Wednesday, April 22, 2026
Homeರಾಜ್ಯಬೆಂಗಳೂರಲ್ಲಿ ಐಪಿಎಸ್‌‍ ಅಧಿಕಾರಿಯೊಬ್ಬರಿಗೆ ಸೇರಿದ ವಿಲ್ಲಾದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರಲ್ಲಿ ಐಪಿಎಸ್‌‍ ಅಧಿಕಾರಿಯೊಬ್ಬರಿಗೆ ಸೇರಿದ ವಿಲ್ಲಾದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Gang rape of a young woman in a villa belonging to an IPS officer in Bengaluru

ಬೆಂಗಳೂರು,ಫೆ.28-ಐಪಿಎಸ್‌‍ ಅಧಿಕಾರಿಯೊಬ್ಬರಿಗೆ ಸೇರಿದ ವಿಲ್ಲಾದಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುವುದು ಅಮೃತಹಳ್ಳಿ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

ರಾಜ್ಯ ಪೊಲೀಸ್‌‍ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತರಭಾರತ ಮೂಲದ ಐಜಿಪಿಯೊಬ್ಬರಿಗೆ ಈ ವಿಲ್ಲಾ ಸೇರಿದ್ದು ಎಂಬುವುದು ಗೊತ್ತಾಗಿದ್ದು ಈ ವಿಲ್ಲಾವನ್ನು ಅವರು ಬಾಡಿಗೆಗೆ ನೀಡಿದ್ದರು.

ಈ ವಿಲ್ಲಾ ಹಲವು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮೋಜು ಮಸ್ತಿ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ವಿಲ್ಲಾದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳಾದ ನಿಖಿಲ್‌ ಮತ್ತು ಡಿಕ್ಸನ್‌ನನ್ನು ಬಂಧಿಸಲಾಗಿದೆ.

ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಫೇಸ್‌‍ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಯುವತಿಯರನ್ನು ಪರಿಚಯಿಸಿಕೊಂಡು ವಾರಾಂತ್ಯ ದಿನಗಳಲ್ಲಿ ಪಾರ್ಟಿ ಹೆಸರಿನಲ್ಲಿ ಈ ವಿಲ್ಲಾಗೆ ಆಹ್ವಾನಿಸುತ್ತಿದ್ದರು ಎಂಬುವುದು ಗೊತ್ತಾಗಿದೆ.

ಪಾರ್ಟಿಗೆ ಬರುವ ವಿದ್ಯಾರ್ಥಿನಿಯರಿಗೆ ಹಾಗೂ ಗೆಳತಿಯರಿಗೆ ಮತ್ತುಬರಿಸುವ ಪಾನಿಯಗಳನ್ನು ಕುಡಿಸಿ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಯಾಕ್‌ಮೇಲ್‌ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣವನ್ನು ನಗರ ಪೊಲೀಸ್‌‍ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಠಾಣೆಯಲ್ಲಿ ಒಬ್ಬ ಯುವತಿ ಮಾತ್ರ ದೂರು ನೀಡಿದ್ದು, ತಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಬೇರೆ ಯಾರಾದರೂ ಸಂತ್ರಸ್ತೆಯರು ಹೆದರದೆ ದೂರು ನೀಡಿದರೆ ತನಿಖೆ ಮಾಡುತ್ತೇವೆಂದು ಡಿಸಿಪಿ ತಿಳಿಸಿದ್ದಾರೆ.

RELATED ARTICLES

Latest News