Homeರಾಜ್ಯಮತ್ತೆ ಕುಸಿತದ ಹಾದಿ ಹಿಡಿದ ಚಿನ್ನ-ಬೆಳ್ಳಿ ದರಗಳು

ಮತ್ತೆ ಕುಸಿತದ ಹಾದಿ ಹಿಡಿದ ಚಿನ್ನ-ಬೆಳ್ಳಿ ದರಗಳು

ಬೆಂಗಳೂರು, ಸೆ.24- ಚಿನಿವಾರಪೇಟೆಯಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖದ ಹಾದಿ ಹಿಡಿದಿವೆ. ಒಂದು ಕೆ.ಜಿ. ಬೆಳ್ಳಿ ದರ ₹5,000 ಕಡಿಮೆಯಾಗಿದ್ದರೆ, ಒಂದು ಗ್ರಾಂ ಶುದ್ಧ ಚಿನ್ನದ ದರ ₹152ರಷ್ಟು ಇಳಿಕೆಯಾಗಿದೆ. ಸೆ.15ರಿಂದೀಚೆಗೆ ಐದು ಬಾರಿ ಚಿನ್ನದ ದರ ಇಳಿಕೆಯಾಗಿದ್ದು, ನಾಲ್ಕು ಬಾರಿ ಹೆಚ್ಚಳವಾಗಿದೆ. ಸೆ.21ರಿಂದಲೂ ಇಳಿಕೆಯಾಗುತ್ತಿದ್ದ ಚಿನ್ನದ ದರ ನಿನ್ನೆ ಮಾತ್ರ ಅಲ್ಪ ಚೇತರಿಕೆ ಕಂಡಿತ್ತು.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 24 ಕ್ಯಾರೆಟ್‌ ಚಿನ್ನದ ದರ ಒಂದು ಗ್ರಾಂಗೆ ₹152ರಷ್ಟು ಕಡಿಮೆಯಾಗಿ ₹15,268ಕ್ಕೆ ತಲುಪಿದೆ. 22 ಕ್ಯಾರೆಟ್‌ ಚಿನ್ನದ ದರ ಒಂದು ಗ್ರಾಂಗೆ ₹140ರಷ್ಟು ಇಳಿಕೆಯಾಗಿ ₹13,995ಕ್ಕೆ ಇಳಿದಿದೆ. 18 ಕ್ಯಾರೆಟ್‌ ಆಭರಣ ಚಿನ್ನದ ದರ ₹114ರಷ್ಟು ಕಡಿಮೆಯಾಗಿ, ಒಂದು ಗ್ರಾಂಗೆ ₹11,451ರಷ್ಟಿದೆ.

ಚಿನ್ನ, ಬೆಳ್ಳಿಯಂತೆ ಪ್ಲಾಟಿನಮ್‌ ದರದಲ್ಲೂ ಕುಸಿತವಾಗಿದೆ. 10 ಗ್ರಾಂ ಪ್ಲಾಟಿನಮ್‌ ದರ ₹1,890ರಷ್ಟು ಇಳಿಕೆಯಾಗಿದ್ದು, ₹53,900ಕ್ಕೆ ತಲುಪಿದೆ. ಇನ್ನು ಬೆಳ್ಳಿ ದರದಲ್ಲಿ ಚೇತರಿಕೆ ಕಾಣುತ್ತಿಲ್ಲ. ಸೆಪ್ಟೆಂಬರ್‌ ತಿಂಗಳ ಆರಂಭದಿಂದಲೂ ಸ್ಥಿರವಾಗಿದ್ದ ಬೆಳ್ಳಿ ದರ ಸೆ.18 ಮತ್ತು 19ರಂದು ಏರಿಕೆಯಾಗಿತ್ತು. ಒಂದು ಕೆ.ಜಿ. ಬೆಳ್ಳಿ ದರ ಸೆ.21ರಂದು ₹5,000 ಹಾಗೂ ಇಂದು ಮತ್ತೊಮ್ಮೆ ₹5,000ರಷ್ಟು ಇಳಿಕೆಯಾಗಿದೆ. ಪ್ರಸ್ತುತ ಒಂದು ಕೆ.ಜಿ. ಬೆಳ್ಳಿ ದರ ₹2.45 ಲಕ್ಷದಷ್ಟಿದೆ.

ಸರಣಿ ಹಬ್ಬಗಳ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ದರಗಳು ಕುಸಿಯುತ್ತಿರುವುದು ಆಭರಣ ಪ್ರಿಯರಿಗೆ ತುಸು ಸಮಾಧಾನ ತಂದಿದೆ. ಆದರೂ ಈಗಾಗಲೇ ದುಬಾರಿ ದರದಲ್ಲಿರುವ ಈ ಲೋಹಗಳ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ವಿರಳವಾಗಿದ್ದು, ಗ್ರಾಹಕರಿಗೆ ನಿಲುಕದಷ್ಟು ಏರಿಕೆಯಾಗಿವೆ.

RELATED ARTICLES
spot_img

Latest News