Homeರಾಜ್ಯ'ವಂದೇ ಮಾತರಂ' ಗೀತೆ ಕುರಿತು ಕಾಂಗ್ರೆಸ್‌‍ಲ್ಲೇ ಭಿನ್ನ ನಿಲುವು

‘ವಂದೇ ಮಾತರಂ’ ಗೀತೆ ಕುರಿತು ಕಾಂಗ್ರೆಸ್‌‍ಲ್ಲೇ ಭಿನ್ನ ನಿಲುವು

ಬೆಂಗಳೂರು,ಸೆ.11-ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ದೇಶಪ್ರೇಮಿ ಭಾರತೀಯರಲ್ಲಿ ಕಿಚ್ಚು ಹಚ್ಚಿಸಿದ್ದ ವಂದೇ ಮಾತರಂ ಗೀತೆಯ ಗಾಯನ ಇದೀಗ ವಿವಾದದ ಕಿಡಿ ಹಚ್ಚಿಸಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ವಂದೇ ಮಾತರಂ ಗೀತೆಯನ್ನು ಹಾಡುವಾಗ ರಾಷ್ಟ್ರಗೀತೆಗೆ ಸರಿಸಮನಾಗಿ ಎದ್ದು ನಿಂತು ಗೌರವ ಸೂಚಿಸಬೇಕೆಂದು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿತ್ತು. ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ಆಗಿದೆ.

ಇದೀಗ ಕೇಂದ್ರ ಸರ್ಕಾರ ವಂದೇ ಮಾತರಂಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಅಧಿಕೃತ ಕಾರ್ಯಕ್ರಮಗಳಲ್ಲಿ ಅದರ ಪೂರ್ಣ ಆರು ಚರಣಗಳ ಆವೃತ್ತಿಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಗೀತೆ ಗಾಯನ ನಡೆಯುವ ಸಂದರ್ಭದಲ್ಲಿ ಸಭಿಕರು ಗಮನಸ್ಥಿತಿಯಲ್ಲಿ ಎದ್ದು ನಿಂತು ಗೌರವಿಸಬೇಕು ಎಂಬ ಶಿಷ್ಟಾಚಾರವನ್ನು ಕೇಂದ್ರದ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿವೆ.

ಇದರ ಬೆನ್ನಲ್ಲೇ ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರ ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಆದೇಶ ಹೊರಡಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಿಗೆ ಮಾತ್ರ ಪೂರ್ಣ ಆವೃತ್ತಿಗೆ ಅವಕಾಶ ನೀಡಲಾಗಿದೆ.
ಹೊಸ ಕಾನೂನಿನ ಪ್ರಕಾರ, ಯಾರಾದರೂ ಉದ್ದೇಶಪೂರ್ವಕವಾಗಿ ವಂದೇ ಮಾತರಂ ಗಾಯನವನ್ನು ತಡೆಯುವುದು ಅಥವಾ ಗಾಯನ ನಡೆಯುತ್ತಿರುವ ಸಭೆಗೆ ಅಡ್ಡಿಪಡಿಸುವುದು ಅಪರಾಧ. ಇಂತಹ ಪ್ರಕರಣದಲ್ಲಿ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ, ದಂಡ ಅಥವಾ ಎರಡೂ ವಿಧಿಸಬಹುದು. ಪುನರಾವರ್ತಿತ ಅಪರಾಧಗಳಿಗೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆಯ ನಿಯಮವೂ ಅನ್ವಯಿಸುತ್ತದೆ.

ಕರ್ನಾಟಕದಲ್ಲಿ ಮಾತ್ರ ಎರಡು ಚರಣ ಏಕೆ?
ಕೇಂದ್ರದ ಮಾರ್ಗಸೂಚಿ ಪೂರ್ಣ ಆವೃತ್ತಿಗೆ ಒತ್ತು ನೀಡಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮಾತ್ರ ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್‌‍ ಆಡಳಿತದ ಕರ್ನಾಟಕದಲ್ಲಿ ಎರಡು ಚರಣ, ಆದರೆ ದೇಶದ ಇತರ ಭಾಗಗಳಲ್ಲಿ ಪೂರ್ಣ ಆವೃತ್ತಿ ಗಾಯನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಒಂದೇ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಂದೇ ರೀತಿಯ ನಿಲುವು ಏಕೆ ಇಲ್ಲ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಶೇಷವಾಗಿ ತೆಲಂಗಾಣ ವಿಧಾನಸಭೆಯ ಇತ್ತೀಚಿನ ಅಧಿವೇಶನದಲ್ಲಿ ವಂದೇ ಮಾತರಂನ ಪೂರ್ಣ ಆರು ಚರಣಗಳನ್ನು ಸದಸ್ಯರು ಹಾಡಿರುವುದು ಗಮನ ಸೆಳೆದಿದೆ. ಇದು ಕಾಂಗ್ರೆಸ್‌‍ನ ರಾಷ್ಟ್ರೀಯ ಮಟ್ಟದ ನಿಲುವಿನೊಂದಿಗೆ ವ್ಯತ್ಯಾಸದ ಚರ್ಚೆಗೆ ಕಾರಣವಾಗಿದೆ.

