ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ನೀಚ ಮಗ

Social Share

ತುಮಕೂರು, ಜ.15- ಜಮೀನಿನಿಂದ ಬಂದ ಹಣವನ್ನು ಕೊಡದ ಹಿನ್ನೆಲೆಯಲ್ಲಿ ಹೆತ್ತು-ಹೊತ್ತು ಸಾಕಿ ಸಲಹಿದ ತಾಯಿಯನ್ನೇ ಪಾಪಿ ಮಗ ಕೊಲೆ ಮಾಡಿರುವ ಘಟನೆ ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾರದಮ್ಮ ಮಗನಿಂದ ಕೊಲೆಯಾದ ತಾಯಿ.ತುಮಕೂರು ಗ್ರಾಮಾಂತರದ ಪಂಡಿತನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಶಾರದಮ್ಮ ಅವರಿಗೆ ಸೇರಿದ್ದ ಜಮೀನಿದ್ದು ಅದನ್ನು ಮಾರಾಟ ಮಾಡಿದ್ದು, ಅದರಿಂದ ಬಂದ ಹಣವನ್ನು ಕೊಡದಿಲ್ಲ ಎಂಬ ಕಾರಣಕ್ಕೆ ಮಗ ರಮೇಶ್ ಕೊಲೆ ತಾಯಿಯನ್ನು ಕೊಲೆ ಮಾಡಿದ್ದಾನೆ.

ಸ್ಯಾಂಟ್ರೋ ರವಿ ಸುಳಿವು ಕೊಟ್ಟಿದ್ದು ಸ್ನೇಹಿತನ ಮೊಬೈಲ್

ರಮೇಶ್ ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕಿದ್ದು, ಇತ್ತೀಚೆಗೆ ಹೆಂಡತಿ ಮತ್ತು ಮಕ್ಕಳು ಈತನಿಂದ ದೂರವಿದ್ದರು. ತಾಯಿ ಶಾರದಮ್ಮ ಅಣ್ಣನಿಗೆ ಮಾತ್ರ ಹಣ ಕೊಡುತ್ತಾರೆ. ನನಗೆ ಹಣ ಕೊಡುವುದಿಲ್ಲ ಎಂದು ಸಿಟ್ಟಿಗೆದ್ದು, ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿದಂತೆ ಡಿವೈಎಸ್‍ಪಿ ಶ್ರೀನಿವಾಸ್, ಸಿಪಿಐ ಚೆನ್ನೇಗೌಡ ಇನ್ಸ್‍ಪೆಕ್ಟರ್ ದೇವಿಕಾ ದೇವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮಗನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article