ಬೆಳಗಾವಿ,ಮಾ.21- ಸೈಬರ್ ವಂಚಕರು ಉದ್ಯಮಿಯೊಬ್ಬರಿಗೆ ಮೊಬೈಲ್ ಕರೆ ಮಾಡಿ ತಾವು ಸಿಬಿಐ ಡೈರೆಕ್ಟರ್‌ರೆಂದು ಪರಿ ಚಯಿಸಿಕೊಂಡು ಡಿಜಿಟಲ್ ಅರೆಸ್ಟ್ ಮಾಡಿ ಸುಮಾರು 15 ಕೋಟಿ ರೂ ದೋಚಿರುವ ಘಟನೆ ಕುಂದಾ ನಗರಿಯನ್ನು ಬೆಚ್ಚಿಬೀಳಿಸಿದೆ.
ಟಿಳಕವಾಡಿ ಅಗರಕರ ರಸ್ತೆ ನಿವಾಸಿ, ಉದ್ಯಮಿ ಅಜೀತ್ ಗೋಪಾಲಕೃಷ್ಣ ಸರಾಫ್ (81) ಎಂಬು ವವರಿಗೆ ಫೆ.5 ರಂದು ಬೆಳಗ್ಗೆ 9.18 ರ ಸುಮಾರಿಗೆ ಕರೆ ಮಾಡಿದ ವಂಚಕ ತಾವು ಸಿಬಿಐ ಕಚೇರಿಯಿಂದ ಸಿಬಿಐ ಡೈರೆಕ್ಟರ್ ಸುಬ್ರಮಣ್ಯಂ ಮಾತನಾಡುತ್ತಿರುವುದಾಗಿ ಹೇಳಿದ್ದಾನೆೆ.
ನಿಮ ಬ್ಯಾಂಕ್ ಖಾತೆಯಿಂದ ಮನಿ ಲಾಂಡ್ರಿಂಗ್ ಫ್ರಾಡ್ ಲಿಸ್ಟ್‌ನಲ್ಲಿ ತೋರಿಸುತ್ತಿದೆ ನೀವು ಜೇಟ್ ಏರವೇಸ್ ಕಂಪನಿಯ ಸಿಇಓ ನರೇಶ ಗೋಯಲ್ ಅವರೊಂದಿಗೆ ಸಂಪರ್ಕ ಹೊಂದಿದ್ದೀರಿ, ನಾವು ಈಗಾಗಲೇ ಅವರನ್ನು ಬಂಧಿಸಿದ್ದೇವೆ.
ನೀವು ನರೇಶ ಗೋಯಲ್‌ರೊಂದಿಗೆ ನಿಮ ಕೆನರಾ ಬ್ಯಾಂಕ್ ಖಾತೆಯಿಂದ 25 ಲಕ್ಷ ರೂ.ಗಳನ್ನು ಮನಿ ಲ್ಯಾಂಡರಿಂಗ್ ಮಾಡಿ 5 ಲಕ್ಷ ಕಮಿಷನ್ ಪಡೆದುಕೊಂಡಿದ್ದೀರ ಎಂದು ವಂಚಕರು ಹೇಳಿದ್ದಾರೆ.ಈ ಪ್ರಕರಣದಲ್ಲಿ ನೀವು ಆರೋಪಿ ಇದ್ದೀರಿ ನೀವು ತನಿಖೆಗೆ ನಮೊಂದಿಗೆ ಸಹಕರಿಸಬೇಕು ಇಲ್ಲದಿದ್ದರೆ ನಿಮನ್ನು ಕೂಡಲೇ ಬಂಧಿಸುತ್ತೇವೆಂದು ಹೆದರಿಸಿದ್ದಾರೆ.
ನಂತರ ಅವರ ಖಾತೆಯಲ್ಲಿರುವ ಹಣ ಹಾಗೂ ಎಫ್‌ಡಿ ಹಣ ಹಾಗೂ ಎಷ್ಟು ಮೊತ್ತದ ಷೇರು ಇದೆ ಎಂದು ತಿಳಿದುಕೊಂಡಿದ್ದಾರೆ. ಹಣದ ಬಗ್ಗೆ ಆರ್‌ಬಿಐ ನವರು ವೇರಿಫಿಕೇಷನ್ ಮಾಡುತ್ತಾರೆಂದು ಹೇಳಿದ್ದಾರೆ. ನೀವು ಈ ಪ್ರಕರಣದಿಂದ ಬಚಾವ್ ಆಗಲು ನಾವು ನೀಡುವ ಅಕೌಂಟ್ ನಂಬರ್‌ಗೆ ಹಣ ಸಂದಾಯ ಮಾಡಿ, ತನಿಖೆ ಮುಗಿದ ಬಳಿಕ ನಿಮ ಹಣ ಮರಳಿಸುತ್ತೇವೆ ಎಂದು ನಂಬಿಸಿದ್ದಾರೆ.
ಬಳಿಕ ಉದ್ಯಮಿ ಅಜೀತ್ ಗೋಪಾಲಕೃಷ್ಣ ಸರಾಫ್ ಅವರನ್ನು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಈ ರೀತಿ ಉದ್ಯಮಿಯಿಂದ ಫೆ.7 ರಿಂದ ಮಾ.9 ರ ವರೆಗೆ ಹಂತ ಹಂತವಾಗಿ 15.45 ಕೋಟಿ ಹಣ ವನ್ನು ಆರ್‌ಟಿಜಿಎಸ್ ಮುಖಾಂತರ ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ತದ ನಂತರದಲ್ಲಿ ಹಣ ವಾಪಸ್ ಆಗದಿದ್ದಾಗ ತಾವು ಮೋಸ ಹೋಗಿರುವುದು ಅರಿತು ಸಿಬಿಐ ಡೈರೆಕ್ಟರ್ ಎಂದು ಪರಿಚಯಿಸಿಕೊಂಡಿದ್ದ ಕೆ.ಸುಬ್ರಮಣ್ಯಂ, ಸಿಬಿಐ ಚೀಫ್ ಕೆ.ಶಿವಾ ಸುಬ್ರಮಣ್ಯಂ ಮತ್ತು ಆರ್‌ಬಿಐ ಸರ್ವಲನ್‌್ಸ ಆಫೀಸರ್ ಜಾರ್ಜ್ ಮೆಥ್ಯವ್ ಹೆಸರಿನ ವಂಚಕರ ವಿರುದ್ಧ ಇದೀಗ ಬೆಳಗಾವಿ ನಗರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಸೈಬರ್ ವಂಚಕರ ಅಕೌಂಟ್ ಪ್ರೀಜ್ ಮಾಡಿದ್ದಾರೆ. ಈಗಾಗಲೇ 15 ಕೋಟಿ ಪೈಕಿ 90 ಲಕ್ಷ ಹಣ ಇದ್ದ ಖಾತೆ ಪ್ರೀಜ್ ಮಾಡಿದ್ದಾರೆ. ಭಾರಿ ಹಣ ಕಳೆದುಕೊಂಡು ಉದ್ಯಮಿ ಕಂಗಾಲಾಗಿದ್ದಾರೆ. ಮನವಿ:ಸೈಬರ್ ವಂಚಕರ ಬಗ್ಗೆ ಎಚ್ಚರದಲ್ಲಿರುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಸೈಬರ್ ವಂಚಕರ ಬಂಧನಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ವಿಶೇಷ ತಂಡ ರಚಿಸಿದ್ದಾರೆ.
