ಬೆಂಗಳೂರು, ಅ. 22- ಕೆನಡಾ ಇಂಡಿಯಾ ಫೌಂಡೇಶನ್ (ಸಿಐಎಫ್) ಪ್ರತಿಷ್ಠಿತ ಸಿಐಎಫ್ ಗ್ಲೋಬಲ್ ಇಂಡಿಯನ್ ಅವಾರ್ಡ್ 2024 ಅನ್ನು ಯೋಗಿ, ಅನುಭಾವಿ ಮತ್ತು ದೂರದೃಷ್ಟಿಯ ಮತ್ತು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರಿಗೆ ನೀಡಲಾಗುತ್ತಿದೆ.
ಸದ್ಗುರು ಅವರು ಪರಿಸರ ಸವಾಲುಗಳನ್ನು ನಿಭಾಯಿಸುವಲ್ಲಿ ಮತ್ತು ಮಾನವ ಪ್ರಜ್ಞೆಯನ್ನು ಮುನ್ನಡೆಸುವ ಮತ್ತು ಆಧ್ಯಾತ ಕೊಡುಗೆಗಳನ್ನು ಗುರುತಿಸಲಾಗಿದೆ.
ಕೆನಡಾ ಇಂಡಿಯಾ ಫೌಂಡೇಶನ್ ಅಧ್ಯಕ್ಷ ರಿತೇಶ್ ಮಲಿಕ್ ಮಾತನಾಡಿ ಸದ್ಗುರುಗಳು ನಮ ಗೌರವ ಒಪ್ಪಿಕೊಂಡಿದ್ದಾರೆ.ಇದಲ್ಲದೆ ಪ್ರಶಸ್ತಿಯನ್ನು ಸ್ವೀಕರಿಸಲು ಟೊರೊಂಟೊಗೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಸದ್ಗುರು ಗಳ ಪ್ರಮುಖ ಸಂದೇಶವು ಇಡೀ ಮಾನವ ಕುಲದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಸದ್ಗುರು ಅವರಂತಹ ಚಿಂತಕರಿಂದ ಕೆನಡಾವು ಹೆಚ್ಚಿನ ಪ್ರಯೋಜನ ಪಡೆಯ ಬಹುದು, ಅವರ ಬೋಧನೆಗಳು ವೈಯಕ್ತಿಕ ಯೋಗಕ್ಷೇಮ, ಸುಸ್ಥಿರತೆ ಮತ್ತು ಒಳಗೊಳ್ಳುವಿಕ್ತೆ ಕೆನಡಾದ ಸಾರ್ವಜನಿಕ ಆರೋಗ್ಯ ಆದ್ಯತೆಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ, ವಿಶೇಷವಾಗಿ ಮಾನಸಿಕ ಕಾಯಿಲೆ ನೀಡುವ ವ್ಯವಸ್ಥೆಗೆ ದೊಡ್ಡ ಸವಾಲಿನಲ್ಲಿ ಎಂದು ಅವರು ಹೇಳಿದರು.