ನಗೋಯಾ, ಅ.3- ಒತ್ತಡದ ನಡುವೆಯೂ ಅಪೂರ್ವ ಸ್ಥಿರತೆ ಕಾಯ್ದುಕೊಂಡ ಭಾರತದ ಯುವ ಆರ್ಚರಿ ತಾರೆ ಕುಂಕುಮ್ ಮೊಹೋಡ್, ಏಷ್ಯನ್ ಗೇಮ್ಸೌನ ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಗೆಲುವಿನೊಂದಿಗೆ ಭಾರತಕ್ಕೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್್ಸನ ಕೋಟಾ ಸ್ಥಾನವನ್ನೂ ಖಚಿತಪಡಿಸಿದ್ದಾರೆ. ಇಂದು ನಡೆದ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಓ ಯೆಜಿನ್ ವಿರುದ್ಧದ ಪಂದ್ಯ 5-5ರಿಂದ ಸಮಬಲಗೊಂಡಿತು. ನಿರ್ಣಾಯಕ ಶೂಟ್ಔಟ್ನಲ್ಲಿ ಕುಂಕುಮ್ 10 ಅಂಕಗಳಿಸಿದರೆ, ಯೆಜಿನ್ 8 ಅಂಕ ಗಳಿಸಿದರು. ಇದರೊಂದಿಗೆ ಕುಂಕುಮ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಏಷ್ಯನ್ ಗೇಮ್ಸೌನ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸೆಮಿಫೈನಲ್ನಲ್ಲಿ ಚೀನಾದ ಜಿಂಗ್ಯಿ ಝು ಅವರನ್ನು 6-2ರಿಂದ ಮಣಿಸುವ ಮೂಲಕ ಅವರು ಒಲಿಂಪಿಕ್ಸ್ ಕೋಟಾ ಸ್ಥಾನ ಪಡೆದಿದ್ದರು.
2028ರ ಲಾಸ್ ಏಂಜಲೀಸ್ ಒಲಿಂಪಿಕ್್ಸಗೆ ಲಭ್ಯವಿದ್ದ ಎರಡು ಕೋಟಾಗಳಲ್ಲಿ ಒಂದನ್ನು ಕುಂಕುಮ್ ಖಚಿತಪಡಿಸಿಕೊಂಡಿದ್ದು, ಈ ಕೋಟಾ ನಿಯಮಾನುಸಾರ ಭಾರತಕ್ಕೆ ಸೇರಲಿದೆ. ಶುಕ್ರವಾರ ಅಂಕಿತಾ ಭಕತ್ ಹಾಗೂ ಕೀರ್ತಿ ಶರ್ಮಾ ಅವರೊಂದಿಗೆ ಮಹಿಳೆಯರ ತಂಡ ರಿಕರ್ವ್ ಚಿನ್ನ ಗೆದ್ದಿದ್ದ ಕುಂಕುಮ್, ಧೀರಜ್ ಬೊಮ್ಮದೇವರ ಜೊತೆ ಮಿಶ್ರ ಜೋಡಿ ವಿಭಾಗದಲ್ಲಿ ಬೆಳ್ಳಿ ಪದಕವನ್ನೂ ಪಡೆದಿದ್ದರು.
