Friday, December 6, 2024
Homeರಾಜ್ಯಎಸ್‍ಸಿ/ಎಸ್‍ಟಿ ಅನುಧಾನ ಗ್ಯಾರಂಟಿಗೆ ಬಳಕೆ: ಆಡಳಿತ - ಪ್ರತಿಪಕ್ಷ ಶಾಸಕರ ವಾಕ್ಸಮರ

ಎಸ್‍ಸಿ/ಎಸ್‍ಟಿ ಅನುಧಾನ ಗ್ಯಾರಂಟಿಗೆ ಬಳಕೆ: ಆಡಳಿತ – ಪ್ರತಿಪಕ್ಷ ಶಾಸಕರ ವಾಕ್ಸಮರ

ಬೆಂಗಳೂರು ಫೆ.23- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್.ಸಿ. ಎಸ್. ಟಿಪಿ- ಟಿ.ಎಸ್.ಪಿ ಅನುದಾನವನ್ನ ಬಳಕೆ ಮಾಡಿಕೊಳ್ಳುತ್ತಿರುವ ವಿಷಯ ವಿಧಾನಪರಿಷತ್‍ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲಕಾಲ ಭಾರೀ ವಾಕ್ಸಮರ ನಡೆಯಿತು.

ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಉತ್ತರಿಸಿ, ಗ್ಯಾರಂಟಿಗಳ ಅನುಷ್ಠಾನಕ್ಕೆ ಎಸ್.ಸಿ. ಎಸ್. ಟಿಪಿ- ಟಿ.ಎಸ್.ಪಿ ಹಣ ಬಳಕೆ ಮಾಡಿಕೊಂಡಿಲ್ಲ. ನಮ್ಮ ಪ್ರತಿಪಕ್ಷದ ಸದಸ್ಯರು ಅನಗತ್ಯವಾಗಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಇಲಾಖೆಯಲ್ಲಿ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆ ಮಾಡಿಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಕಾಯ್ದೆಯ ಸೆಕ್ಷನ್ 7ಡಿಗೆ ತಿದ್ದುಪಡಿ ಮಾಡಲಾಗಿದೆ.

ದಲಿತರ ಹಣವನ್ನು ದಲಿತರಿಗೇ ಬಳಕೆ ಮಾಡುತ್ತಿದ್ದೇವೆ. ಇದರಲ್ಲಿ ಒಂದೊಂದು ಪೈಸೆಯೂ ದುರುಪಯೋಗವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ವಾಸ್ತವವಾಗಿ ಹಿಂದಿನ ಸರ್ಕಾರವೇ ಈ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದೆ. ಇಲ್ಲಿ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಕಾರ್ಯಕ್ರಮಗಳಿಗೂ ಬಳಕೆ ಮಾಡಬಾರದೆಂಬ ನಿಯಮವಿದೆ. ಆದರೂ ಹಿಂದಿನ ಸರ್ಕಾರ ನಿಯಮ ಉಲ್ಲಂಘಿಸಿ ಬೇರೆ ಕೆಲಸಗಳಿಗೆ ಬಳಕೆ ಮಾಡಲಾಗಿದೆ. ನಿಮ್ಮ ಬಿಜೆಪಿ ಸರ್ಕಾರ ಸೆಕ್ಷನ್ 7ಡಿಗೆ ತಿದ್ದುಪಡಿ ಮಾಡಿತ್ತು. ನಾವು ಕೂಡ ಅದನ್ನೇ ಮಾಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡರು.

ವಿಧಾನಸಭೆಯಲ್ಲಿ ವಿಪಕ್ಷ ಧರಣಿ: ಸೋಮವಾರಕ್ಕೆ ಕಲಾಪ ಮುಂದೂಡಿಕೆ

ಗೃಹ ಲಕ್ಷ್ಮಿ ಯೋಜನೆಗೆ 3,156.31 ಕೋಟಿ, ಅನ್ನ ಭಾಗ್ಯಕ್ಕೆ 853.32 ಕೋಟಿ, ಗೃಹ ಜ್ಯೋತಿ ಗೆ 1,464.34.ಕೋಟಿ, ಶಕ್ತಿ ಯೋಜನೆಗೆ 686.38 ಕೋಟಿ, ಯುವನಿಧಿಗೆ 1.67 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಎಸ್.ಸಿ. ಎಸ್. ಟಿಪಿ- ಟಿ.ಎಸ್.ಪಿ ಯೋಜನೆಯಡಿ ಮೀಸಲಾದ ಅನುದಾನದಲ್ಲಿ ಐದು ಗ್ಯಾರಂಟಿಗಳಿಗೆ ಒಟ್ಟು 6, 162.02 ಕೋಟಿ ಬಳಕೆ ಮಾಡಲಾಗಿದೆ.

