Homeರಾಜ್ಯಕೆ.ಆರ್‌.ಪುರ ಸಂತೆಯಲ್ಲಿ ಘರ್ಜಿಸಿದ ಜೆಸಿಬಿಗಳು, ಒತ್ತುವರಿ ತೆರವು

ಕೆ.ಆರ್‌.ಪುರ ಸಂತೆಯಲ್ಲಿ ಘರ್ಜಿಸಿದ ಜೆಸಿಬಿಗಳು, ಒತ್ತುವರಿ ತೆರವು

Encroachment clearance at KR Pura Market

ಕೆ.ಆರ್‌.ಪುರ, ಜು. 14- ಪೂರ್ವ ನಗರ ಪಾಲಿಕೆಯ ಕೆ.ಆರ್‌.ಪುರ ವಲಯ ಜಂಟಿ ಆಯುಕ್ತೆ ಡಾ.ಸುಧಾ ಸ್ವಪ್ನ ನೇತೃತ್ವದಲ್ಲಿ ಕೆ.ಆರ್‌.ಪುರ ಮಾರುಕಟ್ಟೆಯಲ್ಲಿ ರಸ್ತೆ ಒತ್ತುವರಿ ತೆರವು ಕಾರ್ಯ ನಡೆಯಿತು.ಇತಿಹಾಸ ಪ್ರಸಿದ್ಧ ಕೆ.ಆರ್‌.ಪುರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಿಸಿಕೊಂಡು ಅನ ಕೃತವಾಗಿ ಮಳಿಗೆ ಮತ್ತು ಶೆಡ್‌ ಗಳನ್ನು ನಿರ್ಮಿಸಿಕೊಂಡಿದ್ದರು. ಕೆ.ಆರ್‌.ಪುರ ಮಾರುಕಟ್ಟೆಯಲ್ಲಿ ಅ ಕಾರಿಗಳು ತೆರವು ಕಾರ್ಯಚರಣೆ ವೇಳೆ ವ್ಯಾಪಾರಿಗಳು ತೆರವು ಕಾರ್ಯಚರಣೆಗೆ ವಿರೋಧ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಮಾರುಕಟ್ಟೆ ನಂಬಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ, ಆದರೆ ಏಕಾಏಕಿ ಅ ಕಾರಿಗಳು ನಮ್ಮ ಮಳಿಗೆಗಳನ್ನು ತೆರವು ಮಾಡಲು ಮುಂದಾಗಿದೆ ಎಂದು ಅ ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತೆರವು ಕಾರ್ಯಚರಣೆಗೆ ಅಡ್ಡಿ ಉಂಟು ಮಾಡಲು ಮುಂದಾದರು ಇದಾವುದಕ್ಕೂ ಸೊಪ್ಪು ಹಾಕದ ಜಂಟಿ ಆಯುಕ್ತೆ ಸುಧಾ ಸ್ವಪ್ನ ರವರು ಅ ಕಾರಿಗಳು, ಪೊಲೀಸರ ನೆರವಿನೊಂದಿಗೆ ಜೆಸಿಬಿ ಮೂಲಕ ತೆರವು ಕಾರ್ಯಚರಣೆ ನಡೆಸಿ ಸುಮಾರು ಒಂಬತ್ತು ಮಳಿಗೆ, ಶೆಡ್‌ ಗಳು ಮತ್ತು ಮೇಲ್ಚಾವಣಿ ತೆರವು ಮಾಡಲಾಯಿತು.

ಜಂಟಿ ಆಯುಕ್ತೆ ಡಾ.ಸುಧಾ ಸ್ವಪ್ನ ಮಾತನಾಡಿ, ಕೆ.ಆರ್‌.ಪುರ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ, ಸಂತೆ ಮೈದಾನದಲ್ಲಿ ವ್ಯಾಪಾರ ಮಾಡಲು ವಿಶಾಲವಾದ ಜಾಗವಿದ್ದರೂ ಪಾದಚಾರಿ ಮಾರ್ಗದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು, ಸಂತೆಯಲ್ಲಿ ವ್ಯಾಪಾರ ಮಾಡಲು ಯೋಗ್ಯವಾಗಿಲ್ಲ, ಸಂತೆಯಲ್ಲಿ ವ್ಯಾಪಾರ ನಡೆಸಲು ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ವ್ಯಾಪಾರಿಗಳು ಮನವಿ ಮಾಡಿದ ಹಿನ್ನೆಲೆ ಯಲ್ಲಿ ಒತ್ತುವರಿಯಾಗಿದ್ದ ರಸ್ತೆಯನ್ನು ತೆರವುಗೊಳಿಸಿದ್ದೇವೆ ಎಂದರು.

ಇನ್ನುಮುಂದೆ ಸಂತೆ ಜಾಗದಲ್ಲಿ ವ್ಯಾಪಾರ ನಡೆಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು ಅಲ್ಲದೆ ವಾಹನ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.ನಾವು ತೆರವು ಮಾಡಿರುವ ಜಾಗ ಒತ್ತುವರಿ ಜಾಗವಷ್ಟೆ ಯಾವುದೇ ವ್ಯಾಪಾರಿಗಳನ್ನು ಬೇಕು ಅಂತ ತೆರವು ಮಾಡಿಲ್ಲ. ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುವುದನ್ನು ಬಿಟ್ಟು ಸಂತೆ ಒಳಗಡೆ ವ್ಯಾಪಾರ ಮಾಡಿಕೊಳ್ಳಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಅ ಕಾರಿಗಳಾದ ಶ್ರೀನಿ , ಜಗದೀಶ್‌, ಸಚಿನ್‌, ಮುರುಳಿ ಮತ್ತಿತರರು ಹಾಜರಿದ್ದರು.

RELATED ARTICLES

Latest News