಲಿ ಸಾವನ್ನಪ್ಪಿದ್ದಾನೆ.
ಶ್ರೀಲಂಕಾದ ಪ್ರಜೆ ಸಂತನ್ ಅಲಿಯಾಸ್ ಟಿ ಸುತೇಂದ್ರರಾಜ (55) ಮೃತ ವ್ಯಕ್ತಿಯಾಗಿದ್ದು ,ಕಳೆದ 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ 2022 ರಲ್ಲಿ ಸುಪ್ರೀಂ ಕೋರ್ಟ್‍ನಿಂದ ಕ್ಷಮಾ ಅರ್ಜಿ ಮೂಲಕ ಬಿಡುಗಡೆ ಮಾಡಿದ ಏಳು ಅಪರಾಧಿಗಳಲ್ಲಿ ಈತನು ಒಬ್ಬ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನಾರೋಗ್ಯ(ಲಿವರ್ ವೈಫಲ್ಯ)ದಿಂದ ಬಳಲುತ್ತಿದ್ದ ಆತನನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತು.ಆದರೆ ಚಿಕಿತ್ಸೆ ಫಲಿಸದೆ ಬೆಳಿಗ್ಗೆ 7.50 ಕ್ಕೆ ನಿಧನರಾದರು ಎಂದು ಡೀನ್ ಇ ಥೆರನಿರಾಜನ್ ಅವರು ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆ: ಎನ್‌ಡಿಎ ಮೈತ್ರಿಗೆ ಸೋಲು, ಕಾಂಗ್ರೆಸ್- ಬಿಜೆಪಿಯ ಅಭ್ಯರ್ಥಿಗಳಿಗೆ ಗೆಲುವು
ಇಂದು ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಸಂತಾನ್‍ಗೆ ಹೃದಯ ಸ್ತಂಭನ ಉಂಟಾಗಿತ್ತು ವೈದ್ಯರು ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ಕಾರ್ಯವಿಧಾನವನ್ನು ಅನುಸರಿಸಿ ಪುನರುಜ್ಜೀವನಗೊಳಿಸಲಾಯಿತು ನಂತರ ವೆಂಟಿಲೇಟರ್‍ನಲ್ಲಿದ್ದರು ಆದರೆ ಬೆಳಗ್ಗೆ 7.50ಕ್ಕೆ ಮೃತಪಟ್ಟಿದ್ದಾರೆ ಎಂದು ಎಂದು ಥೆರನಿರಾಜನ್ ಸುದ್ದಿಗಾರರಿಗೆ ತಿಳಿಸಿದರು.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ಶ್ರೀಲಂಕಾಕ್ಕೆ ಕಳುಹಿಸಲು ಕಾನೂನು ವ್ಯವಸ್ಥೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಬಿಡುಗಡೆಯಾದ ನಂತರ ತಿರುಚಿರಾಪಳ್ಳಿಯ ವಿಶೇಷ ಶಿಬಿರದಲ್ಲಿದ್ದ ಕಳೆದ ಜನವರಿ 27 ರಂದು ಅನ್ಯಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.