Sunday, April 28, 2024
Homeಕ್ರೀಡಾ ಸುದ್ದಿಶುಭಮನ್ ಗಿಲ್‌ಗೆ 12 ಲಕ್ಷ ದಂಡ

ಶುಭಮನ್ ಗಿಲ್‌ಗೆ 12 ಲಕ್ಷ ದಂಡ

ಬೆಂಗಳೂರು, ಮಾ.27– ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 63 ರನ್ಗಳ ಸೋಲಿನಿಂದ ಕಂಗೆಟ್ಟಿದ್ದ ನಾಯಕ ಶುಭಮನ್ ಗಿಲ್ಗೆ ಐಪಿಎಲ್ ಮಂಡಳಿಯು 12 ಲಕ್ಷ ರೂ. ದಂಡ ವಿಧಿಸಿದೆ. ನಿಗತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸದ ಪರಿಣಾಮ ಐಪಿಎಲ್ ನಿಯಮದಂತೆ ಗುಜರಾತ್ ಟೈಟನ್ಸ್ ತಂಡದ ಯುವ ನಾಯಕ ಶುಭಮನ್ ಗಿಲ್ಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.

ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಮಾಡಿರುವ ಮೊದಲ ಅಪರಾಧ ಇದಾಗಿರುವುದರಿಂದ ತಂಡದ ನಾಯಕನಿಗೆ 12 ಲಕ್ಷ ರೂ. ಗಳ ದಂಡವನ್ನು ವಿಸಲಾಗಿದೆ. ಮುಂದಿನ ಪಂದ್ಯಗಳಲ್ಲಿ ಮತ್ತೊಮ್ಮೆ ಸ್ಲೋ ಓವರ್ ಮಾಡಿದರೆ ಆಗ ತಂಡದ ಆಟಗಾರರಿಗೂ ದಂಡದ ಹೊರೆ ಬೀಳುವುದಲ್ಲದೆ, ನಾಯಕ ಶುಭಮನ್ ಗಿಲ್ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೀಡಿದ 206 ರನ್ಗಳ ಬೃಹತ್ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ 143 ರನ್ಗಳಿಗೆ ತಮ್ಮ ಆಟವನ್ನು ಸೀಮಿತಗೊಳಿಸಿ 63 ರನ್ಗಳಿಂದ ಸೋಲು ಕಂಡಿದೆ. ಈ ಸೋಲಿನಿಂದಾಗಿ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ,

RELATED ARTICLES

Latest News