Sunday, April 12, 2026
Homeರಾಜ್ಯಜೊಮಾಟೋ ಪ್ಲಾಟ್‌ ಫಾರ್ಮ್‌ ಶುಲ್ಕ ಏರಿಕೆ

ಜೊಮಾಟೋ ಪ್ಲಾಟ್‌ ಫಾರ್ಮ್‌ ಶುಲ್ಕ ಏರಿಕೆ

Zomato platform fee hike

ಬೆಂಗಳೂರು, ಮಾ.21- ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿಯ ಪರಿಣಾಮ ಜಾಗತಿಕ ಸರಬರಾಜು ಸರಪಳಿಗೆ ಹೊಡೆತ ನೀಡುತ್ತಿದ್ದು, ಅದರ ಬಿಸಿ ಈಗ ಬೆಂಗಳೂರು ನಗರಕ್ಕೂ ತಟ್ಟಲು ಆರಂಭಿಸಿದೆ. ವಿಶೇಷವಾಗಿ ಆಹಾರ ಡೆಲಿವರಿ ಸೇವೆಗಳ ಮೇಲೆ ಪರಿಣಾಮ ಸ್ಪಷ್ಟವಾಗುತ್ತಿದೆ.

ಈ ನಡುವೆ ಜೊಮಾಟೋ ತನ್ನ ಪ್ಲಾಟ್‌ಫಾರ್ಮ್‌ ಶುಲ್ಕವನ್ನು ಮತ್ತೆ ಹೆಚ್ಚಿಸಿರುವುದು ಗ್ರಾಹಕರಿಗೆ ಮತ್ತೊಂದು ಹೊರೆ ಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿನ ಅಶಾಂತಿ ಪರಿಸ್ಥಿತಿ ಜಾಗತಿಕ ಇಂಧನ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಅಸ್ಥಿರತೆ ಉಂಟುಮಾಡಿದ್ದು, ಇದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಆನ್‌ಲೈನ್‌‍ ಆಹಾರ ಡೆಲಿವರಿ ಸೇವೆಗಳು ಬೆಲೆ ಏರಿಕೆಯನ್ನು ಕಂಡಿವೆ.

ಈ ನಡುವೆ ಜೊಮಾಟೋ ತನ್ನ ಪ್ಲಾಟ್‌ಫಾರ್ಮ್‌ ಶುಲ್ಕವನ್ನು ಶೇ. 19ರಷ್ಟು ಏರಿಸಿದೆ. ಒಂದು ವರ್ಷದೊಳಗೆ ಇದೇ ಎರಡನೇ ಬಾರಿ ಪ್ಲಾಟ್‌ಫಾರ್ಮ್‌ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಇದ್ದ 12.50 ಇದ್ದ ಪ್ಲಾಟ್‌ಫಾರ್ಮ್‌ ಶುಲ್ಕವನ್ನು 14.90 ರೂ.ಗಳಿಗೆ ಏರಿಸಲಾಗಿದ್ದು, ಪ್ರತಿ ಆರ್ಡರ್‌ಗೂ ಈ ಶುಲ್ಕ ಅನ್ವಯವಾಗುತ್ತದೆ.

ಅಂದರೆ, ಪ್ರತೀ ಆರ್ಡರ್‌ಗೆ 2.40 ಹೆಚ್ಚುವರಿ ಶುಲ್ಕ ಗ್ರಾಹಕರ ಮೇಲೆ ಬೀಳಲಿದೆ.ಈ ಹೆಚ್ಚಳದಿಂದ ಈಗಾಗಲೇ ದುಬಾರಿಯಾಗಿರುವ ಆನ್‌ಲೈನ್‌‍ ಆಹಾರ ಸೇವೆಗಳು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಇಂಧನ ಬೆಲೆ, ಡೆಲಿವರಿ ವೆಚ್ಚ, ಮತ್ತು ಸರಬರಾಜು ಸಮಸ್ಯೆಗಳು ಗ್ರಾಹಕರಿಗೆ ನೇರ ಹೊರೆ ಆಗುತ್ತಿದೆ.ಇದರ ಜೊತೆಗೆ, ಡೆಲಿವರಿ ಪಾಲುದಾರರಿಗೂ ಆರ್ಡರ್‌ಗಳ ಪ್ರಮಾಣದಲ್ಲಿ ಸ್ವಲ್ಪ ಕುಸಿತ ಕಾಣಿಸಿಕೊಳ್ಳುತ್ತಿರುವ ವರದಿಗಳು ಬರುತ್ತಿವೆ.ಜಾಗತಿಕ ಅಶಾಂತಿಯ ಪರಿಣಾಮ ಸ್ಥಳೀಯ ಜೀವನ ಶೈಲಿಯ ಮೇಲೂ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

RELATED ARTICLES

Latest News