Thursday, April 23, 2026
Homeರಾಜ್ಯರಣರಣ ಬಿಸಿಲು : 'ಬಡವರ ಫ್ರಿಡ್ಜ್' ಮಣ್ಣಿನ ಮಡಿಕೆಗಳಿಗೆ ಹೆಚ್ಚಿದ ಬೇಡಿಕೆ

ರಣರಣ ಬಿಸಿಲು : ‘ಬಡವರ ಫ್ರಿಡ್ಜ್’ ಮಣ್ಣಿನ ಮಡಿಕೆಗಳಿಗೆ ಹೆಚ್ಚಿದ ಬೇಡಿಕೆ

Clay vessel sales go up as summer sets in

ಬೆಂಗಳೂರು,ಏ.23- ರಣಬಿಸಿಲಿಗೆ ಜನರು ಹೈರಾಣರಾಗಿದ್ದು, ನೆತ್ತಿ ಸುಡುವ ಬಿಸಿಲಿಗೆ ಬೆಂದು ಬೆಂಡಾಗಿರುವ ಜನರು ಶುದ್ಧ ನೈಸರ್ಗಿಕ ಕುಡಿಯುವ ನೀರಿಗಾಗಿ ಬಡವರ ಫ್ರಿಡ್‌್ಜ ಎಂದು ಕರೆಯುವ ಮಣ್ಣಿನ ಮಡಕೆಗಳ ಮೊರೆ ಹೋಗಿದ್ದಾರೆ.

ಅತಿಯಾದ ಬಿಸಿಲಿನಿಂದ ತಂಪಾದ ನೀರಿಗಾಗಿ ಮಣ್ಣಿನ ಮಡಕೆಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ವಿದ್ಯುತ್‌ ಫ್ರಿಡ್‌್ಜಗಳಿಗಿಂತ ಮಣ್ಣಿನ ಮಡಕೆಗಳಲ್ಲಿ ನೀರು ತಂಪಾಗಿ ಆರೋಗ್ಯಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಜನರು ಆರೋಗ್ಯದ ದೃಷ್ಟಿಯಿಂದ ಮಡಕೆ, ಹೂಜಿ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಂಡುಬರುತ್ತಿವೆ.

ಬಿಸಿಲಿನ 35 ಡಿ ಸೆ ಗಿಂತ ಅಧಿಕವಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಅದರಲ್ಲೂ ಮಧ್ಯಾಹ್ನದ ವೇಳೆ ಹೊರಗಡೆ ಬಂದರೆ ಕೆಂಡದ ಮೇಲೆ ಕಾಲಿಟ್ಟಂತಾಗುತ್ತಿದೆ. ಊಟ-ತಿಂಡಿ ಸೇರದೇ ಬರೀ ನೀರು ಹಾಗೂ ತಂಪು ಪಾನೀಯ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುವಂತಾಗಿದೆ.

ಅನಿವಾರ್ಯವಾಗಿ ಕೆಲಸ ಕಾರ್ಯಗಳಿಗೆ ಹೊರಬಂದ ಜನರು ಮನೆಗೆ ಮರಳಿದ ತಕ್ಷಣ ತಂಪಾದ ನೀರು ಕುಡಿಯಬೇಕು. ಆದರೆ ಫ್ರಿಡ್‌್ಜನಲ್ಲಿಟ್ಟಿರುವ ನೀರು ಆರೋಗ್ಯಕ್ಕೆ ಉತ್ತಮವಲ್ಲ. ಈ ಹಿನ್ನೆಲೆಯಲ್ಲಿ ನಗರದ ನಿವಾಸಿಗಳು ಸಹ ಮಡಕೆಗಳನ್ನು ಬಳಸುತ್ತಿದ್ದು, ಅದರಲ್ಲಿನ ನೀರನ್ನು ಸೇವಿಸುತ್ತಿದ್ದಾರೆ.

