Saturday, July 27, 2024
Homeರಾಜ್ಯಬಿ.ಆರ್.ಪಾಟೀಲರಿಗೆ ಶಾಂತವೇರಿ ಗೋಪಾಲಗೌಡ ಸಂಸ್ಕೃತಿ ಪ್ರಶಸ್ತಿ

ಬಿ.ಆರ್.ಪಾಟೀಲರಿಗೆ ಶಾಂತವೇರಿ ಗೋಪಾಲಗೌಡ ಸಂಸ್ಕೃತಿ ಪ್ರಶಸ್ತಿ

ಬೆಂಗಳೂರು, ಮಾ.12- ಕನ್ನಡ ಜನಶಕ್ತಿ ಕೇಂದ್ರ ನೀಡುವ ತತ್ವನಿಷ್ಠ ಹೋರಾಟಗಾರ ಶಾಂತವಾರಿ ಗೋಪಾಲಗೌಡ ಸಂಸ್ಕೃತಿ ಪ್ರಶಸ್ತಿಗೆ ಶಾಸಕರಾದ ಬಿ. ಆರ್. ಪಾಟೀಲ್ ಅವರನ್ನ ಆಯ್ಕೆ ಮಾಡಲಾಗಿದೆ.ಕನ್ನಡ ಜನಶಕ್ತಿ ಕೇಂದ್ರ ಕಳೆದ 26 ವರ್ಷಗಳಿಂದ ನಾಡಿನ ಶ್ರೇಷ್ಠ ಸಮಾಜ ಸೇವಕರಿಗೆ ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಪ್ರಶಸ್ತಿಯನ್ನ ನೀಡುತ್ತಾ ಬಂದಿದೆ.

ಈ ಪ್ರಶಸ್ತಿಯು 25 ಸಾವಿರ ನಗದು, ಕಂಚಿನ ಫಲಕ ಹಾಗೂ ಪ್ರಶಸ್ತಿ ಪತ್ರವನ್ನ ಒಳಗೊಂಡಿರುತ್ತದೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.ಮಾ.14ರ ಸಂಜೆ 5 ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹಂಪಿ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ವಿಚಿ ಬೋರಲಿಂಗಯ್ಯ, ಲೇಖಕರಾದ ಡಾ. ನಟರಾಜ್ ಹುಳಿಯಾರ್, ನ್ಯಾಯವಾದಿಗಳಾದ ಕೆ. ದಿವಾಕರ್, ಶಾಂತವೇರಿ ಗೋಪಾಲಗೌಡ ಪ್ರತಿಷ್ಠಾನದ ಕಾರ್ಯದರ್ಶಿ ರಾಮ್‍ಮನೋಹರ್ ಮತ್ತಿತರೇ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪ್ರಶಸ್ತಿಗೆ ಭಾಜನಾರಾಗಿರುವ ಬಿ.ಆರ್. ಪಾಟೀಲ್ ಅವರುಅಳಂದ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ನಿರಂತರವಾಗಿ ಜನಸೇವೆ ಮಾಡುತ್ತಿದಾರೆ. ಗಾಂ, ಲೋಹಿಯಾ, ಜಯಪ್ರಕಾಶ್ ನಾರಾಯಣ್, ಅಂಬೇಡ್ಕರ್ ಮುಂತಾದ ನಾಯಕರ ಪ್ರಭಾವಕ್ಕೆ ಒಳಗಾದ ಪಾಟೀಲರು ಶಿಕ್ಷಣ, ಮಳೆನೀರು ಕೊಯ್ಲು, ವ್ಯಸನ ಮುಕ್ತ ಸಮಾಜ, ಯುವಕರ ಭವಿಷ್ಯಕ್ಕಾಗಿ ಚಿಂತನೆ, ಗ್ರಾಮೀಣ ಉದ್ಯೋಗ ಅವಕಾಶಕ್ಕಾಗಿ ಪ್ರಯತ್ನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆದರ್ಶ ರಾಜಕಾರಣಿಯಾಗಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.

RELATED ARTICLES

Latest News