ಬೆಂಗಳೂರು,ಆ.10- ಜಿಬಿಎ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನ ಗಳನ್ನು ಸ್ವಚ್ಛವಾಗಿಡದ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಸ್ವಚ್ಛತಾ ವೆಚ್ಚವನ್ನು ವಸೂಲಿ ಮಾಡಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ರಾವ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನವನ್ನು ಹಮಿಕೊಳ್ಳಲಾಗಿದೆ.
ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು 2020ರ ಉಪಾವಿಧಿ 18(1)(ಬಿ) ರನ್ವಯ, ನಗರದ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವುದು ಸಂಬಂಧಪಟ್ಟ ನಿವೇಶನ ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ.ಈ ಹಿನ್ನೆಲೆಯಲ್ಲಿ ಖಾಲಿ ನಿವೇಶನಗಳ ಮಾಲೀಕರು ತಮ ನಿವೇಶನದಲ್ಲಿರುವ ತ್ಯಾಜ್ಯ, ಕಸ, ಮಣ್ಣು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಿ, ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
ನಗರದ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ಆ.15 ರೊಳಗಾಗಿ ತಮ ನಿವೇಶನವನ್ನು ಸ್ವಚ್ಛಗೊಳಿಸಿ, ನಗರ ಪಾಲಿಕೆಯ ವತಿಯಿಂದ ಗುರುತಿಸಲಾದ ನಿಗದಿತ ಸ್ಥಳ(5 ಸ್ಥಳಗಳು)ದಲ್ಲಿ ವಿಲೇವಾರಿ ಮಾಡುವುದು. ಅಗತ್ಯವಿದ್ದಲ್ಲಿ, ಸ್ವಚ್ಛತೆಗಾಗಿ ಆಯಾ ನಗರ ಪಾಲಿಕೆಗಳು ಅಧಿಸೂಚಿಸಿದ ಸೇವಾದಾರರ ಸೇವೆಯನ್ನು ಸಹ ಪಡೆಯಬಹುದು.
ಆ.15ರ ನಂತರವೂ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದಲ್ಲಿ, ನಗರ ಪಾಲಿಕೆಯ ವತಿಯಿಂದ ತ್ಯಾಜ್ಯ/ಡೆಬ್ರಿಸ್ ಅನ್ನು ತೆರವುಗೊಳಿಸಿ, ಸ್ವಚ್ಛತಾ ವೆಚ್ಚ ಹಾಗೂ ತ್ಯಾಜ್ಯ ಸಾಗಾಣಿಕೆ ವೆಚ್ಚವನ್ನು ಸಂಬಂಧಪಟ್ಟ ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುವುದು. ಈ ಕ್ರಮವು ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು 2020ರ ಉಪವಿಧಿ 18(1)(ಎ)(ಜಿಜಿ) ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿನಿಯಮ, 2024ರ ಕಲಂ 285(2)ರನ್ವಯ ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುವುದು.
ಖಾಲಿ ನಿವೇಶನಗಳ ಸ್ವಚ್ಛಗೊಳಿಸಲು ತಗಲುವ ವೆಚ್ಚದ ವಿವರ:
20×30 = 600 ಚ.ಅಡಿ / 55.74 ಚ.ಮೀ.ನಿವೇಶನಕ್ಕೆ ತಗಲುವ ವೆಚ್ಚ:
- ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 6,700 ರೂ.
- ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 7,700 ರೂ.
- ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ -19,200 ರೂ.
30×40 = 1,200 ಚ.ಅಡಿ / 111.48 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ: - ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 13,400 ರೂ.
- ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 14,400 ರೂ.
- ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 38,400 ರೂ.
30×50 = 1,500 ಚ.ಅಡಿ / 139.35 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ: - ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 16,750 ರೂ.
- ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 14,750 ರೂ.
- ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 48,000 ರೂ.
4×60 = 2,400 ಚ.ಅಡಿ / 222.97 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ: - ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 26,800 ರೂ.
- ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 27,800 ರೂ.
- ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 76,800 ರೂ.
50×80 = 4,000 ಚ.ಅಡಿ / 371.61 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ: - ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 46,700 ರೂ.
- ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) – 47,700 ರೂ.
- ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 1,28,000ರೂ.
ಮೇಲ್ಕಂಡಂತೆ, ಇದಕ್ಕಿಂತಲೂ ಹೆಚ್ಚಿನ ಅಳತೆ/ವಿಸ್ತೀರ್ಣದ ನಿವೇಶನಗಳಿಗೆ, ವಿಸ್ತೀರ್ಣಕ್ಕೆ ಅನುಗುಣವಾಗಿ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುವುದು.
ಖಾಲಿ ನಿವೇಶನಗಳ ಮಾಲೀಕರು ಸಾರ್ವಜನಿಕ ಆರೋಗ್ಯ ಮತ್ತು ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ನಿಗದಿತ ದಿನಾಂಕದೊಳಗಾಗಿ ತಮ ನಿವೇಶನಗಳನ್ನು ಸ್ವಚ್ಛಗೊಳಿಸಿ, ತ್ಯಾಜ್ಯರಹಿತವಾಗಿಡಲು ಸಹಕರಿಸುವಂತೆ ಮನವಿ ಮಾಡಲಾಗಿದೆ.