ಮಡಕೆಯಲ್ಲಿ ಬರೀ ನೀರು ಮಾತ್ರ ತಂಪು ಹಾಗೂ ತಾಜವಾಗಿರುವುದಿಲ್ಲ, ತರಕಾರಿ, ಹಾಲು ಸೇರಿದಂತೆ ಯಾವುದೇ ಆಹಾರ ವಸ್ತುಗಳನ್ನು ಇಟ್ಟರೆ ತಾಜಾತನದಿಂದ ಇರುತ್ತದೆ. ಇದಕ್ಕೆ ವಿದ್ಯುತ್‌ ಅವಶ್ಯಕತೆ ಇಲ್ಲ. ಚಿಕ್ಕದೊಂದು ಮೂಲೆಯಲ್ಲಿಟ್ಟರೆ ಸಾಕು. ಆರೋಗ್ಯದ ಜೊತೆ ದೇಹವನ್ನು ತಂಪಾಗಿಡಲು ನೈಸರ್ಗಿಕವಾದ ನೀರು ದೊರೆಯುತ್ತದೆ.

ಸ್ಟೀಲು, ಅಲ್ಯೂಮಿನಿಯಂ, ಕಂಚಿನ ಆಕರ್ಷಕ ಅಡುಗೆ ಮನೆ ವಸ್ತುಗಳು ಬಂದ ಮೇಲೆ ಮಡಕೆಗಳು ಮೂಲೆ ಸೇರಿದ್ದವು. ಯಾರೂ ಕೂಡ ಮಡಕೆಗಳನ್ನು ಬಳಸುತ್ತಿರಲಿಲ್ಲ. ಇದರಿಂದ ಕುಂಬಾರರು ತಮ ಕಸುಬುಗಳನ್ನು ಬಿಟ್ಟು ಬೇರೆ ಕಸಬುಗಳಲ್ಲಿ ತೊಡಗಿದ್ದರು. ಆದರೆ ಈ ವರ್ಷ ಕುಂಬಾರರಿಗೆ ಹರ್ಷ ತಂದಿದೆ.

ತುಮಕೂರು, ಬೆಂಗಳೂರು ಗ್ರಾಮಾಂತರ, ಮಾಗಡಿ, ರಾಮನಗರ, ದೊಡ್ಡಬಳ್ಳಾಪುರ ಪ್ರದೇಶಗಳಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಕುಂಬಾರಿಕೆ ಹೆಚ್ಚಾಗಿ ನಡೆಯುತ್ತಿತ್ತು. ಆಧುನಿಕತೆ ಭರಾಟೆಗೆ ಸಿಲುಕಿ ಇಂದು ಕುಂಬಾರಿಕೆ ಕಸುಬು ಮಾಯವಾಗಿದೆ.

ಈ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಡಕೆಗಳು ತಯಾರಾಗುತ್ತಿದ್ದು, ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರದಿಂದ ವಿಶೇಷ ವಿನ್ಯಾಸದ ಆಕರ್ಷಕ ಮಡಕೆಗಳು, ಹೂಜಿಗಳು, ಕೊಡಗಳನ್ನು ತರಿಸಿಕೊಂಡು ಬೆಂಗಳೂರು ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ.
ಬೇಸಿಗೆ ಮುಗಿಯುವವರೆಗೂ ಮಡಕೆ ನೀರನ್ನು ಕುಡಿಯಬೇಕೆಂಬ ಕಾರಣಕ್ಕೆ ಜನರು ಹೆಚ್ಚಾಗಿ ಖರೀದಿಯಲ್ಲಿ ತೊಡಗಿದ್ದಾರೆ.

ಮೊದಲೆಲ್ಲಾ ಸ್ಥಳೀಯವಾಗಿ ಮಡಕೆಗಳು ದೊರೆಯುತ್ತಿದ್ದವು. ಈಗ ಬೇರೆಡೆಯಿಂದ ಆಮದು ಮಾಡಿಕೊಳ್ಳುತ್ತಿದ್ದು, ಸಾಗಾಟದ ವೆಚ್ಚ, ಕೂಲಿ, ಅಂಗಡಿ ಬಾಡಿಗೆ ಎಲ್ಲವನ್ನೂ ಸರಿದೂಗಿಸಲು ಗಾತ್ರಕ್ಕೆ ತಕ್ಕಂತೆ ಪ್ರಾರಂಭದಿಂದ 150 ರೂ.ಗಳಿಂದ 500 ರೂ.ಗಳವರೆಗೂ ಮಾರಾಟ ಮಾಡಲಾಗುತ್ತಿದೆ ಎಂದು ನಗರದ ಗಾಂಧಿಬಜಾರ್‌ನಲ್ಲಿರುವ ವ್ಯಾಪಾರಿ ರುದ್ರಯ್ಯ ತಿಳಿಸಿದ್ದಾರೆ.

RELATED ARTICLES

Latest News