ಇದಕ್ಕಿಂತಲೂ ದೊಡ್ಡ ರಾಜಕೀಯ ಬೆಳವಣಿಗೆ ಜಮು-ಕಾಶೀರದಲ್ಲಿ ನಡೆದಿದೆ. ಕಾಂಗ್ರೆಸ್‌‍ನ ಮಿತ್ರ ಪಕ್ಷ ನ್ಯಾಷನಲ್‌ ಕಾನ್ಫರೆನ್‌್ಸ ನೇತೃತ್ವದ ಜಮು-ಕಾಶೀರ ಸರ್ಕಾರದ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಸಂಪೂರ್ಣ ಆರು ಚರಣಗಳನ್ನು ಹಾಡಲಾಗಿದೆ. ಇದಕ್ಕೆ ಕಾಂಗ್ರೆಸ್‌‍ ಆಕ್ಷೇಪ ವ್ಯಕ್ತಪಡಿಸಿ ಮೊದಲ ಎರಡು ಚರಣಗಳನ್ನಷ್ಟೇ ಹಾಡುವ ಐತಿಹಾಸಿಕ ಪದ್ಧತಿಯನ್ನು ಅನುಸರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದಕ್ಕೆ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿ, ನ್ಯಾಷನಲ್‌ ಕಾನ್ಫರೆನ್‌್ಸ ನಾಯಕರು ಕಾಂಗ್ರೆಸ್‌‍ ನಾಯಕರೇ ಹಿಂದೆ ಪೂರ್ಣ ವಂದೇ ಮಾತರಂ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ದೃಶ್ಯಗಳನ್ನು ಮುಂದಿಟ್ಟು ಕಾಂಗ್ರೆಸ್‌‍ನ ನಿಲುವಿನಲ್ಲಿರುವ ವೈರುಧ್ಯವನ್ನು ಪ್ರಶ್ನಿಸಿದ್ದಾರೆ.

ಹೀಗಾಗಿ ಇದು ಕೇವಲ ರಾಷ್ಟ್ರೀಯ ಗೀತೆಯ ವಿಚಾರವಾಗದೆ ಇಂಡಿಯಾ ಮೈತ್ರಿಕೂಟದೊಳಗಿನ ವೈಚಾರಿಕ ಭಿನ್ನಾಭಿಪ್ರಾಯವೂ ಬಹಿರಂಗವಾಗುವಂತೆ ಮಾಡಿದೆ.ಬಿಜೆಪಿ ವಾಗ್ದಾಳಿ:ಕರ್ನಾಟಕದ ಆದೇಶವನ್ನು ಬಿಜೆಪಿ ಇದೀಗ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಅಲ್ಪಸಂಖ್ಯಾತ ಸಮುದಾಯದವರು ಮುನಿಸಿಕೊಳ್ಳಬಹುದೆಂಬ ಭಯದಿಂದಲೇ ಪೂರ್ಣ ವಂದೇ ಮಾತರಂಗೆ ಕಾಂಗ್ರೆಸ್‌‍ ವಿರೋಧಿಸುತ್ತಿದೆಯೇ? ಎಂಬ ಪ್ರಶ್ನೆಯನ್ನು ಬಿಜೆಪಿ ಮುಂದಿಟ್ಟಿದೆ.

