Thursday, February 29, 2024
Homeರಾಷ್ಟ್ರೀಯಶ್ರೀರಾಮ ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ಪ್ರತೀಕ : ರಾಷ್ಟ್ರಪತಿ

ಶ್ರೀರಾಮ ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ಪ್ರತೀಕ : ರಾಷ್ಟ್ರಪತಿ

ನವದೆಹಲಿ, ಜ.22- ಅಯೋಧ್ಯೆಯ ರಾಮಮಂದಿರದಲ್ಲಿಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗಿಯಾಗಲು ನೀವು ಕಠಿಣ ಅನುಷ್ಠಾನವನ್ನು ಕೈಗೊಂಡಿದ್ದೀರಿ.

ನೀವು ಕೈಗೊಂಡ 11-ದಿನಗಳ ಅನುಷ್ಠಾನ ಕೇವಲ ಪವಿತ್ರ ಧಾರ್ಮಿಕ ಆಚರಣೆಗಳ ಅನುಸರಣೆ ಮಾತ್ರವಲ್ಲ, ಇದು ತ್ಯಾಗ ಮನೋಭಾವದಿಂದ ಪ್ರೇರಿತವಾದ ಅತ್ಯುನ್ನತ ಆಧ್ಯಾತ್ಮಿಕ ಕಾರ್ಯವಾಗಿದೆ ಎಂದು ಶ್ಲಾಘಿಸಿದ್ದಾರೆ.
ಇಂತಹ ಶುಭ ಸಂದರ್ಭದಲ್ಲಿ, ನೀವು ಅಯೋಧ್ಯೆಗೆ ಭೇಟಿ ನೀಡುತ್ತಿರುವುದಕ್ಕೆ ನಾನು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಜೈಶ್ರೀರಾಮ್ ಘೋಷ ಜೋರಾಗಿ ಮೊಳಗಿಸಿ : ವೆಂಕಟೇಶ್‍ಪ್ರಸಾದ್

ಶ್ರೀರಾಮಮಂದಿರ ಉದ್ಘಾಟನೆಯಿಂದ ರಾಷ್ಟ್ರವ್ಯಾಪಿ ಹಬ್ಬದ ವಾತಾವರಣ ಮನೆ ಮಾಡಿದೆ. ನಮ್ಮ ರಾಷ್ಟ್ರ ಹೊಸತನದತ್ತ ಹೆಜ್ಜೆ ಇಡುತ್ತಿದ್ದು, ನಾವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಅದೃಷ್ಟ. ಪ್ರಭು ಶ್ರೀರಾಮನ ಧೈರ್ಯ, ಸಹಾನುಭೂತಿ ಮತ್ತು ಕರ್ತವ್ಯದ ಮೇಲಿನ ಅಚಲ ಭಕ್ತಿಯಂತಹ ಮೌಲ್ಯಗಳು ಭವ್ಯವಾದ ಮಂದಿರದ ಮೂಲಕ ಜನರಿಗೆ ತಲಪುತ್ತದೆ ಎಂದಿದ್ದಾರೆ.

ಶ್ರೀರಾಮನು ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರತೀಕ. ಕೆಟ್ಟದ್ದರ ವಿರುದ್ಧ ಹೋರಾಡುವ, ಒಳ್ಳೆಯ ಆದರ್ಶವನ್ನು ಪ್ರತಿನಿಸುತ್ತಾನೆ. ನಮ್ಮ ರಾಷ್ಟ್ರೀಯ ಇತಿಹಾಸದ ಅನೇಕ ಅಧ್ಯಾಯಗಳು ಶ್ರೀರಾಮನ ಜೀವನ ಮತ್ತು ತತ್ವಗಳಿಂದ ಪ್ರಭಾವಿತವಾಗಿವೆ. ರಾಮ್ ಕಥಾದ ಆದರ್ಶಗಳು ರಾಷ್ಟ್ರ ನಿರ್ಮಾತೃಗಳಿಗೆ ಸೂರ್ತಿ ನೀಡಿವೆ.

ನನಸಾಯ್ತು ಶತಕೋಟಿ ಭಾರತೀಯರ 500 ವರ್ಷಗಳ ಕನಸು

ಗಾಂೀಜಿಯವರು ತಮ್ಮ ಕೊನೆ ಉಸಿರಿನವರೆಗೂ ರಾಮನಾಮ ಜಪಿಸಿದರು. ನನ್ನ ಕಷ್ಟದ ಸಮಯದಲ್ಲಿ ರಾಮನ ಹೆಸರು ನನ್ನ ರಕ್ಷಕವಾಗಿದೆ ಮತ್ತು ಈಗಲೂ ಆ ಹೆಸರು ನನ್ನನ್ನು ರಕ್ಷಿಸುತ್ತಿದೆ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

RELATED ARTICLES

Latest News