Friday, November 22, 2024
Homeರಾಜ್ಯಯುವತಿಯ ಫೋಟೋ ಬಳಸಿಕೊಂಡು ಜೈಲಿನಿಂದಲೇ ರೌಡಿ ಬ್ಲಾಕ್‍ಮೇಲ್

ಯುವತಿಯ ಫೋಟೋ ಬಳಸಿಕೊಂಡು ಜೈಲಿನಿಂದಲೇ ರೌಡಿ ಬ್ಲಾಕ್‍ಮೇಲ್

ಬೆಂಗಳೂರು, ಫೆ.15- ಯುವತಿಯ ಫೋಟೋ ಬಳಸಿಕೊಂಡು ಬೇರೆ ಯಾರದ್ದೊ ನಗ್ನ ದೇಹಕ್ಕೆ ಅಳವಡಿಸಿ ವಿಡಿಯೋಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದ ರೌಡಿ ಹಾಗೂ ಆತನ ಸಹಚರನ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಯುವತಿಯ ತಾಯಿ ದೂರು ನೀಡಿದ್ದಾರೆ.

ಜೈಲಿನಲ್ಲಿರುವ ರೌಡಿ ಮನು ಅಲಿಯಾಸ್ ಕೆಂಚ ಎಂಬಾತ ಕಳೆದ ಆಗಸ್ಟ್‍ನಲ್ಲಿ ಯುವತಿ ತಾಯಿಗೆ ದೂರವಾಣಿ ಕರೆ ಮಾಡಿ ನಿಮ್ಮ ಮಗಳ ಬೆತ್ತಲೆ ಫೋಟೋಗಳು ನನ್ನ ಬಳಿ ಇವೆ. ನೀವು 40 ಸಾವಿರ ಹಣ ಕೊಡದಿದ್ದರೆ ಆ ಫೋಟೋಗಳನ್ನು ನಿನ್ನ ಅಳಿಯನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಯುವತಿಯ ತಾಯಿ ರೌಡಿ ಕೆಂಚ ಹೇಳಿದ ಚೋಟು ಎಂಬಾತನ ಖಾತೆಗೆ ಆನ್‍ಲೈನ್ ಮೂಲಕ 20 ಸಾವಿರ ಹಣ ಹಾಗೂ ಮತ್ತೊಬ್ಬನಿಗೆ 20 ಸಾವಿರ ಹಣವನ್ನು ಹಾಕಿಸಿದ್ದಾರೆ.

ಅಂತರ್ಧರ್ಮೀಯ ಸಾಮರಸ್ಯಕ್ಕೆ ಸಾಕ್ಷಿಯಾದ ಸ್ವಾಮಿ ನಾರಾಯಣ ದೇಗುಲ

ಫೆ. 9ರಂದು ಮತ್ತೆ ಯುವತಿ ತಾಯಿಯ ಮೊಬೈಲ್‍ಗೆ ಕಾರ್ತಿಕ್ ಎಂಬಾತ ವಾಟ್ಸಾಪ್ ಕಾಲ್ ಮಾಡಿ ನಾನು ಮನು ಸ್ನೇಹಿತ ನಿಮ್ಮ ಮಗಳ ಫೋಟೊಗಳು ಮತ್ತು ವಿಡಿಯೋ ನಮ್ಮ ಬಳಿ ಇವೆ. ಮನು ನಿಮ್ಮ ಬಳಿ 5 ಲಕ್ಷ ಹಣ ಕೇಳಿದ್ದು, ನೀವು ಹಣ ಕೊಡದಿದ್ದರೆ ನಿಮ್ಮ ಮಗಳ ಫೋಟೊ ಮತ್ತು ವಿಡಿಯೋಗಳನ್ನು ನಿಮ್ಮ ಅಳಿಯನಿಗೆ ಕಳುಹಿಸುವುದಾಗಿ ಬೇಡಿಕೆ ಇಟ್ಟಿದ್ದಾನೆ.

