Sunday, April 28, 2024
Homeಮನರಂಜನೆ'ಅಯೋಧ್ಯೆ ರಾಮನ ದರ್ಶನ ಪಡೆದ ನಾನೇ ಧನ್ಯ' ಎಂದ ರಕ್ಷಿತ್‍ಶೆಟ್ಟಿ

‘ಅಯೋಧ್ಯೆ ರಾಮನ ದರ್ಶನ ಪಡೆದ ನಾನೇ ಧನ್ಯ’ ಎಂದ ರಕ್ಷಿತ್‍ಶೆಟ್ಟಿ

ಬೆಂಗಳೂರು, ಮಾ.8- ನನ್ನ ಬಹುದಿನಗಳ ಆಸೆಯಂತೆ ಇಂದು ನಾನು ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದಿದ್ದರಿಂದ ನನ್ನಲ್ಲಿ ಧನ್ಯತಾಭಾವ ಮೂಡಿದೆ ಎಂದು ಸಿಂಪಲ್‍ಸ್ಟಾರ್ ರಕ್ಷಿತ್ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ. ರಿಚರ್ಡ್ ಆಂಟನಿ ಸಿನಿಮಾದ ಚಿತ್ರೀಕರಣದಲ್ಲಿ ತಲ್ಲೀನರಾಗಿರುವ ರಕ್ಷಿತ್‍ಶೆಟ್ಟಿ ಇತ್ತೀಚೆಗೆ ಅಯೋಧ್ಯೆಗೆ ತೆರಳಿ ಬಾಲರಾಮನ ದರ್ಶನ ಪಡೆದಿರುವ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್‍ಲೋಡ್ ಮಾಡುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಅಂತಿಮವಾಗಿ ಇಂದು ನನಗೆ ಬಹಳ ಸಮೀಪದಿಂದ ರಾಮನ ಮೂರ್ತಿಯನ್ನು ನೋಡುವ ಸೌಭಾಗ್ಯ ಒಲಿದುಬಂದಿತ್ತು. ಅಷ್ಟು ಹತ್ತಿರದಿಂದ ಮೂರ್ತಿಯನ್ನು ನೋಡಿದ್ದರಿಂದ ನನ್ನಲ್ಲಿ ಧನ್ಯತಾಭಾವ ಮೂಡಿದೆ. ರಾಮನ ಮೂರ್ತಿ ಮುಂದೆ ನಾನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕುಳಿತುಕೊಂಡಿದ್ದೆ. ಈ ರೀತಿ ನಾನು ದೇಗುಲದಲ್ಲಿ ಇಷ್ಟು ಸಮಯ ಕಳೆದಿದ್ದು ಇದೇ ಮೊದಲು, ನಿಜಕ್ಕೂ ಇದೊಂದು ವಿಭಿನ್ನ ಅನುಭವವಾಗಿದೆ ಎಂದು ರಕ್ಷಿತ್‍ಶೆಟ್ಟಿ ಹೇಳಿದ್ದಾರೆ.

ನಾನು ಸಾಮಾನ್ಯವಾಗಿ ಎಲ್ಲ ಮೂರ್ತಿಗಳ ಕೆತ್ತನೆಯನ್ನು ಶ್ಲಾಘಿಸುತ್ತೇನೆ. ಆದರೆ ಅಯೋಧ್ಯೆ ರಾಮನ ಮೂರ್ತಿಯ ಕುಸುರಿ ಅದ್ಭುತ. ಇದು ಸಾಮಾನ್ಯವಲ್ಲ. ರಾಮನೆಂದರೆ ಸಾಮಾನ್ಯವಾಗಿ ಅದೇ ಭಾವನೆ ಮೂಡುತ್ತದೆ. ಆತ ಪೂಜಿಸಿಕೊಳ್ಳುವ ದೇವರಲ್ಲ, ಬದಲಿಗೆ ನನ್ನ ಶ್ರೀರಾಮ ಜೀವ ತಳೆದ ಕಲೆ. ಶಿಲ್ಪಿ ಅರ್ಜುನ್ ಯೋಗಿರಾಜ್ ಅವರು ತಲೆತಲೆಮಾರಿನವರೆಗೆ ಜೀವಂತ ದಂತಕತೆಯಾಗಿ ಉಳಿದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ನಾವು ಅಯೋಧ್ಯೆಯ ಶ್ರೀರಾಮನ ದೇಗುಲಕ್ಕೆ ಭೇಟಿ ನೀಡಿದಾಗ ಅಲ್ಲಿನ ಟ್ರಸ್ಟಿಗಳು ನಮ್ಮನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು. ಜೈಶ್ರೀರಾಮ್, ಜೈ ಆಂಜನೇಯ ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರಕ್ಷಿತ್‍ಶೆಟ್ಟಿ ಬರೆದುಕೊಂಡಿರುವುದಲ್ಲದೆ, ಶ್ರೀರಾಮನ ಮೂರ್ತಿ ಎದುರೇ ತಾನು ಹೊಸ ಸಿನಿಮಾವೊಂದನ್ನು ನಿರ್ಮಿಸುವುದಾಗಿ ಸಂಕಲ್ಪ ಮಾಡಿದ್ದಾರೆ.

ಮಾರ್ಚ್ 28 ರಂದು ರಕ್ಷಿತ್ ಶೆಟ್ಟಿ ಅಭಿನಯದ ಉಳಿದವರು ಕಂಡಂತೆ ಸಿನಿಮಾಕ್ಕೆ ದಶಕದ ಸಂಭ್ರಮ ಸಿಗಲಿದ್ದು , ಅಂದೇ ತಮ್ಮ ರಿಚರ್ಡ್ ಅಂಟನಿ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದು ಅದಕ್ಕೂ ಮುನ್ನ ಪ್ರಯಾಗ್‍ರಾಜ್‍ನಲ್ಲಿರುವ ಅಯೋಧ್ಯೆಗೆ ಕೃಷ್ಣ ಪಕ್ಷ ದಶಮಿಯಂದೇ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಶ್ರೀರಾಮನ ದರ್ಶನ ಪಡೆದಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

RELATED ARTICLES

Latest News