Thursday, April 16, 2026
Homeರಾಜ್ಯಆತ್ಮಹತ್ಯೆಗೆ ಶರಣಾದ ಸಿಜೆ ರಾಯ್‌ ಅವರ ಎರಡೂ ಮೊಬೈಲ್‌ ಸಿಐಡಿ ಸೈಬರ್‌ ಸೆಲ್‌ಗೆ ರವಾನೆ

ಆತ್ಮಹತ್ಯೆಗೆ ಶರಣಾದ ಸಿಜೆ ರಾಯ್‌ ಅವರ ಎರಡೂ ಮೊಬೈಲ್‌ ಸಿಐಡಿ ಸೈಬರ್‌ ಸೆಲ್‌ಗೆ ರವಾನೆ

Both mobile phones of CJ Roy who committed suicide sent to CID Cyber ​​Cell

ಬೆಂಗಳೂರು,ಜ.31-ಉದ್ಯಮಿ ಸಿಜೆ ರಾಯ್‌ ಅವರ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುವುದರ ಬಗ್ಗೆ ತೀವ್ರ ತನಿಖೆ ಕೈಗೊಂಡಿರುವ ಅಶೋಕನಗರ ಠಾಣೆ ಪೊಲೀಸರು ಅವರ ಎರಡು ಮೊಬೈಲ್‌ಗಳನ್ನು ಸಿಐಡಿಯ ಸೈಬರ್‌ ಸೆಲ್‌ಗೆ ರವಾನಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಐಟಿ ಅಧಿಕಾರಿಗಳು ವಿಚಾರಣೆಗೆ ಹೋಗಿದ್ದಾಗ ತಮ ಕಚೇರಿಯ ಕೊಠಡಿಯೊಳಗೆ ರಾಯ್‌ ಅವರು ಹೋಗಿ ಬಾಗಿಲು ಹಾಕಿಕೊಂಡು ಆತಹತ್ಯೆಗೂ ಮುನ್ನ ಯಾರ ಜೊತೆಯಾದರೂ ಮಾತನಾಡಿದ್ದಾರೆಯೇ, ಯಾರಿಗಾದರೂ ಮೆಸೇಜ್‌ ಕಳುಹಿಸಿದ್ದಾರೆಯೇ ಎಂಬುವುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕಾನ್ಫಿಡೆಂಟ್‌ ಗ್ರೂಪ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ನೀಡಿರುವ ದೂರಿನಲ್ಲಿ, ರಾಯ್‌ ಅವರು ತಾಯಿ ಜೊತೆ ಮಾತನಾಡಬೇಕೆಂದು ನನಗೆ ತಿಳಿಸಿ ಕೊಠಡಿಯೊಳಗೆ ಹೋದರು. ಅಲ್ಲದೇ ಗನ್‌ಮ್ಯಾನ್‌ಗೆ ಯಾರಿಗೂ ಒಳಗೆ ಬಿಡದಂತೆ ಹೇಳಿದ್ದರು ಎಂದು ತಿಳಿಸಿದ್ದಾರೆ. ಹಾಗಾಗಿ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಸೈಬರ್‌ ಸೆಲ್‌ಗೆ ಕಳುಹಿಸಲಾಗಿದೆ.

ಆತಹತ್ಯೆಗೂ ಮುನ್ನ ತಾಯಿ ಜೊತೆ ಮಾತನಾಡಿದ್ದಾರೆಯೇ ಅಥವಾ ಬೇರೆ ಯಾರ ಜೊತೆಯಾದರೂ ಮಾತನಾಡಿದ್ದಾರೆಯೇ, ಒಂದು ವೇಳೆ ಮಾತನಾಡಿದ್ದರೆ ಯಾವ ಯಾವ ವಿಷಯಗಳನ್ನು ಅವರಿಗೆ ತಿಳಿಸಿದ್ದಾರೆ. ಅಥವಾ ಮೆಸೇಜ್‌ ಕಳುಹಿಸಿದ್ದಾರೆಯೇ ಎಂಬ ಹಲವು ಅನುಮಾನಗಳು ಈಗ ವ್ಯಕ್ತವಾಗಿವೆ.

ರಾಯ್‌ ಅವರ ಐ ಫೋನ್‌ ಹಾಗೂ ಆ್ಯಂಡ್ರಾಯ್‌್ಡ ಫೋನ್‌ಗಳನ್ನು ಈಗಾಗಲೇ ಪೊಲೀಸರು ಸಿಐಡಿಗೆ ರವಾನಿಸಿದ್ದಾರೆ. ಆ ಮೊಬೈಲ್‌ಗಳನ್ನು ರೀಟ್ರೀವ್‌ ಮಾಡಿ ಅದರಲ್ಲಿರುವ ಮಾಹಿತಿಗಳನ್ನು ಕಲೆ ಹಾಕಲು ಸೈಬರ್‌ ಸೆಲ್‌ ಪೊಲೀಸರು ಮುಂದಾಗಿದ್ದಾರೆ.
ಈ ಎರಡು ಮೊಬೈಲ್‌ ಫೋನ್‌ಗಳಿಗೂ ಪಾಸ್‌‍ವರ್ಡ್‌ ಹಾಕಿರುವ ಕಾರಣ ಪರಿಶೀಲನೆಗಾಗಿ ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದೆ. ಅವುಗಳನ್ನು ರೀಟ್ರೀವ್‌ ನಂತರವೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿವೆ.

RELATED ARTICLES

Latest News