ಮತ್ತೆ ಕರೆ ಮಾಡಿ ನೀವು ನಾನು ಹೇಳುವ ನಂಬರ್‍ಗೆ ಕರೆ ಮಾಡಿ ಆತನ ಕೈಯಲ್ಲಿ ಹಣ ಕಳುಹಿಸುವಂತೆ ಬೆದರಿಕೆವೊಡ್ಡಿದ್ದಾನೆ. ಮತ್ತೆ ಫೆ.12ರಂದು ರೌಡಿ ಮನು, ಸ್ನೇಹಿತ ಕಾರ್ತಿಕ್ ಮತ್ತು ಆತನ ಕಡೆಯ ಹುಡುಗರು ಹಲವಾರು ಬಾರಿ ವಾಟ್ಸಪ್ ಕರೆಗಳನ್ನು ಮತ್ತು ಫೇಸ್‍ಬುಕ್ ಮೆಸೆಂಜರ್ ಕಾಲ್‍ಗಳನ್ನು ಮಾಡಿ ಅವಾಚ್ಯವಾಗಿ ಬೈಯ್ದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪದೇ ಪದೇ ಹಣಕ್ಕಾಗಿ ಪೀಡಿಸಿ ತೊಂದರೆ ಕೊಡುತ್ತಿರುವ ರೌಡಿ ಮನು ಅಲಿಯಾಸ್ ಕೆಂಚ, ಆತನ ಸ್ನೇಹಿತ ಕಾರ್ತಿಕ್ ಹಾಗೂ ಆತನ ಸಹಚರರು ನನ್ನ ಮಗಳ ಮುಖ ಇರುವ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿಕೊಂಡು ಅವುಗಳನ್ನು ತಮ್ಮ ಬಳಿ ಇಟ್ಟುಕೊಂಡು ನನಗೆ ಮತ್ತು ಮಗಳಿಗೆ ಕಳುಹಿಸಿ ನಮ್ಮಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿಯ ತಾಯಿ ಯಲಹಂಕ ನ್ಯೂಟೌನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಮ ಮಂದಿರಕ್ಕೆ 11ರೂ. ಕೋಟಿ ದೇಣಿಗೆ ನೀಡಿದ್ದ ಉದ್ಯಮಿಗೆ ರಾಜ್ಯಸಭಾ ಟಿಕೆಟ್

ಸಿಸಿಬಿಗೆ ವರ್ಗಾವಣೆ:
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಿದ್ದಾರೆ.

ಜೈಲಿನಲ್ಲಿ ಮೊಬೈಲ್ ಬಳಕೆ:
ಕಾರಾಗೃಹಗಳಲ್ಲಿರುವ ಖೈದಿಗಳ ಬಳಿ ಮೊಬೈಲ್ ಹೇಗೆ ಬಂತು ಎಂಬುವುದು ನಿಗೂಢವಾಗಿದೆ. ಜೈಲಿನಲ್ಲಿದ್ದುಕೊಂಡು ಮೊಬೈಲ್ ಫೋನ್ ಉಪಯೋಗಿಸಿ ಹೊರಗಿನವರಿಗೆ ಬೆದರಿಕೆ ಹಾಕುವುದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಎಷ್ಟೇ ಕ್ರಮ ಕೈಗೊಂಡರು ಸಾಧ್ಯವಾಗದಿರುವುದು ಈ ಪ್ರಕರಣವೇ ಸಾಕ್ಷಿ. ಇನ್ನು ಮುಂದಾದರೂ ಕಾರಾಗೃಹಗಳಲ್ಲಿರುವ ಖೈದಿಗಳ ಬಗ್ಗೆ ಜೈಲು ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಅವರ ಚಲನವಲನ ಗಮನಿಸಿದರೆ ಮುಂದೆ ನಡೆಯಬಹುದಾದ ದುಷ್ಕøತ್ಯಗಳನ್ನು ತಡೆಯಬಹುದಾಗಿದೆಂಬುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

RELATED ARTICLES

Latest News