ಒಂದು ಕಡೆ ದೇಶದ ಏಕತೆ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಸಂಕೇತಗಳ ಗೌರವದ ಬಗ್ಗೆ ಮಾತನಾಡುವ ಕಾಂಗ್ರೆಸ್‌‍, ಮತ್ತೊಂದೆಡೆ ತನ್ನದೇ ಆಡಳಿತವಿರುವ ರಾಜ್ಯಗಳಲ್ಲಿ ವಿಭಿನ್ನ ನಿಯಮ ರೂಪಿಸುತ್ತಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪವಾಗಿದೆ.
ಮತ್ತೊಂದೆಡೆ ಜಮು-ಕಾಶೀರದಲ್ಲಿ ಕಾಂಗ್ರೆಸ್‌‍ನ ಮಿತ್ರ ಪಕ್ಷವೇ ಪೂರ್ಣ ವಂದೇ ಮಾತರಂ ಹಾಡಿಸಿ ಎದ್ದು ನಿಂತು ಗೌರವಿಸಿದಾಗ, ಕಾಂಗ್ರೆಸ್‌‍ ಅದನ್ನು ಪ್ರಶ್ನಿಸುವ ಸ್ಥಿತಿ ಏಕೆ ನಿರ್ಮಾಣವಾಯಿತು?

ಹೀಗಾಗಿ ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್‌‍ನ ರಾಷ್ಟ್ರೀಯ ನಿಲುವು, ರಾಜ್ಯವಾರು ನಿಲುವು ಹಾಗೂ ಮೈತ್ರಿ ಪಕ್ಷಗಳ ನಿಲುವುಗಳ ನಡುವೆ ಸಮನ್ವಯದ ಕೊರತೆ ಇದೆಯೇ? ಎಂಬ ಪ್ರಶ್ನೆ ಈಗ ಚರ್ಚೆಯ ಕೇಂದ್ರವಾಗಿದೆ.

ರಾಷ್ಟ್ರೀಯ ಸಂಕೇತ: ವಂದೇ ಮಾತರಂ ಕೇವಲ ಒಂದು ರಾಜಕೀಯ ಪಕ್ಷದ ವಿಚಾರವಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದೊಂದಿಗೆ ಆಳವಾಗಿ ಬೆಸೆದುಕೊಂಡಿರುವ ರಾಷ್ಟ್ರೀಯ ಗೀತೆಯಾಗಿದೆ. 1950ರ ಸಂವಿಧಾನ ಸಭೆಯಲ್ಲೇ ವಂದೇ ಮಾತರಂಗೆ ಜನಗಣಮನದೊಂದಿಗೆ ಸಮಾನ ಗೌರವ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಹೀಗಾಗಿ ರಾಷ್ಟ್ರೀಯ ಗೀತೆಯ ಗೌರವದ ವಿಚಾರವನ್ನು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಿಂದ ನೋಡುವ ಬದಲು, ರಾಷ್ಟ್ರೀಯ ಭಾವನೆ, ಸಂವಿಧಾನಾತಕ ಮೌಲ್ಯಗಳು ಮತ್ತು ಎಲ್ಲ ಸಮುದಾಯಗಳ ಭಾವನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ರಾಜಕೀಯ ಪಕ್ಷಗಳ ಜವಾಬ್ದಾರಿ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಆದರೆ ಪ್ರಸ್ತುತ ಬೆಳವಣಿಗೆಗಳಲ್ಲಿ ಕರ್ನಾಟಕದಲ್ಲಿ ಎರಡು ಚರಣ, ತೆಲಂಗಾಣದಲ್ಲಿ ಪೂರ್ಣ ಗಾಯನ, ಜಮು-ಕಾಶೀರದಲ್ಲಿ ಕಾಂಗ್ರೆಸ್‌‍ನ ಮಿತ್ರ ಪಕ್ಷದಿಂದಲೇ ಪೂರ್ಣ ಗಾಯನಕ್ಕೆ ಬೆಂಬಲ ಈ ಎಲ್ಲವೂ ಒಟ್ಟಾಗಿ ನೋಡಿದಾಗ ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್‌‍ನ ನಿಲುವು ಏಕರೂಪವೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಆಶ್ಚರ್ಯವೆಂದರೆ ಕಾಂಗ್ರೆಸ್‌‍ ಪಕ್ಷದ ಆಡಳಿತವಿರುವ ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯಗಳು ಪೂರ್ಣ ಪ್ರಮಾಣದ ವಂದೇ ಮಾತರಂ ಹಾಡಲು ತೀರ್ಮಾನಿಸಿವೆ.
ದಕ್ಷಿಣ ಭಾರತದ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಮಾತ್ರ ವಿಭಿನ್ನವಾದ ನಿರ್ಣಯವನ್ನು ತೆಗೆದುಕೊಂಡಿರುವುದುರಾಜಕೀಯ ವಲಯದ್ಲೂ ಚರ್ಚೆಗೆ ಗ್ರಾಸವಾಗಿದೆ.

RELATED ARTICLES
spot_img

Latest News