Tuesday, May 28, 2024
Homeರಾಜ್ಯರೌಡಿ ಶಿವನನ್ನು ಕೊಂದಿದ್ದ 6 ಆರೋಪಿಗಳು ಅಂದರ್

ರೌಡಿ ಶಿವನನ್ನು ಕೊಂದಿದ್ದ 6 ಆರೋಪಿಗಳು ಅಂದರ್

ಬೆಂಗಳೂರು, ಮಾ.11- ಹಳೇ ದ್ವೇಶದಿಂದ ಮನೆ ಸಮೀಪವೇ ನಡು ರಸ್ತೆಯಲ್ಲಿ ರೌಡಿ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರು ಮಂದಿಯನ್ನು ಕಾಟನ್‍ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಟೀಫನ್, ಚಂದ್ರಶೇಖರ್, ಶಿಬು, ಶೇಖರ್, ಮಣಿ ಮತ್ತು ಕಿರಣ್ ಬಂಧಿತ ಆರೋಪಿಗಳು.

ಕಳೆದ ಶುಕ್ರವಾರ ಶಿವರಾತ್ರಿಯಂದು ಫ್ಲವರ್ ಗಾರ್ಡನ್ ನಿವಾಸಿ ಶಿವ ಅಲಿಯಾಸ್ ಶರತ್ (35) 9.30ರ ಸುಮಾರಿನಲ್ಲಿ ಮನೆಗೆ ನಡೆದು ಹೋಗುತ್ತಿದ್ದಾಗ ಐದಾರು ಮಂದಿ ದುಷ್ಕರ್ಮಿಗಳು ಈತ ಬರುವುದನ್ನೇ ಕಾದು ಹೊಂಚು ಹಾಕಿ ಇನ್ನೇನು ಮನೆ ಸ್ವಲ್ಪ ದೂರ ಇರುವಂತೆಯೇ ಏಕಾಏಕಿ ದಾಳಿ ಮಾಡಿ ಮಚ್ಚು, ಲಾಂಗ್, ಡ್ರ್ಯಾಗರ್‍ನಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಹಲ್ಲೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರೌಡಿ ಶಿವನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದನು. ಈ ಬಗ್ಗೆ ಕಾಟನ್‍ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರು ಮಂದಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News