Homeರಾಜ್ಯರಾಜ್ಯದಲ್ಲಿ ಬೃಹತ್‌ ಕೈಗಾರಿಕೆ ಸ್ಥಾಪನೆಗೆ 400 ಎಕರೆ ಭೂಮಿ

ರಾಜ್ಯದಲ್ಲಿ ಬೃಹತ್‌ ಕೈಗಾರಿಕೆ ಸ್ಥಾಪನೆಗೆ 400 ಎಕರೆ ಭೂಮಿ

ಬೆಂಗಳೂರು, ಅ.24- ರಾಜ್ಯದಲ್ಲಿ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಸುಮಾರು 400 ಎಕರೆ ಭೂಮಿ ಒದಗಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆ ಆಟೊಮೋಟಿವ್‌ ರೀಸರ್ಚ್‌ ಅಸೋಷಿಯೇಷನ್‌ ಆಫ್‌ ಇಂಡಿಯಾ (ಎಆರ್‌ಎಐ) ವತಿಯಿಂದ ನಿರ್ಮಾಣ ಮತ್ತು ಮೂಲ ಸೌಕರ್ಯಗಳ ಉಪಕರಣ ಪರೀಕ್ಷಾ ಕೇಂದ್ರ ಸ್ಥಾಪನೆಗೆ 100 ಎಕರೆ ಭೂಮಿಯನ್ನು ಕೇಳಲಾಗಿತ್ತು.

ಈ ಉದ್ಯಮದಿಂದ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗುವುದಿಲ್ಲ ಎಂಬ ಕಾರಣಕ್ಕೆ ತಾವು ಸಲಹೆ ನೀಡಿದ್ದು, 400 ನಿಂದ 500 ಎಕರೆ ಜಾಗವನ್ನು ಮೀಸಲಿಟ್ಟರೆ, ಬೇರೆ ಬೇರೆ ಕೈಗಾರಿಕೆಗಳು ಅಲ್ಲಿ ಸ್ಥಾಪನೆಯಾಗಲು ಸಾಧ್ಯ ಎಂಬ ಚರ್ಚೆಗಳಿವೆ. ಅದಕ್ಕಾಗಿ ಬೇರೆ ಬೇರೆ ಸ್ಥಳಗಳ ಪರಿಶೀಲನೆ ನಡೆಯುತ್ತಿದೆ ಎಂದರು.

ಮುಖ್ಯಮಂತ್ರಿಯವರು ಒಂದು ಜಾಗವನ್ನು ಸಲಹೆ ಮಾಡಿದ್ದಾರೆ. ಕೇಂದ್ರ ಸಚಿವ ಹೆಚ್‌.ಡಿ.ಕುಮಾರ್‌ಸ್ವಾಮಿಯವರು ತಮೊಂದಿಗೆ ಮಾತನಾಡಿದ್ದಾರೆ ಎಂದರು. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾರೋಹಳ್ಳಿ ಜಾಗವನ್ನು ಸಲಹೆ ಮಾಡಿದ್ದರು. ಅದರ ಪರಿಶೀಲನಾ ವರದಿ ಬಂದಿದೆ. ಉಳಿದಂತೆ ನೆಲಮಂಗಲ ಸೇರಿ ಮೂರು ಸ್ಥಳಗಳು ಪರಿಶೀಲನಾ ಹಂತದಲ್ಲಿವೆ ಎಂದು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದ ಸುತ್ತಾಮುತ್ತಾ ಗ್ರಾಮೀಣ ಭಾಗದ ಜಾಗವನ್ನು ಕೈಬಿಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ಮೊದಲು 362 ಎಕರೆ ಜಾಗವನ್ನು ಸ್ವಾಧೀನಪಡಿಸೊಕೊಳ್ಳಲಾಗಿದೆ. ಅದರಲ್ಲಿ ಸುಮಾರು 4 ಎಕರೆ ಗ್ರಾಮೀಣ ಭಾಗಕ್ಕೆ ಸೇರಿದೆ. ಅದನ್ನು ಹೊರತು ಪಡಿಸಿದರೆ, ಉಳಿದ ಯಾವ ಜಾಗವನ್ನು ಡಿನೋಟಿಫೈ ಮಾಡಲು ನಮ ಸರ್ಕಾರ ಸಿದ್ಧ ಇಲ್ಲ. ಮುಖ್ಯಮಂತ್ರಿಯವರು ಡಿ ನೋಟಿಫಿಕೇಷನ್‌ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಎಂದು ಹೇಳಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ 2027ರಲ್ಲಿ ನಡೆಯಲಿದೆ. ಈಗಾಗಲೇ ಜಪಾನ್‌, ಕೊರಿಯಾಗೆ ತೆರಳಿ ಅಲ್ಲಿನ ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಅಮೆರಿಕಾ ಪ್ರವಾಸ ಮಾಡಬೇಕಿತ್ತು. ಆಡಳಿತಾತಕ ಕೆಲಸಗಳು ಬಾಕಿ ಉಳಿಯುತ್ತವೆ ಎಂಬ ಕಾರಣಕ್ಕಾಗಿ ಪ್ರವಾಸವನ್ನು ಮುಂದೂಡಿದ್ದೇನೆ ಎಂದು ಹೇಳಿದರು.

ದೇಶದಲ್ಲಿ ಮುಂಬೈ-ದೆಹಲಿಯಲ್ಲಿ ಈಗಾಗಲೇ ರೋಡ್‌ ಶೋ ನಡೆಸಲಾಗಿದೆ. ಗುಜರಾತ್‌ ಮತ್ತು ಪಶ್ಚಿಮ ಬಂಗಾಲದಲ್ಲಿ ರೋಡ್‌ಶೋ ಬಾಕಿ ಇದೆ ಎಂದು ಹೇಳಿದರು.ನವೆಂಬರ್‌ 1ರಂದು ದೆಹಲಿಯಲ್ಲಿ ಎಸ್‌‍ಐಆರ್‌ ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ತಮಗೆ ಸಾಧ್ಯವಾಗುತ್ತಿಲ್ಲ. ಅಂದು ಕನ್ನಡ ರಾಜ್ಯೋತ್ಸವ, ಕಾರ್ಯಕ್ರದಮಲ್ಲಿ ಭಾಗವಹಿಸುತ್ತಿದ್ದೇನೆ ಎಂದು ತಿಳಿಸಿದರು.

ಸ್ಟಿಂಗ್‌ ಆಪರೇಷನ್‌ ಬಗ್ಗೆ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಪ್ರಕರಣ ತನಿಖೆ ಹಂತದಲ್ಲಿದೆ. ಈ ಸಂದರ್ಭದಲ್ಲಿ ತಾವು ಮಾತನಾಡಲು ಬಯಸುವುದಿಲ್ಲ ಎಂದು ತಿಳಿಸಿದರು. ವಿಜಯಪುರ ಜಿಲ್ಲೆಯಲ್ಲಿ ಶಾಸಕರು ಹಾಗೂ ತಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಶಾಂತಿಯಿಂದಿದ್ದಾರೆ. ನಾನೂ ಕೂಡ ಶಾಂತಿಯಿಂದ ಇದ್ದೇನೆ ಎಂದು ಹೇಳಿದರು.

RELATED ARTICLES
spot_img

Latest News