Thursday, February 29, 2024
Homeಕ್ರೀಡಾ ಸುದ್ದಿಮತ್ತೊಂದು ಮದುವೆಯಾದ ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್

ಮತ್ತೊಂದು ಮದುವೆಯಾದ ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್

ನವದೆಹಲಿ, ಜ.20- ಭಾರತದ ಹೆಸರಾಂತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದ ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶೋಯೆಬ್ ಮಲಿಕ್ ಮತ್ತೊಂದು ವಿವಾಹವಾಗಿದ್ದು, ಅವರು ತಮ್ಮ ವಿವಾಹದ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶೋಯೆಬ್ ಮಲಿಕ್ ಭಾರತದ ಟೆನಿಸ್ ತಾರೆ ಸಾನಿಯಾ ಮಿಜರ್ ಅವರನ್ನು ಮದುವೆಯಾಗಿದ್ದರು. ಕೆಲವೇ ದಿನಗಳ ನಂತರ ಇಬ್ಬರೂ ಬೇರ್ಪಟ್ಟರು. ಶೋಯೆಬ್ ಇನ್ನೊಂದು ಮದುವೆ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಈ ಸುದ್ದಿಗೆ ಸ್ವತಃ ಶೋಯೆಬ್ ಮಲಿಕ್ ಫೋಟೋ ಹಾಕುವ ಮೂಲಕ ಉತ್ತರ ನೀಡಿದ್ದಾರೆ.

ಶೋಯೆಬ್ ಮತ್ತು ಸಾನಿಯಾ 2010 ರಲ್ಲಿ ವಿವಾಹ ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿಜರ್ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ವಿವಾಹವಾದರು. ಇವರಿಬ್ಬರೂ ಸಾಂಪ್ರದಾಯಿಕ ಮುಸ್ಲಿಂ ಶೈಲಿಯಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ಒಂದು ಚಿಕ್ಕ ಮಗು ಕೂಡ ಇದೆ. ಆ ಮಗುವಿನ ಹೆಸರು ಇಝಾನ್. ಶೋಯೆಬ್ ಮತ್ತು ಸಾನಿಯಾ ನಡುವೆ ಕೆಲಕಾಲ ಸಂಬಂಧ ಸರಿಯಿಲ್ಲ ಎಂಬ ವದಂತಿಗಳಿದ್ದವು. ಅವರ ಪ್ರತ್ಯೇಕವಾಗಿದ್ದಾರೆ ಎಂಬ ಬಗ್ಗೆ ನಿರಂತರ ವರದಿಗಳು ಬಂದವು. ಆದರೆ ಅಷ್ಟರಲ್ಲಿ ಸನಾ ಜಾವೇದ್ ಜೊತೆ ಶೋಯೆಬ್ ಮಲಿಕ್ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

41 ವರ್ಷದ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿರುವ ಸನಾ ಜಾವೇದ್ ಅವರಿಗೆ ಕೂಡ ಇದು ಎರಡನೇ ಮದುವೆ. ಸನಾ ಈ ಹಿಂದೆ ಪಾಕಿಸ್ತಾನಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದರು. ಸದ್ಯ ಸನಾ ಮತ್ತು ಉಮರ್ ತಮ್ಮ ಹಳೆಯ ಫೋಟೋಗಳನ್ನು ಇನ್‍ಸ್ಟ್ರಾಮ್‍ನಿಂದ ಡಿಲೀಟ್ ಮಾಡಿದ್ದಾರೆ. ಸನಾ ಅವರ ಮೊದಲ ಮದುವೆ 2020 ರಲ್ಲಿ ನಡೆದಿದ್ದರೆ, ಈಗ ಅವರ ಎರಡನೇ ಮದುವೆ 2024ರಲ್ಲಿ ಆಗಿದೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಮದುವೆಯ ಫೋಟೋವನ್ನು ಇನ್‍ಸ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಶೋಯೆಬ್ ಜನಪ್ರಿಯ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಸಾನಿಯಾ ಮಿಜರ್ ಇನ್‍ಸ್ಟ್ರಾಗ್ರಾಮ್‍ನಲ್ಲಿ ಪೋಸ್ಟ್ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ವಿಚ್ಛೇದನ ತುಂಬಾ ಕಷ್ಟ, ಮದುವೆ ಕೂಡ ತುಂಬಾ ಕಷ್ಟ ಎಂದು ಬರೆದುಕೊಂಡಿದ್ದರು. ಈ ಮೂಲಕ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿಜರ್ ವಿಚ್ಛೇದನ ಪಡೆದಿದ್ದಾರೆ ಎಂಬ ಸೂಚನೆ ಸಿಕ್ಕಿದ್ದವು. ಇದೀಗ ಅಕೃತವಾಗಿದೆ.

RELATED ARTICLES

Latest News