Friday, December 1, 2023
Homeರಾಜ್ಯಕಂದಾಯ ಇಲಾಖೆಯನ್ನು ಜನ ಸ್ನೇಹಿ ಮಾಡಲು ಹಲವು ಕ್ರಮ : ಸಚಿವ ಕೃಷ್ಣ ಬೈರೇಗೌಡ

ಕಂದಾಯ ಇಲಾಖೆಯನ್ನು ಜನ ಸ್ನೇಹಿ ಮಾಡಲು ಹಲವು ಕ್ರಮ : ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು, ನ. 20-ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಮತ್ತು ಭ್ರಷ್ಟ ಅಧಿಕಾರಿಗಳಿಗೂ ಕಾನೂನಿನ ರುಚಿ ತೋರಿಸಲಾಗಿದೆ ಎಂದು ಕಂದಾಯ ಸಚಿವಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜನರ ದೈನಂದಿನ ಬದುಕಿನ ಜೊತೆಗೆ ಒಂದಲ್ಲ ಒಂದು ರೀತಿಯಲ್ಲಿ ಬೆಸೆದುಕೊಂಡಿರುವ ಕಂದಾಯ ಇಲಾಖೆಯಲ್ಲಿ ಮನೆ ಮಾಡಿರುವ ನೂರಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಮತ್ತು ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವ ಉದ್ದೇಶದಿಂದಾಗಿಯೇ ಈ ಮಹತ್ವದ ಇಲಾಖೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ವಸಿದ್ದರು ಎಂದಿದ್ದಾರೆ.

ಕಳೆದ ಆರು ತಿಂಗಳಿನಿಂದ ಇಲಾಖೆಯ ಕೆಲಸದ ಕಾರ್ಯವೈಖರಿಯನ್ನು ಬದಲಿಸಲು ಸಾಕಷ್ಟು ಶ್ರಮಿಸಲಾಗಿದೆ. ಜನರ ನೂರಾರು ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಬಗೆಹರಿಸಲಾಗಿದೆ. ಜನಸ್ನೇಯಾಗಿ ಕಾರ್ಯನಿರ್ವಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಲಾಗಿದೆ.

16 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆ: ಕಳೆದ ಆರು ತಿಂಗಳಲ್ಲಿ ಬೀದರ್, ದಕ್ಷಿಣ ಕನ್ನಡ, ಶಿವಮೊಗ್ಗ, ತುಮಕೂರು, ಧಾರವಾಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ, ಯಾದಗಿರಿ, ಹಾವೇರಿ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ಗದಗ, ರಾಮನಗರ, ಹಾಸನ ಸೇರಿದಂತೆ 16 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ.

ಅಲ್ಲದೆ, ಬೆಳಗಾವಿ, ಮೈಸೂರು, ಕಲಬುರಗಿ ಹಾಗೂ ಬೆಂಗಳೂರು ವಿಭಾಗಾವಾರು ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಲಾಗಿದೆ. ಅಕಾರಿಗಳಿಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಇಲಾಖೆಯ ಕೆಲಸಗಳು ಜನರಿಗೆ ಮತ್ತಷ್ಟು ಹತ್ತಿರವಾಗಲು ಅಗತ್ಯವಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗಿದೆ. ಪರಿಣಾಮ ಜನರ ದಶಕಗಳ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ ಎಂದು ಹೇಳಿದ್ದಾರೆ.

ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಕ್ರಮ, ಕಂದಾಯ ಗ್ರಾಮಗಳ ಶೀಘ್ರ ಘೋಷಣೆ, ರೈತರಿಗೆ ಬರ ಪರಿಹಾರ ಮತ್ತು ಅಗತ್ಯ ಸೇವೆಗಳನ್ನು ನೀಡುವ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಶೇಷ ಸೂಚನೆಗಳನ್ನು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 5 ವರ್ಷಕ್ಕೂ ಹಳೆಯ ಸಾವಿರಾರು ತಕರಾರು ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಜನರಿಗೆ ನೆಮ್ಮದಿ ನೀಡಲಾಗಿದೆ ಎಂದಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಉಪ ಭಾಗಾಧಿಕಾರಿ (ಎಸಿ ಕೋರ್ಟ್) ನ್ಯಾಯಾಲಯದಲ್ಲೇ ರಾಜ್ಯಾದ್ಯಂತ ಸುಮಾರು 62,000 ತಕರಾರು ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದಿದ್ದವು. ಆದರೆ, ನಾನು ಇಲಾಖೆಯ ಜವಾಬ್ದಾರಿ ವಸುತ್ತಿದ್ದಂತೆ ಈ ಎಲ್ಲಾ ಅರ್ಜಿಗಳನ್ನು ಶೀಘ್ರ ವಿಲೇವಾರಿಗೆ ಸೂಚಿಸಿದ್ದರ ಪರಿಣಾಮ ಇಂದು ಸುಮಾರು 30,000 ಅರ್ಜಿಗಳನ್ನು ಕೇವಲ ಆರು ತಿಂಗಳಲ್ಲಿ ಲೇವಾರಿ ಮಾಡಲಾಗಿದೆ.

