Monday, October 14, 2024
Homeಬೆಂಗಳೂರುಮಾರ್ಷಲ್‍ಗಳ ಸೇವೆಯಲ್ಲಿ ಕೋಟಿ ಕೋಟಿ ಲೂಟಿ

ಮಾರ್ಷಲ್‍ಗಳ ಸೇವೆಯಲ್ಲಿ ಕೋಟಿ ಕೋಟಿ ಲೂಟಿ

ಬೆಂಗಳೂರು, ನ.20- ಕಳೆದ ಆರೂವರೆ ವರ್ಷಗಳಿಂದ ನಿರಂತರ ವಾಗಿ ಬಿಬಿಎಂಪಿಯಲ್ಲಿ ಒಂದಕ್ಕೆ ಎರಡು ಪಟ್ಟು ಸಂಖ್ಯೆಗಳನ್ನು ತೋರಿಸಿ ಮಾರ್ಷಲ್‍ಗಳ ಸೇವೆಯ ಹೆಸರಿನಲ್ಲಿ ಬೃಹತ್ ಲೂಟಿ ಕಾರ್ಯ ನಡೆಯುತ್ತಿದ್ದು, ಈ ಸಂಬಂಧ ಬೆಂಗಳೂರು ಉಸ್ತುವಾರಿ ಸಚಿವರು, ಆಡಳಿತಾಧಿಕಾರಿಗಳು ಮತ್ತು ಮುಖ್ಯ ಆಯುಕ್ತರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‍ಗಳಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು ಮತ್ತು ಟಿಪ್ಪರ್ ಆಟೋಗಳ ಹಾಜರಾತಿ ಬಗ್ಗೆ ನಿಗಾವಹಿಸಲೆಂದು 2017 ರಲ್ಲಿ ಪ್ರತೀ ವಾರ್ಡ್ ಗೆ ಒಬ್ಬರಂತೆ ನಿವೃತ್ತ ಸೈನಿಕರು ಅಥವಾ ಎನ್‍ಸಿಸಿ ತರಬೇತಿ ಪೂರ್ಣ ಗೊಳಿಸಿರುವವರನ್ನು ಮಾರ್ಷಲ್‍ಗಳ ಹೆಸರಿನಲ್ಲಿ ನಿಯೋಜಿಸಿಕೊಳ್ಳುವ ಕಾರ್ಯಕ್ಕೆ ಅಂದಿನ ರಾಜ್ಯ ಸರ್ಕಾರವು ಚಾಲನೆ ನೀಡಿತ್ತು.

ಆದರೆ, ಅದಾದ ನಂತರ – ವಾರ್ಡ್ ಮಟ್ಟದ ಮಾರ್ಷಲ್‍ಗಳು, ಎಂಎಸ್‍ಜಿಪಿ ಘಟಕ, ಪಾಲಿಕೆ ಕಚೇರಿಗಳು, ವೈರ್‍ಲೆಸ್ ಅಪರೇಟರ್ಸ್, ಪ್ರಹರಿ ದಳ, ಕೆ.ಆರ್, ಮಾರ್ಕೆಟ್, ರಸೆಲ್ ಮಾರ್ಕೆಟ್, ಮಡಿವಾಳ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ಮತ್ತು ಭೂಭರ್ತಿ ಕೇಂದ್ರಗಳಲ್ಲಿ ಒಟ್ಟು 384 ಮಂದಿ ಮಾರ್ಷಲ್‍ಗಳು ಸೇವೆ ಸಲ್ಲಿಸುತ್ತಿದ್ದಾರೆ.

ಇದರ ಜತೆಗೆ ಇಂದಿರಾ ಕ್ಯಾಂಟೀನ್‍ಗಳು, 07 ತ್ಯಾಜ್ಯ ಸಂಸ್ಕರಣಾ ಘಟಕಗಳು, ಜಯನಗರ ವಾಣಿಜ್ಯ ಸಂಕೀರ್ಣ ಮತ್ತು ಬೆಳ್ಳಂದೂರು ಕೆರೆ, ವರ್ತೂರು ಕೆರೆಗಳಲ್ಲಿ ಒಟ್ಟು 366 ಮಂದಿ ಸೇರಿದಂತೆ ಒಟ್ಟಾರೆಯಾಗಿ 750 ಮಂದಿ ಮಾರ್ಷಲ್ ಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಜನವರಿ ಬಳಿಕ ರಾಜಕೀಯ ಧ್ರುವೀಕರಣ: ಲಕ್ಷ್ಮಣ್ ಸವದಿ

