Homeರಾಜ್ಯಏರುತ್ತಲೇ ಇದೆ ಚಿನ್ನ, ಬೆಳ್ಳಿ ಧಾರಣೆ

ಏರುತ್ತಲೇ ಇದೆ ಚಿನ್ನ, ಬೆಳ್ಳಿ ಧಾರಣೆ

Gold, silver prices continue to rise

ಬೆಂಗಳೂರು, ಫೆ.9- ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಮತ್ತೆ ಏರಿಕೆಯಾಗಿದೆ. ಇಂದು 24 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂ ಗೆ 224 ರೂ. ಹಾಗೂ ಬೆಳ್ಳಿ ಒಂದು ಕೆಜಿಗೆ 15 ಸಾವಿರ ರೂ. ಹೆಚ್ಚಳವಾಗಿದೆ. ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ದರಕ್ಕೆ ತಡೆಯೊಡ್ಡಿದ ರೀತಿಯಲ್ಲಿ ಇಳಿಕೆಯಾಗಿ ಆಭರಣ ಪ್ರಿಯರು ಸಮಾಧಾನ ಪಡುವಂತಾಗಿತ್ತು.

ಈಗಾಗಲೇ ದುಬಾರಿ ದರದಲ್ಲಿ ಮಾರಾಟವಾಗುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಕಳೆದ ವಾರ ಏರಿಳಿತವಾಗಿ ಇಳಿಮುಖವಾಗುವ ಲಕ್ಷಣಗಳು ಗೋಚರಿಸಿದ್ದವು. ಆದರೆ, ಕಳೆದ ಶನಿವಾರದಿಂದ ಮತ್ತೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಆಭರಣ ಪ್ರಿಯರಿಗೆ ನಿರಾಶೆ ಉಂಟಾಗಿದೆ. ಚಿನ್ನದ ಮಾರಾಟ ದರವು ಗರಿಷ್ಠ ಪ್ರಮಾಣದಲ್ಲಿ ದಾಖಲೆ ನಿರ್ಮಿಸಿದೆ.

ಶ್ರೀಸಾಮನ್ಯರ ಕೈಗೆಟುಕದ ರೀತಿಯಲ್ಲಿ ಏರಿಕೆಯಾಗುತ್ತಿರುವುದರಿಂದ ಮದುವೆ ಹಾಗೂ ಶುಭ ಕಾರ್ಯಗಳನ್ನು ಮಾಡುವವರ ಆತಂಕ ಹೆಚ್ಚಾಗಿದೆ.ದರ ಏರಿಕೆಯಿಂದಾಗಿ 24 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂ ಗೆ 15,884 ರೂ.ಗೆ ತಲುಪಿದೆ. 22 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂಗೆ 205 ರೂ. ಹೆಚ್ಚಳವಾಗಿ 14,560 ರೂ. ನಷ್ಟಿದ್ದರೆ, 18 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂ ಗೆ 168 ರೂ. ಏರಿಕೆಯಾಗಿ 11,913 ರೂ.ವನ್ನು ತಲುಪಿದೆ.

24 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂಗೆ 16 ಸಾವಿರ ರೂ. ಗಡಿ ದಾಟಿ ಗ್ರಾಹಕರಲ್ಲಿ ಗಾಬರಿ ಹುಟ್ಟಿಸಿತ್ತು. ಅದೇ ರೀತಿ ಬೆಳ್ಳಿಯು ಒಂದು ಕೆ.ಜಿ.ಗೆ 4.10 ಲಕ್ಷ ರೂ.ಗೆ ತಲುಪಿ ನಾಗಲೋಟ ಏರಿಕೆಯನ್ನು ಸಾಬೀತು ಪಡಿಸಿತ್ತು.

ಫೆ.7ರಂದು ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ನಿನ್ನೆ ಸ್ಥಿರವಾಗಿದ್ದವು. ಇಂದು ಮತ್ತೆ ಏರುಗತಿಯಲ್ಲಿ ಸಾಗುತ್ತಿವೆ. ಆಭರಣ ಖರೀದಿಸುವವರಿಗಿಂತ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿದೆ. ಇದರ ಪರಿಣಾಮ ಸ್ಥಳೀಯ ಮಾರುಕಟ್ಟೆಯ ಮೇಲೂ ಆಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಬಂಡವಾಳವನ್ನು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲಾಗುತ್ತಿದೆ ಎಂಬ ವ್ಯಾಖ್ಯಾನ ಮಾಡಲಾಗುತ್ತಿದೆ.

RELATED ARTICLES
spot_img

Latest News