ಜನವರಿ ಬಳಿಕ ರಾಜಕೀಯ ಧ್ರುವೀಕರಣ: ಲಕ್ಷ್ಮಣ್ ಸವದಿ

ಇನ್ನೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ರಾಜ್ಯಾದ್ಯಂತ ಬಾಕಿ ಇದ್ದ ಸುಮಾರು ಶೇ.60 ರಷ್ಟು ತಕರಾರು ಅರ್ಜಿಗಳನ್ನು ಲೇವಾರಿ ಮಾಡಲಾಗಿದೆ. ಈ ಮೂಲಕ ರೈತರ ದಶಕಗಳ ಸಮಸ್ಯೆಗೆ ಪರಿಹಾರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಮಾಸಿಕ ಸಭೆ: ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳೇನು? ಎಂಬ ವಿಚಾರದ ಕುರಿತು ತಿಳಿದುಕೊಳ್ಳುವ ಸಲುವಾಗಿಯೇ ಕಳೆದ ಆರು ತಿಂಗಳಿಂದ ಪ್ರತೀ ತಿಂಗಳು ಜಿಲ್ಲಾಧಿಕಾರಿಗಳ ಸಭೆ ಕರೆದು ಪರಿಶೀಲಿಸಲಾಗಿದೆ. ಇಲಾಖೆಯಲ್ಲಿ ಅಕ್ರಮ ಎಸಗಿ, ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಲುಕಿಬಿದ್ದೂ ಸಹ ಕಳೆದ ಐದು ವರ್ಷಗಳಿಂದ ಶಿಕ್ಷೆಗೆ ಒಳಗಾಗದಿದ್ದ, ಸುಮಾರು 350ಕ್ಕೂ ಅಕ ಭ್ರಷ್ಟ ಅಧಿಕಾರಿಗಳ ಫೈಲ್‍ಗಳನ್ನು ಕಳೆದ ಆರು ತಿಂಗಳಲ್ಲಿ ಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಪಟ್ಟಿಯಲ್ಲಿ ಹಲವು ತಹಶೀಲ್ದಾರರು, ಉಪ ಭಾಗಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಇದ್ದು, ಹಲವರಿಗೆ ಕಡ್ಡಾಯ ನಿವೃತ್ತಿ, ಪಿಂಚಣಿಯಲ್ಲಿ ಕಡಿತ ಸೇರಿದಂತೆ ಹಲವು ಶಿಕ್ಷೆಗಳಿಗೆ ಗುರಿಪಡಿಸಲಾಗಿದೆ. ಅಲ್ಲದೆ, ಇನ್ನುಳಿದ ಪ್ರಕರಣಗಳನ್ನೂ ಸಹ ಶೀಘ್ರದಲ್ಲಿ ವಿಲೇವಾರಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಜನವರಿ ಬಳಿಕ ರಾಜಕೀಯ ಧ್ರುವೀಕರಣ: ಲಕ್ಷ್ಮಣ್ ಸವದಿ

ಜನರ ಸಮಸ್ಯಗಳಿಗೆ ಸ್ಥಳದಲ್ಲೇ ಸ್ಪಂದನೆ: ಕಳೆದ ಆರು ತಿಂಗಳ ಅವಯಲ್ಲಿ 16 ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಾಗಿದೆ. ಈ ಎಲ್ಲಾ ಅವಧಿಯಲ್ಲೂ ಸ್ಥಳೀಯ ತಾಲೂಕು ಕಚೇರಿ ಮತ್ತು ನಾಡ ಕಚೇರಿಗಳಿಗೆ ದಿಢೀರ್ ಭೇಟಿ ನೀಡಲಾಗಿತ್ತು. ಈ ವೇಳೆ ರೆಕಾರ್ಡ್ ರೂಂಗಳನ್ನು ಪರಿಶೀಲಿಸುವ ಜೊತೆಗೆ, ಅಧಿಕಾರಿಗಳು ಯಾವೆಲ್ಲಾ ಸೇವೆಗಳನ್ನು ಜನರಿಗೆ ಎಷ್ಟು ದಿನದಲ್ಲಿ ನೀಡುತ್ತಿದ್ದಾರೆ? ಎಂಬ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿತ್ತು.

