Sunday, September 15, 2024
Homeಬೆಂಗಳೂರುಆರ್‌ಸಿಬಿ ಪರ ಆಡಲು 'ಸಿಕ್ಸರ್‌ ಕಿಂಗ್‌' ಪ್ರಿಯಾಂಶ್‌ ಆರ್ಯ ಉತ್ಸುಕ

ಆರ್‌ಸಿಬಿ ಪರ ಆಡಲು ‘ಸಿಕ್ಸರ್‌ ಕಿಂಗ್‌’ ಪ್ರಿಯಾಂಶ್‌ ಆರ್ಯ ಉತ್ಸುಕ

'Sixer King' Priyansh Arya calls Virat Kohli his favourite, wishes to play for RCB

ಬೆಂಗಳೂರು, ಸೆ.3– ಡೆಲ್ಲಿ ಪ್ರೀಮಿಯರ್‌ ಲೀಗ್‌ನಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಸಿಡಿಸಿ ದಾಖಲೆ ನಿರ್ಮಿಸಿರುವ ಯುವ ಆಟಗಾರ ಪ್ರಿಯಾಂಶ್‌ ಆರ್ಯಗೆ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುವ ಉತ್ಸುಕತೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಪ್ರಿಯಾಂಶ್‌ ಆರ್ಯ ಅವರು 18 ನಂಬರ್‌ ಜೆರ್ಸಿ ತೊಟ್ಟು ಆಡುತ್ತಿದ್ದು , ಟೀಮ್‌ ಇಂಡಿಯಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ 18 ನಂಬರ್‌ ಜೆರ್ಸಿ ಹೊಂದಿರುವ ಕ್ಲಾಸ್‌‍ ಆಟಗಾರ ವಿರಾಟ್‌ ಕೊಹ್ಲಿಯೊಂದಿಗೆ ಕ್ರೀಸ್‌‍ ಹಂಚಿಕೊಳ್ಳಲು ಹೆಮೆ ಆಗುತ್ತದೆ ಎಂದು ಪ್ರಿಯಾಂಶ್‌ ಹೇಳಿದ್ದಾರೆ.

`ವಿರಾಟ್‌ ಕೊಹ್ಲಿ ಅವರು ನನ್ನ ಅಚ್ಚುಮೆಚ್ಚಿನ ಆಟಗಾರನಾಗಿದ್ದು ಅವರೊಂದಿಗೆ ಆರ್‌ಸಿಬಿ ತಂಡದಲ್ಲಿ ಆಡಬೇಕೆಂಬ ಹೆಬ್ಬಯಕೆ ಹೊಂದಿದ್ದು, ವಿರಾಟ್‌ ಜೊತೆಗೆ ಕ್ರೀಸ್‌‍ ಹಂಚಿಕೊಳ್ಳುವುದು ಹೆಮೆ ವಿಷಯವಾಗಿದೆ. ನಾನು ವಿರಾಟ್‌ ಕೊಹ್ಲಿ ಅವರ ಆಕ್ರಮಣಕಾರಿ ಆಟವನ್ನು ತುಂಬಾ ಇಷ್ಟಪಡುತ್ತೇನೆ, ನಾನು ಕೂಡ ಆಕ್ರಮಣಕಾರಿ ಆಟವನ್ನು ಆಡಲು ಇಷ್ಟಪಡುತ್ತೇನೆ. ಕೊಹ್ಲಿ ನನ್ನ ರೋಲ್‌ ಮಾಡೆಲ್‌’ ಎಂದು ಪ್ರಿಯಾಂಶ್‌ ಹೇಳಿದ್ದಾರೆ.

17 ವರ್ಷದಿಂದ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮೊದಲ ಟ್ರೋಫಿ ಗೆದ್ದುಕೊಡುವುದು ನನ್ನ ಮುಖ್ಯ ಗುರಿಯಾಗಿದೆ ಎಂದು ಪ್ರಿಯಾಂಶ್‌ ಆರ್ಯ ಹೇಳಿದ್ದಾರೆ.

ಡಿಪಿಎಲ್‌ನಲ್ಲಿ ಇದುವರೆಗೂ 602 ರನ್‌ ಗಳಿಸಿ ಟಾಪ್‌ ಸ್ಕೋರರ್‌ ಆಗಿರುವ ಪ್ರಿಯಾಂಶ್‌ ಆರ್ಯ, ದಕ್ಷಿಣ ಡೆಲ್ಲಿ ಪರ ಆಡುತ್ತಿದ್ದು, ಇತ್ತೀಚೆಗೆ ನಡೆದ ಉತ್ತರ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮನನ್‌ ಭಾರದ್ವಾಜ್ ಅವರ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅಲ್ಲದೆ ಆ ಪಂದ್ಯದಲ್ಲಿ 50 ಎಸೆತಗಳಲ್ಲಿ 120 ರನ್‌ ಸಿಡಿಸಿದ ಪ್ರಿಯಾಂಶ್‌ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದರು.

ಅಲ್ಲದೆ ನಾಯಕ ಆಯುಷ್‌ ಬದೋನಿ ಜೊತೆಗೂಡಿ ದಾಖಲೆಯ 286 ರನ್‌ ಸಿಡಿಸಿ ತಂಡ 308 ರನ್‌ ಗಳಿಸಿ 196 ರನ್‌ಗಳಿಂದ ಗೆಲುವು ಸಾಧಿಸಲು ಕೈಜೋಡಿಸಿದ್ದರು.

RELATED ARTICLES

Latest News