Tuesday, April 14, 2026
Homeರಾಜ್ಯರಾಜ್ಯದ 26 ಜಿಲ್ಲೆಗಳಲ್ಲಿ ಜಿಡಿಪಿ ಕುಸಿತ : ಆರ್‌.ಅಶೋಕ್‌

ರಾಜ್ಯದ 26 ಜಿಲ್ಲೆಗಳಲ್ಲಿ ಜಿಡಿಪಿ ಕುಸಿತ : ಆರ್‌.ಅಶೋಕ್‌

GDP decline in 26 districts of the state: R. Ashok

ಬೆಂಗಳೂರು,ಮಾ.9- ರಾಜ್ಯದ 26 ಜಿಲ್ಲೆಗಳ ತಲಾ ಆದಾಯ ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ಕೆಳಗಿರುವುದು ಪ್ರಾದೇಶಿಕ ಅಸಮಾನತೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.

ಈ ಸಂಬಂಧ ಎಕ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕರ್ನಾಟಕದ 31 ಜಿಲ್ಲೆಗಳ ಪೈಕಿ ಕೇವಲ 5 ಜಿಲ್ಲೆಗಳು ರಾಜ್ಯದ ಸರಾಸರಿ ತಲಾದಾಯಕ್ಕಿಂತ ಹೆಚ್ಚು ತಲಾದಯ ಹೊಂದಿವೆ ಎಂದಿದ್ದಾರೆ.

ಅದರಲ್ಲೂ ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳು ಈ ಪಟ್ಟಿಯಲ್ಲಿ ಕಟ್ಟ ಕಡೆಯ ಸ್ಥಾನ ಪಡೆದಿದ್ದು, ಈ ಜಿಲ್ಲೆಗಳ ತಲಾದಾಯ ರಾಜ್ಯದ ಸರಾಸರಿ ತಲಾದಾಯಕ್ಕಿಂತ ಅರ್ಧದಷ್ಟು ಕಡಿಮೆ ಇರುವುದು ಅತ್ಯಂತ ಚಿಂತಾಜನಕ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದಿನ ಬೆಳಗಾದರೆ ಭೌಗೋಳಿಕ ರಾಜಕೀಯದ ಬಗ್ಗೆ ಪ್ರವಚನ ಮಾಡುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಸುಪುತ್ರ ಪ್ರಿಯಾಂಕ್‌ ಖರ್ಗೆ ಅವರು ದಶಕಗಳಿಂದ ಅಧಿಕಾರ ಅನುಭವಿಸುತ್ತಾ ಕಲ್ಯಾಣ ಕರ್ನಾಟಕ ಭಾಗದ ಜನರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಅಸಲಿ ಸರ್ವಾಧಿಕಾರಿಗಳು ಯಾರು? ಎಂದು ಪ್ರಶ್ನಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗವನ್ನು ಆರ್ಥಿಕ ಗುಲಾಮಗಿರಿಗೆ ತಳ್ಳಿದವರು ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುತ್ತಾರಾ? ಎಂದು ಅವರು ಕೇಳಿದ್ದಾರೆ.

RELATED ARTICLES

Latest News