ಹುಬ್ಬಳ್ಳಿ,ಫೆ.5- ಕಾಶ್ಮೀರದಿಂದ ಬಂದಿರುವುದಾಗಿ ಹೇಳಿಕೊಂಡು ಚೆನ್ನಮ ವೃತ್ತದ ದಾಜಿಬಾನ ಪೇಟೆಯಲ್ಲಿನ ಲಾಡ್ಜ್ ವೊಂದರಲ್ಲಿ ತಂಗಿದ್ದ ಇಬ್ಬರು ವ್ಯಕ್ತಿಗಳ ನಡವಳಿಕೆ ಅನುಮಾನ ಮೂಡಿಸಿದೆ.
ಈ ಬಗ್ಗೆ ಕೆಲವು ಸಂಘಟನೆಗಳು ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಲಾಡ್ಜ್ ಗೆ ಭೇಟಿ ನೀಡಿ ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.ಟೈಮ್ ಪಾಸ್‌ಗಾಗಿ ಬಂದಿದ್ದೇವೆ ಎಂದು ಮೊದಲು ಹೇಳಿಕೊಂಡಿದ್ದು, ಮತ್ತೊಬ್ಬ ವ್ಯಕ್ತಿ ಭಿಕ್ಷೆ ಬೇಡಲು ಬಂದಿದ್ದಾಗಿ ತಿಳಿಸಿದ್ದಾನೆ . ಅವರಿಬ್ಬರ ಹೇಳಿಕೆಗಳಲ್ಲಿ ಅನುಮಾನ ವ್ಯಕ್ತವಾಗಿದೆ. ಅವರ ಬಳಿ ಇದ್ದ ವಸ್ತಗಳನ್ನು ಪರಿಶೀಲನೆ ನಡೆಸಿದ ವೇಳೆ ಬ್ಯಾಗ್‌ನಲ್ಲಿ ನಶೆಯ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಜೊತೆಗೆ 500 ಮುಖಬೆಲೆಯ ನೋಟುಗಳು ಕಂಡುಬಂದಿವೆ.
ಒಬ್ಬ ವ್ಯಕ್ತಿಯ ಕೈಯಲ್ಲಿ ದುಬಾರಿ ಬೆಲೆಯ ಗಡಿಯಾರ ಕಂಡುಬಂದಿದೆ.ಇಬ್ಬರಲ್ಲೂ ಆಧಾರ್ ಕಾರ್ಡ್ ಹೊರತುಪಡಿಸಿ ಬೇರೆ ಯಾವುದೇ ಗುರುತಿನ ದಾಖಲೆ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ತನಿಖೆಯ ನಂತರವಷ್ಟೇ ನಿಖರ ಸತ್ಯಾಂಶ ತಿಳಿದು ಬರಬೇಕಿದೆ.
