Monday, May 6, 2024
Homeರಾಷ್ಟ್ರೀಯಮದರಸಾಗಳಲ್ಲಿ ರಾಮಯಣ ಕಥೆ ಮತ್ತು ಆದರ್ಶಗಳ ಬೋಧನೆಗೆ ಮುಂದಾದ ಉತ್ತರಾಖಂಡ ಸರ್ಕಾರ

ಮದರಸಾಗಳಲ್ಲಿ ರಾಮಯಣ ಕಥೆ ಮತ್ತು ಆದರ್ಶಗಳ ಬೋಧನೆಗೆ ಮುಂದಾದ ಉತ್ತರಾಖಂಡ ಸರ್ಕಾರ

ಡೆಹ್ರಾಡೂನ್,ಜ.27 : ಉತ್ತರಾಖಂಡ ಮದರಸಾಗಳಲ್ಲಿ ರಾಮಯಣ ಕಥೆ ಮತ್ತು ಆದರ್ಶಗಳನ್ನು ಮಕ್ಕಳಿಗೆ ಅರ್ಥಮಾಡಿಸಲು ರಾಜ್ಯ ವಕ್ ಮಂಡಳಿ ಮುಂದಾಗಿದೆ. ಮುಂದಿನ ಮಾರ್ಚ್‍ನಲ್ಲಿ ಪ್ರಾರಂಭವಾಗುವ ವಿಧಾನಸಭೆ ಅಧಿವೇಶನದಿಂದ ಭಗವಾನ್ ರಾಮನ ಕಥೆಯನ್ನು ಹೊಸ ಪಠ್ಯಕ್ರಮದ ಭಾಗವಾಲು ನೀತಿ ರಚಿಸಲಾಗುವುದು ಎಂದು ರಾಜ್ಯ ವಕ್ ಮಂಡಳಿ ಅಧ್ಯಕ್ಷ ಶಾದಾಬ್ ಶಾಮ್ಸ್ ಹೇಳಿದ್ದಾರೆ.

ತನ್ನ ತಂದೆಯನ್ನು ಬಂಧಿಸಿದ ಮತ್ತು ತನ್ನ ಸ್ವಂತ ಸಹೋದರರನ್ನು ಕೊಂದ ಔರಂಗಜೇಬನ ಕಥೆಯನ್ನು ಕಲಿಸುವುದಕ್ಕಿಂತ ವಿದ್ಯಾರ್ಥಿಗಳಿಗೆ ತಂದೆಯ ಮಾತನ್ನು ಗೌರವಿಸಲು ಕಾಡಿಗೆ ವನವಾಸ ಮಾಡಿದ ರಾಮನಂತೆ ಮತ್ತು ಆತನ ಸತ್ಯ ನಿಷ್ಠೆ ಕಲಿಸಬೇಕು ಎಂದರು.
ವಕ್ ಮಂಡಳಿಯ ಅಡಿಯಲ್ಲಿ 117 ಮದರಸಾಗಳಿವೆ ಆಧುನಿಕ ಪಠ್ಯಕ್ರಮವನ್ನು ಆರಂಭದಲ್ಲಿ ಡೆಹ್ರಾಡೂನ್, ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಮದರಸಾಗಳಲ್ಲಿ ಪರಿಚಯಿಸಲಾಗುವುದು ಎಂದು ತಿಳಿಸಿದರು.

ಡಿಕೆಶಿ ಮನೆಗೆ ಗೃಹಸಚಿವ ಪರಮೇಶ್ವರ್ ದಿಢೀರ್ ಭೇಟಿ

ಪ್ರವಾದಿ ಮೊಹಮ್ಮದ್ ಜೊತೆಗೆ ಭಗವಾನ್ ರಾಮನ ಜೀವನದ ಕಥೆಯನ್ನು ಮದರಸಾ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು ಎಂದು ಅವರು ಹೇಳಿದರು. ಅನೇಕ ಮುಸ್ಲಿಂ ಧರ್ಮಗುರುಗಳು ಸಹ ಈ ಕ್ರಮವನ್ನು ಅನುಮೋದಿಸಿದ್ದಾರೆ ಎಂದರು.

20ನೇ ಶತಮಾನದ ಮುಸ್ಲಿಂ ತತ್ವಜ್ಞಾನಿ ಅಲ್ಲಾಮ ಇಕ್ಬಾಲ್ ಮಾತುಗಳನ್ನು ಉಲ್ಲೇಖಿಸಿ ಹೈ ರಾಮ್ ಕೆ ವಜೂದ್ ಪೆ ಹಿಂದೂಸ್ತಾನ್ ಕೊ ನಾಜ್, ಅಹ್ಲೆ ನಜರ್ ಸಮ್‍ಜ್ತೇ ಹೈಂ ಉಂಕೋ ಇಮಾಮ್-ಎ-ಹಿಂದ್ (ಹಿಂದೂಸ್ತಾನವು ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ಹೆಮ್ಮೆಪಡುತ್ತದೆ, ಜನರು ಅವನನ್ನು ಹಿಂದೂ ನಾಯಕನೆಂದು ಪರಿಗಣಿಸುತ್ತಾರೆ)ನಾವು ಮಕ್ಕಳಿಗೆ ಆಧುನಿಕತೆಯ ಶಕ್ಷಣ ಅಗತ್ಯ ಎಂದು ಶಾದಾಬ್ ಶಾಮ್ಸ್ ಹೇಳಿದ್ದಾರೆ.

RELATED ARTICLES

Latest News