ಪ್ರತಿಯೊಂದು ಗ್ಯಾರಂಟಿಗಳಲ್ಲಿ ಎಸ್ಸಿ,ಎಸ್ಟಿ ಫಲಾನುಭವಿ ಗೃಹ ಲಕ್ಷ್ಮಿ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ:
ಎಸ್.ಸಿ – 21,74,519, ಎಸ್.ಟಿ – 8,62,846
ಅನ್ನ ಭಾಗ್ಯ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ:
ಎಸ್.ಸಿ – 59,15,002
ಎಸ್.ಟಿ – 25,90,678
ಗೃಹ ಜ್ಯೋತಿ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ
ಎಸ್.ಸಿ – 8,57,324
ಎಸ್.ಟಿ – 3,68,997
ಯುವನಿಧಿ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ
ಎಸ್.ಸಿ – 21, 986
ಎಸ್.ಟಿ – 9,220

ಶಕ್ತಿ ಗ್ಯಾರಂಟಿಯಲ್ಲಿ ಒಟ್ಟು 153,27 ಟಿಕೆಟ್ ಉಚಿತವಾಗಿ ನೀಡಲಾಗಿದೆ. ಅದರಲ್ಲಿ ಎಸ್ಸಿ, ಎಸ್ಟಿ ಮಾಹಿತಿ ಸಂಗ್ರಹ ಮಾಡುವುದು ಕಷ್ಟವಾಗಿದೆ. ಶಕ್ತಿ ಯೋಜನೆಗೆ 2800.00 ಕೋಟಿ ಅನುದಾನ ಒದಗಿಸಲಾಗಿದೆ. ಹಾಗಾಗಿ ಎಸ್.ಸಿ, ಎಸ್.ಟಿ ಫಲಾನುಭವಿಗಳ ಸಂಖ್ಯೆಯ ಮಾಹಿತಿಯಿದ್ದು ಹಣ ದುರ್ಬಳಕೆ ಆಗಿಲ್ಲ ಎಂದು ವಿವರಿಸಿದರು.

ಕಳೆದ ಬಾರಿ ಪ್ರಶ್ನೆ ಕೇಳಿದಾಗ ಗ್ಯಾರಂಟಿಗಳಿಗೆ ಹಣ ಬಳಕೆ ಮಾಡಿಲ್ಲ ಎಂದು ಹೇಳಿದ್ದರು ಈಗ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ದಲಿತರ ಮೂಲಕವೇ ದಲಿತರ ಸಮಾದಿ ಕಟ್ಟುವ ಕೆಲಸ ಸರ್ಕಾರ ಮಾಡುತ್ತಿದೆ. ಗ್ಯಾರಂಟಿಗಳಿಗೆ ಹಣ ಘೋಷಣೆ ನಿಮ್ಮ ತೇವಲಿಗೆ ಘೋಷಣೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಮಹಾದೇವಪ್ಪ ನಿಮಗೆ ಅಳಿಯ ಯಾರು, ಮಗಳ ಗಂಡ ಯಾರು ಗೊತ್ತಿಲ್ಲ ಅನಿಸುತ್ತದೆ. ಮಹಾದೇವಪ್ಪ ಅವರ ಪರಮಾತ್ಮ ಆಡಿಸಿದಂತೆ ಆಡುವವರು.

ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು: ವಾಹನಗಳು ಬೆಂಕಿಗಾಹುತಿ

ನಿಮ್ಮ ಪರಮಾತ್ಮ ಯಾರು ಎಂದು ನಮಗೆ ಗೊತ್ತಿದೆ ಎಂದು ಹಾಸ್ಯ ಮಾಡಿದರು. ಎಸ್.ಸಿ. ಎಸ್. ಟಿಪಿ- ಟಿ.ಎಸ್.ಪಿ ಯೋಜನೆಯಡಿ ಮೀಸಲಾದ ಅನುದಾನದಲ್ಲಿ ಗ್ಯಾರಂಟಿಗಳಿಗೆ ಬಳಕೆ ಮಾಡಲಾಗಿದೆ. ಪ್ರತಿಯೊಂದು ಗ್ಯಾರಂಟಿಗಳಲ್ಲಿ ಎಸ್ಸಿ,ಎಸ್ಟಿ ಫಲಾನುಭವಿಗಳ ಸಂಖ್ಯೆ ಎಷ್ಟು ಆ ಫಲಾನುಭವಿಗಳಿಗೆ ನೀಡಲಾದ ವೆಚ್ಚ ಎಷ್ಟು…? ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಲ್ಲಿ ಒಂದು ವೇಳೆ ಎಸ್ಸಿ, ಎಸ್ಟಿ ಫಲಾನುಭವಿಗಳ ಮಾಹಿತಿ ಇಲ್ಲದೆ ಹೋದರೆ ಹಣ ದುರ್ಬಳಕೆ ಮಾಡಿಕೊಂಡಂತೆ ಅಲ್ಲವೇ ಇದು ದಲಿತರಿಗೆ ಮಾಡಿದ ಅನ್ಯಾಯ ಎಂದ ಛಲವಾದಿ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

RELATED ARTICLES

Latest News