ಅಲ್ಲದೆ, ಸಾರ್ವಜನಿಕರಿಂದಲೂ ಅಹವಾಲು ಸ್ವೀಕರಿಸಲಾಗಿತ್ತು. ಸಣ್ಣ ಪುಟ್ಟ ಕೆಲಸಗಳಿಗೆ ತಿಂಗಳು-ವರ್ಷಗಳಿಂದ ಅಲೆದಿದ್ದರೂ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಜನರ ಸೇವೆಗೆ ತ್ವರಿತವಾಗಿ ಸ್ಪಂದಿಸದ ಅಧಿಕಾರಿಗಳಿಗೆ ಸ್ಥಳದಲ್ಲೇ ನೊಟೀಸ್ ಜಾರಿ ಮಾಡಲಾಗಿದೆ. ಅಲ್ಲದೆ, ಜನರ ಕೆಲಸಗಳನ್ನೂ ಅಲ್ಲಿಯೇ ಮಾಡಿಕೊಟ್ಟು, ಜನಸ್ನೇಹಿ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ಬೆಂಗಳೂರಿನ ಒತ್ತುವರಿ ತೆರವಿಗೆ ಶೇಷ ಕಾರ್ಯತಂತ್ರ: ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಖಾಸಗಿಯವರ-ಭೂಗಳ್ಳರ ಪಾಲಾಗಿದೆ. ಹೀಗಾಗಿ ಈ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವ ಸಲುವಾಗಿ ಜಿಲ್ಲಾಕಾರಿಗಳು ಹಾಗೂ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡಕ್ಕೆ ಪ್ರತೀ ವಾರಾಂತ್ಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸೂಚಿಸಲಾಗಿದೆ.

ಈ ತಂಡ ಈಗಾಗಲೇ ಬೆಂಗಳೂರಿನಲ್ಲಿ ನೂರಾರು ಕೋಟಿ ಮೌಲ್ಯದ ಕನಿಷ್ಟ 60 ಎಕರೆಗೂ ಅಧಿಕ ಸರ್ಕಾರಿ ಭೂಮಿಯಲ್ಲಿ ಖಾಸಗಿ ಒತ್ತುವರಿಯನ್ನು ತೆರವುಗೊಳಿಸಿದೆ. ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರೆಯಲಿದ್ದು, ಸರ್ಕಾರಿ ಭೂಮಿಗಳನ್ನು ಗುರುತಿಸಿ ರಕ್ಷಿಸುವ ಅಕಾರಿಗಳ ಬೀಟ್ ವ್ಯವಸ್ಥೆಗೂ ಈಗಾಗಲೇ ಚಾಲನೆ ನೀಡಲಾಗಿದೆ.

ಜಿಲ್ಲಾ ಪ್ರವಾಸ, ಪ್ರಗತಿ ಪರಿಶೀಲನಾ ಸಭೆ, ಸರ್ಕಾರಿ ಕಚೇರಿಗಳಿಗೆ ದಿಡೀರ್ ಭೇಟಿಯ ಜೊತೆಗೆ ಕಳೆದ ಆರು ತಿಂಗಳಿನಿಂದ ವಿಕಾಸಸೌಧದ ಕಚೇರಿಯಲ್ಲೂ ಅಧಿಕಾರಿಗಳ ನೂರಾರು ಸಭೆಗಳನ್ನು ನಡೆಸಲಾಗಿದೆ. ಸರಳ ಆಡಳಿತಕ್ಕೆ ಸೂಚಿಸಲಾಗಿದೆ. ದಿನಂಪ್ರತಿ ಕಚೇರಿಗೆ ಆಗಮಿಸುವ ನೂರಾರು ಜನರನ್ನು ಮಾತನಾಡಿಸಿ ಅವರ ನ್ಯಾಯಯುತ ಮನವಿ, ಕೋರಿಕೆಗೆ ಸ್ಪಂದಿಸಲಾಗಿದೆ. ಅವರ ಸಮಸ್ಯಗಳನ್ನು ಬಗೆಹರಿಸಲಾಗಿದೆ. ಮುಂದಿನ ದಿನಗಳಲ್ಲೂ ಸಹ ಜನರಿಗೆ ಸರಳ, ಸುಲಭ ಮತ್ತು ತ್ವರಿತ ಆಡಳಿತ ನೀಡುವ ನಿಟ್ಟಿನಲ್ಲೇ ನಮ್ಮ ಕಾರ್ಯವೈಖರಿ ಇರಲಿದೆ ಎಂದು ಸಚಿವರು ಹೇಳಿದ್ದಾರೆ.

RELATED ARTICLES

Latest News