ಈ ಪೈಕಿ 18 ಮಂದಿ ಜೆಸಿಒಗಳು ಮತ್ತು 09 ಮಂದಿ ಎಜೆಸಿಒಗಳೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇವರೆಲ್ಲರಿಗೂ ಅತ್ಯುನ್ನತ ಅಕಾರಿಯಾಗಿ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಮಾರ್ಷಲ್‍ಗಳಿಗೆ ವಾರ್ಷಿಕ ವಾಗಿ ಒಟ್ಟು 24,18,40,656/- (ಇಪ್ಪತ್ತನಾಲ್ಕು ಕೋಟಿ ಹದಿನೆಂಟು ಲಕ್ಷದ ನಲವತ್ತು ಸಾವಿರದ ಆರು ನೂರಾ ಐವತ್ತಾರು) ಗಳಷ್ಟು ಬೃಹತ್ ಮೊತ್ತದ ಹಣವನ್ನು ಇವರುಗಳ ವೇತನಕ್ಕೆಂದು ವ್ಯಯಿಸಲಾಗುತ್ತಿದೆ.

2017 ರಿಂದ ಈವರೆಗಿನ ಆರೂವರೆ ವರ್ಷಗಳಲ್ಲಿ ಮಾರ್ಷಲ್ ಗಳ ಸೇವೆಗೆಂದು ಪಾಲಿಕೆಯು ಒಟ್ಟಾರೆ . 157,19,64,264/- (ಒಂದು ನೂರಾ ಐವತ್ತೇಳು ಕೋಟಿ ಹತ್ತೊಂಬತ್ತು ಲಕ್ಷದ ಅರವತ್ತನಾಲ್ಕು ಸಾವಿರದ ಎರಡು ನೂರಾ ಅರವತ್ತನಾಲ್ಕು) ಗಳಷ್ಟು ಬೃಹತ್ ಮೊತ್ತದ ಸಾರ್ವಜನಿಕ ತೆರಿಗೆ ಹಣವನ್ನು ಅನವಶ್ಯಕವಾಗಿ ವೆಚ್ಛ ಮಾಡಿದೆ !!!

ಮನೆ – ಮನೆಗಳಿಂದ ತ್ಯಾಜ್ಯ ಸಂಗ್ರಹದ ಹಂತದಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಸುವ ಕಾರ್ಯ ಮತ್ತು ಟಿಪ್ಪರ್ ಆಟೋಗಳ ಹಾಜರಾತಿ ಬಗ್ಗೆ ನಿಗಾವಹಿಸುವ ಕಾರ್ಯಗಳಿಗೆಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾರ್ಷಲ್ ಗಳನ್ನು ನಿಯೋಜನೆ ಮಾಡಿಕೊಂಡು ಆರೂವರೆ ವರ್ಷಗಳೇ ಕಳೆದಿದ್ದರೂ ಸಹ, ಈವರೆಗೆ ಮೇಲೆ ತಿಳಿಸಿರುವ ಕಾರ್ಯಗಳಲ್ಲಿ ಶೇ. 25% ರಷ್ಟು ಸಫಲತೆಯನ್ನೂ ಸಹ ಪಾಲಿಕೆಯು ಕಂಡಿಲ್ಲ. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ 42 ಮಂದಿ ಮಾರ್ಷಲ್‍ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿ ನೀಡಲಾಗಿದೆ. ಈ ರೀತಿ ಎಲ್ಲಾ ಹಂತಗಳಲ್ಲೂ ಅತ್ಯಂತ ವಿಫಲತೆಯನ್ನು ಕಂಡಿರುವ ಮಾರ್ಷಲ್‍ಗಳ ನಿಯೋಜನೆ ಕಾರ್ಯದಿಂದಾಗಿ ಪಾಲಿಕೆಯು ಪ್ರತೀ ವರ್ಷ ಸುಮಾರು 25 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಅನವಶ್ಯಕವಾಗಿ ದುಂದು ವೆಚ್ಛ ಮಾಡುತ್ತಿದೆ !!!

ಭಾರೀ ಚರ್ಚೆಗೆ ಗ್ರಾಸವಾದ `ಹಲೋ ಅಪ್ಪ’

ಈ ಕೂಡಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬಿಳಿ ಆನೆಯಾಗಿ ಪರಿಣಮಿಸಿರುವ ಮಾರ್ಷಲ್‍ಗಳ ನಿಯೋಜನೆ ಕಾರ್ಯವನ್ನು ಕೂಡಲೇ ಹಿಂಪಡೆಯುವ ಮೂಲಕ ಪಾಲಿಕೆಗೆ ಈಗಾಗಲೇ ಆಗಿರುವ 160 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಅನಗತ್ಯ ವೆಚ್ಛ ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳನ್ನು ಸಲ್ಲಿಸಿ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಪಾಲಿಕೆಯ ಆಡಳಿತಾಕಾರಿಗಳಾದ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರನ್ನು ರಮೇಶ್ ಆಗ್ರಹಿಸಿದ್ದಾರೆ.

RELATED ARTICLES

Latest News