Homeರಾಜ್ಯಹಾಸನಾಂಬೆ ದರ್ಶನೋತ್ಸವವಕ್ಕೆ ನಾಳೆ ತೆರೆ, ಇಂದು ತಡರಾತ್ರಿಯವರೆಗೂ ದರ್ಶನ

ಹಾಸನಾಂಬೆ ದರ್ಶನೋತ್ಸವವಕ್ಕೆ ನಾಳೆ ತೆರೆ, ಇಂದು ತಡರಾತ್ರಿಯವರೆಗೂ ದರ್ಶನ

ಹಾಸನ,ನ.9- ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ 11ನೇ ದಿನವಾದ ಉಳಿದ ದಿನಗಳಿಗಿಂತ ಇಂದು ಭಕ್ತರ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದ್ದು, ಧರ್ಮದರ್ಶನದ ಸಾಲಿನಲ್ಲಿ ಶೀಘ್ರ ದರ್ಶನ ಪಡೆದರು.

1000 ಹಾಗೂ 300 ರೂ. ವಿಶೇಷ ದರ್ಶನದ ಸಾಲಿಗಿಂತ ಧರ್ಮದರ್ಶನದ ಸಾಲಿನಲ್ಲೇ ಜನರು ಕಡಿಮೆಯಿದ್ದು, ಅತೀ ಕಡಿಮೆ ಅವಧಿಯಲ್ಲಿ ದೇವಿಯ ದರ್ಶನ ಪಡೆದು ಪುನೀತರಾದರು. ಇಂದೂ ಸಹ ಗಣ್ಯರು, ಜನಪ್ರತಿನಿಧಿಗಳು, ಸಿನಿಮಾ ನಟ-ನಟಿಯರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಇಂದು ಬೆಳಿಗ್ಗೆ ಪ್ರೇಮದ ಊರಲಿ ಚಿತ್ರನಟ ಶ್ರೀರಾಮ್‌ ದೇವಿಯ ದರ್ಶನ ಪಡೆದರು.

ಇಂದು ಮಧ್ಯಾಹ್ನ 2 ಗಂಟೆಯವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿದ್ದು, ನೈವೇದ್ಯದ ನಂತರ 3.30ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ನಿರಂತರ ದರ್ಶನ ಪಡೆಯಬಹುದಾಗಿದೆ.
ತಡರಾತ್ರಿಯವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿದ್ದು, 11 ರಂದು ಮಧ್ಯಾಹ್ನ 12 ಗಂಟೆಗೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಈ ವರ್ಷದ ಹಾಸನಾಂಬ ದರ್ಶನಕ್ಕೆ ತೆರೆ ಎಳೆಯಲಾಗುವುದು.

RELATED ARTICLES

Latest News