Homeರಾಷ್ಟ್ರೀಯಚುನಾವಣಾ ಚತುರ ಪ್ರಶಾಂತ್‌ ಕಿಶೋರ್‌ ಆಸ್ತಿ ಮೌಲ್ಯ 198 ಕೋಟಿ ರೂ.

ಚುನಾವಣಾ ಚತುರ ಪ್ರಶಾಂತ್‌ ಕಿಶೋರ್‌ ಆಸ್ತಿ ಮೌಲ್ಯ 198 ಕೋಟಿ ರೂ.

ಪಾಟ್ನಾ, ಜು.14- ಚುನಾವಣಾ ಚತುರ ಪ್ರಶಾಂತ್‌ ಕಿಶೋರ್‌ ಅವರ ಒಟ್ಟು ಆಸ್ತಿ ಮೌಲ್ಯ ಬರೊಬ್ಬರಿ 198 ಕೋಟಿ ರೂ.ಗಳಾಗಿದೆ.ಇದೇ ಜುಲೈ 30ರಂದು ನಡೆಯಲಿರುವ ಬಂಕಿಪುರ ವಿಧಾನಸಭಾ ಉಪ ಚುನಾವಣೆ ಮೂಲಕ ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿರುವ ಪ್ರಶಾಂತ್‌ ಕಿಶೋರ್‌ ಅವರು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರ ಒಟ್ಟು ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ 198 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಲಾಗಿದೆ.

ಪ್ರಶಾಂತ್‌ ಕಿಶೋರ್‌ ಅವರ ವೈಯಕ್ತಿಕ ಆಸ್ತಿ (ಒಟ್ಟು: 96.06 ಕೋಟಿ ರೂ.) ಚರ ಆಸ್ತಿ: 22.19 ಕೋಟಿ ರೂ.(ಬ್ಯಾಂಕ್‌ ಡಿಪಾಸಿಟ್‌ ಹಾಗೂ ಮಾರುಕಟ್ಟೆ ಹೂಡಿಕೆಗಳು ಸೇರಿ), ಸ್ಥಿರ ಆಸ್ತಿ : 73.87 ಕೋಟಿ ರೂ. (ಬಿಹಾರದ ರೋಹ್ತಾಸ್‌‍ನಲ್ಲಿರುವ ಮೂರು ಎಕರೆಗೂ ವಿಸ್ತರಿಸಿರುವ ಹಳೆಯ ರೈಸ್‌‍ ಮಿಲ್‌ ಜಾಗ ಹಾಗೂ ವಿವಿಧ ನಗರಗಳಲ್ಲಿನ ವಸತಿ ಆಸ್ತಿಗಳು).

ಕೈಯಲ್ಲಿರುವ ನಗದು:
65,570 ರೂ.ಸಾಲ: 5.77 ಕೋಟಿ ರೂ.ಪತ್ನಿ ಡಾ. ಜಹಾನ್ವಿ ದಾಸ್‌‍ ಅವರ ಆಸ್ತಿ (ಒಟ್ಟು: 101.93 ಕೋಟಿ ರೂ.) ದೆಹಲಿಯ ಅಪೊಲೊ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿರುವ ಪ್ರಶಾಂತ್‌ ಕಿಶೋರ್‌ ಅವರ ಪತ್ನಿ ಡಾ. ಜಹಾನ್ವಿ ದಾಸ್‌‍ ಅವರು ತಮ್ಮ ಪತಿಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ.

ಚರ ಆಸ್ತಿ:
89.51 ಕೋಟಿ ರೂ.ಸ್ಥಿರ ಆಸ್ತಿ: 12.42 ಕೋಟಿ ರೂ.ಚಿನ್ನಾಭರಣ: 64.12 ಲಕ್ಷ ರೂ. ಮೌಲ್ಯದ 475 ಗ್ರಾಂ ಚಿನ್ನ ಹಾಗೂ 200 ಗ್ರಾಂ ಬೆಳ್ಳಿ.ಕೈಯಲ್ಲಿರುವ ನಗದು: 1,95,200 ರೂ.ಸಾಲ: 55.38 ಲಕ್ಷ ರೂ.ವಿಡಿಯೋಖಾಸಗಿ ಕಂಪನಿಯ ಶೇ. 100 ರಷ್ಟು ಒಡೆತನ ಮತ್ತು ಕೋಟಿ ಕೋಟಿ ರೂ. ದೇಣಿಗೆಪ್ರಶಾಂತ್‌ ಕಿಶೋರ್‌ ಅವರು ವೇಧಾಸ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌‍ ಎಂಬ ಖಾಸಗಿ ಕಂಪನಿಯಲ್ಲಿ ಶೇ. 100 ರಷ್ಟು ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ.

ಈ ಕಂಪನಿಯ ವೌಲ್ಯವೇ ಸುಮಾರು 95.26 ಕೋಟಿ ರೂ. ಎಂದು ಅಂದಾಜಿಸಲಾಗಿದೆ.ವಿಶೇಷವೆಂದರೆ, ಇದೇ ಕಂಪನಿಯ ಮೂಲಕ ಪ್ರಶಾಂತ್‌ ಕಿಶೋರ್‌ ಅವರು ತಮ್ಮ ಸ್ವಂತ ಜನ ಸುರಾಜ್‌ ಪಕ್ಷಕ್ಕೆ ಬರೋಬ್ಬರಿ 85 ಕೋಟಿ ರೂ. ಹಾಗೂ ಜನ ಸುರಾಜ್‌ ಫೌಂಡೇಶನ್ ಗೆ 50 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ತಾವು ರಾಜಕೀಯಕ್ಕೆ ಬರುವ ಮುನ್ನ ಕಾರ್ಪೊರೇಟ್‌ ಸಲಹೆಗಾರರಾಗಿ ಕೇವಲ 3 ವರ್ಷಗಳಲ್ಲಿ 241 ಕೋಟಿ ರೂ. ಸಂಪಾದಿಸಿದ್ದಾಗಿ ಅವರು ಈ ಹಿಂದೆ ತಿಳಿಸಿದ್ದರು.2021 ರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯ ಭಾರಿ ಗೆಲುವಿನ ನಂತರ ಪ್ರಶಾಂತ್‌ ಕಿಶೋರ್‌ ಅವರು ತಾವು ಇತರ ಪಕ್ಷಗಳಿಗೆ ರಾಜಕೀಯ ತಂತ್ರಜ್ಞ ಆಗಿ ಕೆಲಸ ಮಾಡುವುದನ್ನು ಅಽಕೃತವಾಗಿ ನಿಲ್ಲಿಸುವುದಾಗಿ ಘೋಷಿಸಿದರು. ನಂತರ ಬಿಹಾರಕ್ಕೆ ಮರಳಿ ಜನ ಸುರಾಜ್‌‍ ಎಂಬ ಸ್ವಂತ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದರು.

RELATED ARTICLES

Latest News