Homeರಾಜ್ಯಪಡಿತರ ಲಾನುಭವಿಗಳ ಸ್ವಯಂ ಇ-ಕೆವೈಸಿಗೆ ಅನ್ನ ಸೇವೆ ಆ್ಯಪ್‌

ಪಡಿತರ ಲಾನುಭವಿಗಳ ಸ್ವಯಂ ಇ-ಕೆವೈಸಿಗೆ ಅನ್ನ ಸೇವೆ ಆ್ಯಪ್‌

ಬೆಂಗಳೂರು, ಅ.2- ಪಡಿತರ ಚೀಟಿ ಲಾನುಭವಿಗಳು ಸುಲಭವಾಗಿ ಸ್ವಯಂ ಇ- ಕೆವೈಸಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್‌ ಹರ್ಷದ್‌ ಅವರು ಅನ್ನ ಸೇವೆ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದರು.

ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ (ಡಿಎಫ್‌ಪಿಡಿ) ಗುರಿಪಡಿಸಿದ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ತಿದ್ದುಪಡಿ ಆದೇಶ 2025ರ ಅನ್ವಯ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಚೀಟಿ ಲಾನುಭವಿಗಳು ಪ್ರತಿ ಐದು ವರ್ಷಗಳಿಗೊಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ಐದು ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿರುವ 2,67,64,276 ಲಾನುಭವಿಗಳನ್ನು ಗುರುತಿಸಲಾಗಿದ್ದು, ಸೆ.29ರ ಅಂತ್ಯಕ್ಕೆ 1,56,21,608 ಮಂದಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಸಾಫ್ಟ್ ವೇರ್‌ ಮೂಲಕ ಬಯೋಮೆಟ್ರಿಕ್‌/ಐರಿಸ್‌‍ ದೃಢೀಕರಣ ಬಳಸಿ ಮರು-ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ.

ಲಾನುಭವಿಗಳಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಆಹಾರ ಇಲಾಖೆ, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಹಾಗೂ ಇ-ಆಡಳಿತ ಇಲಾಖೆಯ ಎಲೆಕ್ಟ್ರಾನಿಕ್‌್ಸ ಡಿಲೆವರಿ ಆಫ್‌ ಸಿಟಿಜನ್‌ ಸರ್ವೀಸಸ್‌‍ (ಇಡಿಸಿಎಸ್‌‍)ಸಹಯೋಗದಲ್ಲಿ ಅನ್ನ ಸೇವೆೞ ಆ್ಯಪ್‌ ಅಭಿವೃದ್ಧಿಪಡಿಸಿದೆ. ಆ್ಯಪ್‌ ಮೂಲಕ ಯುಐಡಿಎಐ ಮುಖ ದೃಢೀಕರಣ ಬಳಸಿ ಕೊಂಡು ಲಾನುಭವಿಗಳು ಮನೆ ಯಲ್ಲೇ ಸ್ವಯಂ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.

ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್‌ ಮತ್ತು ಕೊಪ್ಪಳ ಜಿಲ್ಲೆಗಳ ಲಾನುಭವಿಗಳಿಗೆ ಆ್ಯಪ್‌ ಮೂಲಕ ಸ್ವಯಂ ಇ- ಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅ.10ರಿಂದ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದರು.

ಇದರ ಜತೆಗೆ ಆಹಾರ ನಿರೀಕ್ಷಕರು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕವೂ ಇ-ಕೆವೈಸಿ ಮಾಡಿಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ಒಮೆಯೂ ಇ-ಕೆವೈಸಿ ಮಾಡಿಸದ 3,82,362 ಲಾನುಭವಿಗಳಿದ್ದು, ಅವರು ಕೂಡ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ.

RELATED ARTICLES
spot_img

Latest News